ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕನ್ನಡ ಕಿರುತೆರೆಯ ಮತ್ತೊಂದು ಖ್ಯಾತ ಜೋಡಿ..

0 views

ಈ ವರ್ಷ ಕೊರೊನಾ ಕಾರಣದಿಂದಾಗಿ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳು ನಿಂತವು.. ಸಿನಿಮಾಗಳು ಬಿಡುಗಡೆಯಾಗಲಿಲ್ಲ.. ಆದರೆ ಸಾಲು ಸಾಲು ಕಲಾವಿದರ ಮದುವೆ ಸಮಾರಂಭ ಮಾತ್ರ ಒಂದರ ಹಿಂದೆ ಒಂದರಂತೆ ನೆರವೇರುತ್ತಲಿದೆ.. ಹೌದು ಮೊನ್ನೆ ಮೊನ್ನೆಯಷ್ಟೇ ಅವನು ಮತ್ತು ಶ್ರಾವಣಿ ನಟಿ ಚೈತ್ರಾ ರೆಡ್ಡಿ ತಮಿಳು ನಿರ್ಮಾಪಕ ರಾಕೇಶ್ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇದೀಗ ಕನ್ನಡ ಕಿರುತೆರೆಯ ಮತ್ತೊಬ್ಬ ನಟ ಹಾಗೂ ನಟಿ ನಿಜ ಜೀವನದಲ್ಲಿ ಜೊತೆಯಾಗುತ್ತಿದ್ದಾರೆ..

ಹೌದು ಈ ವರ್ಷದ ವಿಚಾರಕ್ಕೆ ಬಂದರೆ ಸಾಲು ಸಾಲು ಸೆಲಿಬ್ರೆಟಿಗಳ ಮದುವೆ ಕಾರ್ಯಕ್ರಮ ನೆರವೇರಿತ್ತು.. ರಾಜಕೀಯ ನಾಯಕರ ಮಕ್ಕಳ ಮದುವೆ ಜೊತೆಗೆ ಲಾಕ್ ಡೌನ್ ಸಮಯದಲ್ಲಿ ಕಲಾವಿದರ ಕಲ್ಯಾಣವೂ ರಂಗೇರಿತ್ತು.. ನಟಿ ಮಯೂರಿ ಅವರ ಮದುವೆ ಸರಳವಾಗಿ ದೇವಸ್ಥಾನದಲ್ಲಿ ನೆರವೇರಿದ್ದರೆ.. ಇತ್ತ ಕಿರುತೆರೆ ನಟ ಅಜಯ್ ರಾವ್ ಅವರ ವಿವಾಹ ಕೆಲ ತಿಂಗಳ ಹಿಂದೆ ಸರಳವಾಗಿ ನೆರವೇರಿತು.. ಮೊನ್ನೆ ಮೊನ್ನೆಯಷ್ಟೇ ಚೈತ್ರಾ ರೆಡ್ಡಿ ವಿವಾಹ ಜರುಗಿದ್ದು.. ಇದೀಗ ಜೀವ ಹೂವಾಗಿದೆ ಧಾರಾವಾಹಿ ನಟಿ ಹಾಗೂ ಕಾವ್ಯಾಂಜಲಿ ಧಾರಾವಾಹಿ ನಟನ ಮದುವೆ ನಿಶ್ವಯವಾಗಿದೆ..

ಹೌದು ಜೀವ ಹೂವಾಗಿದೆ ಧಾರಾವಾಹಿಯ ನಟಿ ಶಿಲ್ಪಾ ರವಿ ಹಾಗೂ ಕಾವ್ಯಾಂಜಲಿ ಧಾರಾವಾಹಿಯ ನಟ ದರ್ಶಕ್ ಗೌಡ ಅವರ ಮದುವೆ ಇದೇ ನವೆಂಬರ್ 25 ರಂದು ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಲಿದೆ.. ಕೊರೊನಾ ಕಾರಣದಿಂದಾಗಿ ಖಾಸಗಿ ಕಾರ್ಯಕ್ರಮದ ಮೂಲಕ‌ ನೂತನ ಜೀವನಕ್ಕೆ ಕಾಲಿಡುತ್ತಿದ್ದಾರೆ ಈ ಸ್ಟಾರ್ ಕಪಲ್.. ಕಳೆದ ಮೇ ತಿಂಗಳಿನಲ್ಲಿಯೇ ಮದುವೆ ನಡೆಯಬೇಕಿತ್ತು.. ಆದರೆ ಕೊರೊನಾ ಕಾರಣದಿಂದಾಗಿ ಮದುವೆಯನ್ನು ಮುಂದೂಡಲಾಗಿತ್ತಾದರೂ.. ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಜನರನ್ನು ಆಹ್ವಾನ ಮಾಡಲಾಗದ ಕಾರಣ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..

ಇನ್ನು ಈ ಬಗ್ಗೆ ಮಾದ್ಯಮವೊಂದಕ್ಕೆ ಮಾತನಾಡಿರುವ ದರ್ಶಕ್ ಗೌಡ.. ಶಿಲ್ಪಾ ಅವರ ಬಗ್ಗೆ ಮಾತನಾಡಿದ್ದಾರೆ.. ಹೌದು ನಾನು ಮತ್ತು ಶಿಲ್ಪಾ ಅವರ್ಯ್ ಒಂದೇ ಚಾನಲ್ ನಲ್ಲಿ ಕೆಲಸ ಮಾಡಿದ್ದೇವೆ.. ನಾನು‌ಮೊದಲು ಒಂದು ಪ್ರಶಸ್ತಿ ಸಮಾರಂಭದಲ್ಲಿ ಅವರನ್ನು ಭೇಟಿ ಮಾಡಿದೆ.. ನಂತರ ನನ್ನ ಸಹೋದ್ಯೋಗಿಯ ತಂಗಿ ಅಂತ ವಿಚಾರ ತಿಳಿಯಿತು.. ಹೀಗೆ ನಮ್ಮಿಬ್ಬರ ನಡುವೆ ಸ್ನೇಹ ಬೆಳೆಯಿತು.. ಒಂದು ವರ್ಷ ಹೀಗೆ ಇದ್ವಿ.. ನಂತರ ನಾನೇ ಅವರ ಮುಂದೆ ಹೋಗಿ ನೇರವಾಗಿ ಮದುವೆಯಾಗುತ್ತೀಯಾ.. ಅಂತ ಕೇಳಿದೆ..

ನಾನು ಪದ್ಮಾವತಿ, ಕಣ್ಮಣಿ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದರಿಂದ ನನಗೆ ಆ ಟೈಮ್‌ನಲ್ಲಿ ಅವಳ ಜೊತೆ ಡೇಟ್ ಮಾಡಲು ಸಮಯ ಇರಲಿಲ್ಲ.. ನನ್ನನ್ನು ಮದುವೆಯಾಗಲು ಶಿಲ್ಪಾಗೆ ಯಾವುದೇ ಕಂಡೀಷನ್ ಆಗಲಿ.. ಸಮಸ್ಯೆಯಾಗಲಿ ಏನೂ ಇರಲಿಲ್ಲ.. ಆದರೆ ಅವಳು ಅವರ ಅಪ್ಪ ಅಮ್ಮನನ್ನು ಒಪ್ಪಿಸಬೇಕಿತ್ತು.. ನಾನು ಅವರ ಅಪ್ಪ ಅಮ್ಮನನ್ನು ಭೇಟಿ ಮಾಡಿ ಮದುವೆ ಬಗ್ಗೆ ಮಾತನಾಡಿದೆ.. ನನ್ನ ಅಪ್ಪ ಅಮ್ಮನನ್ನು ಕೂಡ ಒಪ್ಪಿದ್ದಾರೆ.. ಈಗ ಮದುವೆ ವರೆಗೂ ಬಂದಿದೆ.. ಹೊಸ ಲೈಫ್ ಬಗ್ಗೆ ಇಬ್ಬರೂ ಕಾತುರರಾಗಿದ್ದೇವೆ.. ಎಂದಿದ್ದಾರೆ..