ನೆನಪಿದ್ದಾರಾ ಮೈಸೂರಿನ ಡೋಲೋ ಮಾತ್ರೆ ಬಿಸಿ ರಾಗಿ ಹಿಟ್ಟು ಮಹಿಳೆ.. ಮುನ್ನೂರು ಕೊಟ್ಟು ಆ ಕೆಲಸಕ್ಕೆ ಕರಿತಾಳೆ ಆಂಟಿ ಎಂದು ಪೊಲೀಸ್ ಠಾಣೆಗೆ ಬಂದ ಶಶಿ..

0 views

ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಗಳ ವೀಡಿಯೋವೊಂದು ವೈರಲ್ ಆಗಿತ್ತು.. ಕೊರೊನಾ ಸಮಯದಲ್ಲಿ ರಾಜಕಾರಣಿಗಳಿಗೆ ನೇರವಾಗಿ ಟಾಂಗ್ ಕೊಟ್ಟು ಲಾಕ್ ಡೌನ್ ನಿಂದ ಜನರು ಅನುಭವಿಸೋ ತೊಂದರೆಯ ಬಗ್ಗೆ ಮಾತನಾಡಿ ಯಾವ್ ಕೊರೊನಾನೂ ಇಲ್ಲ ನನಗೂ ಜ್ವರ ಬಂದಿತ್ತು.. ಡೋಲೋ ಮಾತ್ರೆ ಬಿಸಿ ರಾಗಿ ಹಿಟ್ಟು ಊಟ ಮಾಡಿದೆ ಎಲ್ಲವೂ ಹೋಯ್ತು ಎಂದಿದ್ದಳು.. ಮೈಸೂರಿನ ಮಾದ್ಯಮವೊಂದರ ಜೊತೆ ಮಾತನಾಡಿದ್ದ ಹೆಣ್ಣು ಮಗಳ ವೀಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು.. ಆನಂತರ ಸಾಕಷ್ಟು ಮಾದ್ಯಮಗಳ ಸಂದರ್ಶನದಲ್ಲಿ ಆಕೆ ಮಾತನಾಡಿದ್ದೂ ಉಂಟು.. ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣದ ಸೆನ್ಸೇಷನ್ ಆಗಿದ್ದಳು ಎಂದರೂ ತಪ್ಪಾಗಲಾರದು.. ಆದರೀಗ ಅದೇ ಹೆಣ್ಣು ಮಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ..

ಹೌದು ಕಳೆದ ವರ್ಷ ಈ ಹೆಣ್ಣು ಮಗಳ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದ ಎಲ್ಲಾ ಟ್ರೋಲ್ ಪೇಜ್ ಗಳಲ್ಲಿ ಹಾಗೂ ಸಾಮಾನ್ಯ ಜನರೂ ಸಹ ಈ ಹೆಣ್ಣು ಮಗಳ ವೀಡಿಯೋ ಹಂಚಿಕೊಂಡು ಈಕೆಯ ಮಾತಿಗೆ ಬೆಂಬಲ ವ್ಯಕ್ತ ಪಡಿಸಿದ್ದರು.. ಜೊತೆಗೆ ಸಣ್ಣ ಈಕೆಯ ಡೋಲೋ ಮಾತ್ರೆ ಬಿಸಿ ರಾಗಿ ಹಿಟ್ಟು ಮಾತನ್ನು ರೀಮಿಕ್ಸ್ ಮಾಡಿ ಹಾಡನ್ನು ಸಹ ಮಾಡಲಾಗಿತ್ತು.. ಇನ್ನು ಈ ಹೆಣ್ಣು ಮಗಳು ಶಶಿ ಬಗ್ಗೆ ಅದೇ ಮೈಸೂರಿನ ಮಾದ್ಯಮದವರು ಸಂದರ್ಶನ ಮಾಡಲಾಗಿ ಈಕೆ ತನ್ನ ಬಗ್ಗೆ ಹೇಳಿಕೊಂಡಿದ್ದಳು.. ಎಸ್ ಎಸ್ ಎಲ್ ಸಿ ವರೆಗೆ ಓದಿದ್ದೇನೆ.. ಟಿವಿ ನ್ಯೂಸ್ ನೋಡಿ ವಿಚಾರಗಳನ್ನು ತಿಳಿದುಕೊಂಡಿದ್ದೇನೆ ಎಂದಿದ್ದಳು.. ಜೊತೆಗೆ ತನ್ನ ಮಗಳನ್ನು ಡಿಸಿ ಮಾಡಿಸುವೆ ಮಗನನ್ನು ಮಿಲಿಟರಿಗೆ ಸೇರಿಸುವೆ ಎಂದೂ ಸಹ ಹೇಳಿದ್ದು ಆಕೆಯ ಮಾತಿಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು..

ಅದಾದ ಬಳಿಕ ಚುನಾವಣೆಗೆ ನಿಲ್ತೀರಾ ಎಂದು ಕೇಳಲಾಗಿ ಅವಕಾಶ ಸಿಕ್ಕರೆ ಖಂಡಿತ ಚುನಾವಣೆಯಲ್ಲಿ ನಿಲ್ತೀನಿ ಎಂದಿದ್ದರು.. ಈ ವಿಚಾರ ಕೊಂಚ ಟ್ರೋಲ್ ಕೂಡ ಆಗಿತ್ತು.. ಆ ಸಮಯದಲ್ಲಿ ಮತ್ತೊಂದು ವೀಡಿಯೋದಲ್ಲಿ ನಮ್ಮ ಬಗ್ಗೆ ಟ್ರೋಲ್ ಮಾಡಬೇಡಿ.. ಸಾಧ್ಯವಾದರೆ ಸಹಾಯ ಮಾಡಿ ಇಲ್ಲವಾದರೆ ಸುಮ್ಮನಿರಿ.. ಸುಮ್ಮನೆ ಟ್ರೋಲ್ ಮಾಡಿದ್ರೆ ಉಪಯೋಗ ಇಲ್ಲ ಎಂದು ಟ್ರೋಲ್ ಪೇಜ್ ಗಳಿಗೆ ಟಾಂಗ್ ನೀಡಿದ್ದು ಆಗಲೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದರು.. ಆ ಬಳಿಕ ಎಲ್ಲಿಯೂ ಕಾಣಸಿಗದ ಶಶಿ ಇದೀಗ ಮೈಸೂತು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ದೂರು ನೀಡಿದ್ದಾರೆ..

ಹೌದು ಶಶಿಗೆ ಗೊತ್ತಿರುವ ವಸಂತ ಎಂಬುವ ಆಂಟಿಯೊಬ್ಬರು ನಿನ್ನೆ ಶಶಿ ಅವರ ಅಮ್ಮನ ಮನೆಗೆ ಹೋಗಿ ಶಶಿಯ ನಂಬರ್ ಪಡೆದು ಫೋನ್ ಮಾಡಿದ್ದಾಳೆ.. ನಾಳೆ ಕರಪತ್ರ ಹಂಚುವ ಕೆಲಸ ಇದೆ.. ನಾಲ್ಕು ಏರಿಯಾ ಕವರ್ ಮಾಡಿದ್ರೆ ಮುನ್ನೂರು ರೂಪಾಯಿ ಸುಗುತ್ತೆ ಬರ್ತಿಯಾ ಎಂದು ಕೇಳಿದ್ದು ಶಶಿ ಇಲ್ಲ ನಾನು ಗೋಡೋನ್ ಕೆಲಸ ಒಪ್ಪಿಕೊಂಡಿದ್ದೇನೆ.. ಅಲ್ಲಿಗೆ ಹೋಗ್ಬೇಕು ಎಂದಿದ್ದಾರೆ.. ಆನಂತರ ಶಶಿಯ ಅತ್ತಿಗೆಯ ಬಳಿ ಮಾತನಾಡಿ ಆಕೆಯನ್ನು ಪಾಂಪ್ಲೆಟ್ ಹಂಚುವ ಕೆಲಸಕ್ಕೆ ಕರೆದುಕೊಂಡು ಹೋಗಿದ್ದಾರೆ.. ನಾಲ್ಕು ಏರಿಯಾದಲ್ಲಿ ಹಂಚಿದ ಬಳಿಕ ಶಶಿ ಅವರ ಅತ್ತಿಗೆ ವಸಂತ ಆಂಟಿಯ ಮನೆಯ ಬಳಿ ಹೋಗಿದ್ದಾರೆ..

ಆಗ ಪಾಂಪ್ಲೆಟ್ ಹಂಚಿದ್ದಕ್ಕೆ ಮುನ್ನೂರು ರೂಪಾಯಿ ಕೈಗೆ ಕೊಟ್ಟು.. ನಂತರ ಮತ್ತೆ ಇನ್ನೂ ಮುನ್ನೂರು ರೂಪಾಯಿ ಕೊಡ್ತೀನಿ ಎಂದು ಆ ಕೆಲಸ ಮಾಡು ಎಂದು ಮನೆಯ ಬಾಗಿಲು ಹಾಕಿಕೊಂಡಿದ್ದಾಳೆ. ಆ ತಕ್ಷಣ ಮನೆಯವರಿಗೆ ಶಶಿ ಅವರ ಅತ್ತಿಗೆ ಫೋನ್ ಮಾಡಲಾಗಿ ಮನೆಯವರು ಬಂದು ಕಿಟಕಿ ಹಾಗೂ ಬಾಗಿಲನ್ನು ತೆಗೆದು ಆಕೆಯನ್ನು ರಕ್ಷಿಸಿಕೊಂಡಿದ್ದಾರೆ.. ಆನಂತರ ಶಶಿಗೂ ವಿಚಾರ ತಿಳಿದು ಅತ್ತಿಗೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ನೀಡಿದ್ದು ಇನ್ನೂ ಸಹ ಯಾರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.. ಆ ವಸಂತ ಆಂಟಿಯನ್ನೂ ಇಲ್ಲಿ‌ ಕರೆಸಿಲ್ಲ.. ನಾವು ಮಾತ್ರ ಮಧ್ಯಾಹ್ನದಿಂದ ಕಾಯುತ್ತಿದ್ದೇವೆ.

ಒಬ್ಬಬ್ಬರಾಗೇ ಬಂದು ಏನಾಯ್ತು ಏನಾಯ್ತು ಅಂತ ಕೇಳ್ತಿದ್ದಾರೆ.. ಇದೇನು ಟಾಮ್ ಅಂಡ್ ಜೆರಿ ಕತೆನಾ.. ಬಂದ್ ಬಂದವರಿಗೆಲ್ಲಾ ಹೇಳೋಕೆ.. ಅವಳ ಗಂಡ ಒಳ್ಳೆಯವನಾಗಿದ್ದಕ್ಕೆ ಸರಿ ಆಯ್ತು.. ಇಲ್ಲವಾಗಿದ್ರೆ ನೀನು ಅದೇ ಕೆಲಸ ಮಾಡ್ತೀಯಾ ಅಂತ ಬಿಟ್ಟು ಹೋಗ್ತಿದ್ದ.. ನಾವು ಪಾನಿಪುರಿ ಒತ್ತೋ ಕೆಲಸ ಮಾಡ್ಕೊಂಡು ಜೀವನ ಸಾಗಿಸ್ತಾ ಇರೋರು.. ನಾನ್ ಬರಲ್ಲ ಅಂದಿದ್ದಕ್ಕೆ ನಮ್ ಅತ್ತಿಗೆನಾ ಕರ್ಕೊಂಡ್ ಬಂದು ಇಂತ ಕೆಲಸಕ್ಕೆ ಕರೆದಿದ್ದಾರೆ.. ಅವರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಮೈಸೂರಿನ ಮಾದ್ಯಮವೊಂದರ ಜೊತೆ ನಡೆದ ಕತೆಯನ್ನು ಬಿಚ್ಚಿಟ್ಟಿದ್ದಾರೆ..