ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐದು ಜನ ಜೀವ ಕಳೆದುಕೊಂಡ ಮನೆಯಲ್ಲಿ ಅಮವಾಸ್ಯೆಯ ರಾತ್ರಿ ಏನಾಗಿದೆ ನೋಡಿ.. ಬೆಚ್ಚಿ ಬಿದ್ದ ಜನರು..

0 views

ಕಳೆದ ವರ್ಷ ಬೆಂಗಳೂರಿಗರು ಬೆಚ್ಚಿಬೀಳುವ ಘಟನೆಯೊಂದು ನಡೆದಿತ್ತು.. ಹೌದು ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರು ಜೀವ ಕಳೆದುಕೊಂಡಿದ್ದು ಮೂರು ದಿನಗಳ ನಂತರ ಅಕ್ಕಪಕ್ಕದವರಿಗೆ ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು.. ನೋಡಲಾಗದ ಸ್ಥಿತಿಯಲ್ಲಿ ಅಮ್ಮ ಮಗ ಇಬ್ಬರು ಹೆಣ್ಣು ಮಕ್ಕಳು ಜೊತೆಗೆ ಎರಡು ಒಂದು ವರ್ಷದ ಪುಟ್ಟ ಕಂದಮ್ಮನೊಂದು ಇಹಲೋಕ ತ್ಯಜಿಸಿತ್ತು.. ಅವರೆಲ್ಲಾ ಶಂಕರ್ ಎಂಬಾತನ ಕುಟುಂಬದವರಾಗಿದ್ದು ಶಂಕರ್ ಗೆ ಬೇರೆ ಬೇರೆ ಸಂಬಂಧಗಳು ಹಾಗೂ ಮನೆಯವರ ಜೊತೆ ಯಾವಾಗಲೂ ಜಗಳವಾಡುತ್ತಿದ್ದ ಕಾರಣದಿಂದ ಅಮ್ಮ ಮಕ್ಕಳು ಎಲ್ಲರೂ ಸಹ ಪತ್ರ ಬರೆದಿಟ್ಟು ದುಡುಕಿ ಜೀವ ಕಳೆದುಕೊಂಡಿದ್ದರು.. ಹೋಗುವ ಮುನ್ನ ಆ ಪುಟ್ಟ ಕಂದಮ್ಮನನ್ನು ಇಲ್ಲವಾಗಿಸಿದ್ದರು.. ಆದರೆ ದೇವರ ದಯೆ ಎರಡು ವರೆ ವರ್ಷದ ಮತ್ತೊಂದು ಮಗು ಬದುಕುಳಿದಿತ್ತು..

ಈ ಘಟನೆ ಕಂಡ ಬೆಂಗಳೂರಿಗರು ನಿಜಕ್ಕೂ ಬೆಚ್ಚಿ ಬಿದ್ದಿದ್ದರು.. ಆದರೆ ಇದೀಗ ಆ ಘಟನೆ ನಡೆದ ಬಹಳಷ್ಟು ತಿಂಗಳುಗಳೇ ಕಳೆದಿದೆ.. ಈಗ ಮೊನ್ನೆ ನಡೆದ ಅಮವಾಸ್ಯೆಯ ದಿನದಂದ ರಾತ್ರಿ ಆ ಬಂಗಲೆಯಲ್ಲಿ ನಡೆದ ಘಟನೆ ನೋಡಿ ಅಕ್ಕಪಕ್ಕದ ಮನೆಯವರು ಬೆಚ್ಚಿಬೀಳುವಂತಾಗಿದೆ.. ಹೌದು ಶಂಕರ್ ಕುಟುಂಬ ಸಿರಿವಂತ ಕುಟುಂಬ.. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೆಲ ವರ್ಷಗಳ ಹಿಂದಷ್ಟೇ ಹೊಸ ಮನೆ ಕಟ್ಟಿಸಿದ್ದರು.. ಮನೆ ಎನ್ನುವುದಕ್ಕಿಂತ ದೊಡ್ಡ ಬಂಗಲೆಯಾಗಿತ್ತು.. ಕೈತುಂಬಾ ಹಣವಿತ್ತು.. ಐಶಾರಾಮಿಯಾಗಿ ಜೀವನ ಮಾಡಬಹುದಾಗಿತ್ತು.. ಆದರೆ ನೆಮ್ಮದಿಯ ಕೊರತೆಯಾಗಿತ್ತು.. ನೆಮ್ಮದಿ ಇಲ್ಲದ ಕಾರಣ ಅಪೊಅನ ನಡವಳಿಕೆಗೆ ಬೇಸತ್ತು ಹೆಂಡತಿ ಹಾಗೂ ಮಕ್ಕಳು ಜೀವ ಕಳೆದುಕೊಂಡು ಬಿಟ್ಟರು.. ಆದರೆ ಹೋಗುವ ಮುನ್ನ ಶಂಕರ್ ನ ಲೀಲೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು ಸಧ್ಯ ಶಂಕರ್ ಪೊಲೀಸರ ವಶದಲ್ಲಿದ್ದಾನೆ..

ಇನ್ನು ಇತ್ತ ಆ ದೊಡ್ಡ ಮನೆಗೆ ಆ ದಿನದಿಂದ ಬೀಗ ಹಾಕಲಾಗಿತ್ತು.. ಒಂದೇ ದಿನ ಐದು ಜನ ಇಲ್ಲವಾದ ಮನೆಯ ಕಡೆ ಭಯದಿಂದ ಯಾರೂ ಸಹ ಹೋಗುತ್ತಿರಲಿಲ್ಲ.. ಆದರೆ ಮೊನ್ನೆ ನಡೆದ ಅಮವಾಸ್ಯೆಯ ದಿನದಂದು ಆ ಮನೆಯಲ್ಲಿ ಬೆಳಕು ಕಂಡಿದೆ.. ಹೌದು ಅತ್ತ ಶಂಕರ್ ಹಾಗೂ ಆತನ ಅಳಿಯಂದಿರನ್ನು ಪೊಲೀಸರು ವಶಕ್ಕೆ ಪಡೆದಿದ್ದು ನ್ಯಾಯಲಯಕ್ಕೆ ಒಪ್ಪಿಸಲಾಗಿದೆ.. ಇತ್ತ ಕೋಟ್ಯಾಂತರ ರೂಒಆಯಿ ಬೆಲೆ ಬಾಳುವ ಮನೆಯಲ್ಲಿ ಇನ್ನೂ ಸಹ ಆ ಐದು ಜನ ಇದ್ದಾರೆಂದು ಅಕ್ಕಪಕ್ಕದವರು ಭಯ ಪಟ್ಟು ಅಮವಾಸ್ಯೆಯ ದಿನಗಳಲ್ಲಿ ಆ ಮನೆಯ ಕಡೆ ಹೋಗುವುದನ್ನು ಸಹ ನಿಲ್ಲಿಸಿಬಿಟ್ಟಿದ್ದರು..

ಆದರೆ ಮೊನ್ನೆ ಅಮವಾಸ್ಯೆಯ ದಿನದಂದು ಬ್ಯಾಡರಹಳ್ಳಿಯ ಶಂಕರ್ ಮನೆಯಲ್ಲಿ ಮಧ್ಯರಾತ್ರಿ ಮಂದವಾದ ಬೆಳಕು ಕಂಡು ಬಂದಿದೆ.. ಇದನ್ನು ಕಂಡ ಕೆಲವರು ಬೆಚ್ಚಿಬಿದ್ದಿದ್ದಾರೆ‌.. ಅದಾಗಕೇ ನಾಲ್ಕು ತಿಂಗಳ ಹಿಂದೆಯೇ ಶಂಕರ್ ಮನೆಯ ಕರೆಂಟ್ ಅನ್ನು ಕಟ್ ಮಾಡಲಾಗಿದೆ.. ಆದರೂ ಸಹ ಆ ಮನೆಯಲ್ಲಿ ಅದೂ ಸಹ ಮಧ್ಯ ರಾತ್ರಿಯಲ್ಲಿ ಬೆಳಕು ಎಲ್ಲಿಂದ ಬರುತ್ತಿದೆ ಎಂದು ಜನರು ಗಾಬರಿಯಾಗಿದ್ದಾರೆ..

ತಕ್ಷಣ ಅಕ್ಕಪಕ್ಕದ ಜನ ಶಂಕರ್ ಅವರ ಸಂಬಂಧಿಗೆ ಫೋನ್ ಮಾಡಿದ್ದಾರೆ.. ಈ ಬಗ್ಗೆ ವಿಚಾರ ತಿಳಿಸಿ ಮನೆ ಬಳಿ ಬರುವಂತೆ ಹೇಳಿದ್ದಾರೆ.. ಇನ್ನು ಇತ್ತ ಮೂರ್ನಾಲ್ಕು ಜನರು ಗಟ್ಟಿ ಮನಸ್ಸು ಮಾಡಿಕೊಂಡು ಮನೆಯೊಳಗೆ ಹೋಗುವ ನಿರ್ಧಾರ ಮಾಡಿಬಿಟ್ಟರು.. ಹೌದು ಮೂರ್ನಾಲ್ಕು ಜನರು ಧೈರ್ಯ ಮಾಡಿ ಶಂಕರ್ ಮನೆಯೊಳಗೆ ಹೋಗಿದ್ದಾರೆ.. ಮನೆಯನ್ನೆಲ್ಲಾ ಸಂಪೂರ್ಣವಾಗಿ ಜಾಲಾಡಿದರೂ ಸಹ ಏನೂ ಸಿಗಲಿಲ್ಲ.. ಕೊನೆಗೆ ದೇವರ ಮನೆಯ ಬಳಿ ಹೋಗುತ್ತಿದ್ದಂತೆ ಆ ಕಡೆಯಿಂದ ಬೇರೊಬ್ಬ ವ್ಯಕ್ತಿ ಜೋರಾಗಿ ಕೂಗಿಕೊಂಡು ಹೊರ ಬಂದಿದ್ದಾನೆ.. ಆತ ಕೂಗಿಕೊಂಡಿದ್ದನ್ನು ನೋಡಿ ಈ ನಾಲ್ಕು ಜನ ಹೆದರಿದರು.. ಆದರೆ ಆನಂತರ ಕೂಗಿಕೊಂಡು ಹೊರ ಬಂದ ವ್ಯಕ್ತಿ ಯಾರು ಎಂದು ಆಲೋಚಿಸಿ ತಕ್ಷಣ ಆತನನ್ನು ಹಿಡಿದಿದ್ದಾರೆ.. ಆತನಿಗೆ ಸರಿಯಾಗಿ ಕೊಟ್ಟ ನಂತರ ಆತ ಇರೋ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ.

ಹೌದು ಆತ ಆ ಮನೆಯಲ್ಲಿ ಕಳ್ಳತನಮಾಡಲು ಹೋಗಿದ್ದು ಟಾರ್ಚ್ ಬಿಟ್ಟುಕೊಂಡು ಬೆಕೆ ಬಾಳುವ ವಸ್ತುಗಳನ್ನು ಹುಡುಕುತ್ತಿದ್ದಾರೆ ಇತ್ತ ನಾಲ್ಕು ಜನ ಮನೆಯೊಳಗೆ ಬಂದ ಕಾರಣ ದೇವರ ಮನೆಗೆ ಹೋಗಿ ಅವಿತುಕೊಂಡಿದ್ದಾನೆ..‌ ಆ ನಾಲ್ಕು ಜನರು ದೇವರ ಮನೆ ಬಳಿ ಬರುತ್ತಿದ್ದಂತೆ ಆತ ಕಿರುಚಿಕೊಂಡು ಓಡಿ ಬಂದು ಐದು ಜನರು ಇನ್ನೂ ಆ ಮನೆಯಲ್ಲಿಯೇ ಇದ್ದಾರೆಂದು ಕತೆ ಕಟ್ಟಲು ನೋಡಿದ್ದಾನೆ..ಆದರೆ ಜನರು ಸರಿಯಾಗಿ ಕೊಟ್ಟು ಆತನನ್ನು ಬ್ಯಾಡರಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದು.. ಪೊಲೀಸರ ಅತಿಥಿಯಾಗಿದ್ದಾನೆ.. ಕಷ್ಟ ಪಟ್ಟು ದುಡಿದು ಸಂಪಾದಿಸಿದ್ದೇ ಕೈಯಲ್ಲಿ ಉಳಿಯೋದಿಲ್ಲ ಎನ್ನುವ ಈ ಕಾಲದಲ್ಲಿ ಕಂಡವರ ಸ್ವತ್ತನ್ನು ಈ ರೀತಿ ಪಡೆಯಲು ಸಾಧ್ಯವೇ ಎನ್ನುವಂತಾಗಿದ್ದು ಆತನನ್ನು ಭರತ್ ಕುಮಾರ್ ಎಂದು ಗುರುತಿಸಲಾಗಿದ್ದು ಆತನೂ ಸಹ ಅದೇ ಏರಿಯಾದವನಾಗಿದ್ದು ಸಧ್ಯ ಪೊಲೀಸರ ಅತಿಥಿಯಾಗಿದ್ದಾನೆ‌‌..