ಕನ್ನಡದ ಖ್ಯಾತ ನಟ ಶನಿ‌ಮಹಾದೇವಪ್ಪ ಇನ್ನಿಲ್ಲ.. ನಿಜಕ್ಕೂ ಏನಾಗಿತ್ತು ಗೊತ್ತಾ?

0 views

ಕನ್ನಡದ ಹಿರಿಯ ನಟ ಐನೂರಕ್ಕ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದ ರಾಜ್ ಕುಮಾರ್ ಅವರ ಒಟ್ಟಿಗೆ ನೂರ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಕವಿರತ್ನ ಕಾಳಿದಾಸ ಸಿನಿಮಾ ಖ್ಯಾತಿಯ ನಟ ಶನಿ ಮಹಾದೇವಪ್ಪ ಅವರು‌ ಇಂದು ಕೊನೆಯುಸಿರೆಳೆದಿದ್ದಾರೆ.. ಹೌದು

ಕಳೆದ ವರ್ಷ ಕನ್ನಡದ ಅದರಲ್ಲಿಯೂ ಚಿತ್ರರಂಗದ ಅನೇಕ ಕಲಾವಿದರನ್ನು‌ ಕಳೆದುಕೊಂಡೆವು.. ಚಿರು ಸರ್ಜಾ.. ಬುಲೆಟ್ ಪ್ರಕಾಶ್.. ಮೈಕಲ್ ಮಧು.. ಸೇರಿದಂತೆ ಇನ್ನು ಅನೇಕ ಸಾಲು ಸಾಲು ಹಿರಿಯ ಕಲಾವಿದರು.. ಯುವ ನಟರು ಸಹ ಇಹಲೋಕ ತ್ಯಜಿಸಿದರು..‌ಕನ್ನಡ ಚಿತ್ರರಂಗಕ್ಕೆ ಕಳೆದ ವರ್ಷ ನಿಜಕ್ಕೂ ಅತ್ಯಂತ ಕಹಿ ನೆನಪಿನ ವರ್ಷ ಎನ್ನಬಹುದು.. ಒಂದು ಕಡೆ ಸಿನಿಮಾಗಳು ನಿಂತು ಹೋಗಿ ಚಿತ್ರರಂಗ ಸ್ತಭ್ದವಾದ ಕಾರಣ ಚಿತ್ರೋದ್ಯಮವನ್ನೇ ನಂಬಿಕೊಂಡಿದ್ದ ಅನೇಕ ಕುಟುಂಬಗಳು ಬೀದಿಗೆ ಬಂದವು.. ಇತ್ತ ಬಹಳಷ್ಟು ಕಲಾವಿದರು ಕಣ್ಮರೆಯಾದರು.. ಸಾಲು ಸಾಲು ನೋವುಗಳು ಎದುರಾದವು..

ಇದೀಗ ಹೊಸ ವರ್ಷ ಹೊಸತನದಿಂದ ಮತ್ತೆ ಚಿತ್ರರಂಗ ಮೊದಲಿನಂತಾಗಲಿ‌ ಎಂದುಕೊಳ್ಳುತ್ತಿದ್ದ ಸಮಯದಲ್ಲಿಯೇ ಮತ್ತೊಂದು ನೋವಿನ ಸಂಗತಿ ಎದುರಾಗಿದೆ.. ಹೌದು ಕನ್ನಡದ ಖ್ಯಾತ ಕಲಾವಿದರಾದ ಶನಿ‌ ಮಹಾದೇವಪ್ಪ ಅವರು ಇಹಲೋಕ ತ್ಯಜಿಸಿದ್ದಾರೆ.. ಶನಿ‌ ಮಹಾದೇವಪ್ಪ ಅವರಿಗೆ ತೊಂಭತ್ತು ವರ್ಷ ವಯಸ್ಸಾಗಿತ್ತು.. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ‌‌ ಇಂದು ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ..

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶನಿ‌ಮಹಾದೇವಪ್ಪ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಆದರೆ ತಮ್ಮ ಜೀವನದ ಕೊನೆ ಪಯಣಕ್ಕೆ ಅದಾಗಲೇ ನಿರ್ಧಾರ ಮಾಡಿದ್ದ ಶನಿ‌ಮಹಾದೇವಪ್ಪನವರು ಇಂದು ಸಂಜೆ ನಾಲ್ಕರ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ.. ಈ ಮೂಲಕ ಕನ್ನಡ ಚಿತ್ರರಂಗ ಮತ್ತೊಬ್ಬ ಹಿರಿಯ ಕಲಾವಿದರನ್ನು ಕಳೆದುಕೊಂಡ ನೋವನ್ನು ಎದುರಿಸುವಂತಾಯಿತು..

ಪ್ರತಿ ದಿನ ಹತ್ತಾರು ಕಲಾವಿದರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರಬಹುದು.. ಆದರೆ ನಮ್ಮ ಹಳೆಯ ಕಲಾವಿದರನ್ನು ಕಳೆದುಕೊಂಡಾಗ ಚಿತ್ರರಂಗ ಅದ್ಯಾಕೋ ಖಾಲಿಯಾಗುತ್ತಿದೆ ಎಂದು ಭಾಸವಾಗುತ್ತದೆ.. ಶನಿ ಮಹಾದೇವಪ್ಪ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಕನ್ನಡಿಗರು ಎಲ್ಲರೂ ಸಂತಾಪ ಸೂಚಿಸಿದ್ದಾರೆ.. ಶನಿ ಮಹಾದೇವಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ.. ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಡಿಂಡಿಮ ಕವಿಯಾಗಿ ತಮ್ಮ ನಟನಾ ಚಾತುರ್ಯ ತೋರಿದ ಶನಿ‌ಮಹಾದೇವಪ್ಪ ಅವರು ಸೇರಿದಂತೆ ಎಲ್ಲಾ ಕನ್ನಡದ ಹಿರಿಯ ಕಲಾವಿದರೆಂದೂ ಸಹ ಎಂಬಂತ್ತು ತೊಂಭತ್ತರ ದಶಕದ ಜನತೆಗೆ ಸದಾ ಹಸಿರಾಗಿಯೇ ಇರುತ್ತಾರೆ..