ಮಗನನ್ನು ಮದುವೆಯಾಗಬೇಕಿದ್ದ ಶೆಹನಾಜ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಸಿದ್ಧಾರ್ಥ ತಾಯಿ. ಇದು ನಿಜಕ್ಕೂ ದೊಡ್ಡತನ ಎಂದರೆ..

0 views

ಕೆಲ ವಾರದ ಹಿಂದಷ್ಟೇ ಹಿಂದಿ ಕಿರುತೆರೆ ಹಾಗೂ ಬಿಗ್ ಬಾಸ್ ಶೋ ವಿನ್ನರ್ ಸಿದ್ದರ್ಥ್ ಶುಕ್ಲಾ ಇಹಲೋಕ ತ್ಯಜಿಸಿದ್ದು ನಿಜಕ್ಕೂ ಆ ಕುಟುಂಬದವರಿಗೆ ಅರಗಿಸಿಕೊಳ್ಳಲಾಗದ ವಿಚಾರವಾಗಿತ್ತು.. ಅದರಲ್ಲೂ ಶೆಹನಾಜ್ ಹಾಗೂ ಸಿದ್ದಾರ್ಥ್ ಶುಕ್ಲಾ ಒಬ್ಬರನೊಬ್ಬರು ಅತಿಯಾಗಿ ಪ್ರೀತಿಸುತ್ತಿದ್ದು ಇದೇ ವರ್ಷ ಡಿಸೆಂಬರ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರವನ್ನೂ ಸಹ ಮಾಡಿದ್ದರು.. ಎರಡೂ ಕುಟುಂಬದವರೂ ಇವರ ಪ್ರೀತಿಯನ್ನು ಒಪ್ಪಿ ಮದುವೆಗೆ ಸಮ್ಮತಿ ನೀಡಿದ್ದರು.. ಆದರೆ ವಿಧಿಯ ನಿರ್ಣಯ ಬೇರೆಯೇ ಇತ್ತು.. ಸಿದ್ದಾರ್ಥ್ ಶುಕ್ಲಾ ಇದ್ದಕಿದ್ದ ಹಾಗೆ ಸೆಪ್ಟೆಂಬರ್ ಎರಡರಂದು ರಾತ್ರಿ ಮಲಗಿದವರು ಮತ್ತೆ ಏಳಲೇ ಇಲ್ಲ.. ಹೌದು ಸಿದ್ದಾರ್ಥ್ ಶುಕ್ಲಾ ಅವರಿಗೆ ಕೇವಲ ಮೂವತ್ತೊಂಭತ್ತು ವರ್ಷ ವಯಸ್ಸಾಗಿದ್ದು ಅತಿ ಚಿಕ್ಕ ವಯಸ್ಸಿಗೆ ತಮ್ಮ ಬಾಳ ಪಯಣ ಮುಗಿಸಿ ಹೊರಟಿದ್ದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.. ಅದರಲ್ಲಿಯೂ ಇದ್ದಕಿದ್ದ ಹಾಗೆ ಸಿದ್ದಾರ್ಥ್ ಶುಕ್ಲಾ ಇಲ್ಲವಾಗಿದ್ದು ಅನೇಕ ಅನುಮಾನಗಳನ್ನೂ ಸಹ ಹುಟ್ಟು ಹಾಕಿತ್ತು.. ಕೆಲವರು ಸಿದ್ದಾರ್ಥ್ ಅವರ ಪ್ರೇಯಸಿ ಶೆಹನಾಜ್ ಬಗ್ಗೆಯೂ ಅನುಮಾನ ವ್ಯಕ್ತ ಪಡಿಸಿದ್ದರು.

ಆದರೆ ಸಿದ್ದಾರ್ಥ್ ಇಲ್ಲವಾದ ಬಳಿಕ ಅತಿ ಹೆಚ್ಚು ನೋವು ಅನುಭವಿಸಿದ ಜೀವಗಳಲ್ಲಿ ಶೆಹನಾಜ್ ಕೂಡ ಒಬ್ಬರಾಗಿದ್ದರು.. ಮುಂದೆ ಸುಂದರವಾದ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಜೊತೆಗಾರನನ್ನು ಹೀಗೆ ಇದ್ದಕಿದ್ದ ಹಾಗೆ ಕಳೆದುಕೊಂಡು ಶೆಹನಾಜ್ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು.. ನಿನ್ನೆಯಷ್ಟೇ ಇದ್ದ ಸಂಗಾತಿ ಇಂದು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಶೆಹನಾಜ್ ಸಂಪೂರ್ಣ ದಿಕ್ಕು ತೋಚದಂತಾಗಿದ್ದರು.. ಸಿದ್ದಾರ್ಥ್ ರ ಅಂತಿಮ ಸಂಸ್ಕಾರ ಮುಗಿಸಿಕೊಂಡು ಹೊರಟ ಶೆಹನಾಜ್ ನಂತರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.. ಮುಂಬೈನ ತಮ್ಮ ಮನೆಯ ನಾಲ್ಕು ಗೋಡೆಗಳ ಮಧ್ಯೆ ಸೇರಿಕೊಂಡ ಶೆಹನಾಜ್ ತಮ್ಮ ಮೊಬೈಲ್ ಅನ್ನು ಸಹ ಸ್ವಿಚ್ ಆಫ್ ಮಾಡಿಕೊಂಡು ಯಾರೊಂದಿಗೂ ಸಹ‌ಮಾತನಾಡದೇ ನೋವು ಅನುಭವಿಸುತ್ತಿದ್ದರು.

ಅತ್ತ ಸಿದ್ದಾರ್ಥ್ ರನ್ನು ಬಹಳಷ್ಟು ವರ್ಷಗಳ ಕಾಲ ಪ್ರೀತಿಸಿದ್ದ ಶೆಹನಾಜ್ ಪ್ರೀತಿ ಎಂತಹುದು ಎಂದು ಎರಡೂ ಕುಟುಂಬಗಳಿಗೂ ತಿಳಿದಿತ್ತು.. ಅದೇ ಕಾರಣಕ್ಕೆ ಅತ್ತ ಶೆಹನಾಜ್ ಅವರ ಸಹೋದರ ಮುಂಬೈ ಗೆ ಆಗಮಿಸಿ ತನ್ನ ಸಹೋದರಿಯ ನೋವಿನಲ್ಲಿ ಜೊತೆಯಾದರು.. ಇದೀಗ ಸಿದ್ದಾರ್ಥ್ ಶುಕ್ಲಾ ಅವರ ತಾಯಿ ಸಹ ಶೆಹನಾಜ್ ವಿಚಾರದಲ್ಲಿ ದೊಡ್ಡತನ ತೋರಿದ್ದು ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.. ಹೌದು ಬಿಗ್ ಬಾಸ್ ಸೀಸನ್ ಹದಿಮೂರರಲ್ಲಿ ಪರಿಚಯವಾದ ಶೆಹನಾಜ್ ಹಾಗೂ ಸಿದ್ದಾರ್ಥ್ ನಂತರ ಒಳ್ಳೆಯ ಸ್ನೇಹಿತರಾಗಿ ಆ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು.. ಸಾಕಷ್ಟು ಶೋಗಳಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿದ್ದರು.. ಆಲ್ಬಂ ಹಾಡಿನಲ್ಲಿಯೂ ಒಟ್ಟಾಗಿ ಅಭಿನಯಿಸಿದ್ದರು.. ಸಿದ್ದಾರ್ಥ್ ಕುಟುಂಬಕ್ಕೆ ಶೆಹನಾಜ್ ಬಹಳ ಹತ್ತಿರವಾಗಿದ್ದರು.. ಸಿದ್ದಾರ್ಥ್ ರ ತಾಯಿ ಶೆಹನಾಜ್ ರನ್ನು ಮಗಳಂತೆಯೇ ಕಾಣುತ್ತಿದ್ದು ಇದೀಗ ಮಗ ಹೋದ ಬಳಿಕ ಶೆಹನಾಜ್ ವಿಚಾರದಲ್ಲಿ ಬೇರೆಯದ್ದೇ ನಿರ್ಧಾರ ಕೈಗೊಂಡಿದ್ದಾರೆ..

ಹೌದು ನೋವಿಬಲ್ಲಿರುವ ಶೆಹನಾಜ್ ಗೆ ತಾವು ಸಹ ನೋವು ಅನುಭವಿಸುತ್ತಿದ್ದರೂ ಸಹ ಸಿದ್ದಾರ್ಥ್ ಅವರ ತಾಯಿ ಸಮಾಧಾನ ಮಾಡಿ ಮುಂದಿನ ಜೀವನದ ಬಗ್ಗೆ ಆಲೋಚನೆ ಮಾಡುವಂತೆ ತಿಳಿಸಿದ್ದಾರೆ.. ಹೌದು ಸಿದ್ದಾರ್ಥ್ ಇಲ್ಲವಾದ ನಂತರ ಊಟ ತಿಂಡಿ ಬಿಟ್ಟಿರುವ ಶೆಹನಾಜ್ ರನ್ನು ಖುದ್ದು ಸಿದ್ದಾರ್ಥ್ ಅವರ ತಾಯಿ ರಿತಾ ಅವರೇ ನೋಡಿಕೊಳ್ಳುತ್ತಿದ್ದಾರೆ.. ಹೌದು ಇನ್ನು ಮಗನಂತೂ ಇಲ್ಲವಾದ ಆದರೆ ಶೆಹನಾಜ್ ಜೀವನ ಸಹ ಬೇರೆ ದಾರಿಯಲ್ಲಿ ಹೋಗಬಾರದು ಅವಳಾದರೂ ಚೆನ್ನಾಗಿರಬೇಕು ಎಂದು ಆಲೋಚಿಸಿ ತಾವೇ ಶೆಹನಾಜ್ ರನ್ನು ನೋಡಿಕೊಳ್ಳುತ್ತಿದ್ದು ಮುಂದಿನ ಜೀವನ ಹಾಗೂ ಮದುವೆ ಬಗ್ಗೆ ಆಲೋಚನೆ ಮಾಡುವಂತೆ ತಿಳಿಸಿದ್ದಾರಂತೆ..

ಹೌದು ಮಗ ಇಲ್ಲದ ದುಃಖದ ನಡುವೆಯೂ ದೊಡ್ಡತನ ತೋರಿರುವ ರಿತಾ ಅವರು ತಮ್ಮ ಮಗ ಪ್ರೀತಿಸುತ್ತಿದ್ದ ಹುಡುಗಿಯಾದರೂ ಜೀವನದಲ್ಲಿ ಚೆನ್ನಾಗಿರಲಿ ಎಂದು ಆಲೋಚಿಸಿ ಶೆಹನಾಜ್ ಗೆ ತಾವೇ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದು ಈ ಬಗ್ಗೆ ಶೆಹನಾಜ್ ರ ತಂದೆ ತಾಯಿಗ ಬಳಿ ಮಾತನಾಡಿದ್ದಾರಂತೆ.. ಅದಕ್ಕೇ ಹೇಳೋದು ತಾಯಿಯ ಹೃದಯ ದೊಡ್ಡದೆಂದು.. ಮಗ ಇಲ್ಲವಾದ ನೋವು ತನಗೆ ಮಾತ್ರವೇ ಇರಲಿ.. ಬದುಕಿ ಬಾಳಬೇಕಾದ ಆ ಹುಡುಗಿಯಾದರೂ ಚೆನ್ನಾಗಿರಲಿ.. ಮಗ ಅಂತೂ ಹೋದ.. ಶೆಹನಾಜ್ ಜೀವನ ಚೆನ್ನಾಗಿರಲಿ.. ಮಗನ ನೆನಪಿನಲ್ಲಿಯೇ ಅವಳು ಕೊರಗುವುದು ಬೇಡ ಎಂದು ತೀರ್ಮಾನಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.. ಒಟ್ಟಿನಲ್ಲಿ ಶಾಶ್ವತವಲ್ಲದ ಈ ಜೀವನದಲ್ಲಿ ಅತಿಯಾಗಿ ಪ್ರೀತಿಸುವ ಜೀವಗಳು ಬೇಗನೇ ದೂರಾಗಿ ಹೋಗುವುದು ನಿಜಕ್ಕೂ ವಿಪರ್ಯಾಸವೇ ಸರಿ..