ಸೃಜನ್ ಬಿಟ್ಟ ನಂತರ ನಾನು ಸ್ಟಾರ್‌ ಒಬ್ಬನ ಜೊತೆ ಎರಡು ವರ್ಷ ಸಂಸಾರ ಮಾಡಿದ್ದೇನೆ.. ಸ್ಟಾರ್ ಜೊತೆಗಿನ ಸಂಬಂಧ ಬಿಚ್ಚಿಟ್ಟ ನಟಿ ವಿಜಯಲಕ್ಷ್ಮಿ..

0 views

ನಟಿ ವಿಜಯಲಕ್ಷ್ಮಿ ಸದ್ಯ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸುದ್ದಿ ಮಾಡುತ್ತಿರುವ ನಟಿ..‌ ಎಲ್ಲರಿಗೂ ತಿಳಿದಿರುವಂತೆ ಕಳೆದ ಕೆಲ ವಾರಗಳ ಹಿಂದೆ ವಿಜಯಲಕ್ಷ್ಮಿ ಅವರ ತಾಯಿ ಇಹಲೋಕ ತ್ಯಜಿಸಿದ್ದು ಅದಾದ ಬಳಿಕ ಯೋಗೇಶ್ ಹಾಗೂ ವಿಜಯಲಕ್ಷ್ಮಿ ಅವರ ವಿಚಾರ ಸಾಕಷ್ಟು ಸುದ್ದಿಯಾಗಿತ್ತು.. ಆದರೀಗ ತಮ್ಮ ಹಾಗೂ ಸ್ಟಾರ್ ಒಬ್ಬರ ಸಂಬಂಧದ ಬಗ್ಗೆ ವಿಜಯಲಕ್ಷ್ಮಿ ಮಾತನಾಡಿದ್ದು ಆತನ ಜೊತೆ ಎರಡು ವರ್ಷ ಸಂಸಾರ ಮಾಡಿರುವ ಸತ್ಯ ಬಿಚ್ಚಿಟ್ಟಿದ್ದಾರೆ..ಹೌದು ವಿಜಯಲಕ್ಷ್ಮಿ ಅವರು ಕನ್ನಡ ಸಿನಿಮಾರಂಗದಲ್ಲಿ ಬಹಳ ಉತ್ತುಂಗದಲ್ಲಿದ್ದವರು.. ಅದರಲ್ಲೂ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಅನೇಕ ದಿಗ್ಗಜ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದ ನಟಿ.. ನಂತರದಲ್ಲಿ ಚೆನ್ನೈ ನಲ್ಲಿ ವಾಸ ಮಾಡುತ್ತಿದ್ದು ಅಲ್ಲಿಯ ತಮಿಳು ಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದು ಕರ್ನಾಟಕದಿಂದ ಕೊಂಚ ದೂರವೇ ಉಳಿದರು..

ಇನ್ನು ಈ ನಡುವೆ ವಿಜಯಲಕ್ಷ್ಮಿ ಹಾಗೂ ಸೃಜನ್ ಲೋಕೇಶ್ ಅವರ ನಡುವೆ ಮದುವೆ ನಿಶ್ಚಯವಾಗಿ ನಿಶ್ಚಿತಾರ್ಥವೂ ಆಗಿ ಆನಂತರ ಆ ಮದುವೆ ಮುರಿದು ಬಿದ್ದಿತ್ತು.. ಇತ್ತ ಕೆಲ ವರ್ಷಗಳ ನಂತರ ಸೃಜನ್ ಲೋಕೇಶ್ ಎಲ್ಲವನ್ನು ಮರೆತು ಗ್ರೀಷ್ಮಾ ರನ್ನು ಮದುವೆಯಾಗಿ ನೆಮ್ಮದಿಯ ಸಂಸಾರ ನಡೆಸುತ್ತಿದ್ದರು.. ಆದರೆ ಸಾಕಷ್ಟು ವರ್ಷಗಳ ಕಾಲ ಕಳೆದ ವರ್ಷ ಮತ್ತೆ ಸುದ್ದಿಗೆ ಬಂದ ವಿಜಯಲಕ್ಷ್ಮಿ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಸಹಾಯಕ್ಕಾಗಿ ಕನ್ನಡ ಚಿತ್ರರಂಗವನ್ನು ಮನವಿ ಮಾಡಿಕೊಂಡರು.. ಸುದೀಪ್ ಅವರನ್ನೂ ಸೇರಿದಂತೆ ಅನೇಕರು ಸಹಾಯ ಮಾಡಿದ್ದರು.. ಇನ್ನು ಈಗ ಆರೋಗ್ಯ ಹದಗೆಟ್ಟು ಮತ್ತೆ ಸಹಾಯದ ಮನವಿ ಮಾಡಲಾಗಿ ಜನಸಾಮಾನ್ಯರು ಕೈಲಾದ ನೆರವು ನೀಡಿದ್ದರು..

ನಂತರ ವಿಜಯಲಕ್ಷ್ಮಿ ಅವರ ತಾಯಿ ಕೊನೆಯುಸಿರೆಳೆದಿದ್ದು ಆನಂತರ ಯೋಗೇಶ್ ಹಾಗೂ ವಿಜಯಲಕ್ಷ್ಮಿ ನಡುವೆ ಜನರು ಕೊಟ್ಟ ಹಣಕಾಸಿನ ವಿಚಾರವಾಗಿ ಆದ ಸಾಕಷ್ಟು ಸುದ್ದಿಗಳು ಎಲ್ಲರಿಗೂ ತಿಳಿದೇ ಇದೆ.. ಆನಂತರ ಯೋಗೇಶ್ ಅವರ ಖಾತೆಗೆ ಜನರು ಹಾಕಿದ್ದ ಹಣವೂ ಸಹ ವಿಜಯಲಕ್ಷ್ಮಿ ಅವರ ಕೈ ಸೇರಿದ್ದಾಯಿತು.. ಆದರೀಗ ಮತ್ತೊಮ್ನೆ ಸುದ್ದಿಗೆ ಬಂದಿರುವ ವಿಜಯಲಕ್ಷ್ಮಿ ಅವರು ತಮಗೂ ಹಾಗೂ ಸ್ಟಾರ್ ಒಬ್ಬರಿಗೂ ಇದ್ದ ಸಂಬಂಧದ ಬಗ್ಗೆ ಸತ್ಯ ತೆರೆದಿಟ್ಟು ಆತನ ಜೊತೆ ಎರಡು ವರ್ಷ ಸಂಸಾರ ಮಾಡಿರುವುದಾಗಿ ತಿಳಿಸಿದ್ದಾರೆ.. ಹೌದು ಸೃಜನ್ ವಿಚಾರ ಮುಗಿದ ಅಧ್ಯಾಯವಾಗಿದ್ದರೂ ಸಹ ಮತ್ತೆ ಅವರ ಹೆಸರು ಪ್ರಸ್ತಾಪವಾಗಿದ್ದರ ಜೊತೆಗೆ ಮತ್ತೊಬ್ಬ ಸ್ಟಾರ್ ಹೆಸರನ್ನು ತಿಳಿಸಿದ್ದಾರೆ.. ಹೌದು “ನನಗೆ ವ್ಯಯಕ್ತಿಕವಾಗಿ ಸಂಬಂಧವಿದ್ದದ್ದು ಇಬ್ಬರ ಜೊತೆ ಮಾತ್ರ..

ಒಂದು ಇಲ್ಲಿನ ಸೃಜನ್ ಲೋಕೇಶ್ ಜೊತೆಗೆ.. ಅವರ ಜೊತೆ ಮದುವೆ ನಿರ್ಧಾರವಾಗಿತ್ತು.. ನಿಶ್ಚಿತಾರ್ಥವೂ ಆಗಿತ್ತು.. ಆನಂತರ ಅದು ಮುರಿದು ಬಿತ್ತು.. ಈಗ ಸೃಜನ್ ಗೆ ಮದುವೆಯಾಗಿದೆ ಮಕ್ಕಳು ಇದ್ದಾರೆ.. ಅವರ ವಿಚಾರ ಬಿಡಿ.. ಅವರ ಬಗ್ಗೆ ಮಾತನಾಡೋದು ಬೇಡ.. ನಾನು ಸಾಕಷ್ಟು ಬಾರಿ ಹೇಳಿದ್ದೇನೆ.. ನನ್ನ ಹಾಗೂ ಸೃಜನ್ ನಡುವಿನ ಸಂಬಂಧ ಒಂದು ಒಳ್ಳೆಯ ರೀತಿಯಲ್ಲಿ ಕೊನೆಯಾಗಿದೆ.. ಅದರ ಬಗ್ಗೆ ಯಾರೂ ಮಾತನಾಡಬೇಡಿ.. ಆದರೆ ಅದಾದ ಬಳಿಕ ನಾನು ತಮಿಳಿನ ಸ್ಟಾರ್ ಒಬ್ಬರ ಜೊತೆ ಎರಡು ವರ್ಷ ಸಂಸಾರ ಮಾಡಿದ್ದೇನೆ ಆತ ನನ್ನ ಬಗ್ಗೆ ಇಲ್ಲ ಸಲ್ಲದನ್ನು ಮಾತನಾಡಿ ಮದುವೆಯಾಗು ಎಂದಾಗ ದೂರವಾದ ಎಂದಿದ್ದಾರೆ.. ಹೌದು ಆ ಸ್ಟಾರ್ ಮತ್ಯಾರೂ ಅಲ್ಲ.. ತಮಿಳಿನ ಖ್ಯಾತ ನಿರ್ದೇಶಕ ಹಾಗೂ ರಾಜಕಾರಣಿ ಸೀಮಾನ್.. ಹೌದು ಸೀಮಾನ್ ಜೊತೆ ನಾನು ಎರಡು ವರ್ಷ ಸಂಸಾರ ಮಾಡಿದ್ದೇನೆ..

ಆದರೆ ನನ್ನ ಜೊತೆ ಎರಡು ವರ್ಷ ಇದ್ದು ಕೊನೆಗೆ ಮದುವೆಯಾಗು ಎಂದು ಕೇಳಿದಾಗ ಆಗಲ್ಲ ಅಂತ ದೂರಾದ.. ಎರಡು ವರ್ಷ ಪ್ರೀತಿಸಿ ಸಂಸಾರ ಮಾಡಿ ಕೊನೆಗೆ ಮದುವೆಯಾಗಲ್ಲ ಎಂದ.. ನಾನು ಅದೇ ಕಾರಣಕ್ಕೆ ಅವನ ಬಗ್ಗೆ ಮಾತನಾಡಿದ್ದು.. ನನ್ನ ಜೊತೆ ಸಂಸಾರ ಮಾಡುವಾಗ ಅವನಿಗೆ ನಾನೇನು ಅಂತ ಗೊತ್ತಿಲ್ವಾ.. ಅವನ ಜೊತೆ ಎರಡು ವರ್ಷ ಜೀವನ ಮಾಡಿದ್ದೇನೆ ಅವನು ಏನು ಅಂತ ನನಗೆ ಗೊತ್ತು.. ಅದಕ್ಕೆ ನಾನು ಅವನ ಬಗ್ಗೆ ಮಾತನಾಡಿದ್ದೇನೆ‌‌.. ಅವನಿಂದ ನನ್ನ ಜೀವನ ಈ ರೀತಿಯಾಯಿತು ಎಂದಿದ್ದಾರೆ.. ಜೊತೆಗೆ ಕೆಲ ದಿನಗಳ ಹಿಂದೆ ಚೆನ್ನೈನಲ್ಲಿದ್ದಾಗ ವಿಜಯಲಕ್ಷ್ಮಿ ಅವರು ತಮ್ಮ ಹಾಗೂ ಸೀಮಾನ್ ನಡುವೆ ಸಂಬಂಧದ ಬಗ್ಗೆ ಪ್ರಶ್ನೆಗಳು ಮೂಡಿದಾಗ ಅವರೊಟ್ಟಿಗಿನ ಫೋಟೋಗಳನ್ನು ಸಹ ಬಿಡುಗಡೆ ಮಾಡಿದ್ದರು..

ಇದೀಗ ಆತನ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದು ಕುತೂಹಲ ಮೂಡಿಸಿದ್ದಾರೆ.. ಇನ್ನು ಇತ್ತ ವಿಜಯಲಕ್ಷ್ಮಿ ಅವರ ತಾಯಿ ಇಲ್ಲವಾದ ಬಳಿಕ ಕರ್ನಾಟಕ ಜನರು ನೀಡಿದ ನೆರವಿನಿಂದ ನಾಗರಬಾವಿಯಲ್ಲಿ ಒಂದು ಮನೆ ಮಾಡಿಕೊಂಡಿದ್ದು ಅದೇ ಮನೆಯಲ್ಲಿ ವಿಜಯಲಕ್ಷ್ಮಿ ಅವರು ತಮ್ಮ ಅಕ್ಕನನ್ನು ನೋಡಿಕೊಂಡಿದ್ದಾರೆ.. ಈ ಬಗ್ಗೆ ಖುದ್ದು ಅವರೇ ಹೇಳಿಕೊಂಡಿದ್ದು ನಿಮ್ಮೆಲ್ಲರಿಂದ ನಾನು ಇವತ್ತು ಒಂದು ಮನೆಯಲ್ಲಿ ಇದ್ದೇನೆ.. ಬೆಂಗಳೂರಿನ ಒಳಗೇ ನಾಗರಬಾವಿಯಲ್ಲಿ ಮನೆ ಮಾಡಿಕೊಂಡಿದ್ದೇನೆ.. ನೆಮ್ಮದಿಯಿಂದ ಜೀವನ ಮಾಡುತ್ತೇನೆ.. ಮುಂದೆ ಸಿನಿಮಾಗಳಲ್ಲಿಯು ತೊಡಗಿಕೊಳ್ಳುತ್ತೇನೆ ಎಂದಿದ್ದಾರೆ..