ವಯಸ್ಕರ ಸಿನಿಮಾ ಮಾಡಿ ಗಂಡ ಸಿಕ್ಕಿಬೀಳುತ್ತಿದ್ದಂತೆ ಶಿಲ್ಪಾ ಶೆಟ್ಟಿ ಮಾಡಿರುವ ಕೆಲಸ ನೋಡಿ.. ಇಷ್ಟೇ ಜೀವನ..

0 views

ಹೇಳಿಕೊಳ್ಳಲು ದೊಡ್ಡ ದೊಡ್ಡ ಸ್ಟಾರ್ ಗಳು.. ಸೆಲಿಬ್ರೆಟಿಗಳು.. ಆದರೆ ಅವರ ಜೀವನಗಳಲ್ಲಿಯೂ ಹೇಳಿಕೊಳ್ಳಲಾಗದ ಸಾಕಷ್ಟು ನೋವಿರುತ್ತದೆ ಎಂಬುದಕ್ಕೆ ಬಹುಶಃ ಶಿಲ್ಪಾ ಶೆಟ್ಟಿ ಅವರೇ ಉದಾಹರಣೆಯಾಗಬಹುದು.. ಹೌದು ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರು ವಯಸ್ಕರಸಿ ನಿಮಾ ಮಾಡಿ ಹಣ ಗಳಿಸುತ್ತಿದ್ದ ವಿಚಾರದಲ್ಲಿ ಸಿಕ್ಕಿಬಿದ್ದು ಸಧ್ಯ ಪೊಲೀಸರ ವಶದಲ್ಲಿದ್ದಾರೆ.. ಇವರ ಈ ಜಾಲದಲ್ಲಿ ಅನೇಕ ನಟಿಯರ ಹೆಸರೂ ಸಹ ಕೇಳಿಬಂದಿತ್ತು.. ಇನ್ನು ಅದೆಲ್ಲದರ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ನಟಿ ಶಿಲ್ಪಾ ಶೆಟ್ಟಿ ಮೊದಲ ಬಾರಿಗೆ ಮಾತನಾಡಿದ್ದಾರೆ..

ಹೌದು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರದ್ದೂ ಬಾಲಿವುಡ್ ನ ಸ್ಟಾರ್ ಜೋಡಿಗಳಲ್ಲಿ ಒಂದಾಗಿತ್ತು.. ಸದಾ ಸಂತೋಷದಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದ ಜೋಡಿಗೆ ಅಭಿಮಾನಿಗಳು ಸದಾ ಹೀಗೆ ಇರಿ ಎಂದು ಹಾರೈಸಿದ್ದೂ ಉಂಟು.. ಆದರೆ ರಾಜ್ ಕುಂದ್ರಾ ಹಣ ಸಂಪಾದನೆಗಾಗಿ ಹಿಡಿದಿದ್ದ ದಾರಿ ಮಾತ್ರ ನಿಜಕ್ಕೂ ಯಾರೂ ಸಹ ಊಹಿಸಲು ಅಸಾಧ್ಯವಾಗಿತ್ತು‌. ಹೌದು ಹಣ ಸಂಪಾದನೆಗಾಗಿ ರಾಜ್ ಕುಂದ್ರಾ ವಯಸ್ಕರಸಿ ನಿಮಾ ಮಾಡುವ ಕೆಲಸ ಮಾಡುತ್ತಿದ್ದು ಮುಂಬೈನಲ್ಲಿಯೇ ಚಿತ್ರೀಕರಣ ಮಾಡಿ ಅದನ್ನು ಲಂಡನ್ ನಿಂದ ಅಪ್ಲೋಡ್ ಮಾಡಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಇದೆಲ್ಲದರಿಂದ ರಾಜ್ ಕುಂದ್ರಾ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ..

ಹೌದು ದಿನವೊಂದಕ್ಕೆ ಇದರಿಂದ ಏಳು ಲಕ್ಷ ಸಂಪಾದನೆ ಮಾಡುತ್ತಿದ್ದರು.. ಅಂದರೆ ತಿಂಗಳಿಗೆ ಎರಡು ಕೋಟಿ ಯಷ್ಟು ಹಣವನ್ನು ಇಂತಹ ಕೆಲಸದಿಂದಲೇ ರಾಜ್ ಕುಂದ್ರ ಸಂಪಾದನೆ ಮಾಡುತ್ತಿದ್ದು ಈ ಬಗ್ಗೆ ತನಿಖೆಯಲ್ಲಿ ಇನ್ನಷ್ಟು ವಿಚಾರ ತಿಳಿಯಲಿದೆ.. ಇನ್ನು ಅದಾಗಲೇ ಇಬ್ಬರು ನಟಿಯರ ಹೆಸರು ಸಹ ಈ ಕೆಲಸದಲ್ಲಿ ಕೇಳಿ ಬಂದಿದ್ದು ಅವರಿಬ್ಬರನ್ನು ಪೊಲೀಸರು ವಿಚಾರಣೆ ಮಾಡಲಾಗಿ ಅವರೂ ಸಹ ನಮ್ಮನ್ನು ಈ ಲೆಲಸಕ್ಕೆ ನೂಕಿದ್ದು ರಾಜ್ ಕುಂದ್ರಾ ಎಂದು ಹೇಳಿಕೆ ನೀಡಿದ್ದಾರಂತೆ.. ಇತ್ತ ಸಾಮಾಜೀಕ ಜಾಲತಾಣದಲ್ಲಿ ರಾಜ್‌ ಕುಂದ್ರ ಇಂತಹ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಕ್ಕೆ ಯರ್ರಾಬಿರ್ರಿ ಟ್ರೋಲ್‌ ಆಗುತ್ತಿರುವುದಷ್ಟೇ ಅಲ್ಲದೇ ಕೆಲ ಟ್ರೋಲ್‌ ಗಳಲ್ಲಿ ಶಿಲ್ಪಾ ಶೆಟ್ಟಿ ಹೆಸರನ್ನು ಸಹ ಸೇರಿಸಿಕೊಂಡು ಪೋಸ್ಟ್‌ ಮಾಡಲಾಗುತಿತ್ತು.

ಇನ್ನು ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಸಹ ನಟಿ ಶಿಲ್ಲಾ ಶೆಟ್ಟಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.. ಈ ಘಟನೆಗಳಿಂದ ಬಹಳಷ್ಟು ಕುಗ್ಗಿ ಹೋಗಿದ್ದ ನಟಿಗೆ ಸ್ನೇಹಿತರು ಧೈರ್ಯ ಹೇಳಿದ್ದೂ ಉಂಟು.. ಆದರೀಗ ಘಟನೆ ನಡೆದ ಕೆಲ ದಿನಗಳ ಬಳಿಕ ಮನಬಿಚ್ಚಿ ಮಾತನಾಡಿದ್ದು ಭಾವುಕರಾದಂತೆ ಕಾಣುತ್ತಿದೆ..ಹೌದು “ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ ಎಂದು ತಿಳಿದುಕೊಂಡು ದೀರ್ಘ ಉಸಿರು ತೆಗೆದುಕೊಳ್ಳುತ್ತೇನೆ.. ಈ ಹಿಂದೆ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ.. ಮುಂದೆಯೂ ಅನೇಕ ಸವಾಲುಗಳನ್ನು ಎದುರಿಸಲಿದ್ದೇನೆ.. ಇಂದಿನ ನನ್ನ ಬದುಕನ್ನು ಯಾವುದೂ ಸಹ ಕೆಡಿಸಬೇಕಿಲ್ಲ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಈ ಹಿಂದೆಯೂ ಸಹ ಶಿಲ್ಪಾ ಶೆಟ್ಟಿ ಅವರು ಬಹಳ ಮಾರ್ಮಿಕವಾಗಿ ಕೆಲ ದಿನಗಳಿಂದ ಪೋಸ್ಟ್ ಮಾಡುತ್ತಿದ್ದು ಕೆಲ ದಿನಗಳ ಹಿಂದೆ ಗಂಡನ ಬಗ್ಗೆ ಶಿಲ್ಪಾ ಶೆಟ್ಟಿಗೆ ಸತ್ಯ ತಿಳಿದಿದ್ದು ಅದೇ ಕಾರಣಕ್ಕೆ ಬಹಳ ಮಾರ್ಮಿಕವಾಗಿ ಮಾತುಗಳನ್ನು ಆಡುತ್ತಿದ್ದರೆನ್ನಬಹುದು.. ಈಗಲೂ ಸಹ ಯಾವುದೋ ವಿಚಾರಗಳು ನನ್ನ ಜೀವನ ಹಾಳು ಮಾಡುವುದು ಬೇಡವೆನ್ನುವ ಮೂಲಕ ಮುಂದೆ ಸ್ವತಂತ್ರರಾಗಿ ಬದುಕುವ ನಿರ್ಧಾರ ಮಾಡಿದಂತೆ ಕಾಣುತ್ತಿದೆ.. ಒಟ್ಟಿನಲ್ಲಿ ದೊಡ್ಡ ದೊಡ್ಡವರನ್ನು ನೋಡಿ ಅವರಿಗೇನು ಕಡಿಮೆ ಎನ್ನುತ್ತೇವೆ.. ಆದರೆ ನಮ್ಮ ಮನೆಗಳಲ್ಲಿ ದೋಸೆ ತೂತಾಗಿದ್ದರೆ ಕೆಲವರ ಮನೆಯಲ್ಲಿ ದೋಸೆಯ ಕಲ್ಲೇ ತೂತಾಗಿ ಹೋಗಿರುತ್ತದೆ.. ಇರುವುದರಲ್ಲಿ ತೃಪ್ತಿಯಿಂದ ಜೀವನ ಮಾಡಬೇಕಷ್ಟೇ..