ಮನೆಬಿಟ್ಟು ಹೋದ ಅಮ್ಮನನ್ನು ಹುಡುಕಲು ರಾತ್ರಿ ಪೂರ್ತಿ ಸೈಕಲ್ ತುಳಿದ.. ಕೊನೆಗೆ ಆ ರಾತ್ರಿ ನಡೆದದ್ದೇ ಬೇರೆ.. ಕಣ್ಣೀರು ತರಿಸುತ್ತದೆ.. ಈ ಹುಡುಗ ನಿಜಕ್ಕೂ ಯಾರು ಗೊತ್ತಾ?

0 views

ಅಪ್ಪ ಅಮ್ಮ ದೊಡ್ಡವರಾದ ಮೇಲೆ ಅದೆಷ್ಟೋ‌ ಮಕ್ಕಳು ಅವರುಗಳನ್ನು ವೃದ್ಧಾಶ್ರಮಕ್ಕೆ ಹಾಕಿದ ಉದಾಹರಣೆಗಳಿರಬಹುದು.. ಅದೆಷ್ಟೋ ಮಕ್ಕಳು ತಂದೆ ತಾಯಿಯನ್ನು ಸುಖವಾಗಿ ನೋಡಿಕೊಳ್ಳುತ್ತಿರಬಹುದು.. ಆದರೆ ಇವೆಲ್ಲಾ ಮಕ್ಕಳಿಗೆ ಬುದ್ಧಿ ಬಂದ ಮೇಲಷ್ಟೇ.. ಆದರೆ ಮಕ್ಕಳು ಸಣ್ಣವರಿದ್ದಾಗ ಅವರಿಗೆ ಅಪ್ಪ ಅಮ್ಮನ ಮೇಲಿನ ಪ್ರೀತಿ ನಿಜಕ್ಕೂ ನಿಷ್ಕಲ್ಮಶವಾದದ್ದು.. ಅದರಲ್ಲೂ ತಾಯಿಯ ಮೇಲೆ ಚಿಕ್ಕ ಮಕ್ಕಳಿಗೆ ಎಂತಹ ಪ್ರೀತಿ ಇರುತ್ತದೆ ಎಂದರೆ ಅದನ್ನು ಪದಗಳಲ್ಲಿ ಹೇಳಲು ಅಸಾಧ್ಯ.. ಆದರೆ ಗಂಡ ಹೆಂಡತಿಯ ನಡುವಿನ ಜಗಳ ಮನಸ್ತಾಪಗಳಲ್ಲಿ ನಲುಗಿ ಹೋಗುವುದು ಮಾತ್ರ ಮಕ್ಕಳು.. ಅಂತಹುದೇ ಒಂದು ಮನಕಲಕುವ ಘಟನೆ ನಡೆದಿದ್ದು ನಿಜಕ್ಕೂ ಈ ಹುಡುಗನನ್ನು ನೋಡಿದರೆ ಕಣ್ಣಂಚಲ್ಲಿ ನೀರು ತರಿಸುವಂತಿದೆ.. ಹೌದು ಅಪ್ಪ ಅಮ್ಮನ ನಡುವೆ ಜಗಳವಾಯಿತು.. ಅಮ್ಮ ಮನೆಬಿಟ್ಟು ಹೋಗಿಯೇ ಬಿಟ್ಟಳು.. ಆದರೆ ಇತ್ತ ಮಕ್ಕಳು ಮಾತ್ರ ದಿಕ್ಕು ತೋಚದಂತಾದರು..

ಆದರೆ ಅಮ್ಮನನ್ನು ನೋಡಲೇ ಬೇಕೆಂದು ಸ್ನೇಹಿತನ ಸೈಕಲ್ ಪಡೆದು ರಾತ್ರೋ ರಾತ್ರಿ ಹೊರಟೇ ಬಿಟ್ಟನೀ ಮಗ.. ರಾತ್ರಿ ಪೂರ್ತಿ ಕಿಲೋಮೀಟರ್ ಗಟ್ಟಕೇ ಸೈಕಲ್ ತುಳಿದ.. ಆದರೆ ಈತ ಕೊನೆಗೆ ಯಾರ ಕೈಗೆ ಸಿಕ್ಕ ಕೊನೆಗೇನಾಯಿತು ನಿಜಕ್ಕೂ ಮನಕಲಕುತ್ತದೆ.. ಹೌದು ಈತನ ಹೆಸರು ಶಬರಿನಾಥ್.. ವಯಸ್ಸು ಕೇವಲ ಎಂಟು ವರ್ಷ.. ಈತನ ತಂದೆ ಹೆಸರು ರಘು ರಾಮನ್.. ತಾಯಿಯ ಹೆಸರು ರಾಜೇಶ್ವರಿ.. ಇವರು ತಮಿಳುನಾಡಿನ ವಿಲ್ಲುಪುರಂ ನಲ್ಲಿ ವಾಸವಾಗಿದ್ದರು.. ಈ ದಂಪತಿಗೆ ಇಬ್ಬರು ಮಕ್ಕಳು.. ಸುಖವಾದ ಸಂಸಾರ.. ರಘುರಾಮನ್ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.. ಆದರೆ ರಘುರಾಮನ್ ಹಾಗೂ ರಾಜೇಶ್ವರಿ ನಡುವೆ ಮನಸ್ತಾಪ ಉಂಟಾಗಿ ತಿಂಗಳ ಹಿಂದೆ ಇಬ್ಬರ ನಡುವೆಯೂ ಜಗಳ ನಡೆದಿದೆ.. ಇದರಿಂದ ಬೇಸರಗೊಂಡ ರಾಜೇಶ್ವರಿ ಗಂಡನ ಮನೆ ತೊರೆದು ಕಲ್ಲಕುರಿಚಿಯಲ್ಲಿನ ತನ್ನ ತವರು ಮನೆಗೆ ತೆರಳಿದ್ದಾಳೆ.. ಮಕ್ಕಳು ತಂದೆಯ ಜೊತೆಯೇ ಇದ್ದರು.. ಇಂದು ಅಮ್ಮ ಬರ್ತಾಳೆ.. ನಾಳೆ ಬರ್ತಾಳೆ ಎಂದು ಕಾಯುತ್ತಿದ್ದ ಮಕ್ಕಳಿಗೆ ಇಪ್ಪತ್ತು ದಿನಗಳಾದರೂ ಅಮ್ಮ ಬರಲೇ ಇಲ್ಲ..

ಅಮ್ಮನನ್ನು ನೋಡಬೇಕು ಎಂದು ಮಕ್ಕಳು ಕೊರಗುತ್ತಿದ್ದರು.. ಗಂಡ ಹೆಂಡತಿ ನಡುವಿನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ ರಾಜೇಶ್ವರಿ ಅವರ ಮಕ್ಕಳು ಅಮ್ಮನಿಲ್ಲದೇ ಕೊರಗಿಹೋಗಿದ್ದರು.. ಆದರೆ ರಾಜೇಶ್ವರಿ ಅವರ ಕಿರಿಯ ಮಗ ಶಬರಿನಾಥ್ ಅಮ್ಮನನ್ನು ನೋಡಲೇ ಬೇಕು ಎಂದು ನಿರ್ಧಾರ ಮಾಡಿ ಮನೆಯಿಂದ ಹೊರಡುವ ನಿರ್ಧಾರ ಮಾಡುವನು.. ಆದರೆ ಹೋಗುವುದಾದರು ಹೇಗೆ ಎಂದು ಆಲೋಚಿಸಿ ಸ್ನೇಹಿತನ ಸೈಕಲ್ ಪಡೆದು ಬರೋಬ್ಬರಿ ತೊಂಭತ್ತೆರೆಡು ಕಿಲೋಮೀಟರ್ ದೂರದಲ್ಲಿದ್ದ ಅಮ್ಮನನ್ನು ನೋಡಲು ಸೈಕಲ್ ನಲ್ಲಿಯೇ ಶಬರಿನಾಥ್ ಒಬ್ಬನೇ ಕಲ್ಲಕುರಿಚಿಗೆ ತೆರಳುತ್ತಾನೆ.. ಸೋಮವಾರ ಮಧ್ಯರಾತ್ರಿ ಮನೆಯಿಂದ ಹೊರಟ ಶಬರಿನಾಥ್ ಸುಮಾರು ಹದಿನಾಲ್ಕು ಕಿಲೋಮೀಟರ್ ಸೈಕಲ್ ತುಳಿದು ಕೊನೆಗೆ ವಿಲ್ಲುಪುರಂ ಹಾಗೂ ನಾಗಪಟ್ಟಣಂ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದನು.. ಇದನ್ನು ನೋಡಿದ ಪೊಲೀಸರು ಈತನನ್ನು ನಿಲ್ಲಿಸಿ ಯಾರು ಏನು ಎಂದು ವಿಚಾರಿಸಿದ್ದಾರೆ..

ಆಗ ಶಬರಿನಾಥ್ ನಡೆದ ವಿಚಾರ ತಿಳಿಸಿ ತನ್ನ ತಾಯಿಯನ್ನು ನೋಡಲು ಹೋಗುತ್ತಿರುವುದಾಗಿ ಹೇಳಿದ್ದಾನೆ.. ಕೊನೆಗೆ ಎಂಟು ವರ್ಷದ ಚಿಕ್ಕ ಹುಡುಗನನ್ನು ಈ ರೀತಿ ಬಿಡುವುದು ಸರಿಯಲ್ಲವೆಂದು ಆತನನ್ನು ಪೊಲೀಸ್ ಠಾಣೆಗೆ ಕರೆತಂದು ಆತನ ಸಂಪೂರ್ಣ ಕತೆಯನ್ನು ಕೇಳಿದ್ದಾರೆ.. ಅಮ್ಮನಿಗಾಗಿ ಹಂಬಲಿಸುತ್ತಿದ್ದ ಶಬರಿನಾಥ್ ಕತೆ ಕೇಳಿ ಪೊಲೀಸರು ಸಹ ಕಂಬನಿ‌ ಮಿಡಿದಿದ್ದಾರೆ.. ಆದರೆ ಹೇಗಾದರೂ ಶಬರಿನಾಥ್ ನನ್ನು ತನ್ನ ತಾಯಿಯ ಬಳಿ‌ಸೇರಿಸಬೇಕು ಎಂದು ನಿರ್ಧರಿಸಿದ ಪೊಲೀಸರು.. ಶಬರಿನಾಥ್ ನ ತಂದೆಗೆ ವಿಚಾರ ತಿಳಿಸಿ ಪೊಲೀಸ್ ಠಾಣೆಗೆ ಕರೆಸಿದ್ದಾರೆ.. ನಂತರ ತಾಯಿ ರಾಜೇಶ್ವರಿಗೂ ಸಹ ವಿಚಾರ ತಿಳಿಸಿದ್ದಾರೆ.. ಕೊನೆಗೆ ತಾಯಿಯನ್ನು ಕರೆತಂದು ಮಗನ ಬಳಿ ಸೇರಿಸಿದ್ದಾರೆ.. ಶಬರಿನಾಥ್ ಗೆ ತನ್ನ ತಾಯಿಯ ಮೇಲಿನ ಪ್ರೀತಿಗೆ.. ತಾಯಿಯನ್ನು ನೋಡುವ ಸಲುವಾಗಿ ಮಧ್ಯ ರಾತ್ರಿ‌ಮನೆ ಬಿಟ್ಟು ಬಂದು ತಾಯಿಯನ್ನು ಹುಡುಕುತ್ತಿದ್ದ ರೀತಿಗೆ ಪೊಲೀಸರೇ ಕರಗಿದ್ದು ತಾಯಿ ಮಗನನ್ನು ಒಂದು ಮಾಡಿದ್ದಾರೆ..

ದಯವಿಟ್ಟು ಯಾರೇ ಆಗಲಿ ಗಂಡನಾಗಲಿ ಹೆಂಡತಿಯಾಗಲಿ‌ ಮಕ್ಕಳ ಮುಂದೆ ನಿಮ್ಮ ಮನಸ್ತಾಪಗಳನ್ನು ದೂರವಿಡಿ.. ಅವರ ಮನಸ್ಸು ಎಷ್ಟು ಸೂಕ್ಷ್ಮ ಎಂಬುದು ಬಹುಶಃ ದೊಡ್ಡವರಾದ ಮೇಲೆ ಬಾಲ್ಯದ ದಿನಗಳನ್ನು ಮರೆತ ಅಪ್ಪ ಅಮ್ಮನಿಗೆ ಅರಿವಿರುವುದಿಲ್ಲ.. ಮಕ್ಕಳ ಮನಸ್ಸಿನ ಮೇಲೆ ಇಂತಹ ಘಟನೆಗಳು ಬೀರುವ ಪರಿಣಾಮಗಳನ್ನು ಊಹಿಸಲು ಅಸಾಧ್ಯ.. ಈ ಹುಡುಗ ದೇವರ ದಯೆಯಿಂದ ಪೊಲೀಸರಿಗೆ ಸಿಕ್ಕ ಸರಿ.. ಆದರೆ ಅಕಸ್ಮಾತ್ ಈ ಹುಡುಗನಿಗೆ ಆ ಮಧ್ಯ ರಾತ್ರಿಯಲ್ಲಿ ಏನಾದರು ಹೆಚ್ಚು ಕಡಿಮೆ ಆಗಿದ್ದರೆ ಆ ಅಪ್ಪ ಅಮ್ಮ ಇಬ್ಬರೂ ಸಹ ಮುಂದೆ ಎಷ್ಟೇ ಚೆನ್ನಾಗಿ ಬದುಕಿದ್ದರೂ ಅವರ ಜೀವನಕ್ಕೆ ಅರ್ಥವಿರುತ್ತಿರಲಿಲ್ಲ.. ಜೀವನ ಪೂರ್ತಿ ಮಗನಿಗಾಗಿ ಕೊರಗಬೇಕಾಗುತಿತ್ತು.. ದಯವಿಟ್ಟು ಮಕ್ಕಳು ನಿಮ್ಮ ಮೊದಲ ಪ್ರಾತಿನಿಧ್ಯವಾಗಿರಲಿ.. ಅವರೇ ಜೀವನ.. ಅವರಿಲ್ಲದ ಜೀವನ ಊಹಿಸಲು ಸಾಧ್ಯವಿಲ್ಲ ಅರಿವಿರಲಿ..