ಶಂಕ್ರಣ್ಣ ಮೇಘನಾ ಕತೆಯಲ್ಲಿ ಮತ್ತೊಬ್ಬ ವ್ಯಕ್ತಿಯ ಎಂಟ್ರಿ.. ಸಾಕ್ಷಿ ಸಮೇತ ಬಯಲಾಯ್ತು ಸತ್ಯ.. ಗರ್ಭಿಣಿ ಅಂದಿದ್ದು ಸುಳ್ಳಾ..

0 views

ಶಂಕ್ರಣ್ಣ ಮೇಘನಾ‌ ಕಳೆದ ಆರು ತಿಂಗಳ ಹಿಂದೆ ಮದುವೆಯಾದ ದಿನ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದು ಸತ್ಯ.. ಆದರೆ ಶಂಕ್ರಣ್ಣನಿಗೆ ಹುಡುಗಿ ಸಿಗದೇ ಮದುವೆಯಾಗದೇ ಉಳಿದಿದ್ದು.. ಇತ್ತ ಮೇಘನಾಳ ಗಂಡ ಸಾಲ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದು‌.. ಇದೀಗ ಈ ಇಬ್ಬರು ಒಂದಾಗಿ ಮದುವೆಯಾದ ಸತ್ಯ ತಿಳಿದ ನಂತರ ಯಾರೊಬ್ಬರೂ ಸಹ ಅವರಿಬ್ಬರ ಬಗ್ಗೆ ಮಾತನಾಡಲಿಲ್ಲ.. ಇಬ್ಬರು ಚೆನ್ನಾಗಿರಲಿ ಎಂದೇ ಬಯಸಿದರು.. ಆದರೆ ಮುಂದೊಂದು ದಿನ ಅದೂ ಸಹ ಕೇವಲ ಆರೇ ತಿಂಗಳಲ್ಲಿ ಈ ರೀತಿ ಶಂಕ್ರಣ್ಣ ಜೀವವನ್ನೇ ಕಳೆದುಕೊಳ್ಳುತ್ತಾರೆಂದು ಯಾರೂ ಸಹ ಊಹಿಸಿರಲಿಲ್ಲ.. ಆದರೆ ನಿನ್ನೆ‌ ರಾತ್ರಿ ಅದೂ ನಡೆದೇ ಹೋಯಿತು.. ಶಂಕ್ರಣ್ಣ ಹೆಂಡತಿ ಹಾಗೂ ತಾಯಿ ನಡುವಿನ ಜಗಳವನ್ನು ನೋಡಲಾಗದೇ ತಾನೇ ಬೆಳೆಸಿದ ತನ್ನ ತೋಟದ ಹಲಸಿನ ಮರದಲ್ಲಿ ಜೀವ ಕಳೆದುಕೊಂಡಿದ್ದಾರೆ.. ಆದರೆ ಇದೀಗ ಶಂಕ್ರಣ್ಣನ ಸಾವಿಗೆ ನಿಜವಾದ ಕಾರಣವೇನು ಎಂಬುದು ಬಯಲಾಗಿದೆ.. ಹೌದು ಅದೂ ಸಹ ಸಾಕ್ಷಿ ಸಮೇತ ಕೆಲವೊಂದು ವಿಚಾರ ಹೊರ ಬಿದ್ದಿದೆ..

ಹೌದು ಶಂಕ್ರಣ್ಣ ಹಾಗೂ ಮೇಘನಾ ಕಳೆದ ವರ್ಷ ಅಕ್ಟೋಬರ್ ನಲ್ಲಿ ಮದುವೆಯಾದ ನಂತರ ಕುಣಿಗಲ್ ನ ಚೌಡನಕುಪ್ಪೆಯ ಅಕ್ಕಿಮರಿ ಪಾಳ್ಯದ ತಮ್ಮ ನಿವಾಸದಲ್ಲಿಯೇ ಶಂಕ್ರಣ್ಣ ಹಾಗೂ ಮೇಘನಾ ವಾಸವಾಗಿದ್ದರು‌‌.. ಅದೇ ಮನೆಯಲ್ಲಿ ಶಂಕ್ರಣ್ಣನ ತಾಯಿ ಹಾಗೂ ಆರೋಗ್ಯ ಸರಿ ಇಲ್ಲದ ತಂಗಿಯೂ ವಾಸವಿದ್ದರು.. ಆದರೆ ಮದುವೆಯಾದ ಶುರುವಿನಿಂದಲೂ ಮೇಘನಾ ಅತ್ತೆಗೆ ಅಡುಗೆ ಮಾಡಿ ಹಾಕುತ್ತಿರಲಿಲ್ಲ.. ಇಬ್ಬರೂ ಸಹ ಬೇರೆ ಬೇರೆ ಅಡುಗೆ ಮಾಡಿಕೊಳ್ಳುತ್ತಿದ್ದರು.. ಇದಕ್ಕೂ ಮೀರಿ ಮೇಘನಾಳ ಬಟ್ಟೆಯನ್ನೂ ಸಹ ಅತ್ತೆಯೇ ಒಗೆಯಬೇಕಿತ್ತು.. ಶುರುವಿನಿಂದಲೂ ಅತ್ತೆ ಸೊಸೆ ನಡುವೆ ಮನಸ್ತಾಪ ಇದ್ದೇ ಇತ್ತು.. ಆದರೆ ಆ ಮನಸ್ತಾಪ ತಾರಕಕ್ಕೇರಿ‌ ನಿನ್ನೆ ತಾಯಿಯ ಮೇಲೆ ಶಂಕ್ರಣ್ಣ ಕೈ ಮಾಡಲು ಹೋಗಿದ್ದಾರೆ..

ಆನಂತರ ಏನಾದರೂ ಮಾಡಿಕೊಳ್ಳಿ ನಾನ್ ಇರೋದಿಲ್ಲ ಅಂತ ಮನೆಯಿಂದ ಹೊರ ಹೋದ ಶಂಕ್ರಣ್ಣ ಮರಳಿ ಮನೆಗೆ ಬಾರಲೇ ಇಲ್ಲ.. ಹಲಸಿನ ಮರದಲ್ಲಿ ಜೀವಕಳೆದುಕೊಂಡಿದ್ದಾರೆ.. ಇತ್ತ ಶಂಕ್ರಣ್ಣ ಹೋದ ನಂತರ ನಾನಾ ಕತೆಗಳು ಹುಟ್ಟಿ ಕೊಂಡಿದ್ದು ಇತ್ತ ನನ್ನ ಗಂಡನ ಈ ಸ್ಥಿತಿಗೆ ನನ್ನ ಅತ್ತೆಯೇ ಕಾರಣ ಎಂದು ಮೇಘನಾ ತಿಳಿಸಿದ್ದು.. ಅತ್ತ ಸೊಸೆಯೇ ಕಾರಣ ಎಂದು ಅತ್ತೆಯೂ ಸಹ ದೂರು ನೀಡಿದ್ದಾರೆ.. ಆದರೆ ಇದರ ನಡುವೆ ಮತ್ತೆ ಇಬ್ಬರು ವ್ಯಕ್ತಿಗಳ ಎಂಟ್ರಿಯಾಗಿದೆ.. ಹೌದು ಒಬ್ಬ ವ್ಯಕ್ತಿ ಮೇಘನಾಳ ತಂದೆ.‌. ಹೌದು ಮದುವೆ ಸಮಯದಲ್ಲಿ ಇವರಿಬ್ಬರು ಮದುವೆಯಾಗಿರುವ ವಿಚಾರವೇ ನಮಗೆ ಗೊತ್ತಿಲ್ಲ.. ನಾನು ಹುಲಿಯೂರು ದುರ್ಗದಲ್ಲಿ ದೂರು ನೀಡಿದ್ದೆ ಆನಂತರ ಶಂಕ್ರಣ್ಣ ಹಾಗೂ ಮಗಳು ಬಂದು ಪರಸ್ಪರ ಒಪ್ಪಿಕೊಂಡೇ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದರು..

ಮಗಳು ಹಾಗೂ ಅವಳ ಅತ್ತೆಗೆ ಆಗುತ್ತುರಲಿಲ್ಲ.. ಆ ಹೆಂಗಸು ಮಗನ‌ ಮಾತನ್ನು ಕೇಳುತ್ತಿರಲಿಲ್ಲ.. ಮಗಳನ್ನು ಬೆಂಗಳೂರಿನಲ್ಲಿ ಇರಿಸಿದ್ದ ಎಂಬ ಹೊಸ ವಿಚಾರವನ್ನು ತಿಳಿಸಿದ್ದಾರೆ.. ಅಷ್ಟೇ ಅಲ್ಲದೇ ಅವನ ತಾಯಿಯಿಂದಲೇ ಆತ ಹೀಗೆ ಮಾಡಿಕೊಂಡ ಎಂದಿದ್ದು ದೂರನ್ನು ಸಹ ದಾಖಲು‌ ಮಾಡಿದ್ದಾರೆ.. ಆದರೆ ಇಲ್ಲಿ ಶಂಕ್ರಣ್ಣನ ತಾಯಿ ಒಂದಷ್ಟು ವಿಚಾರಗಳನ್ನು ಸಾಕ್ಷಿ ಸಮೇತ ತಿಳಿಸಿದ್ದು ಎಲ್ಲವೂ ಮೇಘನಾ ಕಡೆ ಪ್ರಕರಣ ತಿರುಗುವಂತೆ ಕಾಣುತ್ತಿದೆ.. ಹೌದು ಮನೆಗೆ ಬಂದಾಗಿನಿಂದ ಒಂದು ದಿನ ಚೆನ್ನಾಗಿರಲಿಲ್ಲ.. ಮಗನ ಬಳಿ ಹಣ ಕೇಳುತ್ತಿದ್ದಳು.. ನನ್ನ ಬಳಿ‌ ಒಂದು ಲಕ್ಷ ಹಣ ಇತ್ತು ಅದನ್ನೂ ಸಹ ಮಗನ ಮೂಲಕ ಕೇಳಿ ತೆಗೆದುಕೊಂಡು ಅವಳ ತಂದೆಗೆ ಬೈಕ್ ಕೊಡಿಸಿದಳು.. ಈ ವಿಚಾರ ಎಲ್ಲರಿಗೂ ಗೊತ್ತು.. ಯಾರನ್ನು ಬೇಕಿದ್ದರೂ ಕೇಳಿ..

ಆನಂತರ ಪದೇ ಪದೇ ಮಗನಿಂದ ಹಣ ಪಡೆದುಕೊಳ್ಳುತ್ತಿದ್ದಳು.‌. ನಮ್ಮ ಮನೆಗೆ ಬಂದು ನೋಡಿ ಅವಳ ರೂಂ ತುಂಬಾ ಬರಿ ಮೇಕಪ್ ಸಾಮಾನುಗಳೇ ತುಂಬಿದೆ.. ಅಷ್ಟೇ ಅಲ್ಲ ಅವಳು ಯಾವಗಲೂ ಮತ್ತೊಬ್ಬನ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಳು.. ಬೇಕಿದ್ದರೆ ಅವಳ ಫೋನ್ ತೆಗೆದುಕೊಂಡು ನೋಡಿ ಎಲ್ಲಾ ಸಾಕ್ಷಿಯೂ ನಿಮಗೆ ಸಿಗಲಿದೆ ಎಂದಿದ್ದಾರೆ.. ಹೌದು ಮೇಘನಾಗೆ ಮತ್ತೊಬ್ಬನ ಜೊತೆ ಸಂಬಂಧ ಇತ್ತು ನನ್ನ ಮಗನನ್ನು ಆಸ್ತಿಗಾಗಿ ಮದುವೆ ಮಾಡಿಕೊಂಡಳು ಅಷ್ಟೇ.. ಬೇಕಿದ್ದರೆ ಅವಳ ಫೋನ್ ಒಮ್ಮೆ ನೋಡಿ ಎಂದಿದ್ದಾರೆ.. ಇತ್ತ ಮೇಘನಾ ಮಾತ್ರ ನಾನೀಗ ನಾಲ್ಕು ತಿಂಗಳ ಗರ್ಭಿಣಿ.. ನನಗೆ ಈಗ ಯಾರು ದಿಕ್ಕು.. ನನ್ನ ಮೊದಲನೇ ಗಂಡನೂ ಬಿಟ್ಟು ಹೋದ.. ಈಗ ಇವರೂ ಹೋದರು.. ನೆನ್ನೆಗೆ ನನಗೆ ಮೂರು ತಿಂಗಳು ತುಂಬಿದೆ.. ನಾನೇನು ಮಾಡ್ಲಿ ಎನ್ನುತ್ತಿದ್ದಾಳೆ.. ಅಷ್ಟೇ ಅಲ್ಲದೇ ನನ್ನ ವಯಸ್ಸು ಇಪ್ಪತ್ತೈದಲ್ಲ.. ಈಗ ಇಪ್ಪತ್ತು ತುಂಬಿ ಇಪ್ಪತ್ತೊಂದಕ್ಕೆ ಬಿದ್ದಿದೆ ಅಷ್ಟೇ..

ಫೆಬ್ರವರಿ ಒಂಭತ್ತನೇ ತಾರೀಕು ನನ್ನ ಹುಟ್ಟುಹಬ್ಬವನ್ನು ನನ್ನ ಗಂಡ ಜೋರಾಗಿ ಮಾಡಿದ್ದರು.. ಆದರೆ ಈಗ ಅವರೇ ಇಲ್ಲ.. ಇದಕ್ಕೆಲ್ಲಾ ನನ್ನ ಅತ್ತೆಯೇ ಕಾರಣ ನಾನು ದೂರು ನೀಡಿದ್ದೇನೆ ಎಂದಿದ್ದಾರೆ.. ಆದರೆ ಶಂಕ್ರಣ್ಣನಿಗೆ ಪ್ರತಿದಿನ ದೊಡ್ಡ ದೊಡ್ಡ ಡಿಮ್ಯಾಂಡ್ ಗಳನ್ನು ಇಡುತ್ತಿದ್ದರು.. ಹೆಂಡತಿಯಿಂದ ಸಾಕಷ್ಟು ನೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದು ಶಂಕ್ರಣ್ಣ ಕೂಡ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.. ಅಷ್ಟೇ ಅಲ್ಲದೇ ನನಗೆ ಆಧಾರ ಮಾಡು ಆಧಾರ ಮಾಡು ಅಂತ ರಾತ್ರಿ ಪೂರ್ತಿ ಶಂಕ್ರಣ್ಣನಿಗೆ ಡಿಮ್ಯಾಂಡ್ ಮಾಡುತ್ತಿದ್ದಳಂತೆ.. ಇದನ್ನೆಲ್ಲಾ ಕೇಳಿಸಿಕೊಂಡರೂ ಏನೂ ಮಾತನಾಡದೇ ಸುಮ್ಮನಾಗಿ ಬಿಡುತ್ತಿದ್ದೆ.. ಅಕ್ಕ ಪಕ್ಕದ ಯಾರನ್ನಾದರೂ ಕೇಳಿ ಎಲ್ಲವನ್ನೂ ಹೇಳ್ತಾರೆ ಎಂದು ತಾಯಿ ತಿಳಿಸಿದ್ದಾರೆ.. ಒಟ್ಟಿನಲ್ಲಿ ಹೊಸ ಜೀವನ ಕಟ್ಟಿಕೊಂಡಿದ್ದ ಜೋಡಿ ಇಷ್ಟು ಬೇಗ ಈ ರೀತಿ ಅಂತ್ಯ ಕಂಡಿದ್ದು ಮಾತ್ರ ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ..