ನನ್ನ ಬಗ್ಗೆ ನಿಮಗೆ ಏನ್ ಅನ್ನಿಸ್ತಾ ಇದೆ.. ಮಧ್ಯರಾತ್ರೀಲಿ ಶುರುವಾಯ್ತು ಹೊಸ ಸಂಬಂಧ..

0 views

ಬಿಗ್ ಬಾಸ್ ಕನ್ನಡ ಸೀಸನ್ ಎಂಟು ಶುರುವಾಗಿ ಮೂರು ವಾರಗಳು ಕಳೆದಿದ್ದು ಅದಾಗಲೇ ಇಂದು ಮೂರನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಕೂಡ ಆರಂಭವಾಗಿದೆ.. ಇತ್ತ ಮನೆಯಿಂದ ಧನುಶ್ರೀ ಹಾಗೂ ನಿರ್ಮಲಾ ಹೊರ ಹೋಗಿದ್ದು ಈ ವಾರ ಹೊರ ಹೋಗುವ ಸದಸ್ಯ ಯಾರು ಎಂಬ ಕುತೂಹಲ ಎಲ್ಲಾ ಸ್ಪರ್ಧಿಗಳ ಮನಸ್ಸಿನೊಳಗೆ ಮೂಡಿದೆ..

ಇನ್ನು ಇತ್ತ ದಿನಕೊಂದು ಹೊಸ ಕತೆಗಳು ಬಿಗ್ ಬಾಸ್ ಮನೆಯೊಳಗೆ ನಡೆಯುತ್ತಿದ್ದು.. ಮಧ್ಯ ರಾತ್ರಿಯಲ್ಲಿ ಲೈಟ್ ಆಫ್ ಆದನಂತರ ಕೆಲ ಸ್ಪರ್ಧಿಗಳ ನಡುವೆ ಮಾತುಕತೆ ಜೋರಾಗಿಯೇ ನಡೆಯುತ್ತಿದೆ.. ಇದೀಗ ಬಿಗ್ ಬಾಸ್ ಮನೆಯ ಇಬ್ಬರು ಸದಸ್ಯರ ನಡುವೆ ಹೊಸ ಬಾಂಧವ್ಯವೇ ಬೆಳೆದಿದೆ..

ಹೌದು ಅತ್ತ ಬಿಗ್ ಬಾಸ್ ಮೊದಲ ವಾರದಲ್ಲಿ ಲವರ್ ಬಾಯ್ ರೀತಿಯಲ್ಲಿ ಕಾಣಿಸಿಕೊಂಡು ದಿವ್ಯಾ ಸುರೇಶ್ ಅವರಿಗೆ ಕಾಳಾಕುತ್ತಿದ್ದ ಶಮಂತ್ ಗೌಡ ನನಗೆ ದಿವ್ಯಾ ಮೇಲೆ ಕ್ರಶ್ ಆಗಿತ್ತು.. ಹೇಳಿಕೊಳ್ಳಬೇಕು ಎನ್ನುವಷ್ಟರಲ್ಲಿ ಮಂಜ ಬಂದು ಬಂಡೆಯಂತೆ ಕಲ್ಲಾಕಿಬಿಟ್ಟ ಎಂದು ಬೇಸರ ಮಾಡಿಕೊಂಡಿದ್ದರು.. ಈ ವಿಚಾರವನ್ನು ಖುದ್ದು ಸುದೀಪ್ ಅವರ ಬಳಿ ಮೊದಲ ವಾರದಲ್ಲಿಯೇ ಹೇಳಿಕೊಂಡಿದ್ದು ಆನಂತರ ದಿವ್ಯಾ ಉರುಡುಗ ವಿಚಾರದಲ್ಲಿಯೂ ಒಂದೆಜ್ಜೆ ಇಟ್ಟು ಅದ್ಯಾಕೋ ಸುಮ್ಮನಾಗಿ ಬಿಟ್ಟರು..

ಇದೀಗ ತಮ್ಮ ಸುಖ ದುಃಖ ಗಳನ್ನು ಹಂಚಿಕೊಳ್ಳಲು ಬಿಗ್ ಬಾಸ್ ಮನೆಯೊಳಗೆ ಹೊಸ ಸದಸ್ಯರೊಬ್ಬರ ಜೊತೆ ಬಾಂಧವ್ಯ ಬೆಸೆದುಕೊಂಡಿದ್ದಾರೆ.. ಹೌದು ಬ್ರಹ್ಮಗಂಟು ನಟಿ ಗೀತಾ ಜೊತೆ ಶಮಂತ್ ಬಾಂಧವ್ಯ ಬೆಸೆದುಕೊಂಡಿದ್ದು ಗೀತಾ ಬಳಿ ಈ ಬಗ್ಗೆ ಮಧ್ಯ ರಾತ್ರಿಯಲ್ಲಿ ಮಾತನಾಡಿದ್ದಾರೆ.. ಹೌದು ಗೀತಾರನ್ನು ಅಕ್ಕನಾಗಿ ಸ್ವೀಕರಿಸಿಕೊಂಡಿರುವ ಶಮಂತ್ ನೀವ್ ನನ್ನ ಅಕ್ಕ ಎಂದಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೀತಾ ಭಾರತಿ ಭಟ್ ನಿನಗೆ ಬೇಕಾದಾಗ ಮಾತ್ರ ಅಕ್ಕ ಅಂಕೊಂಡು ಬರ್ತೀಯಾ.. ಬೇರೆ ಸಮಯದಲ್ಲಿ ಕ್ಯಾಮರಾ ಮುಂದೆ ಹೋಗಿ ನನ್ನ ಬಗ್ಗೆಯೇ ಕಂಪ್ಲೆಂಟ್ ಮಾಡ್ತೀಯಾ.. ನೀನೊಬ್ಬ ಸ್ವಾರ್ಥಿ ಎಂದಿದ್ದಾರೆ..

ಇಲ್ಲ ಹಾಗಲ್ಲ ಎಂದು ಶಮಂತ್ ಗೀತಾರನ್ನು ಸಮಾಧಾನ ಪಡಿಸಿದ್ದು.. ಇದ್ದಷ್ಟು ದಿನ ಇವರುಗಳ ಜೊತೆಯೇ ಇರಬೇಕು ಎಂಬುದನ್ನು ಅರಿತಿರುವ ಗೀತಾ ಕೂಡ ಹೋಗಲಿ ಬಿಡು ಎಂದು ಶಮಂತ್ ಗೆ ತಲೆ ಮಸಾಜ್ ಮಾಡುವಲ್ಲಿ ತೊಡಗಿಕೊಂಡಿದ್ದರು.. ಇತ್ತ ಬಿಗ್ ಬಾಸ್ ಶುರುವಾದ ಮೊದಕ ಎರಡು ವಾರಗಳು ಮನೆಯ ಕ್ಯಾಪ್ಟನ್ ಆಗಿದ್ದ ಶಮಂತ್ ಇನ್ನೂ ಸಹ ತಮ್ಮ ಬಗ್ಗೆ ತಾವೇ ಕನ್ಫ್ಯೂಷನ್ ನಲ್ಲಿರೋದು ಎಲ್ಲರಿಗೂ ತಿಳಿದೇ ಇದೆ.. ಇದೇ ಕಾರಣಕ್ಕೆ ನನ್ನ ಬಗ್ಗೆ ನಿಮಗೆ ಏನನಿಸುತ್ತದೆ ಯಾವುದೇ ಫಿಲ್ಟರ್ ಇಲ್ಲದೇ ಅಭಿಪ್ರಾಯ ಹೇಳಿ ಎಂದು ಗೀತಾರನ್ನು ಶಮಂತ್ ಪ್ರಶ್ನೆ ಮಾಡಿದ್ದು ಇದಕ್ಕೆ ಉತ್ತರ ನೀಡಿರುವ ಗೀತಾ.‌. ನಿನಗೆ ತಲೆ ಮಾತ್ರ ಬೆಳೆದಿದೆ.. ಆದರೆ ಒಳಗೆ ಬ್ರೈನ್ ಮಾತ್ರ ಬೆಳೆದಿಲ್ಲ ಮೊದಲು ಅದನ್ನ ಬೆಳೆಸ್ಕೋ.. ದೊಡ್ಡ ಚೈಲ್ಡ್ ನೀನು ಎಂದಿದ್ದಾರೆ..