ಕೇವಲ ಐದೇ ದಿನದ ಬಾಣಂತಿ.. ಗಂಡು ಮಗುವಿಗಾಗಿ ಆಸೆ ಪಟ್ಟಿದ್ದ ಮಂಡ್ಯದ ಈ ತಾಯಿ ಹೆರಿಗೆಯಾದ ಐದೇ ದಿನಕ್ಕೆ ಏನಾದರು ಗೊತ್ತಾ.. ಅಷ್ಟಕ್ಕೂ ಈಕೆ ಯಾರು ಗೊತ್ತಾ.. ಮನಕಲಕುತ್ತದೆ..

0 views

ಕೆಲವೊಮ್ಮೆ ಕೆಲವೊಂದು ಘಟನೆಗಳು ಮನಸ್ಸನ್ನು ಕುಗ್ಗಿಸಿಬಿಡುತ್ತವೆ.. ಜೀವನದಲ್ಲಿ ನಾವು ಇಟ್ಟುಕೊಳ್ಳುವ ಕೆಲ ಆಸೆಗಳೇ ನಮಗೆ ಮುಳುವಾಗಿ ಹೋಗ್ತಾವಾ ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ.. ಈ ರೀತಿ ಬಹಳ ಆಸೆ ಪಟ್ಟಾಗ ನಮಗೆ ಸಿಕ್ಕಿದ್ದನ್ನು ಅನುಭವಿಸುವ ಅವಕಾಶವೇ ನಮಗೆ ಇಲ್ಲಾವಾಗಿ ಹೋಗುತ್ತದೆ.. ಈ ರೀತಿ ಅನೇಕ ಜನರ ಜೀವನದಲ್ಲಿ ನಡೆದಿರೋದು ಮಾತ್ರ ಸುಳ್ಳಲ್ಲ.. ಇನ್ನು ಮಂಡ್ಯದಲ್ಲೊಂದು ಮನಕಲಕುವ ಘಟನೆ ನಡೆದಿದ್ದು ಗಂಡು ಮಗುವಿಗಾಗಿ ಆಸೆ ಪಟ್ಟ ಐದೇ ದಿನದ ಬಾಣಂತಿ ಏನಾದರು ಎಂದು ತಿಳಿದರೆ ಕಣ್ಣಂಚಲ್ಲಿ ನೀರು ಬರುತ್ತದೆ..

ಹೌದು ಆಕೆಯ ಹೆಸರು ಶಿಲ್ಪಾಶ್ರೀ.. ಅವರ ಗಂಡನ ಹೆಸರು ಜಿ ಟಿ ವೀರೇಶ್.. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದವರು.. ಆದರೆ ಬೆಂಗಳೂರಿನಲ್ಲಿಯೇ ನೆಲೆಸಿದ್ದರು.. ಗಂಡ ಜಿ ಟಿ ವೀರೇಶ್ ಬೆಂಗಳೂರಿನ ರಕ್ತನಿಧಿ ಕೇಂದ್ರದ ನೌಕರನಾಗಿದ್ದರು.. ಇನ್ನು ಇತ್ತ ವೀರೇಶ್ ಹಾಗೂ ಶಿಲ್ಪಾಶ್ರೀ ಅವರದ್ದು ಸುಂದರ ಸಂಸಾರ ಪುಟ್ಟ ಸಂಸಾರವಾಗಿತ್ತು.. ಸಂತೋಷವಾಗಿ ಜೀವನ ನಡೆಸುತ್ತಿದ್ದರು.. ಇನ್ನು ಈ ದಂಪತಿಗೆ ಎರಡು ಹೆಣ್ಣು ಮಕ್ಕಳಾದರು.. ಆದರೂ ಸಹ ಒಂದು ಗಂಡು ಮಗುವಿರಲಿ ಎಂಬ ಬಯಕೆಯಿಂದ ಮತ್ತೊಮ್ಮೆ ಗರ್ಭಿಣಿಯಾದರು.. ಎಲ್ಲವೂ ಸರಿಯಿತ್ತು.. ಇನ್ನೇನು ತಿಂಗಳು ಅಥವಾ ಎರಡು ತಿಂಗಳಲ್ಲಿ‌ ಮನೆಗೆ ಮತ್ತೊಂದು ಮಗುವಿನ ಆಗಮನವಾಗಬೇಕಿತ್ತು.. ಶಿಲ್ಪಾಶ್ರೀ ಮಂಡ್ಯದಲ್ಲಿಯೇ ಇದ್ದರು.. ಆದರೆ ಕೊರೊನಾ ಎಂಬ ಕಾಣದ ಕಾಯಿಲೆ ತುಂಬು ಗರ್ಭಿಣಿ ಶಿಲ್ಪಾಶ್ರೀ ಅವರಲ್ಲಿ ಕಾಣಿಸಿಕೊಂಡು ಬಿಟ್ಟಿತು..

ಹೌದು ತುಂಬು ಗರ್ಭಿಣಿ ಶಿಲ್ಪಾಶ್ರೀ ಅವರಿಗೆ ಕಳೆದ ಹತ್ತು ದಿನಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.. ತಕ್ಷಣ ಅವರನ್ನು ಮಂಡ್ಯದ ಕೊರೊನಾ ಆಸ್ಪತ್ರೆಗೆ ದಾಖಲು‌ ಮಾಡಲಾಯಿತು.. ಇನ್ನೇನು ಮಗು ಬರುತ್ತೆ ಆದರೆ ನನ್ನ ಸ್ಥಿತಿ ಹೀಗಾಗಿ ಹೋಯ್ತು ಅಂತ ಶಿಲ್ಪಾ ಶ್ರೀ ಪ್ರತಿದಿನ ಕೊರಗುತ್ತಲೇ ಇದ್ದರು.. ಆದರೆ ನೋಡು ನೋಡುತ್ತಿದ್ದಂತೆ ಶಿಲ್ಪಾಶ್ರೀ ಅವರ ಸ್ಥಿತಿ ಚಿಂತಾಜನಕವಾಗಿ ಹೋಯ್ತು.. ಹೌದು ಹೊಟ್ಟೆಯಲ್ಲಿರುವ ಮಗುವಾದರೂ ಉಳಿಯಲಿ ಎಂದು ಅವಧಿ ತುಂಬದಿದ್ದರೂ ವೈದ್ಯರು ಶಿಲ್ಪಾಶ್ರೀಗೆ ಹೆರಿಗೆ ಮಾಡಿಸಿ ಮಗುವನ್ನು ಆಚೆ ತೆಗೆದರು.. ಮಗು ಶಿಲ್ಪಾಶ್ರೀ ಅವರು ಆಸೆ ಪಟ್ಟಂತೆ ಗಂಡು ಮಗುವೇ ಆಗಿತ್ತು.. ಆದರೆ ಇತ್ತ ಕೊರೊನಾ ಸೋಂಕು ಉಲ್ಭಣವಾಗಿದ್ದ ಶಿಲ್ಪಾಶ್ರೀ ಅವರಿಗೆ ತೀವ್ರ ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದರು..

ಆದರೂ ಸಹ ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ.. ಹೆರಿಗೆಯಾದ ಐದೇ ದಿನಕ್ಕೆ ಇಹಲೋಕ ತ್ಯಜಿಸಿಬಿಟ್ಟರು.. ಅತ್ತ ವೈದ್ಯರು ಮಗುವನ್ನು ಉಳಿಸಿ ದೇವರಾದರು.. ಇತ್ತ ತಾಯಿಯನ್ನು ಉಳಿಸಲಾಗಲಿಲ್ಲ.. ಮಗು ತಾಯಿ ಇಲ್ಲದ ತಬ್ಬಲಿ ಆಯ್ತಲ್ಲಾ ಎಂದು ಕಣ್ಣೀರಿಟ್ಟರು.. ಇನ್ನು ಇತ್ತ ಶಿಲ್ಪಾಶ್ರೀ ಗಂಡು ಮಗುವಿಗಾಗಿ ಸಾಕಷ್ಟು ಕನಸು ಕಂಡಿದ್ದರು.. ಆದರೆ ಕೈಯಲ್ಲಿ ಮಗುವಿದ್ದರೂ ಸಹ ತಾವೇ ಇಲ್ಲದಾಗಿ ಹೋದರು.. ಮಗುವಿನ ಮುಖ ನೋಡುವುದಷ್ಟೇ ಅವರ ಭಾಗ್ಯದಲ್ಲಿ ಬರೆದಿತ್ತು ಎನಿಸುತ್ತದೆ.. ತಾನೇ ಹೆತ್ತ ಕಂದನಿಗೆ ಹಾಲುಣಿಸದೇ ಹೋಗಿ ಬಿಟ್ಟರು.. ಐದು ದಿನದ ಹಸುಗೂಸು ಸೇರಿದಂತೆ ಮೂವರು ಮಕ್ಕಳು ತಾಯಿಯಿಲ್ಲದ ತಬ್ಬಲಿಗಳಾಗಿ ಹೋದರು.. ಈ ಕೊರೊನಾ ಇನ್ನೆಷ್ಟು ಮಕ್ಕಳನ್ನು ತಬ್ಬಲಿಗಳನ್ನಾಗಿ ಮಾಡುವುದು..

ಇನ್ನೆಷ್ಟು ತಂದೆತಾಯಿಗಳು ಮಕ್ಕಳನ್ನು ಕಳೆದುಕೊಂಡು ಜೀವನ ಪೂರ್ತಿ ಕೊರಗುವಂತೆ ಮಾಡುವುದೋ ತಿಳಿಯದು.. ಶಿಲ್ಪಾಶ್ರೀ ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.. ಗರ್ಭಿಣಿಯರಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದ್ದು ಕೊರೊನಾದಿಂದಾಗಿ ತಾಯಿಯನ್ನು ಕಳೆದುಕೊಂಡು ಎಳೆ ಕಂದಮ್ಮಗಳು ತಬ್ಬಲಿಗಳಾಗುತ್ತಿರುವ ನೂರಾರು ಸುದ್ದಿಗಳನ್ನು ಕಳೆದ ಎರಡು ತುಂಗಳಿಂದ ಕೇಳ್ಪಟ್ಟೆವು.. ದಯಮಾಡಿ ಗರ್ಭಿಣಿಯರು ಅತಿ ಹೆಚ್ಚು ಎಚ್ಚರಿಕೆ ವಹಿಸಿ.. ಮುಂದೆ ನಿಮ್ಮ ಕಂದಮ್ಮಗಳ ಅನಾಥರನ್ನಾಗಿ ಮಾಡದಿರಿ.. ನಿಮ್ಮ ಎಳೆ ಮಕ್ಕಳಿಗೆ ನೀವುಗಳು ಬೇಕು.. ದಯವಿಟ್ಟು ಎಚ್ಚರಿಕೆಯಿಂದಿರಿ..