ತಿಹಾರ್ ಜೈಲಿನಲ್ಲಿ ತನಗೆ ಸಹಾಯ ಮಾಡಿದ್ದ ಖೈದಿಗೆ ಡಿಕೆ ಶಿವಕುಮಾರ್ ಕೊಟ್ಟ ಹಣವೆಷ್ಟು ಗೊತ್ತಾ.. ನೋಡಿ ಶಾಕ್ ಆದ ಖೈದಿ‌‌..

0 views

ಬದುಕಿನಲ್ಲಿ ನಾವು ಹೀಗೆ ಇರಬೇಕು ಎಂದು ಎಷ್ಟೇ ಪ್ರಯತ್ನ ಪಟ್ಟರೂ ಕೆಲವೊಮ್ಮೆ ಜೀವನ ಕಲಿಸುವ ಪಾಠವೇ ಬೇರೆ ಇರುತ್ತದೆ.. ಜೀವನದಲ್ಲಿ ಎಲ್ಲವೂ ಇದ್ದರೂ ಸಹ‌ ಕೆಲವೊಮ್ಮೆ ನಮ್ಮ ಊಹೆಗೂ ಮೀರಿದ ಘಟನೆಗಳು ನಡೆಯುತ್ತವೆ.. ನಮ್ಮ ಬಳಿ ಹಣ ಅಧಿಕಾರ ಎಲ್ಲವೂ ಇದ್ದರೂ ಸಹ ಕೆಲವೊಂದನ್ನು ತಡೆಯಲು ಅಸಾಧ್ಯವಾಗಿ ಬಿಡುತ್ತದೆ.. ಅಂತಹುದೇ ಘಟನೆ ಡಿಕೆ ಶಿವಕುಮಾರ್ ಅವರ ಜೀವನದಲ್ಲಿ ನಡೆದದ್ದು ಎರಡು ವರ್ಷದ ಹಿಂದೆ.. ಹೌದು 2019 ರಲ್ಲಿ ಅಕ್ರಮ ಹಣದ ವಿಚಾರವಾಗಿ ಡಿಕೆಶಿವಕುಮಾರ್ ಅವರು ಬರೋಬ್ಬರಿ ನಲವತ್ತೈದು ದಿನಗಳ ಕಾಲ ಜೈಲಿನ ವಾಸ ಅನುಭವಿಸುವಂತಾಯಿತು.. ಆ ಸಮಯದಲ್ಲಿ ಜೈ ಲಿನಲ್ಲಿತನಗೆ ಸಹಾಯ ಮಾಡಿದ್ದ ವ್ಯಕ್ತಿಯನ್ನು ಇಂದು ಡಿಕೆಶಿವಕುಮಾರ್ ಅವರು ಕೈ ಹಿಡಿದಿದ್ದಾರೆ.. ಹೌದು ಅಂದು ಆತನಿಗೆ ಡಿಕೆ ಶಿವಕುಮಾರ್ ಅವರು ತಾವು ಕೊಟ್ಟ ಮಾತನ್ನು ಇಂದು ಉಳಿಸಿಕೊಂಡಿದ್ದಾರೆ..

ಹೌದು ಒಮ್ಮೊಮ್ಮೆ ಜೀವನದಲ್ಲಿ ಅದೆಷ್ಟೋ ಜನರು ಸಹಾಯ ಪಡೆದು ಕನಿಷ್ಟ ಪಕ್ಷ ನೆನಪಿಸಿಯೂ ಕೊಳ್ಲೂವುದಿಲ್ಲ..ಆದರೆ ಡಿ ಕೆ ಶಿವಕುಮಾರ್ ಅವರು‌ ಮಾತ್ರ ತನ್ನ ಕಷ್ಟದ ದಿನಗಳಲ್ಲಿ ಜೊತೆಯಿದ್ದವರನ್ನು ಕೈ ಬಿಡಲಿಲ್ಲ.. ಹೌದು ಅಂದು ತಿಹಾರ್ ಜೈ ಲಿನಲ್ಲಿತಮ್ಮ ಜೊತೆ ಇದ್ದ ಇಬ್ಬರಿಗೆ ಕೈತುಂಬಾ ಹಣ ಕೊಟ್ಟಿದ್ದಷ್ಟೇ ಅಲ್ಲದೇ ತಮ್ಮ ಮನೆಯಲ್ಲಿಯೇ ಅವರಿಗೆ ಜಾಗವನ್ನೂ ಸಹ ನೀಡಿದ್ದಾರೆ.. ಹೌದು 2019 ರ ಸೆಪ್ಟೆಂಬರ್ ತಿಂಗಳಿನಲ್ಲಿ ಡಿ ಕೆ ಶಿವಕುಮಾರ್ ಅವರು ತಮ್ಮ ನಲವತ್ತೈದು ದಿನದ ಆ ವಾಸವನ್ನು ಮುಗಿಸಿದ್ದರು.. ಆ ದಿನ ತಮ್ಮ ಜೊತೆ ಇದ್ದವರಿಗೆ ಮುಂದೊಂದು ದಿನ ಸಹಾಯ ಮಾಡುವುದಾಗಿಯೂ ತಿಳಿಸಿದ್ದರು.. ಅದರಂತೆಯೇ ಇಂದು ಲಕ್ಷ ಲಕ್ಷ ಹಣವನ್ನು ಅವರುಗಳಿಗೆ ನೀಡಿದ್ದಾರೆ..

ಹೌದು ಡಿ ಕೆ ಶಿವಕುಮಾರ್ ಅವರನ್ನು ಮೊಯಿಸಿನ್ ರಾಝಾ ಎಂಬ ವ್ಯಕ್ತಿ ಇದ್ದ ಸೆಲ್ ಗೆ ಕಳುಹಿಸಿದ್ದರು.. ಆ ಸಮಯದಲ್ಲಿ ಮೊಹಿಸಿನ್ ಡಿ ಕೆ ಶಿವಕುಮಾರ್ ಅವರ ಸ್ನೇಹಿತನಂತೆ ನೋಡಿಕೊಂಡಿದ್ದ.. ಅವರ ಕಷ್ಟಗಳನ್ನು ಆಲಿಸಿದ್ದ.. ಜೊತೆಗೆ ಇದ್ದ ಕೆಲವೇ ದಿನದಲ್ಲಿ ಡಿಕೆ ಶಿ ಅವರಿಗೆ ಆಪ್ತನೂ ಆಗಿದ್ದ.. ಅವನ ನಡವಳಿಕೆ ಕಂಡು ಡಿ ಕೆ ಶಿ ಅವರೂ ಸಹ ಅವನನ್ನು ಮೆಚ್ಚಿಕೊಂಡಿದ್ದರು.. ಮುಂದೊಂದು ದಿನ ಆತನಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದರು.. ಮೊಯಿಸಿನ್ ತನ್ನ ಕುಟುಂಬದಲ್ಲಿ ಆದ ಗಲಾಟೆಯಿಂದಾಗಿ ಆ ವಾಸ ಅನುಭವಿಸುವಂತಾಗಿತ್ತು.. ಹೆಂಡತಿಗೆ ನಾಲ್ಕೂವರೆ ಲಕ್ಷ ಹಣ ಕಟ್ಟಬೇಕಾಗಿತ್ತು.. ಆದರೆ ಅಷ್ಟು ಹಣ ಮೊಯಿಸಿನ್ ಬಳಿ‌ ಇಲ್ಲದ ಕಾರಣ ಆತ ಅಲ್ಲಿಯೇ ಇರಬೇಕಾಗಿ ಬಂದಿತ್ತು..

ಇದನ್ನು ತಿಳಿದಿದ್ದ ಡಿ ಕೆ ಶಿವಕುಮಾರ್ ಅವರು ಇದೀಗ ಆತನಿಗೆ ಐದು ಲಕ್ಷ ಹಣ ಕೊಟ್ಟು ಆತನನ್ನು ಬಿಡಿಸಿದ್ದಷ್ಟೇ ಅಲ್ಲದೇ ಹೊಸ ಬದುಕು ಕಟ್ಟಿಕೊಳ್ಳುವ ಸಲುವಾಗಿ ತಮ್ಮ ಮನೆಯಲಿಯೇ ಇರಿಸಿಕೊಂಡಿದ್ದಾರೆ.. ಹೌದು ದೆಹಲಿಯಲ್ಲಿನ ಡಿ ಕೆ ಸುರೇಶ್ ಅವರ ನಿವಾಸದಲ್ಲಿಯೇ ಮೊಯಿಸಿನ್ ನನ್ನು ಉಳಿಸಿಕೊಂಡು ಕುಟುಂಬದ ಸದಸ್ಯನಂತೆ ನೋಡಿಕೊಳ್ಳುತ್ತಿದ್ದಾರೆ.. ಅಷ್ಟೇ ಅಲ್ಲದೇ ದೆಹಲಿಗೆ ಹೋದಾಗಲೆಲ್ಲಾ ಆತನನ್ನು ಮಾತನಾಡಿಸದೇ ಬರುವುದೇ ಇಲ್ಲ ಎಂದು ತಿಳಿದು ಬಂದಿದೆ.. ಇಷ್ಟಕ್ಕೆ ಸುಮ್ಮನಾಗದ ಡಿ ಕೆ ಶಿವಕುಮಾರ್ ಅವರು ಜೈ ಲಿನಲ್ಲಿತಮಗೆ ಹಿಂದಿ ಭಾಷೆ ಕಲಿಸಿಕೊಟ್ಟವನಿಗೂ ಸಹ ಕೈ ಹಿಡಿದಿದ್ದಾರೆ..

ಹೌದು ಅದೇ ಜಾಗದಲ್ಲಿ ಡಿ ಕೆ ಶಿವಕುಮಾರ್ ಅವರಿಗೆ ಸಿಕ್ಕ ಮತ್ತೊಬ್ಬ ವ್ಯಕ್ತಿ ಡಿಕೆ ಶಿ ಅವರಿಗೆ ಹಿಂದಿ ಭಾಷೆಯನ್ನು ಕಲಿಸಿಕೊಟ್ಟಿದ್ದನು.. ಆ ವ್ಯಕ್ತಿಗೂ ಸಹ ಹಣ ಸಹಾಯ ಮಾಡಿದ್ದರು.. ಆದರೆ ಅಷ್ಟಕ್ಕೇ ಸುಮ್ಮನಾಗದೇ ಆ ವ್ಯಕ್ತಿಗೂ ಸಹ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದು ಬೆಂಗಳೂರಿನ ದೊಡ್ಡ ಕಂಪನಿಯೊಂದರಲ್ಲಿ ಉದ್ಯೋಗ ಕೊಡಿಸಿದ್ದಾರೆ ಎನ್ನಲಾಗಿದೆ.. ಒಟ್ಟಿನಲ್ಲಿ ಅಲ್ಲಿನ ವಾಸ ಡಿ ಕೆ ಶಿವಕುಮಾರ್ ಅವರಿಗೆ ಅನೇಕ ಪಾಠಗಳನ್ನು ಕಲಿಸಿತಾದರೂ ಅಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸಹಾಯ ಮಾಡಿದವರ ಜೀವನವೇ ಬದಲಾಯಿತೆನ್ನಬಹುದು.. ಅದೇನಾದರೂ ಆಗಿರಲಿ ಒಬ್ಬ ಮನುಷ್ಯ ತನ್ನ ತಪ್ಪನ್ನು ತಿದ್ದುಕೊಂಡು ಮುಂದಿನ ಜೀವನ ನಡೆಸಬೇಕು ಎಂದುಕೊಂಡಾಗ ಆತನಿಗೆ ನೆರವಾಗಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ ಡಿ ಕೆ ಶಿವಕುಮಾರ್ ನಡೆಗೆ ನೆಟ್ಟಿಗರು ಮೆಚ್ಚುಗೆ ಸಲ್ಲಿಸಿದ್ದಾರೆ..