ಮನುಷ್ಯನ ಮಗುವಿನ ರೀತಿ ಮರಿಗೆ ಜನ್ಮ ಕೊಟ್ಟ ಮೇಕೆ.. ನೋಡಿ ಬೆಚ್ಚಿಬಿದ್ದ ದಂಪತಿ.. ಮುಂದೆ ನಡೆದಿದ್ದೇ ಬೇರೆ..

0 views

ಪ್ರಕೃತಿ ಮಾತೆ ತನ್ನ ವಿಸ್ಮಯಗಳನ್ನು ಆಗಾಗ ತೋರುತ್ತಲೇ ಇರುತ್ತದೆ.. ಕೆಲವೊಮ್ಮೆ ಪ್ರಕೃತಿಯಲ್ಲಿ ನಡೆಯುವ ಘಟನೆಗಳು ಮನುಷ್ಯನನ್ನು ನಿಬ್ಬೆರಗಾಗುವಂತೆ ಮಾಡುತ್ತದೆ.. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು ಮೇಕೆಯ ಮಾಲಿಕರು ಬೆಚ್ಚಿಬೀಳುವಂತಾಗಿದೆ.. ಹೌದು ಮನುಷ್ಯನ ಹೊಟ್ಟೆಯಲ್ಲಿ ಮಗು ಹುಟ್ಟೋದನ್ನು ನೋಡಿದ್ದೇವೆ.. ಮೇಕೆಗಳು ಮರಿಗಳಿಗೆ ಜನ್ಮ ನೀಡೋದನ್ನು ನೋಡಿದ್ದೇವೆ.. ಹಸುಗಳು ಕರುಗಳಿಗೆ ಜನ್ಮ ನೀಡೋದನ್ನು ನೋಡಿದ್ದೇವೆ.. ಆದರೆ ಮೇಕೆಯೊಂದು ಮನುಷ್ಯನ ಮಗುವಿನ ರೂಪದ ಮರಿಗೆ ಜನ್ಮ ನೀಡಿದ್ದು ಅದನ್ನು ನೋಡಿ ಮೇಕೆಯ ಮಾಲಿಕರು ಶಾಕ್ ಆಗಿದ್ದಾರೆ.. ಇದೀಗ ಆ ಮಗುವನ್ನು ನೋಡಲು ಗ್ರಾಮದ ಜನರೆಲ್ಲಾ ಆಗಮಿಸುತ್ತಿದ್ದು ಈ ವಿಚಿತ್ರ ಹಾಗೂ ವಿಸ್ಮಯವಾದ ಘಟನೆ ನೋಡಿ ಬೆಚ್ಚಿಬಿದ್ದಿದ್ದಾರೆ..

ಹೌದು ಇಂತಹದೊಂದು ವಿಚಿತ್ರವಾದ ಘಟನೆ ಅಸ್ಸಾಂ ನ ಧೋಲಾಯಿಯ ಗಂಗಾಪುರ ಎನ್ನುವ ಹಳ್ಳಿಯಲ್ಲಿ ನಡೆದಿದ್ದು ಇದೀಗ ಪಶು ಇಲಾಖೆಯವರೂ ಸಹ ಈ ಮಗುವಿನ ರೀತಿಯ ಕರುವನ್ನು ನೋಡಲು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.. ಹೌದು ಗಂಗಾಪುರ ಗ್ರಾಮದ ನಿವಾಸಿಗಳಾದ ಶಂಕರ್ ದಾಸ್ ಹಾಗೂ ಅವರ ಪತ್ನಿ ಕೃಷಿಯ ಜೊತೆಗೆ ಮೇಕೆ ಸಾಕಾಣಿಕೆಯನ್ನು ಸಹ ಮಾಡುತ್ತಾರೆ.. ಅವರಿಗೆ ಸೇರಿದ ಮೇಕೆಯೊಂದು ಗರ್ಭಿಣಿಯಾಗಿದ್ದು ಕೆಲ ದಿನಗಳ ಹಿಂದಷ್ಟೇ ಮರಿಗಳಿಗೆ ಜನ್ಮ‌ ನೀಡಿತು.. ಹೌದು ಸಾಮಾನ್ಯವಾಗಿ ಮೇಕೆಗಳು ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುತ್ತವೆ.

ಒಮ್ಮೊಮ್ಮೆ ಮೂರು ಮರಿಗಳಿಗೆ ಜನ್ಮ ನೀಡೋದು ಉಂಟು.. ಆದರೆ ಶಂಕರ್ ದಾಸ್ ಅವರ ಮೇಕೆ ಒಮ್ಮೆಲೆ ಎರಡು ಮರಿಗಳಿಗೆ ಜನ್ಮ ನೀಡಿತು.. ಆದರೆ ಆ ಮರಿಗಳನ್ನು ನೋಡಿ ಶಂಕರ್ ದಾಸ್ ದಂಪತಿ ಶಾಕ್ ಆಗಿದ್ದಾರೆ.. ಹೌದು ಮೇಕೆ ಜನ್ಮ ನೀಡಿದ ಒಂದು ಮರಿ ಸಂಪೂರ್ಣವಾಗಿ ಮನುಷ್ಯನ ಮಗುವನ್ನು ಹೋಲುವಂತಿದೆ.. ಹೌದು ಮೇಕೆ ಮೊದಲು ಜನ್ಮ‌ ನೀಡಿದ ಮತಿ ತದ್ರೂಪಿಯಾಗಿ ಮನುಷ್ಯನ ಮಗುವನ್ನು ಹೋಲುತ್ತಿದ್ದು ಕಣ್ಣು ಮೂಗು ಬಾಯಿ ಎಲ್ಲವೂ ಮಗುವಿನಂತೆಯೇ ಇದೆ.. ಆದರೆ ಕಿವಿ ಮಾತ್ರ ಮೇಕೆಯಂತೆಯೇ ಇದೆ.. ಇನ್ನು ಆ ಮೇಕೆಯ ಮರಿಗೆ ಕೇವಲ ಎರಡು ಕಾಲುಗಳು ಮಾತ್ರವೇ ಇದ್ದು ನೋಡಲು ಸಂಪೂರ್ಣವಾಗಿ ಮಗುವಿನಂತೆಯೇ ಕಾಣುತ್ತಿದೆ..

ಆದರೆ ಮೇಕೆ ಅದೇ ದಿನ ಅಂದರೆ ಮಗುವಿನ ರೂಪದ ಮರಿಗೆ ಜನ್ಮ ನೀಡಿದ ಕೆಲ ಸಮಯದ ನಂತರ ಮತ್ತೊಂದು ಮರಿಗೆ ಜನ್ಮ‌ ನೀಡಿದ್ದು ಆ ಮರಿ ಸಂಪೂರ್ಣವಾಗಿ ಮೇಕೆಯ ಮರಿಯಂತೆಯೇ ಇದ್ದು ಮೊದಲ ಮರಿ ಮಾತ್ರ ಇಂತಹ ವಿಸ್ಮಯಕ್ಕೆ ಕಾರಣವಾಗಿದೆ.. ಈ ಬಗ್ಗೆ ನಿಮಿಷಗಳಲ್ಲಿ ಸುದ್ದಿ ಗ್ರಾಮದ ತುಂಬೆಲ್ಲಾ ಹರಡಿದ್ದು ಗ್ರಾಮಸ್ಥರು ಆಗಮಿಸಿ ಈ ವಿಚಿತ್ರ ಮರಿಯನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.. ಅಷ್ಟೇ ಅಲ್ಲದೇ ವಿಚಾರ ಅಕ್ಕಪಕ್ಕದ ಗ್ರಾಮಕ್ಕೂ ತಿಳಿದು ಶಂಕರ್ ದಾಸ್ ಮನೆಯ ಮುಂದೆ ಜನಸಾಗರ ತುಂಬಿದೆ.. ಈ ಮುನ್ನವೂ ವಿಚಿತ್ರವಾದ ಕರುಗಳು ಮೇಕೆ ಮರಿಗಳು ಹುಟ್ಟಿರುವ ಉದಾಹರಣೆ ಇದೆ.. ಆದರೆ ಅಂತಹ ಮರಿಗಳು ಜನ್ಮ ಪಡೆದ ಕೆಲವೇ ನಿಮಿಷಗಳಲ್ಲಿ ಜೀವ ಕಳೆದುಕೊಂಡು ಬಿಟ್ಟಿದೆ..

ಆದರೆ ಗಂಗಾಪುರದ ಶಂಕರ್ ದಾಸ್ ಅವರ ಮೇಕೆಯ ಮರಿ ಮಗುವಿನ ರೂಪದಲ್ಲಿ ಜನ್ಮ ಪಡೆದು ಉಳಿದಿರುವ ಕಾರಣ ಅದನ್ನು ಜೋಪಾನವಾಗಿ ಹಾರೈಕೆ ಮಾಡಲಾಗುತ್ತಿದೆ..ಸಧ್ಯ ಈ ವಿಚಿತ್ರವಾದ ಮಗುವಿನ ರೂಪದ ಮೇಕೆಯ ಮರಿಯ ಫೋಟೋವನ್ನು ಶಂಕರ್ದಾಸ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರನ್ನು ನಿಬ್ಬೆರಗಾಗುವಂತೆ ಮಾಡಿದೆ.. ಒಟ್ಟಿನಲ್ಲಿ ಪ್ರಕೃತಿಯ ವಿಸ್ಮಯದ ಮುಂದೆ ಮಾನವನ ವಿಜ್ಞಾನ ಏನೂ ಇಲ್ಲವೆಂದು ಆಗಾಗ ಇಂತಹ ಉದಾಹರಣೆಗಳ ಮೂಲಕ ನೋಡಲು ಸಿಗುತ್ತಿರುತ್ತದೆ.. ಸಧ್ಯ ಈ ವಿಚಿತ್ರ ಮಗುವಿನ ರೂಪದ ಮೇಕೆ ಮರಿ ಆರೋಗ್ಯವಾಗಿ ಒಂದಷ್ಟ್ಯ್ ದಿನಗಳ ಕಾಲ ಉಳಿಯುವಂತಾಗಲಿ ಅಷ್ಟೇ..