ದೇಹದಲ್ಲಿ ಶಕ್ತಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ಸುಲಭವಾಗಿ ಹೆಚ್ಚಿಸಲು ಮನೆಯಲ್ಲಿಯೇ ಸರಳವಾಗಿ ರುಚಿಯಾದ ಜ್ಯೂಸ್ ಮಾಡುವ ಅತ್ಯಂತ ಸುಲಭ ವಿಧಾನ..

0 views

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಒಂದು ಚೆನ್ನಾಗಿದ್ದರೆ ಸಾಕೆನ್ನುವಂತಾಗಿದೆ.. ಅದರಲ್ಲಿಯೂ ದೇಹದಲ್ಲಿ ಉಷ್ಣತೆ ಕಾಡೋದು.. ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ನಾನಾ ಕಾಯಿಲೆಗಳು ಬರುವುದು ಸಹಜವಾಗಿ ಹೋಗಿದೆ.. ಇಂತಹ ತೊಂದರೆಗಳನ್ನು ನಿವಾರಣೆ ಮಾಡಲು ನಮ್ಮ ದಿನ ನಿತ್ಯದ ಆಹಾರದಲ್ಲಿ ರೋಗ ನಿರೀಧಕ ಶಕ್ತಿ ಹೆಚ್ಚುವಂತಹ ಆಹಾರವನ್ನು ಸೇವಿಸಿದರೆ ಎಷ್ಟೋ ಕಾಯಿಲೆಗಳಿಂದ ಮುಕ್ತರಾಗಬಹುದು.. ಅದೇ ರೀತಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ರುಚಿಯಾದ ಜ್ಯೂಸ್ ಮಾಡುವ ಸುಲಭ ವಿಧಾನವಿದು‌‌.. ನೀರಿನ ದಾಹ ಮತ್ತು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಪ್ರತಿ ನಿತ್ಯ ಉಪಯೋಗಿಸುವಂತ ಪಧಾರ್ಥಗಳಿಂದಲೇ ಆರೋಗ್ಯಕರವಾದ ಹಾಗೂ ತುಂಬಾನೇ ರುಚಿಯಾದ ಡ್ರಿಂಕ್ಸ್ ಅಥವಾ ಜ್ಯೂಸನ್ನ ಮಾಡಿ ಸವಿಯಬಹುದಾಗಿದೆ.. ಈ ಜ್ಯೂಸನ್ನು ಎಲ್ಲಾ ಸಮಯದಲ್ಲೂ ಉಪಯೋಗಿಸಬಹುದು.. ತುಂಬಾನೇ ಸುಸ್ತು, ನಿಶ್ಯಕ್ತಿ ಇದ್ದಾಗ ಈ ಜ್ಯೂಸನ್ನ ಕುಡಿಯೋದ್ರಿಂದ ದೇಹಕ್ಕೆ ಒಳ್ಳೆ ಶಕ್ತಿ ಬರುತ್ತದೆ. ನಮ್ಮ ದೇಹವನ್ನ ತಂಪಾಗಿಸಿ, ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ..

ಇವೆರೆಡು ಜ್ಯೂಸಗಳಿಗೆ ಮುಖ್ಯವಾದ ಪಧಾರ್ಥವೆಂದರೆ ಸಬ್ಜಾ ಸೀಡ್ಸ್, ಹಾಲು ಮತ್ತು ಬೆಲ್ಲ. ಸಬ್ಜಾ ಸೀಡ್ಸ್ ಇದನ್ನ ಕನ್ನಡದಲ್ಲಿ ಕಾಮಕಸ್ತೂರಿ ಬೀಜ ಅಂತಾ ಕರೀತೀವಿ, ಕಾಮ ಕಸ್ತೂರಿಬೀಜದ ಸೇವನೆಯಿಂದ ಕೇವಲ ಒಂದೆರೆಡು ಅರೋಗ್ಯದ ಲಾಭಗಳಲ್ಲದೆ ಹಲವಾರು ರೀತಿಯ ಅರೋಗ್ಯದ ಲಾಭಗಳಿವೆ. ದೇಹದ ಉಷ್ಣತೆಯನ್ನ ಕಡಿಮೆ ಮಾಡುತ್ತೆ, ಉರಿಮೂತ್ರ ನಿವಾರಣೆ, ತೂಕ ಇಳಿಕೆ, ರಕ್ತ ಶುದ್ದಿ, ಬಾಯಿ ಹುಣ್ಣಿನ ನಿವಾರಣೆಗೆ ಜೀರ್ಣಕ್ರಿಯೆಗೆ ಸಹಕಾರಿ, ಮಾನಸಿಕ ಒತ್ತಡ ನಿವಾರಣೆ ಹೀಗೆ ಹಲವಾರು ಪ್ರಯೋಜನಿಗಳಿಗಾಗಿ ಇದನ್ನ ಬಳಸಬಹುದು. ಹಾಗೇನೇ ಹಾಲು ಮತ್ತು ಬೆಲ್ಲ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೇದು ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಹಲ್ಲು ಮತ್ತು ಮೂಳೆಗಳು ಬಲಗೊಳ್ಳುತ್ತದೆ, ಹಾಲಿನಲ್ಲಿ ಸಾಕಷ್ಟು ಪ್ರೋಟೀನ್ ಲಭ್ಯವಿರುವುದರಿಂದ ಪ್ರತಿನಿತ್ಯ ಒಂದು ಕಪ್ ಬೆಚ್ಚಗಿನ ಹಾಲಿನೊಂದಿಗೆ ದಿನವನ್ನು ಪ್ರಾರಂಭಿಸಿದರೆ, ದಿನವಿಡೀ ದೇಹವನ್ನು ಶಕ್ತಿಯುತವಾಗಿರುಸುತ್ತದೆ.

ಇದರಿಂದ ಸ್ನಾಯುಗಳ ಬೆಳವಣಿಗೆಗೆ ಸಹ ಇದು ಬಹಳ ಮುಖ್ಯವಾಗಿದೆ. ಕೂದಲಿನ ಅರೋಗ್ಯ ರಕ್ಷಣೆ, ನಿದ್ರೆ ಸಮಸ್ಯೆ ನಿವಾರಣೆ ಹಾಗೂ ಬೆಲ್ಲದಲ್ಲಿ ಕಬ್ಬಿಣದ ಅಂಶವಿದ್ದು ಯಾರ ದೇಹದಲ್ಲಿ ಕಬ್ಬಿಣದ ಸಮಸ್ಯೆಯನ್ನು ಎದುರಿಸುತ್ತಿರುವರೋ ಅಂಥವರಿಗೆ ಬೆಲ್ಲದ ಕಷಾಯ ಅಥವಾ ಬೆಲ್ಲದ ಒಂದು ಚೂರನ್ನ ಸೇವನೆ ಮಾಡಿ ಹಾಗೂ ಬೆಲ್ಲದಲ್ಲಿ ಕೂಡ ರೋಗನಿರೋಧಕ ಶಕ್ತಿಯಿದ್ದು, ಹಾಲು ಮತ್ತು ಬೆಲ್ಲದಲ್ಲಿ ಇನ್ನೂ ಹಲವಾರು ಆರೋಗ್ಯದ ಲಾಭಗಳಿವೆ. ಕೆಳಗಿನ ವೀಡಿಯೋ ನೋಡಿ..

ಮೊದಲಿಗೆ 2-3 ಟೇಬಲ್ ಸ್ಪೂನ್ ಕಾಮಕಸ್ತೂರಿ ಬೀಜಕ್ಕೆ, 1 ಕಪ್ ಆಗುವಷ್ಟು ನೀರನ್ನು ಹಾಕಿ ಸುಮಾರು 10-15 ನಿಮಿಷ ನೆನೆಸಿಡಬೇಕು ಆನಂತರ ಮೊದಲಿಗೆ ಹಾಲಿನ ಜ್ಯೂಸನ್ನು ತಯಾರಿಸಲು ಅರ್ಧ ಲೀಟರ್ ಆಗುವಷ್ಟು ಕಾಯಿಸಿ ಚೆನ್ನಾಗಿ ಆರಿಸಿರುವ ಹಾಲಿಗೆ ಸುಮಾರು 3 ಟೇಬಲ್ ಸ್ಪೂನ್ ನಷ್ಟು ಸಕ್ಕರೆಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಸಕ್ಕರೆ ಹಾಕುವುದರಿಂದ ಕರಗುವುದು ಲೇಟ್ ಆಗುತ್ತಲ್ಲ, ಅದಿಕ್ಕೋಸ್ಕರ ಸಕ್ಕರೆ ಪುಡಿಯನ್ನು ಉಪಯೋಗಿಸಿದ್ದೀನಿ. ಕುಟ್ಟಣಿಗೆಗೆ ಈ 10-12 ಕಾಳುಮೆಣವು ಮತ್ತೆ ಒಂದೆರೆಡು ಏಲಕ್ಕಿ ಬಿಜನ ಹಾಕಿಬಿಟ್ಟು ಒಮ್ಮೆ ಕ್ರಶ್ ಮಾಡಿ ಇದನ್ನ ಹಾಲಿಗೆ ಮಿಕ್ಸ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರಾಯಿತು.

ಇವಾಗ ಬೆಲ್ಲದ ಜ್ಯೂಸನ್ನ ಹೇಗೆ ಮಾಡೋದು ಅಂತ ನೋಡೋಣ ಮಿಕ್ಸಿ ಜಾರಿಗೆ 1 ಹಿಡಿಯಷ್ಟು ಪುದಿನಾ ಸೊಪ್ಪಿಗೆ 2-3 ಟೇಬಲ್ ಸ್ಪೂನ್ ಆಗುವಷ್ಟು ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಈ ಪುದಿನ ಜ್ಯೂಸನ್ನು ಶೋಧಿಸಿ ಇವಾಗ ಇದಕ್ಕೆ 1 ಕಪ್ ಆಗುವಷ್ಟು ನೀರನ್ನು ಸೇರಿಸಿ ಆನಂತರ ಸಿಹಿ ಮತ್ತು ರುಚಿಗೆ ಬೇಕಾದಷ್ಟು ಬೆಲ್ಲವನ್ನು ಸೇರಿಸಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಬೇಕು.. ಇಲ್ಲಿ ಜೊನಿ ಬೆಲ್ಲವನ್ನು ಉಪಯೋಗಿಸಿದ್ದೇನೆ. ಜೊನಿ ಬೆಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನಂತರ ಕುಟ್ಟಣಿಗೆಗೆ 10-15 ಕಾಳುಮೆಣಸು, 2-3 ಏಲಕ್ಕಿ ಬೀಜ, 1 ಲವಂಗ, ಸ್ವಲ್ಪಾನೆ ಶುಂಠಿ ತುರಿ ಮತ್ತು 2 ಚಿಟಿಕೆ ಅಷ್ಟು ಕಪ್ಪುಉಪ್ಪನ್ನು ಸೇರಿಸಿ ಇದನ್ನೂ ಕೂಡ ಕ್ರಶ್ ಮಾಡಿ ಬೆಲ್ಲದ ಜ್ಯೂಸಿಗೆ ಸೇರಿಸಿ ಬೇಕಿದ್ದಲ್ಲಿ ಒಮ್ಮೆ ರುಚಿಯನ್ನು ನೋಡಿ ಕೊನೆಯಲ್ಲಿ 1\2 ಲಿಂಬೆಹಣ್ಣಿನ ರಸವನ್ನು ಸೇರಿಸಿ ಮಿಕ್ಸ್ ಮಾಡಿಕೊಂಡರಾಯಿತು.

ಕೊನೆಯಲ್ಲಿ ಒಂದು ಗ್ಲಾಸ್ ಗೆ ಬೇಕಿದ್ದಲ್ಲಿ ಐಸ್ ಕ್ಯೂಬ್ಸ್ ಮತ್ತು ನೆನೆಸಿರುವ ಕಾಮಕಸ್ತೂರಿ ಬೀಜವನ್ನು ಹಾಕಿ ಅದಕ್ಕೆ ಹಾಲಿನ ಜ್ಯೂಸನ್ನು ಸೇರಿಸಿ ಕೊಂಡರಾಯಿತು ಹಾಗೇನೇ ಐಸ್ ಕ್ಯೂಬ್ಸ್ ಮತ್ತು ನೆನೆಸಿರುವ ಕಾಮಕಸ್ತೂರಿ ಬೀಜವನ್ನು ಹಾಕಿಬಿಟ್ಟು ಒಂದು ಲಿಂಬೆ ಹಣ್ಣಿನ ಸ್ಲೈಸ್ ಅನ್ನು ಸೇರಿಸಿ ಅದಿಕ್ಕೆ ಬೆಲ್ಲದ ಜ್ಯೂಸನ್ನು ಸೇರಿಸಿದರೆ ಬಾಯಿಗೆ ರುಚಿ ದೇಹಕ್ಕೆ ತಂಪಾದ ಜ್ಯೂಸ್ ರೆಡಿ ಆಗುತ್ತೆ
ಬೇಸಿಗೆ ಸಮಯದಲ್ಲಿ ದೇಹದ ಉಷ್ಣತೆ ಜಾಸ್ತಿ ಇರುವುದರಿಂದ ಇವೆರೆಡೂ ಜ್ಯೂಸಗಳಿಗೆ ಕಾಳುಮೆಣಸು, ಏಲಕ್ಕಿ ಮತ್ತು ಶುಂಠಿ ಇವೆಲ್ಲಾನು ನಿಮ್ಮ ರುಚಿ ಮತ್ತು ಸೀಸನ್ ಗೆ ಅನುಗುಣವಾಗಿ ಉಪಯೋಗಿಸಿ. ನೀವು ನಿಮ್ಮ ಮನೆಯಲ್ಲಿ ತಯಾರಿಸಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.