ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನೆಯಲ್ಲಿ ಮಗಳ ಮದುವೆ ಸಂಭ್ರಮದ ತಯಾರಿ ಅದ್ಧೂರಿಯಾಗಿ ನಡೆಯುತ್ತಿದೆ.. ಹೌದು ಕಾಫಿ ಕಿಂಗ್ ಸಿದ್ದಾರ್ಥ್ ಅವರ ಪುತ್ರ.. ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಮೊಮ್ಮಗ ಅಮರ್ತ್ಯ ಹೆಗ್ಡೆ ಹಾಗೂ ಐಶ್ವರ್ಯ ಶಿವಕುಮಾರ್ ಅವರ ನಿಶ್ಚಿತಾರ್ಥ ಸಮಾರಂಭ ನಾಳೆ ಅದ್ಧೂರಿಯಾಗಿ ನಡೆಯಲಿದೆ..
ಹೌದು ಸದ್ಯ ವಿಧಾನಸಭಾ ಉಪಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಬೇಸರದಲ್ಲಿದ್ದ ಶಿವಕುಮಾರ್ ಅವರ ಮನೆಯಲ್ಲೀಗ ಮಗಳ ನಿಶ್ಚಿತಾರ್ಥದ ಸಂತೋಷದ ವಿಚಾರದಿಂದಾಗಿ ಶಿವಕುಮಾರ್ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆನ್ನಬಹುದು.. ಮಗಳ ನಿಶ್ಚಿತಾರ್ಥಕ್ಕೆ ತಾವೇ ಮುಂದೆ ನಿಂತು ಸಕಲ ತಯಾರಿ ನಡೆಸುತ್ತಿದ್ದು ತಮ್ಮೆಲ್ಲಾ ರಾಜಕೀಯ ಸ್ನೇಹಿತರಿಗೆ ಆಮಂತ್ರಣ ನೀಡಿದ್ದಾರೆ ಎಂದು ತಿಳಿದುಬಂದಿದೆ..
ಸಿದ್ದಾರ್ಥ್ ಹೆಗ್ಡೆ ಅವರು ತೀರಿಕೊಂಡು ವರ್ಷ ಕಳೆಯುವ ಮುನ್ನ ಮನೆಯಲ್ಲಿ ಶುಭ ಕಾರ್ಯವೊಂದು ಮಾಡಬೇಕಾದ ಸಂಪ್ರದಾಯವಿದ್ದ ಕಾರಣ ಜೂನ್ ನಲ್ಲಿ ಸರಳವಾಗಿ ಶಿವಕುಮಾರ್ ಅವರ ಮನೆಯಲ್ಲಿಯೇ ಮದುವೆಯ ನಿಶ್ಚಯದ ಮಾತುಕತೆ ನಡೆಸಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು.. ಎಸ್ ಎಂ ಕೃಷ್ಣ ಅವರ ಕುಟುಂಬ ಹಾಗೂ ಶಿವಕುಮಾರ್ ಅವರ ಕುಟುಂಬದ ಸದಸ್ಯರು ಮತ್ತು ಕೆಲವೇ ಕೆಲ ಆಪ್ತರ ನಡುವೆ ಕಾರ್ಯಕ್ರಮ ನೆರವೇರಿತ್ತು..
ಶಿವಕುಮಾರ್ ಅವರ ಮನೆಯಲ್ಲಿ ಇದೇ ಮೊದಲ ಮದುವೆಯಾದ ಕಾರಣ ಇದೀಗ ಅದ್ಧೂರಿಯಾಗಿ ನಾಳೆ ನಿಶ್ಚಿತಾರ್ಥ ನಡೆಯುತ್ತಿದೆ.. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಖಾಸಗಿ ಹೊಟೆಲ್ ಒಂದರಲ್ಲಿ ನಿಶ್ಚಿತಾರ್ಥ ಸಮಾರಂಭ ನೆರವೇರುತ್ತಿದ್ದು ರಾಜಕೀಯದ ಗಣ್ಯರಿಗೆ ಹಾಗೂ ಸ್ನೇಹಿತ ವರ್ಗಕ್ಕೂ ಆಮಂತ್ರಣವಿದ್ದು ನಾಳೆ ಐಶ್ವರ್ಯಾ ಶಿವಕುಮಾರ್ ಹಾಗೂ ಅಮರ್ಥ್ಯ ಹೆಗ್ಡೆ ಉಂಗುರ ಬದಲಿಸಿಕೊಳ್ಳುವ ಮೂಲಕ ನೂತನ ಜೀವನಕ್ಕೆ ಮುನ್ನುಡಿ ಬರೆಯಲಿದ್ದಾರೆ.. ಮದುವೆಯ ದಿನಾಂಕ
ಇನ್ನು ಮುಂದಿನ ವರ್ಷ ಫೆಬ್ರವರಿಯಲ್ಲಿ ಮದುವೆ ಸಮಾರಂಭ ನೆರವೇರಲಿದ್ದು ಫೆಬ್ರವರಿ 14 ಅಥವಾ 24 ರಂದು ಐಶ್ವರ್ಯಾ ಹಾಗೂ ಅಮರ್ಥ್ಯ ನೂತನ ಜೀವನಕ್ಕೆ ಕಾಲಿಡಲಿದ್ದಾರೆ.. ಸದ್ಯ ಅಮರ್ಥ್ಯ ಹೆಗ್ಡೆ ವಿದೃಶದಲ್ಲಿ ಎಂ ಬಿ ಎ ಮುಗಿಸಿ ಬಂದಿದ್ದು ಸಿದ್ದಾರ್ಥ್ ಹೆಗ್ಡೆ ಅವರ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾರೆ.. ಇತ್ತ ಐಶ್ವರ್ಯಾ ಶಿವಕುಮಾರ್ ಅವರು ತಮ್ಮದೇ ಸ್ವಂತ ಉದ್ಯಮ ಹೊಂದಿದ್ದು ಅದರ ಜವಾಬ್ದಾರಿಯನ್ನು ಖುದ್ದು ಐಶ್ವರ್ಯಾ ಅವರೇ ನೋಡಿಕೊಳ್ಳುತ್ತಿದ್ದಾರೆ.