ಶುರುವಾದ ಕೆಲವೇ ತಿಂಗಳಲ್ಲಿ ಪ್ರಸಾರ ನಿಲ್ಲಿಸುತ್ತಿರುವ  ಜನಪ್ರಿಯ ಧಾರಾವಾಹಿ..

0 views

ಕೊರೊನಾ ಕಾರಣದಿಂದಾಗಿ ಜನ ಸಾಮಾನ್ಯರಿಗಷ್ಟೇ ಅಲ್ಲ ದೊಡ್ಡ ದೊಡ್ಡ ಉದ್ಯಮಿಗಳಿಗೂ ಸಹ ದೊಡ್ಡ ಪೆಟ್ಟೇ ಬಿದ್ದಂತಾಗಿದೆ.. ಅದರಲ್ಲೂ ಕನ್ನಡ ಕಿರುತೆರೆಯಂತೂ ಸಂಪೂರ್ಣವಾಗಿ ತಳಹದಿಗೆ ತಲುಪಿ ಮತ್ತೆ ಇದೀಗ ಸ್ವಲ್ಪ ಸ್ವಲ್ಪವೇ ಚೇತರಿಕೆ ಕಾಣುತ್ತಿದೆ.. ಆದರೆ ಇದೀಗ ಮತ್ತೊಂದು ಜನಪ್ರಿಯ ಧಾರಾವಾಹಿಯನ್ನು ಕೊನೆ ಮಾಡಲಾಗುತ್ತಿದೆ.. ಹೌದು ಲಾಕ್ ಡೌನ್ ಆದ ನಂತರ ಧಾರಾವಾಹಿಗಳ ಮರು ಪ್ರಸಾರ ಅಷ್ಟು ಯಶಸ್ಸು ನೀಡದ ಕಾರಣ ಹಿಂದಿ ಧಾರಾವಾಹಿಗಳನ್ನು ಡಬ್ ಮಾಡಿ ಪ್ರಸಾರ ಮಾಡಲಾಯಿತು..

ಲಾಕ್ ಡೌನ್ ಸಡಿಲಗೊಂಡು ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ನೀಡಿದರೂ ಸಹ ಅದೆಷ್ಟೋ ಧಾರಾವಾಹಿಗಳು ಮತ್ತೆ ಟೇಕ್ ಆಫ್ ಆಗಲೇ ಇಲ್ಲ.. ಹಣಕಾಸಿನ ತೊಂದರೆ ಇಂದಾಗಿ ಬಹಳಷ್ಟು ಧಾರಾವಾಹಿಗಳು ತನ್ನ ಪ್ರಸಾರ ನಿಲ್ಲಿಸಿದವು.. ಅದರಲ್ಲೂ ಕಲರ್ಸ್ ಸೂಪರ್ ವಾಹಿನಿಯೇ ಸಂಪೂರ್ಣವಾಗಿ ಬಂದ್ ಆಯಿತು.. ಆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಷ್ಟೂ ಧಾರಾವಾಹಿಗಳು ನಿಂತವು..

ಇನ್ನು ಜೀ ಕನ್ನಡದಲ್ಲಿಯೂ ರಾಧಾ ಕಲ್ಯಾಣ.. ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿ ತನ್ನ ಪ್ರಸಾರ ನಿಲ್ಲಿಸಿದವು.. ಬಹಳಷ್ಟು ಕಲಾವಿದರು ಕೆಲಸ ಇಲ್ಲಂದತಾದರು.. ಕೆಲಸ ಇದ್ದವರೂ ಕೂಡ ಪೂರ್ತಿ ಸಂಬಳ ಸಿಗದಂತಾಯಿತು.. ಒಟ್ಟಿನಲ್ಲಿ ಈ ಕೊರೊನಾ ಜನರ ಜೀವನವನ್ನೇ ಬೀದಿಗೆ ತಂದು ಬಿಟ್ಟಿತು..

ಇನ್ನು ಇದೆಲ್ಲದರ ನಡುವೆ ಇತ್ತೀಚೆಗೆ ಜಾಹೀರಾತುಗಳು ಸಹ ಹೆಚ್ಚಾದ ಕಾರಣ ಕಿರುತೆರೆ ಸ್ವಲ್ಪ ಸ್ವಲ್ಪವಾಗಿಯೇ ಚೇತರಿಸಿಕೊಳ್ಳುತ್ತಿದೆ.. ಆದರೂ ಸಹ ಕೆಲ ಧಾರಾವಾಹಿಗಳನ್ನು ರೇಟಿಂಗ್ ಇಲ್ಲದ ಕಾರಣ ಮುಕ್ತಾಯ ಮಾಡಲಾಗುತ್ತಿದೆ.. ಅದರಲ್ಲೊಂದು ಧಾರಾವಾಹಿ ಮೂರುಗಂಟು..

ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಸದ್ಯ ಕನ್ನಡತಿ ಹಾಗೂ ನನ್ನರಸಿ ರಾಧೆ ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದ್ಯ್ ಜನಮನ ಸೆಳೆಯುತ್ತಿದೆ.. ಒಳ್ಳೆಯ ರೇಟಿಂಗ್ ಕೂಡ ಪಡೆದುಕೊಳ್ಳುತ್ತಿದೆ.. ಆದರೆ ಇನ್ನೊಂದು ಕಡೆ ಅದೇ ವಾಹಿನಿಯ ಮತ್ತೊಂದು ಧಾರಾವಾಹಿ ಶುರುವಾದ ಕೆಲವೇ ತಿಂಗಳಿಗೆ ತನ್ನ ಪ್ರಸಾರವನ್ನು‌ ನಿಲ್ಲಿಸುತ್ತಿದೆ ಎಂದು ತಿಳಿದು ಬಂದಿದೆ.. ಧಾರಾವಾಹಿಯ ಕತೆಯನ್ನೂ ಸಹ ಮುಕ್ತಾಯ ಮಾಡಲಾಗುತ್ತಿದ್ದು ಅದಾಗಲೇ ಪ್ರೇಕ್ಷಕರಿಗೆ ಧಾರಾವಾಹಿ‌ ಮುಗಿಯುತ್ತಿರುವುದರ ಬಗ್ಗೆ ಸೂಚನೆಯೂ ಸಿಕ್ಕಿದೆ..

ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ನಟಿಸಿದ್ದ ಸಮೀಕ್ಷಾ ಹಾಗೂ ಎರಡು ಕನಸು ಧಾರಾವಾಹಿಯಲ್ಲಿ‌ ನಟಿಸಿದ್ದ ಅನಿರುದ್ಧ ಬಾಲಾಜಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.. ಮೊನ್ನೆ ಮೊನ್ನೆಯಷ್ಟೇ ನೂರು ಸಂಚಿಕೆ ಪೂರೈಸಿದ್ದ ಧಾರಾವಾಹಿಯಲ್ಲಿ ಲಕ್ಷ್ಮಿ ಬಾರಮ್ಮ ನಟಿ ನೇಹಾ ಗೌಡ ಕೂಡ ಅತಿಥಿ ಪಾತ್ರದಲ್ಲಿ‌ ಕಾಣಿಸಿಕೊಂಡಿದ್ದರು..

ಇದೀಗ ಧಾರಾವಹಿಯನ್ನೇ ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿದ್ದು ನವೆಂಬರ್ 15 ರವರೆಗೆ ಕೊನೆಯ ಸಂಚಿಕೆಗಳು ಪ್ರಸಾರವಾಗಲಿದೆ ಎಂದು ತಿಳಿದುಬಂದಿದೆ.. ಇನ್ನು ಸದ್ಯ ಅದೇ ಸಮಯಕ್ಕೆ ಬಿಗ್ ಬಾಸ್ ಹಾಗೂ ರಾಜಾರಾಣಿ ಧಾರಾವಾಹಿ ಖ್ಯಾತಿಯ ಚಂದನ ಅನಂತಕೃಷ್ಣ ಅಭಿನಯದ ಹೊಸ ಧಾರಾವಾಹಿ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ..