ಅವಳ ಆ ಭಾಗಗಳನ್ನು ಮುಟ್ಟೋಕೆ ನನಗ್ಯಾವ ಕರ್ಮ.. ಹೊರ ಬಂದ ನಂತರ ಸಿಡಿದೆದ್ದ ಶಂಕರ್ ಅಶ್ವತ್ಥ್ ಅವರು‌‌..

0 views

ಬಿಗ್ ಬಾಸ್ ಸೀಸನ್ ಎಂಟರ ಹಿರಿಯ ಸ್ಪರ್ಧಿ ಶಂಕರ್ ಅಶ್ವತ್ಥ್ ಅವರು ಬಿಗ್ ಬಾಸ್ ಜರ್ನಿ ಮುಗಿಸಿ ಐದನೇ ವಾರ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.. ಸದ್ಯ ಇದೀಗ ಹೊರ ಬಂದ ನಂತರ ತಮ್ಮ ಬಿಗ್ ಬಾಸ್ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.. ಅದರಲ್ಲೂ ಒಬ್ಬ ಮಹಿಳಾ ಸ್ಪರ್ಧಿಯ ಮೇಲೆ ಬಹಳಷ್ಟು ಕೋಪವನ್ನು ಹೊರ ಹಾಕಿದ್ದಾರೆ.. ಒಂದು ರೀತಿ ಆ ಘಟನೆ ನೆನೆದು ಕೆಂಡಕಾರಿದ್ದಾರೆನ್ನಬಹುದು.. ಹೌದು ಕೆಲ ದಿನಗಳ ಹಿಂದೆ ಟಾಸ್ಕ್ ಒಂದರಲ್ಲಿ ಶಂಕರ್ ಅಶ್ವತ್ಥ್ ಅವರಿಗೆ ಮಹಿಳಾ ಸ್ಪರ್ಧಿಯೊಬ್ಬರು ಶಂಕರ್ ಸರ್ ನನ್ನ ಪ್ರೈವೆಟ್ ಪಾರ್ಟ್ಸ್ ಅನ್ನು ಮುಟ್ಟಬೇಡಿ ಎಂದಿದ್ದರು..

ಈ ಮಾತನ್ನು ಕೇಳಿ ಶಂಕರ್ ಅಶ್ವತ್ಥ್ ಅವರು ಬಹಳ ಕೋಪಗೊಂಡಿದ್ದರು.. ಅಷ್ಟೇ ಬೇಸರಗೊಂಡಿದ್ದರು.. ಅದನ್ನು ಮನೆಯಲ್ಲಿ ಆಗಾಗ ಹೇಳುತ್ತಲೇ ಇದ್ದರು.. ಆಕೆ ಕೊಟ್ಟಿದ್ದು ತಪ್ಪಾದ ಹೇಳಿಕೆ ಎಂದು.. ಆದರೀಗ ಮನೆಯಿಂದ ಹೊರ ಬಂದ ನಂತರ ಆ ಮಹಿಳಾ ಸ್ಪರ್ಧಿಯ ಮೇಲೆ ಕೆಂಡಕಾರಿದ್ದಾರೆ.. ಆಕೆ ಮತ್ಯಾರೂ ಅಲ್ಲ.. ಹೌದು ಆಕೆ ಮತ್ಯಾರೂ ಅಲ್ಲ ನಿಧಿ ಸುಬ್ಬಯ್ಯ.. ಈ ಹಿಂದೆ ಟಾಸ್ಕ್ ಒಂದರ ಸಮಯದಲ್ಲಿ ಶಂಕರ್ ಅಶ್ವತ್ಥ್ ಅವರು ನಿಧಿ ಸುಬ್ಬಯ್ಯ ಅವರನ್ನು ಹಿಡಿದುಕೊಂಡಿದ್ದರು.. ಆನಂತರ ನಿಧಿ ಸುಬ್ಬಯ್ಯ ಎಲ್ಲರ ಮುಂದೆ ಬಂದು ತನ್ನ ಎರಡು ಕೈಗಳನ್ನು ಮೇಲೆತ್ತಿ.. ಶಂಕರ್ ಸರ್ ನೀವು ನನ್ನ ಪ್ರೈವೆಟ್ ಪಾರ್ಟ್ ಗಳನ್ನು ಮುಟ್ಟಬೇಡಿ ಎಂದಿದ್ದರು..

ಈ ಮಾತು ಕೆಲ ಕ್ಷಣ ಮನೆಯವರನ್ನು ದಂಗಾಗಿಸಿತ್ತು.. ಹಿರಿಯರಾಗಿದ್ದ ಶಂಕರ್ ಅಶ್ವತ್ಥ್ ಅವರು ಕೊಂಚ ಕುಗ್ಗಿಯೇ ಹೋಗಿದ್ದರು.. ಆಕೆ ನೀಡಿದ್ದು ತಪ್ಪು ಹೇಳಿಕೆ ಎಂದು ಶಂಕರ್ ಅಶ್ವತ್ಥ್ ಅವರು ಬಹಳ ಬಾರಿ ಹೇಳಿದ್ದರು.. ನಿಧಿ ಸುಬ್ಬಯ್ಯ ಮೇಲೆ ಬಹಳಷ್ಟು ಕೋಪವೂ ಇತ್ತು.. ಆ ಕೋಪವನ್ನು ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನಾಮಿನೇಟ್ ಮಾಡುವ ಮೂಲಕ ಆಗಾಗ ಹೊರ ಹಾಕುತ್ತಲೇ ಇದ್ದರು.. ಕೊನೆಗೆ ಮನೆಯಿಂದ ಹೊರ ಬರುವ ಸಮಯದಲ್ಲಿಯೂ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್ ಬಾಸ್ ಶಂಕರ್ ಅಶ್ವತ್ಥ್ ಅವರಿಗೆ ನೀಡಿದಾಗ ಶಂಕರ್ ಅಶ್ವತ್ಥ್ ಅವರು ನಿಧಿ ಸುಬ್ಬಯ್ಯ ಅವರನ್ನೇ ನಾಮಿನೇಟ್ ಮಾಡಿದರು..

ಇನ್ನು ಇದೀಗ ಮನೆಯಿಂದ ಹೊರ ಬಂದ ನಂತರ ಆ ವಿಚಾರವಾಗಿ ಮಾತನಾಡಿ ತಮ್ಮ ಎಲ್ಲಾ ಕೋಪವನ್ನು ಹೊರ ಹಾಕಿದ್ದಾರೆ.. ಹೌದು ಮಾದ್ಯಮದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಶಂಕರ್ ಅಶ್ವತ್ಥ್ ಅವರು “ನಮಗೆ ಕಲ್ಲು ಹೊಡೆಯೋಕೆ ಬಂದಾಗ ನಾವು ತಿರುಗಿಸಿ ಕಲ್ಲು ಹೊಡೆಯಬೇಕು.. ಅಥವಾ ನಮ್ಮನ್ನು ರಕ್ಷಣೆ ಮಾಡಿಕೊಳ್ಳಲು ನಾವು ಏನಾದರು ಮಾಡಬೇಕು. ಇಲ್ಲವಾದರೆ ನೀವು ಕಲ್ಲು ಹೊಡೆಯಬಾರದು.. ನಿಮ್ಮದೇ ತಪ್ಪು.. ಬಹಳ ಪ್ರೀತಿ ಇದೆ ನೋಡಿ.. ಅದಕ್ಕೋಸ್ಕರ.. ಎರಡೂ ಕೈ ಎತ್ತ್ಬಿಟ್ಟು.. ನನ್ನ ಪ್ರೈವೆಟ್ ಪಾರ್ಟ್ ಮುಟ್ಟ್ಬೇಡಿ.. ನಾನ್ ಆಮೇಲೆ ಬೇರೆ ತರ ಅಂದ್ರೆ.. ಯಾರಿ ಆಡೋ ಮಾತು ಅದು.. ನೀವ್ ಒಂದ್ ಸಿನಿಮಾ ಹೀರೋಯಿನ್ನು.. ಹಿಂದಿ ಪಿಚ್ಚರಲ್ಲಿ ಎಲ್ಲಾ ಮಾಡಿದ್ದೀರಾ..

ಚೆನ್ನಾಗಿ ಓದಿದಿರಾ.‌. ಮಾಡಿದಿರಾ.. ಬದ್ಕಿದಿರಾ.. ಜೊತೆಗೆ ನಾನ್ ಯಾರ ಮಗ? ನನ್ನ ಬ್ಯಾಕ್ ಗ್ರೌಂಡ್ ಏನಿದೆ.‌ ಜನರ ದೃಷ್ಟಿಯಲ್ಲಿ ನಾವ್ ಹೇಗಿದ್ದೀವಿ‌.. ಶಂಕರ್ ಸರ್ ಶಂಕರ್ ಸರ್ ಅಂತ ನುಲ್ಕೊಂಡು ಬಂದು ಕೈ ಎತ್ತ್ಬಿಟ್ಟು ನನ್ನ ಪ್ರೈವೆಟ್ ಪಾರ್ಟ್ ಮುಟ್ಬೇಡಿ ಅಂದ್ರೆ.. ಅಲ್ಲಿ ಕ್ಯಾಮರಾ ಇರತ್ತೆ.. ಮೈಕ್ ಇರತ್ತೆ.. ಜನರೇನ್ ದಡ್ರಾ? ನಾನ್ ಯಾವ ತರ ಸೀನ್ ಮಾಡಕ್ ಹೋಗಿದಿನಿ ಅಲ್ಲಿ.. ನನಗ್ಯಾವ್ ಕರ್ಮ ಆಕೆಯ ಪ್ರೈವೆಟ್ ಪಾರ್ಟ್ ಮುಟ್ಟೋಕೆ.. ಹಂಗ್ ಹೇಳಿಬಿಟ್ಲು.. ಅದು ತಪ್ಪಾಗತ್ತೆ.. ಅದಿಕ್ಕೆ ನನಗೆ ಕೋಪ.. ನನಗೆ ಅಪಖ್ಯಾತಿ ತರುವಂತಹ ಹೇಳಿಕೆ ಅದು.. ನಾನ್ ಎಷ್ಟು ದಿನ ಇದ್ನೋ ಅಷ್ಟೂ ದಿನ ಅವಳನ್ನ ಕಳಪೆ ಅಂತಲೋ ಅಥವಾ ನಾಮಿನೇಟೋ ಮಾಡ್ತೀನಿ.. ಅಂತಹ ಮಾತು ಅದು..” ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.‌.