ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಹೆಣ್ಣು ಮಗಳು ನಿಜಕ್ಕೂ ಯಾರು ಗೊತ್ತಾ.. ಈಕೆ ಓದಿರೋದು ಏನು ಗೊತ್ತಾ.. ಶಾಕ್ ಆಗ್ತೀರಾ..‌

0 views

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಗಳೊಬ್ಬಳ ವೀಡಿಯೋವೊಂದು ವೈರಲ್ ಆಗಿತ್ತು.. ಇದಕ್ಕೆ ಕಾರಣ ಆಕೆ ಆಡಿದ ಒಂದೊಂದು ಮಾತು ಸಹ ಪ್ರತಿಯೊಬ್ಬ ಸಾಮಾನ್ಯ ಜನರೂ ಅನುಭವಿಸುತ್ತಿರುವ ಕಷ್ಟಗಳ ಸರಮಾಲೆಯನ್ನು ಚಪ್ಪಲಿಗೆ ಸುತ್ತಿ ರಾಜಕೀಯ ಮುಖಂಡರಿಗೆ ಹೊಡೆದಂತಿತ್ತು.. ನೇರ ನೇರವಾಗಿ ಪ್ರಶ್ನೆಗಳ ಸುರಿಮಾಲೆ ಹಾಕಿದ್ದಳು.. ಬಡವರು ನಿಮ್ಮ ಕಣ್ಣಿಗೆ ಕಾಣೋಲ್ವಾ.‌. ವಯಸ್ಸಾದವರಿಗೆ ಮೊದಲನೆ ಅಲೆ.. ಹುಡುಗರಿಗೆ ಎರಡನೇ ಅಲೆ.. ಮಕ್ಕಳಿಗೆ ಮೂರನೇ ಅಲೆ.. ಅದೇನು ಹೇಳ್ಬಿಟ್ಟ ಬರ್ತಿದೆ.. ಮುಂದೆ ಹೊಟ್ಟೆಲಿರೋ ಕೂಸಿಗೆ ನಾಲ್ಕನೇ ಅಲೆ ಎಂದಿದ್ದರು.. ಜೊತೆಗೆ ಇಮ್ಯುನಿಟಿ ಪವರ್ ಬಗ್ಗೆ ಮಾತನಾಡಿದ್ದ ಆ ಹೆಣ್ಣು ಮಗಳು ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಅವರಿಗೆ ಬಹಳ ಇಮ್ಯುನಿಟಿ ಪವರ್ ಇದೆ.. ಎಪ್ಪತ್ತೆಂಟು ವಯಸ್ಸಿನವರಿಗೆ ಇಮ್ಯುನಿಟಿ ಪವರ್ ಇದೆ.. ಆದರೆ ಇಪ್ಪತ್ತೆಂಟು ವರ್ಷದ ಸಾಮನಯ ಜನರಿಗೆ ಇಮ್ಯುನಿಟಿ ಪವರ್ ಇಲ್ಲ ಅಲ್ವಾ.. ಸರ್ ಇಮ್ಯುನಿಟಿ ಪವರ್ ಅಂದ್ರೆ ಖಜಾನೆಲಿ ಇರೋ ಕಾಸು ಸರ್.. ದೇಹದಲ್ಲಿ ಇರೋ ಶಕ್ತಿ ಅಲ್ಲ ಎಂದು ಸರಿಯಾಗಿ ಜಾಡಿಸಿದ್ದರು.. ಅಷ್ಟೇ ಅಲ್ಲದೇ ನಮ್ಮ ರವಿಚಂದ್ರನ್ ಅವರಿ ಸಿಪಾಯಿ ಸಿನಿಮಾದ ಹೇ ರುಕ್ಕಮ್ಮಾ ಹಾಡಿನಲ್ಲಿ ಹೇಳಿರುವ ಸಾಲಿನಂತೆ ನೀರ್ ಕೇಳಿದ್ರೆ ಪಾನಕ ಕೊಡೋರು ಅಂತಾರಲ್ಲ.. ಇವಾಗಿನ್ ಕಾಲದಲ್ಲಿ ಪಾನಕ ಅಲ್ಲ ಸರ್ ಬಚ್ಚಲು ನೀರು ಕೊಡೊಲ್ಲಾ..

ಸರ್ಕಾರಕ್ಕೆ ನಮ್ಮಂತ ಬಡವರು ಕಾಣೋದೆ ಇಲ್ವಾ.‌ ಪಕ್ಕದ ಕೇರಳದಲ್ಲಿ ಉಪ್ಪು ಹುಣಸೇಹಣ್ಣಿಂದ ಸಹ ಪ್ರತಿಯೊಂದನ್ನೂ ಕೊಡ್ತಾ ಇದ್ದಾರೆ.. ತಮಿಳುನಾಡಲ್ಲಿ ಬೆಳಿಗ್ಗೆ ಮುಖ್ಯಮಂತ್ರಿ ಆಗಿ ಸಂಜೆ ಅಷ್ಟರಲ್ಲಿ ಎಲ್ಲರಿಗೂ ಸಹಾಯ ಮಾಡಿದ್ರು.. ಆದರೆ ನಮ್ಮಲ್ಲಿ ಯಾಕ್ ಸರ್ ಮಾಡಲ್ಲ.. ಎರಡು ಕೆಜಿ ಅಕ್ಕಿ ಕೊಟ್ರೆ ಸಾಕಾ.. ಮಕ್ಕಳಿಗೆ ಆಗೋಗತ್ತೆ ಅದು.. ಇನ್ನ ದೊಡ್ಡವರು ಏನ್ ತಿಂಬೇಕು.. ಅಕ್ಕಿ ಕಾಳುಗಳನ್ನ ಲೆಕ್ಕ ಹಾಕಿಕೊಂಡು ತಿನ್ಮೇಕಿ ಅಷ್ಟೇ ಎಂದಿದ್ದರು.. ಈ ಹೆಣ್ಣು ಮಗಳ ನೇರವಾದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ಎಲ್ಲೆಲ್ಲೂ ಈಕೆಯ ವೀಡಿಯೋನೇ ಹರಿದಾಡುತಿತ್ತು.. ಅಷ್ಟಕ್ಕೂ ಈಕೆ ಯಾರು ಈಕೆ ಓದಿರೋದಾದರು ಏನು ಎಂಬ ಸಣ್ಣ ಕುತೂಹಲ ಎಲ್ಲರಿಗೂ ಇದ್ದೇ ಇತ್ತು.. ಅದಕ್ಕೆ ಉತ್ತರ ಇಲ್ಲಿದೆ ನೋಡಿ.. ಈಕೆಯ ಹೆಸರು ಶಶಿರೇಖಾ.. ಮೈಸೂರಿನ ಜನತಾ ನಗರದ ನಿವಾಸಿ..

ಶಶಿರೇಖಾ ಇಷ್ಟೊಂದು ಪ್ರಬುದ್ಧರಾಗಿ ಮಾತನಾಡಿದ್ದಾರೆ ಬಹುಶಃ ಚೆನ್ನಾಗಿ ಓದಿಕೊಂಡಿರಬೇಕು ಎಂದುಕೊಂಡಿದ್ದರು.. ಆದರೆ ತಿಳುವಳಿಕೆ ಜ್ಞಾನ ಎಲ್ಲವೂ ಕೇವಲ ವಿಧ್ಯಾಭ್ಯಾಸದಿಂದ ಮಾತ್ರ ಸಿಗದು ಎಂಬುದಕ್ಕೆ ಶಶಿರೇಖಾರೇ ಉದಾಹರಣೆ.. ಕಾರಣ ಈಕೆ ಓದಿದ್ದು ಕೇವಲ ಎಂಟನೇ ತರಗತಿ.. ಆದರೆ ಪ್ರಚಲಿತ ರಾಜಕೀಯದ ವಿಚಾರಗಳನ್ನು ಜನರ ಕಷ್ಟಗಳನ್ನು ತಿಳಿದುಕೊಳ್ಳಲು ಓದಿಗಿಂತ ಜೀವನದ ಅನುಭವವೇ ಸಾಕೆನ್ನಿವವರು.. ಹೌದು ಶಶಿರೇಖಾ ತನ್ನ ಬಗ್ಗೆ ಮಾದ್ಯಮವೊಂದರ ಜೊತೆ ಮಾತನಾಡಿದ್ದು ನಾನು ಬಹಳ ಬಡ ಕುಟುಂಬದಿಂದ ಬಂದವಳು ಸರ್ ಹಾಗೂ ನನ್ನ ತಂದೆ ಮನೆಯಿಂದ ಹೋದರೆ ಆರ್ ತಿಂಗಳು ಮೂರ್ ತಿಂಗಳು ಬರ್ತಿರ್ಲಿಲ್ಲಾ.. ಆಗ ನಾನು ಅಳುತ್ತಾ ಒಂದು ಕಡೆ ಕೂತಿದ್ದೆ ಆಗ ಒಬ್ಬರು ಶಿಕ್ಷಕಿ ಕರೆದುಕೊಂಡು ಹೋಗಿ ಒಂದು ಶಾಲೆಗೆ ಸೇರಿಸಿದ್ರು.. ಆದ್ರೆ ಬರುಬರುತ್ತಾ ಫೀಸ್ ಕಟ್ಟಲಾಗದೇ ಸರ್ಕಾರಿ ಶಾಲೆಗೆ ಸೇರಿಕೊಳ್ಳಲು ನಮ್ಮ ಅಮ್ಮ ತಯಾರಾದರು.. ಆದರೆ ನನ್ನ ಮಾರ್ಕ್ಸ್ ಕಾರ್ಡ್ ನಲ್ಲಿ ನಾನ್ ತೆಗೆದುಕೊಂಡಿದ್ದ ಮಾರ್ಕ್ಸ್ ಗಳನ್ನ ನೋಡಿ ನಾಗರಾಜ್ ಮಾಸ್ಟರ್ ಅಂತ ಒಬ್ಬರು ನನಗೆ ಫೀಸ್ ಕಟ್ಟಿ ಓದಿಸಿದ್ರು ಸರ್.. ಆದರೆ ಎಂಟನೇ ತರಗತಿ ವರೆಗೆ ಮಾತ್ರನೇ ಓದೋಕಾಗಿದ್ದು ಎಂದಿದ್ದಾರೆ..

ಅಷ್ಟೇ ಅಲ್ಲದೇ ಮುಖ್ಯ ಮಂತ್ರಿಗಳಿಗೆ ಕ್ಷಮೆ ಕೇಳಿದ್ದಾರೆ.. ಹೌದು ಮುಖ್ಯಮಂತ್ರಿಗಳೇ ನನ್ನ ಮಾತಿಂದ ನಿಮಗೆ ಬೇಜಾರ್ ಆಗಿದ್ರೆ ಕ್ಷಮಿಸಿ.. ಆದರೆ ನಾನು ನನ್ನ ಸ್ವಾರ್ಥಕ್ಕಾಗಿ ಮಾತನಾಡಿಲ್ಲ.. ಇರೋ ಸತ್ಯವನ್ನ ಹೇಳಿದೆ.. ನಾನು ಮಾತನಾಡಿದ್ರೆ ನಮ್ಮಂತ ಬಡವರಿಗೆ ಒಂದಿಷ್ಟು ಸಹಾಯ ಆಗಬಹುದು ಅಂತ ಅಷ್ಟೇ.. ನನ್ನ ಮಾತಿನ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ.. ಕೆಲ ಎಂದಿದ್ದಾರೆ.. ಇನ್ನು ತಮ್ಮ ಕುಟುಂಬದ ಬಗ್ಗೆ ಮಾತನಾಡಿ ನನಗೆ ಎರಡು ಮಕ್ಕಳು ಸರ್.. ಮೊದಲನೇ ಮಗ ದೀಪಕ್ ಅಂತ.‌. ನಾಲ್ಕು ವರ್ಷ.. ಇವಳು ನನ್ನ ಎರಡನೇ ಮಗಳು ಧೃತಿ ಅಂತ ಎರಡು ವರ್ಷ.. ನನ್ನ್ ಮಗನ್ನ ಮಿಲಿಟರಿಗೆ ಸೇರಿಸಬೇಕು ಅಂದುಕೊಂಡಿದ್ದೇನೆ ಸರ್.. ಯಾರೇ ಮುಖ್ಯಮಂತ್ರಿ ಮಗ ಆಗ್ಲಿ ಎಲ್ಲರೂ ಸಹ ಸ್ವಲ್ಪ ವರ್ಷಗಳ ಕಾಲ ಗಡಿ ಕಾದು ನಂತರ ರಾಜಕೀಯದಲ್ಲಿ ಸೇವೆ ಮಾಡ್ಬೇಕು ಸರ್..‌ ಪ್ರತಿಯೊಬ್ಬರು ದೇಶ ಸೇವೆ ಮಾಡ್ಬೇಕು ಅದಕ್ಕೆ ನಾನು ನನ್ನ ಮಗನ್ನ ಯೋಧನನ್ನಾಗಿ ಮಾಡ್ತೀನಿ ಸರ್..

ನನ್ನ ಮಗಳು ಧೃತಿ ಅಂತ ಸರ್.. ನಾನು ನನ್ನ ಮಗಳನ್ನ ಡಿಸಿ ಮಾಡ್ಬೇಕು ಅಂತ ಕನಸಿದೆ ಸರ್.. ನನ್ನ ಗಂಡನ ಆಸೆ ಕೂಡ ಅದೇ ಸರ್.. ರೋಹಿಣಿ ಸಿಂಧೂರಿ ಅವರನ್ನ ನೋಡಿ ನನ್ನ ಮಗಳು ಡಿ ಸಿ ಮಾಡ್ಬೇಕು ಅಂತ ನನ್ನ ಗಂಡ ಹೇಳ್ತಿರ್ತಾರೆ ಸರ್.. ನಾನು ನನ್ನ ಮಗಳನ್ನ ಡಿಸಿ ಮಾಡ್ತೀನಿ.. ಆದ್ಮೇಲೆ ನನ್ನ ಮಗಳಿಗೆ ಮತ್ತೆ ನಾಮಕರಣ ಮಾಡ್ತೀನಿ ಸರ್ ಧೃತಿ ಜೂನಿಯರ್ ರೋಹಿಣಿ ಸಿಂಧೂರಿ ಅಂತ ಮಾಡ್ತೀನಿ ಸರ್.. ನಾವ್ ಬೆಳಿಬೇಕು ಅಂದಾಗ ಕಾಲ್ ಎಳೆಯೋರು ಇದ್ದೇ ಇರ್ತಾರೆ.. ನನಗೆ ಕಷ್ಟ ಆದರೂ ಪರವಾಗಿಲ್ಲ.. ನನ್ನ ಮಗಳಿಗೆ ಮುಂದೆ ತೊಂದರೆ ಆದರೂ ಪರವಾಗಿಲ್ಲ.. ಅವಳನ್ನು ನಾನು ನ್ಯಾಯ ರೀತಿಯಾಗಿ ಸೇವೆ ಮಾಡುವಂತೆ ಮಾಡ್ತೀನಿ ಸರ್.. ಎಂದಿದ್ದಾರೆ.. ಒಟ್ಟಿನಲ್ಲಿ ಜನರು ಅನುಭವಿಸುತ್ತಿರುವ ಕಷ್ಟಗಳು ಮಾತಿನ ಮೂಲಕ ಜನರ ಬಾಯಿಂದ ಯಾವುದೇ ಅಂಜಿಕೆ ಇಲ್ಲದೇ ಹೊರ ಬಂದರೆ ಏನಾಗಬಹುದು ಎಂಬುದಕ್ಕೆ ಶಶಿರೇಖಾರೇ ಉದಾಹರಣೆ ಎನ್ನಬಹುದು..