ಮೊದಲ ಬಾರಿಗೆ ದರ್ಶನ್ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್.. ಕೊಟ್ಟ ಅಚ್ಚರಿಯ ಹೇಳಿಕೆ ನೋಡಿ..

0 views

ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನ.. ಇನ್ನು ರಾಜ್ಯದ ಹೈವೋಲ್ಟೇಜ್ ಕಣ ಎನಿಸಿಕೊಂಡಿರುವ ರಾಜರಾಜೇಶ್ವರಿ ನಗರದಲ್ಲಿ ಮೂರು ಪಕ್ಷದ ಅಭ್ಯರ್ಥಿಗಳಿಂದ ಭರ್ಜರಿಯಾಗಿಯೇ ಪ್ರಚಾರ ಕಾರ್ಯಗಳು ನಡೆಯುತ್ತಿವೆ.. ಅತ್ತ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ದರ್ಶನ್ ಹಾಗೂ ಬಿಜೆಪಿ ನಾಯಕರು ರ್ಯಾಲಿ ಮೂಲಕ ಪ್ರಚಾರ ನಡೆಸಿದರೆ.. ಇತ್ತ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೃಷ್ಣಮೂರ್ತಿ ಪರವಾಗಿ ನಿಖಿಲ್ ಕುಮಾರಸ್ವಾಮಿ ಅವರು ರ್ಯಾಲಿ ಮೂಲಕ ಪ್ರಚಾರ ನಡೆಸಿದ್ದಾರೆ..

ಆದರೆ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ರವಿ ಅವರ ಪತ್ನಿ ಕುಸುಮಾ ಅವರ ಪರವಾಗಿ ಯಾವುದೇ ಸ್ಟಾರ್ ಕ್ಯಾಂಪೇನ್ ಮಾಡದೇ ಖುದ್ದು ಡಿಕೆ ಶಿವಕುಮಾರ್ ಅವರೇ ಅಖಾಡಕ್ಕೆ ಇಳಿದಿದ್ದು ಪಕ್ಷ ತೊರೆದು ಹೋದ ಮುನಿರತ್ನ ಅವರನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟಂತೆ ಕಾಣುತ್ತಿದೆ.. ಪ್ರಚಾರ ಮಾತ್ರವಲ್ಲದೇ ಕುಸುಮಾ ಅವರು ಎಲ್ಲಾ ದೇವರುಗಳ ಮೊರೆಯನ್ನು ಹೋಗುತ್ತಿದ್ದಾರೆ.. ಇನ್ನು ಮೊನ್ನೆಯಷ್ಟೇ ಮುನಿರತ್ನ ಅವರ ಪರವಾಗಿ ದರ್ಶನ್ ಅವರು ಪ್ರಚಾರ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ..

ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಯಾವುದೇ ಟೀಕೆಗಳನ್ನು ಮಾಡದೇ ಸ್ಪರ್ಧಾತ್ಮಕವಾಗಿ ತೆಗೆದುಕೊಂಡು ದರ್ಶನ್ ಅವರ ಬಗ್ಗೆ ಮಾತನಾಡಿರುವುದು ಪ್ರಬುದ್ಧತೆಯನ್ನು ತೋರುತ್ತದೆನ್ನಬಹುದು.. ಹೌದು ನಾನೂ ಕೂಡ ದರ್ಶನ್ ಅವರ ದೊಡ್ಡ ಅಭಿಮಾನಿ.. ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಪ್ರಚಾರ ಮಾಡುವ ಹಕ್ಕಿದೆ.. ಅದೇ ರೀತಿ ದರ್ಶನ್ ಅವರು ಮಾಡಿದ್ದಾರೆ.. ಅವರು ಈ ಮೊದಲು ಸಾಕಷ್ಟು ಕಡೆ ಪ್ರಚಾರ ಮಾಡಿದ್ದರು.. ಅದರಲ್ಲೇನೂ ಹೊಸತೇನಿಲ್ಲ..

ಅವರ ಸ್ನೇಹಿತರಿಗೆ ಪ್ರಚಾರ ಮಾಡುವುದರಲ್ಲೇನೂ ತಪ್ಪಿಲ್ಲವಲ್ಲ.. ಎಂದಿದ್ದರು.. ಕುಸುಮಾ ಅವರು ದರ್ಶನ್ ಅವರ ಅಭಿಮಾನಿ ಎಂದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಡಿ ಬಾಸ್ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು.. ಇನ್ನು ಡಿ ಕೆ ಶಿವಕುಮಾರ್ ಅವರು ಮಂಡ್ಯ ಲೋಕಸಭಾ ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಅವರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ..

ಹೌದು ದರ್ಶನ್ ಅವರು ನಿನ್ನೆ ಬಿಜೆಪಿಯ ಮುನಿರತ್ನ ಪರವಾಗಿ ರ್ಯಾಲಿ ನಡೆಸಿದ್ದರಿಂದ ನಿಮಗೇನಾದರೂ ಅದರ ಪ್ರಭಾವ ಬೀರಲಿದೆಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟ ಡಿ ಕೆ ಶಿವಕುಮಾರ್ ಅವರು.. “ದರ್ಶನ್ ಅವರು ಪ್ರಚಾರ ಮಾಡಿರೋದ್ರಲ್ಲಿ ಹೊಸದೇನಿದೆ? ಅವರು ನನಗೂ ಸ್ನೇಹಿತರು.. ನಾನ್ ಕರುದ್ರೂ ಕೂಡ ನನಗೂ ಬಂದು ಪ್ರಚಾರ ಮಾಡಿಕೊಡ್ತಾರೆ.. ಅದೇ ರೀತಿ ಅವರ ಸಿನಿಮಾ ಸ್ನೇಹಿತರಾದ್ರಿಂದ ಅಲ್ಲಿ ಪ್ರಚಾರ ಮಾಡಿದ್ದಾರೆ ಅಷ್ಟೇ.. ನನಗೂ ಸಹ ದರ್ಶನ್ ಸ್ನೇಹಿತರೇ.. ಅದರಲ್ಲಿ ವಿಶೇಷತೆ ಏನೂ ಇಲ್ಲವೆಂದಿದ್ದಾರೆ.. ಈ ಮೂಲಕ ದರ್ಶನ್ ಅವರ ಪ್ರಚಾರದಿಂದ ತಮ್ಮ ಪಕ್ಷದ ಮತಕ್ಕೆ ಯಾವುದೇ ಪ್ರಭಾವ ಬೀರುವುದಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.. ಆದರೆ ಈ ಹಿಂದೆ ಶಿವಕುಮಾರ್ ಅವರು ಖುದ್ದಾಗಿ ನೆನಪಿರಲಿ ಪ್ರೇಮ್ ಹಾಗೂ ವಿನೋದ್ ಪ್ರಭಾಕರ್ ಅವರ ಮನೆಗೆ ಭೇಟಿ ನೀಡಿ ಪ್ರಚಾರಕ್ಕೆ ಆಹ್ವಾನ ನೀಡಿದ್ದರು ಎನ್ನಲಾಗಿತ್ತು.. ಆದರೆ ಅವರಿಬ್ಬರು ಪ್ರಚಾರದಲ್ಲಿ ಪಾಲ್ಗೊಳ್ಳದಿರಲು ಕಾರಣ ತಿಳಿದು ಬಂದಿಲ್ಲ..