ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ಇನ್ನಿಲ್ಲ..

0 views

ಈ ವರ್ಷ ಕನ್ನಡ ಚಿತ್ರರಂಗಕ್ಕೆ ಬಹಳ ಕೆಟ್ಟ ವರ್ಷವೆನ್ನಬಹುದು.. ಕಲಾವಿದರು ಸೇರಿದಂತೆ ಸಿನಿಮಾ ಇಂಡಸ್ಟ್ರಿಯ ಸಾಲು ಸಾಲು ಮಂದಿ ಇನ್ನಿಲ್ಲವಾಗುತ್ತಿದ್ದಾರೆ.. ಬಹುಶಃ ಸಿನಿಮಾ ವಿಚಾರಗಳಿಗಿಂತ ಹೆಚ್ಚು ಸಿನಿಮಾ ಮಂದಿಯ ಈ ರೀತಿ ಸಾವಿನ ವಿಚಾರ ಹೆಚ್ಚು ಸುದ್ದಿಯಾಗುತ್ತಿರುವುದು ಇದೇ ಮೊದಲು.. 2020 ರಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಲಿಲ್ಲ.. ಆದರೆ ಹೆಚ್ಚು ಮಂದಿ ಬಣ್ಣದ ಬದುಕು‌ ಮುಗಿಸಿ ಬಾರದ ಲೋಕಕ್ಕೆ ಪಯಣಿಸುತ್ತಿರುವುದು ದುರ್ದೈವವೇ ಸರಿ..

ಹೌದು ಇಂದು ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ಕೊನೆಯುಸಿರೆಳೆದಿದ್ದಾರೆ.. ಈ ವರ್ಷ ಬುಲೆಟ್ ಪ್ರಕಾಶ್.. ಚಿರಂಜೀವಿ ಸರ್ಜಾ.. ಮೈಕಲ್ ಮಧು.. ಮುಬಿನಾ ಮೈಕಲ್.. ನಾಡಿಗ್ ಕೃಷ್ಣ.. ಹೀಗೆ ಇನ್ನು ಅನೇಕರು ಇನ್ನಿಲ್ಲವಾದರು.. ಇದೀಗ ದರ್ಶನ್ ರವರ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಶಾಹುರಾಜ್ ಶಿಂಧೆ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ..

ಹೌದು ಸ್ನೇಹನಾ ಪ್ರೀತಿನಾ ಸಿನಿಮಾ ನಿರ್ದೇಶನದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಶಾಹುರಾಜ್ ಅವರು ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಆಕ್ಷನ್ ಕಟ್ ಹೇಳಿದರು.. ನಂತರ ಮತ್ತೆ ದರ್ಶನ್ ಅವರ ಅರ್ಜುನ್ ಸಿನಿಮಾ ನಿರ್ದೇಶನ ಮಾಡಿದ ಶಾಹುರಾಜ್ ಅವರು ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದರು..

ಆದರೆ ವಿಧಿಯಾಟ ಬೇರೆಯೇ ಇತ್ತು.. ಹೌದು ಶಾಹುರಾಜ್ ಅವರು ಒಂಭತ್ತು ವರ್ಶಗಳ ಬಳಿಕ ಮತ್ತೆ ಸ್ಯಾಂಡಲ್ವುಡ್ ಗೆ ಮರಳಿದ್ದರು.. ಆಶಿಕಾ ರಂಗನಾಥ್ ಅವರ ರಂಗ ಮಂದಿರ ಸಿನಿಮಾ ನಿರ್ದೇಶನ ಮಾಡಿದ್ದರು.. ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಕ್ತಾಯವಾಗಿದ್ದು ಬಿಡುಗಡೆಗೆ ಸಿದ್ಧವಾಗಿದೆ.. ಆದರೆ ತಮ್ಮ ಕನಸಿನ ಸಿನಿಮಾ ಬಿಡುಗಡೆಗೂ ಮುನ್ನವೇ ಶಾಹುರಾಜ್ ಕೊನೆಯುಸಿರೆಳೆದಿದ್ದು ನೋವಿನ ವಿಚಾರವಾಗಿದೆ..

ಶಾಹುರಾಜ್ ಶಿಂಧೆ ಅವರ ನಿಧನದ ಸುದ್ದಿ ಕೇಳಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಅನೇಕ‌ ಕಲಾವಿದರು.. ತಂತ್ರಜ್ಞರು ಸ್ನೇಹಿತರು ಕಂಬನಿ‌ ಮಿಡಿದಿದ್ದು ಶಾಹುರಾಜ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಸಂತಾಪ ಸೂಚಿಸಿದ್ದಾರೆ.. ನಿರ್ದೇಶಕ ಅಜನೀಶ್ ಲೋಕನಾರಥ್ ಅವರು ಶಾಹುರಾಜ್ ಶಿಂಧೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನೋವು ವ್ಯಕ್ತಪಡಿಸಿದ್ದಾರೆ..

ನಟ ಹಾಗೂ ನಿರ್ಮಾಪಕ ಅಶು ಬೆದ್ರ ಅವರು ಶಾಹುರಾಜ್ ಅವರ ಕುರಿತು “ಶಿಂಧೆ ಸರ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ , ಬರೀಬೇಕು ಬರೆಯಲು ಯಾಕೋ ಕೇಳ್ತಿಲ್ಲ ಈ ಹೊತ್ತು, ಬರೀ ಕಳೆದು ಹೋಗೋದೇ ಆಯಿತು ಈ ವರ್ಷ, ಹತ್ರದವರೇ ಇಲ್ಲ ವಾಗಿದ್ದು ಸ್ವಲ್ಪ ಜನರಲ್ಲ ಈ ವರುಷ , ಬೆಳ್ಳಂ ಬೆಳಿಗ್ಗೆ ವ್ಯಾಯಾಮ ಇಲ್ದೆ ಒಂದೇ ಒಂದು ದಿನಾನೂ ಇದ್ದವ್ರಲ್ಲ, ಅದೇ ಇವತ್ತು ಬೆಳ್ಳಂ ಬೆಳಿಗ್ಗೆ ಹೃದಯಾಘಾತ ಆಯಿತು ಅಂತ ಗೊತ್ತಾದಾಗ..” ಎಂದು ಬರೆದು ಪೋಸ್ಟ್ ಮಾಡುವ ಮೂಲಕ ಕಂಬನಿ‌ ಮಿಡಿದಿದ್ದಾರೆ..