ಹೇಗಿದ್ದ ಶೈನ್ ಶೆಟ್ಟಿ ಸ್ಥಿತಿ ಹೇಗಾಯಿತು ನೋಡಿ.. ಇಷ್ಟೇ ಜೀವನ.. ಯಾರನ್ನೂ ಹಂಗಿಸಬೇಡಿ..

0 views

ಬಿಗ್ ಬಾಸ್ ಸೀಸನ್ ಏಳರ ವಿನ್ನರ್ ಶೈನ್ ಶೆಟ್ಟಿ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ.. ಕಿರುತೆರೆಯಲ್ಲಿ ಮಿಂಚಿ ಮರೆಯಾಗಿ ಮತ್ತೆ ಬಿಗ್ ಬಾಸ್ ಮೂಲಕ ಶೈನ್ ಆದ ನಟನ ಜೀವನ ಈಗ ಹೇಗಾಗಿದೆ ಗೊತ್ತಾ.. ನಿಜಕ್ಕೂ ಯಾವುದೂ ಶಾಶ್ವತವಲ್ಲ ಅಲ್ಲ ಎಂಬುದಕ್ಕೆ ಶೈನ್ ಶೆಟ್ಟಿ ಅವರ ಸ್ಥಿತಿಯೇ ನೈಜ್ಯ ಉದಾಹರಣೆ.. ಹೌದು ಕಳೆದ ಕೆಲ ವರ್ಷಗಳ ಹಿಂದೆ ಮೀರಾ ಮಾಧವ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟ ಶೈನ್ ಶೆಟ್ಟಿ‌ ನಂತರದ ದಿನಗಳಲ್ಲಿ ಕಿರುತೆರೆಯಲ್ಲಿ ಪ್ರಖ್ಯಾತಿ ಪಡೆದಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಂದನ್ ಬದಲಿ ಪಾತ್ರಕ್ಕೆ ಆಗಮಿಸಿ ಮನೆ ಮಾತಾದರು.. ಸತತ ಎರಡು ವರ್ಷಗಳ ಕಾಲ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಂದು ಆಗಿ ಕಾಣಿಸಿಕೊಂಡ ಶೈನ್ ಶೆಟ್ಟಿ ಇದ್ದಕಿದ್ದ ಹಾಗೆ ಸಿನಿಮಾ ಮಾಡುವ ಉದ್ದೇಶದಿಂದ ಧಾರಾವಾಹಿಯಿಂದ ಹೊರ ನಡೆದರು.. ಅಲ್ಲಿಯವರೆಗೂ ಎಲ್ಲವೂ ಸರಿಯಾಗಿಯೇ ಇತ್ತು.. ಕೈತುಂಬಾ ಹಣ.. ಐಶಾರಾಮಿ‌ ಕಾರು ಎಲ್ಲವೂ ಸಹ ಶೈನ್ ಶೆಟ್ಟಿ ಅವರ ಬಳಿ ಇತ್ತು..

ಆದರೆ ಧಾರಾವಾಹಿ ಬಿಟ್ಟ ನಂತರ ಸಿನಿಮಾಗಾಗಿ ಸಾಕಷ್ಟು ಅಲೆದಾಡಿದರೂ ಸಹ ಆ ಕನಸು ನನಸಾಗಲಿಲ್ಲ.. ಕೈಯಲ್ಲಿದ್ದ ಹಣ ಖಾಲಿಯಾಯಿತು.. ಬಹಳಷ್ಟು ಸಾಲಗಳನ್ನು ಮಾಡಿಕೊಂಡರು.. ಸಾಲದ ಬಡ್ಡಿ ಕಟ್ಟಲು ಕಾರ್ ಮಾರುವ ಸ್ಥಿತಿ ಬಂದಿತು.. ಹಣವಿದ್ದಾಗ ಜೊತೆಯಲ್ಲಿದ್ದ ಸ್ನೇಹಿತರೆಲ್ಲಾ ಜೇಬು ಖಾಲಿಯಾದಾಗ ಮರೆಯಾದರು.. ಇನ್ನು ಸಾಲಗಳನ್ನು ತೀರಿಸಲೇ ಬೇಕಾದ ಸ್ಥಿತಿ ಎದುರಾಯಿತು.. ಆ ಸಮಯದಲ್ಲಿ ಅಮ್ಮನ ಬಳಿ ಸ್ವಲ್ಪ ಹಣ ಪಡೆದು ಗಲ್ಲಿ ಕಿಚನ್ ಎಂಬ ಫಾಸ್ಟ್ ಫುಡ್ ಅನ್ನು ತೆರೆದ ಶೈನ್ ಗೆ ಅನ್ನಪೂರ್ಣೇಶ್ವರಿ ತಾಯಿ ಕೈ ಹಿಡಿದರೆನ್ನಬಹುದು.. ನಿಧಾನವಾಗಿ ಜೀವನ ಸುಧಾರಿಸಿತು.. ಆದರೂ ಮೊದಲಿನಂತೆ ಐಶಾರಾಮಿಯಾಗಿ ಬದುಕಲು ಸಾಧ್ಯವಾಗದಿದ್ದರೂ ಮತ್ತೊಬ್ಬರ ಬಳಿ ಹಣ ಕೇಳದ ರೀತಿಯಲ್ಲಿ ಜೀವನ ಸಾಗುತಿತ್ತು.. ಆ ಸಮಯದಲ್ಲಿಯೇ ಶೈನ್ ಶೆಟ್ಟಿ ಅವರಿಗೆ ಬಿಗ್ ಬಾಸ್ ನಲ್ಲಿ ಅವಕಾಶ ಬಂದು ಅದನ್ನೂ ಸಹ ಬಹಳ ಆಲೋಚನೆ ಮಾಡಿ ಒಪ್ಪಿಕೊಂಡರು..

ಅತ್ತ ಬಿಗ್ ಬಾಸ್ ಗೆ ಹೋದರೆ ಯಾವ ವಾರವಾದರೂ ಮನೆಯಿಂದ ಹೊರ ಬರಬಹುದು.. ಆದರೆ ಇತ್ತ ಜೀವನಕ್ಕೆ ದಾರಿಯಾಗಿದ್ದ ಫಾಸ್ಟ್ ಫುಡ್ ಅನ್ನು ನೋಡಿಕೊಳ್ಳುವವರು ಯಾರು ಎಂದು ಆಲೋಚನೆ ಮಾಡುತ್ತಿದ್ದ ಸಮಯದಲ್ಲಿ ಶೈನ್ ಗೆ ಬೆಮ್ನೆಲುಬಾಗಿ ಅವರ ತಾಯಿ ನಿಂತರು.. ಶೈನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ‌ ಇದ್ದಷ್ಟು ದಿನಗಳ ಕಾಲ ಶೈನ್ ಅವರ ತಾಯಿಯೇ ರಸ್ತೆಯಲ್ಲಿ ನಿಂತು ಫಾಸ್ಟ್ ಫುಡ್ ವ್ಯವಹಾರ ನೋಡಿಕೊಂಡರು.. ಇನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗ ಶೈನ್ ಅವರೇ ಹೇಳಿಕೊಂಡಂತೆ ಐಶಾರಾಮಿ‌ ಕಾರುಗಳನ್ನೇಲ್ಲಾ ಮಾರಿಕೊಂಡ ನಂತರ ಹಳೇ ಮಾಡೆಲ್ ಕಾರ್ ಒಂದನ್ನು ಸೆಕೆಂಡ್ಸ್ ನಲ್ಲಿ ಕೊಂಡುಕೊಂಡಿದ್ದರಂತೆ.. ಅದರಲ್ಲಿ ಲಾಲ್ ಸರಿಯಾಗಿ ಹಾಕಲಾಗದೇ ನಮ್ಮ ತಾಯಿಯನ್ನು ಕರೆದುಕೊಂಡು ಹೋಗುವಾಗ ಆಗಾಗ ಡೋರ್ ಓಪನ್ ಆಗುತ್ತಲೇ ಇರುತ್ತದೆ ಎಂದು ಯಾವುದೇ ಅಹಂ ಭಾವವಿಲ್ಲದೇ ಇರೋ ವಿಚಾರವನ್ನು ಹಂಚಿಕೊಂಡಿದ್ದರು..

ಆದರೆ ಅದೇ ಸೀಸನ್ ನಲ್ಲಿ ಟಾಟಾ ಕಂಪನಿಯ ಕಡೆಯಿಂದ ಶೈನ್ ಶೆಟ್ಟಿ ಅವರಿಗೆ ಟಾಟಾ ಅಲ್ಟ್ರೋಜ್ ಕಾರ್ ಸಹ ಉಡುಗೊರೆಯಾಗಿ ದೊರೆಯಿತು.. ಬಿಗ್ ಬಾಸ್ ಸೀಸನ್ ಏಳರ ಗೆಲುವಿನ ಕಿರೀಟವೂ ಶೈನ್ ಅವರ ಮುಡಿಗೇರಿತು.. ನಂತರದ ದಿನಗಳಲ್ಲಿ ಹಣ ಬಂತು ಎಂದು ಕಷ್ಟದ ಸಮಯದಲ್ಲಿ ತಮ್ಮ ಜೀವನಕ್ಕೆ ದಾರಿಯಾಗಿದ್ದ ಗಲ್ಲಿ ಕಿಚನ್ ನನ್ನು ನಿಲ್ಲಿಸಲಿಲ್ಲ ಅವರ ಕನಸಿನಂತೆ ಅದನ್ನು ನಾಲ್ಕು ಚಕ್ರದ ವಾಹನಕ್ಕೆ ಬದಲಿಸಿದರು..ಮಗನ ಕಷ್ಟದ ದಿನಗಳನ್ನು‌ ನೋಡಿದ್ದ ಶೈನ್ ಅವರ ತಾಯಿ ಒಂದು ರೀತಿ‌ ನೆಮ್ಮದಿಯಾಗಿದ್ದರು.. ಆ ನಂತರದಲ್ಲಿ ಇದೀಗ ಅನೇಕ ಅವಕಾಶಗಳನ್ನು ಪಡೆದ ಶೈನ್ ಶೆಟ್ಟಿ ಕನ್ನಡ ಆಲ್ಬಂ ಹಾಡುಗಳಲ್ಲಿ ಹಿಂದಿ ಆಲ್ಬಂ ಹಾಡುಗಳಲ್ಲಿ ಜೊತೆಗೆ ಕಿರುತೆರೆಯ ಡ್ಯಾನ್ಸ್ ಶೋವನ್ನು ಕೂಡ ನಿರೂಪಣೆ ಮಾಡುತ್ತಿದ್ದು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆನ್ನಬಹುದು.. ಈ ನಡುವೆ ಇಂದು ಶೈನ್ ಶೆಟ್ಟಿ ಅವರು ತಮ್ಮ ಮನೆಗೆ ನೂತನ ಅತಿಥಿಯೊಂದನ್ನು ಬರಮಾಡಿಕೊಂಡಿದ್ದಾರೆ..

ಹೌದು ಶೈನ್ ಶೆಟ್ಟಿ ಇಂದು ದುಬಾರಿ ಬೆಲೆಯ ಐಶಾರಾಮಿ ಕಾರ್ ಅನ್ನು ಕೊಂಡುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಬರೋಬ್ಬರಿ ಎಪ್ಪತ್ತು ಲಕ್ಷ ರೂಪಾಯಿಯ ನೀಲಿ ಬಣ್ಣದ ಬಿಎಂಡಬ್ಲ್ಯೂ ಕಾರ್ ಅನ್ನು ಶೈನ್ ಶೆಟ್ಟಿ ಖರೀದಿಸಿದ್ದು ತನ್ನ ತಾಯಿಯ ಜೊತೆ ಮೊದಲ ರೈಡ್ ಹೋಗಿದ್ದಾರೆ.. ಹೌದು ಕಳೆದ ಕೆಲ ದಿನಗಳ ಹಿಂದಷ್ಟೇ ಕಿರುತೆರೆ ನಟಿ ಮೇಘಾ ಶೆಟ್ಟಿ ಕೂಡ ಐಶಾರಾಮಿ ಎರಡು ಕಾರುಗಳನ್ನು ಒಂದೇ ದಿನ ಖರೀದಿ ಮಾಡಿ ಸುದ್ದಿಯಾಗಿದ್ದರು.. ಎಂ ಜಿ ಹೆಕ್ಟರ್ ಹಾಗೂ ಎಪ್ಪತ್ತು ಲಕ್ಷದ ಬಿಎಂಡಬ್ಲ್ಯೂ ಕಾರ್ ಅನ್ನು ಖರೀದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಂಚಿಕೊಂಡಿದ್ದರು.. ನಂತರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರೂ ಸಹ ಐಶಾರಾಮಿ‌ ಕಾರ್ ಖರೀದಿಸಿ ಸುದ್ದಿಯಾಗಿದ್ದರು.. ಈಗ ಶೈನ್ ಶೆಟ್ಟಿ ಸರದಿ..

ಹೌದು ಅಂದು ಬಿಗ್ ಬಾಸ್ ಮನೆಯಲ್ಲಿ ತನ್ನ ತಾಯಿಯನ್ನು ಕರೆದುಕೊಂಡು ಹೋಗುವಾಗ ಕಾರ್ ಡೋರ್ ಓಪನ್ ಆಗುತ್ತಲೇ ಇರುತ್ತದೆ.. ದೊಡ್ಡ ದೊಡ್ಡ ಕಾರ್ ಇದ್ದಾಗ ಸ್ನೇಹಿತರ ಜೊತೆ ಮೋಜು ಅದು ಇದು ಮಾಡಿದೆ.. ಆದರೆ ನನ್ನ ಅಮ್ಮನನ್ನು ಒಂದೊಳ್ಳೆ ಕಾರ್ ನಲ್ಲಿ ಕರೆದುಕೊಂಡು ಹೋಗೋಕೆ ಆಗ್ಲಿಲ್ಲ ಎಂದು ತನ್ನ ಪರಿಸ್ಥಿತಿಯನ್ನು ವಿವರಿಸುವಾಗ ಕಣ್ಣೀರಿಟ್ಟಿದ್ದ ಶೈನ್ ಶೆಟ್ಟಿ ಇಂದು ದುಬಾರಿ ಬೆಲೆಯ ಐಶಾರಾಮಿ ಕಾರಿನಲ್ಲಿ ತನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ.. ಹೌದು ಮೊನ್ನೆಮೊನ್ನೆಯಷ್ಟೇ ಕಿರುತೆರೆ ನಟಿ ಮೇಘಾ ಶೆಟ್ಟಿ ಕೊಂಡುಕೊಂಡಿದ್ದ ಬಿಎಂಡಬ್ಲ್ಯು ಕಾರ್ ಅನ್ನು ಇದೀಗ ಶೈನ್ ಶೆಟ್ಟಿ ಸಹ ಅದೇ ಬಣ್ಣ ಹಾಗೂ ಅದೇ ಮಾಡಲ್ ಬಿಎಂಡಬ್ಲ್ಯೂ ಅನ್ನು ಖರೀದಿ ಮಾಡಿದ್ದಾರೆ.. ಹೌದು ಮನುಷ್ಯನ ಜೀವನ ಇಷ್ಟೇ.. ಯಾವುದೂ ಸಹ ಶಾಶ್ವತವಲ್ಲ.. ಒಬ್ಬ ವ್ಯಕ್ತಿಯನ್ನು ಅವನ ಸಂದರ್ಭ ಹಾಗೂ ಅವನ ಹಣಕಾಸಿನ ಪರಿಸ್ಥಿತಿ ನೋಡಿ ಎಂದೂ ಅಳೆಯಬೇಡಿ.. ಬದುಕಿನಲ್ಲಿ‌ ಭರವಸೆ ಇಟ್ಟವ ಏನು ಬೇಕಾದರೂ ಸಾಧಿಸಬಲ್ಲ..