ಕನ್ನಡ ಕಿರುತೆರೆ ಖ್ಯಾತ ನಟನ ಪತ್ನಿಯ ಪರಿಸ್ಥಿತಿ ಹೇಗಾಗಿದೆ ನೋಡಿ.

0 views

ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಸುದ್ದಿಯೊಂದು ವೈರಲ್ ಆಗಿದ್ದು ಆ ವೀಡಿಯೋದಲ್ಲಿ ಹೆಣ್ಣು ಮಗಳೊಬ್ಬಳು ತನಗೆ ಕಿರುತೆರೆ ನಟ ಉಮೇಶ್ ಎಂಬಾತ ನಂಬಿಸಿ ಮಗು ಕೊಟ್ಟು ನಂತರ ದೂರಾದ ವಿಚಾರ ತಿಳಿಸಿ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಮೈಸೂರು ಭಾಗದ ಸುದ್ದಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದ್ದು ನಿಜಕ್ಕೂ ಇದರ ಸತ್ಯ ಕತೆ ಏನು. ಈಕೆ ನಿಜಕ್ಕೂ ಯಾರು ಈಕೆಗೂ ಅವನಿಗೂ ಏನು ಪರಿಚಯ ಎಲ್ಲಾ ವಿಚಾರ ಹೊರ ಬಂದಿದೆ. ಹೌದು ಈತನ ಹೆಸರು ಉಮೇಶ್ ಪುಟ್ಟ ಗೌರಿ ಮದುವೆ ನಾಗಿಣಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾನೆ. ಇನ್ನು ಈ ಹೆಣ್ಣು ಮಗಳು ಹಾಸನ ಮೂಲದ ಚನ್ನರಾಯಪಟ್ಟಣದ ನಿವಾಸಿ. ಈಕೆಗೆ ಉಮೇಶ್ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದಾನೆ. ನಾನೊಬ್ಬ ಅನಾಥ ನನಗೆ ಯಾರೂ ಇಲ್ಲ ಎಂದು ಅನುಕಂಪ ಗಿಟ್ಟಿಸಿದ್ದಾನೆ. ನಂತರ ನಾನು ಸಹ ನನ್ನ ಬಗ್ಗೆ ಎಲ್ಲವನ್ನೂ ಹೇಳಿಕೊಂಡು ಬಿಟ್ಟೆ. ಅವನು ಅದನ್ನೇ ಬೇರೆ ರೀತಿ ಬಳಸಿಕೊಂಡ.

ಎಲ್ಲಾ ಗ್ಯಾರಂಟಿ ಕೊಟ್ಟಿದ್ದಕ್ಕೆ ಈ ರೀತಿ ಮಾಡಿದ. ಅವನಿಗೆ ನಲವತ್ತೈದು ವರ್ಷ ಮೇಲಾಗಿದೆ. ಆದರೆ ನನ್ನ ಜೊತೆ ಇಪ್ಪತ್ತೊಂಭತ್ತು ವರ್ಷ ಅಂತಿದ್ದ. ಅವನ ನನ್ನ ಪರಿಚಯವಾದಾಗ ನನಗೆ ಇಪ್ಪತ್ತೈದು ವರ್ಷ. ಈಗ ಇಪ್ಪತ್ತೇಳು ವರ್ಷ.. ನಾನು ಮೊದಲು ಒಂದು ಹುಡುಗನನ್ನ ಪ್ರೀತಿಸಿದ್ದೆ ಆ ವಿಚಾರವನ್ನ ಮನೆಯಲ್ಲೂ ಗೊತ್ತಿತ್ತು. ಇವನ ಬಳಿಯೂ ಹೇಳಿಕೊಂಡಿದ್ದೆ. ಆದರೆ ಈತ ಮಾತ್ರ ತನ್ನ ಸಮುದಾಯವನ್ನೂ ಸಹ ಮುಚ್ಚಿಟ್ಟ. ನಾನು ಸಮುದಾಯವನ್ನು ಬೇರೆ ರೀತಿ ಕಾಣ್ತಿಲ್ಲಾ. ಆದರೆ ನನ್ನ ಜೊತೆ ಸತ್ಯ ಹೇಳಬಹುದಿತ್ತು. ಈಗ ನನ್ನ ಮಗುವನ್ನೂ ಸಹ ಯಾರೂ ಮುಟ್ಟಲ್ಲ. ಬೇರೆ ರೀತಿ ಕರಿತಾರೆ‌‌.
ಅನಾಥ ಅಂತ ನಂಬಿಸಿ ಒಬ್ಬ ಹುಡುಗಿಯನ್ನ ಗರ್ಭಿಣಿ ಮಾಡಿ ಈ ರೀತಿ ಬೀದಿಗೆ ತಂದಿದ್ದಾನೆ. ಎರಡು ಬಾರಿ ತೆಗೆಸಲುಹೋಗಿ ಅದು ಸಹ ಆಗಲಿಲ್ಲ. ಅವನೇ ಕರೆದುಕೊಂಡು ಹೋಗಿದ್ದ. ನನ್ನ ಬಳಿ ರೆಕಾರ್ಡ್ ಕೂಡ ಇದೆ.

ನಾನ್ ನಿನ್ನ ಪ್ರೀತಿ ಮಾಡ್ತೀನಿ ನನಗೆ ಯಾರೂ ಇಲ್ಲ ಅಂತ ಹೇಳ್ತಾ ಇದ್ದ. ನನ್ನನ್ನ ಕರ್ಕೊಂಡ್ ಹೋಗಿ ಈ ರೀತಿ ಮಾಡಿ ಬಿಟ್ಟು ಬಂದು ಬಿಡ್ತಾನೆ. ಅವನ ಫೋಟೋ ಬಿಟ್ಟು ಬೇರೆ ಏನೂ ಇರೋದಿಲ್ಲ. ನಾನು ಫೋಟೋ ಇಟ್ಟುಕೊಂಡಿದ್ದಕ್ಕೆ ಆಯ್ತು. ಇಲ್ಲ ಅಂದಿದ್ರೆ ಅದೂ ಇಲ್ಲ. ನಾನು ಹಾಸ್ಟೆಲ್ ನಲ್ಲಿದ್ದೆ ಅಲ್ಲಿ ಫ್ರೆಂಡ್ಸ್ ಜೊತೆ ಯಾರ ಬಳಿನೂ ಹೇಳಿಕೊಳ್ಳಿಲ್ಲ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತೆ ಅಂತ. ಮನೆಯಲ್ಲೂ ಎಲ್ಲೂ ಹೇಳಿಕೊಳ್ಳಿಲ್ಲ ಅವಮಾನ ಆಗತ್ತೆ ಅಂತ. ಅಪ್ಪ ಅಮ್ಮ ನನ್ನ ವಿಚಾರ ಗೊತ್ತಾದ ಮೇಲೆ ಅವರು ಬರಲೇ ಇಲ್ಲ. ನಾನು ಇರುವಷ್ಟು ದಿನ ಫೇಸ್ ಮಾಡ್ತೀನಿ ಸರ್. ಪೊಲೀಸರು ಹೇಳಿದ್ರು ಅವನಿಗೆ ಜಾಮೀನು ಆಗಿದೆ. ಚಿಕ್ಕಮಗಳೂರಲ್ಲಿ ಇದ್ರೆ ನಾವು ರಕ್ಷಣೆ ಕೊಡ್ತೀವಿ ಅಂದಿದ್ರು. ಆದರೆ ನಾವು ಆಗ ಇದ್ದಿದ್ದು ಬೇಲೂರಲ್ಲಿ. ಜೀವ ಕಳೆದುಕೊಂಡರೂ ಪರವಾಗಿಲ್ಲ ಸರ್. ಬೇರೆ ಯಾರೂ ಸಹ ನನ್ನ ರೀತಿ ಆಗಬಾರದು.

ತುಂಬಾ ನೋವು ಕೊಟ್ಟಿದ್ದಾನೆ. ಮಾಡೋದೆಲ್ಲಾ ಮಾಡಿಬಿಟ್ಟು ನಂತರ ಮಾತ್ರೆ ಕೊಡ್ತಾನೆ. ಆದರೆ ಅದು ಫೇಲ್ ಆದರೆ ನಮ್ಮನ್ನ ಅಲ್ಲೇ ಬಿಟ್ಟು ಬಂದುಬಿಡ್ತಾನೆ. ನಾನು ನಾಲ್ಕುವರೆ ತಿಂಗಳ ಗರ್ಭಿಣಿ ಆಗಿದ್ದಾಗ ಅವನನ್ನು ಹುಡುಕಿಕೊಂಡು ಮಧ್ಯ ರಾತ್ರಿ ಚಿಕ್ಕಮಗಳೂರಿಗೆ ಬಂದಿದ್ದು. ಅಲ್ಲಿ ಒಂದು ಲಾಡ್ಜ್ ನಲ್ಲಿ ಇರಿಸಿದ. ಒಂದೂವರೆ ತಿಂಗಳು ಆ ಲಾಡ್ಜ್ ನಲ್ಲಿದ್ದೆ. ಬೇಕರಿಯಲ್ಲಿ ಹೋಗಿ ಬಿಸ್ಕೆಟ್ ತಿಂತಿದ್ದೆ. ಅವನು ಒಂದು ಚಾಪೆ ಸಹ ಕೊಡ್ಲಿಲ್ಲ. ಬೇಕರಿಯವರಿಗೆ ನೂರ್ ರೂಪಾಯಿ ಗೂಗಲ್ ಪೇ ಮಾಡ್ತಿದ್ದ ಅದನ್ನು ನಾನು ಎರಡು ದಿನ ಇಟ್ಟುಕೊಂಡು ಊಟ ಮಾಡಬೇಕಿತ್ತು. ಆಮೇಲೆ ಮಹಿಳಾ ಠಾಣೆಯಲ್ಲಿ ದೂರು ಕೊಟ್ಟ ನಂತರ ಪೊಲೀಸರ ಮುಂದೆ ಮಗು ನಂದಲ್ಲ ಅಂತಿದ್ದ.. ಎಫ್ ಐ ಆರ್ ಹಾಕ್ತೀವಿ ಅಂದಾಗ ನನ್ನದೇ ಅಂತಿದ್ದ.. ಈಗ ಡಿ ಎನ್ ಎ ಹಾಕಿದ್ದೀವಿ. ಅದು ಬರೋವರೆಗೂ ನಾನು ಕಾಯ್ತೀನಿ ಸರ್.

ಮಗು ತಂದೆ ಆಗಲ್ಲ ಅಂದಮೇಲೆ ನನಗೆ ಅವನು ಬೇಡ. ಆದರೆ ಬೇರೆ ಹೆಣ್ಣು ಮಕ್ಕಳಿಗೆ ಈ ರೀತಿ ಆಗೋದು ಬೇಡ. ಈ ಮೊದಲು ಒಬ್ಬಳನ್ನು ಮದುವೆ ಆಗಿದ್ದಾನಂತೆ. ಅವಳು ಕೂಡ ಇವನ ಮೇಲೆ ಫೇಸ್ ಬುಕ್ಕಿನಲ್ಲಿ ಬರೆದಿದ್ದಳು ಆದರೆ ಈಗ ಅವಳೇ ಜಾಮೀನು ಕೊಟ್ಟಿದ್ದಾಳಂತೆ. ಅವರ ಊರಿನ ಹತ್ರ ಹೋಗಿ ಕೇಳಿದ್ರೆ ಇವನು ಬೇರೆ ರೀತಿಯ ಒಬ್ಬ ದಲ್ಲಾಳಿ ಅಂತಾರೆ ಅದು ಸಹ ಭಯದಿಂದ ಹೇಳ್ತಾರೆ.. ಈಗ ಐದು ತಿಂಗಳ ಮಗು ಕಟ್ಕೊಂಡು ಹೋಗ್ತಾ ಇದೀನಿ. ಅದ್ಯಾರೋ ಮಹಿಳೆ ಫೋನ್ ಮಾಡಿ ಐದು ಲಕ್ಷ ತಗೊಂಡು ಸುಮ್ಮನೆ ಆಗು ಅಂತಾರೆ. ನನಗೆ ಹೆರಿಗೆ ಆಗಿ ಹದಿನೈದು ದಿನ ಆಗಿದ್ದಾಗ ಶೂ ಕಾಲಿನಲ್ಲಿಯೇ ಬೆನ್ನಿಗೆ ತುಂಬಾ ನೋವು ಮಾಡಿದ. ಮಗು ಕೊಡು ಬೇರೆ ಯಾರಿಗಾದರೂ ಕೊಟ್ಟುಬಿಡ್ತೀನಿ ಅಂತಾನೆ. ನನ್ನನ್ನು ಸಹ ಒಂದು ಲಕ್ಷಕ್ಕೆ ಮಾಡಿದ್ದ.

ಅವರ ಅಣ್ಣ ಪೊಲೀಸ್ ಅಂತೆ ಸರ್. ಅವರಿಗೆ ಒಳ್ಳೆ ಹೆಸರಿದೆ ಅಂತೆ ಅವರು ಒಳ್ಳೆಯವರು ಅಂತೆ. ಅವರೇ ಲಾಡ್ಜ್ ಗೆ ಬಂದು ನನ್ನ ನೋಡಿ ಮನೆ ಮಾಡಿ ರೇಷನ್ ತಂದುಕೊಟ್ಟಿದ್ರು. ಬರೀ ಕಷ್ಟ ಸರ್. ನಾಲ್ಕೈದು ಧಾರಾವಾಹಿ ಮಾಡಿದಾನೆ ಸರ್. ಮುಂದೆ ಜೀವ ಕಳೆದುಕೊಂಡರೂ ಪರವಾಗಿಲ್ಲ. ಬೇರೆ ಯಾರಿಗೂ ಈ ರೀತಿ ಆಗೋದು ಬೇಡ ಸರ್. ನಾನು ಐದೂ ವರೆ ತಿಂಗಳು ಆಗಿದ್ದಾಗ ಆದಾಗ ವ್ಯವಹಾರ ನಡೆಯೋ ಮನೆಗೆ ತಂದು ಬಿಟ್ಟ. ಆನಂತರ ಹದಿನೈದು ದಿನ ಮನೆ ಮಾಡಿದ ಅಲ್ಲಿ ಚಾಪೆನೂ ಇಲ್ಲ ನೀರು ಇಲ್ಲ. ಆಮೇಲೆ ಚಿಕ್ಕಮಗಳೂರು ಸರ್. ಎಲ್ಲಾ ಸ್ನೇಹಿತರ ಮನೆಯಲ್ಲೂ ಐದೈದು ದಿನ ಇರಿಸುತ್ತಾಬೆ ಸರ್. ಎಲ್ಲಿ ಕರೆದುಕೊಂಡು ಹೋದರೂ ಒಂದು ಬೆಡ್ ಶೀಟ್ ಕೊಡ್ತಿರ್ಲಿಲ್ಲ ಸರ್.. ಜಿರಲೆ ಔಷಧಿ ತಂದು ಇದನ್ನು ಒಂದು ತೊಟ್ಟು ಹಾಕಿದ್ರು ಹೊರಟೋಗತ್ತೆ ಆಮೇಲೆ ಬೇರೆ ಮದುವೆಯಾಗು ಅಂತ ಹೇಳ್ತಾನೆ ಸರ್. ನಮ್ಮ ಕಡೆ ಎಲ್ಲರೂ ನೀನ್ ಮಾಡ್ಕೊಂಡಿದ್ದೀಯಾ ನೀನೆ ಅನುಭವಿಸು ಅಂದುಬಿಟ್ಟರು ಸರ್. ಈ ರೀತಿ ಗತಿ ಯಾರಿಗೂ ಬರೋದು ಬೇಡ ಸರ್.

ನನ್ನ ಕೈಯಲ್ಲಿ ಏನೂ ಮಾಡಕ್ಕಾಗ್ತಿಲ್ಲ ಸರ್. ಅವನಿಗೆ ಶಿಕ್ಷೆ ಆಗಲಿ ಅಷ್ಟೇ ಸರ್ ಎಂದು ಅಳಲು ತೋಡಿಕೊಂಡಿದ್ದಾರೆ. ನಿಜಕ್ಕೂ ಆ ಹೆಣ್ಣಿನ ಗೋಳು ಮನಕಲಕುವಂತಿದೆ.. ಇಂತಹ ಶಿಕ್ಷೆ ಯಾವ ಹೆಣ್ಣಿಗೂ ಬೇಡ. ಆತ ನಿಜಕ್ಕೂ ತಪ್ಪು ಮಾಡಿದ್ದಾದರೆ ಆತ ಮುಂದೆಂದೂ ಹೆಣ್ಣನ್ನು ಕಣ್ಣೆತ್ತೂ ಸಹ ನೋಡುವಂತೆ ಆಗದಿರಲಿ. ದಯವಿಟ್ಟು ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ತಿಳಿಯದವರನ್ನು ನಂಬಿ ಈ ರೀತಿ ಜೀವನವನ್ನು ಕಳೆದುಕೊಳ್ಳಬೇಡಿ. ಒಮ್ಮೆ ಹೋದ ಜೀವನ ಮತ್ತೆ ಎಷ್ಟು ಬೇಡಿದರೂ ಬರೋದಿಲ್ಲ. ಈ ಹೆಣ್ಣಿನ ನೋವು ಯಾರಿಗೂ ಬಾರದಿರಲಿ..