ನ್ಯಾಯಾಧೀಶರ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಜೋಡಿ.. ಕಾರಣವೇನು ಗೊತ್ತಾ.. ಇವರು ನಿಜಕ್ಕೂ ಯಾರು ಗೊತ್ತಾ..

0 views

ಮದುವೆ ಎಂದ ಕೂಡಲೇ ಹೆಣ್ಣಾಗಲಿ ಗಂಡಾಗಲಿ ನೂರಾರು ಕನಸುಗಳನ್ನು ಕಂಡಿರುತ್ತಾರೆ. ಅದರಲ್ಲಿಯೂ ಮದುವೆಯಾಗುವ ಸಂಗಾತಿಯ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಕನಸುಗಳು ಇದ್ದರೆ ಮತ್ತೊಂದು ಕಡೆ ತಮ್ಮ ಮದುವೆ ಸಮಾರಂಭದ ಬಗ್ಗೆಯೂ ಸಾಕಷ್ಟು ಕನಸುಗಳು ಇರುತ್ತವೆ.. ಮದುವೆ ಹೀಗೆ ಆಗಬೇಕು, ಹಾಗೆ ಆಗಬೇಕು, ಅದ್ಧೂರಿಯಾಗಿರಬೇಕು, ಹೀಗೆ ಸಾಕಷ್ಟು ಆಸೆ ಕನಸುಗಳನ್ನು ಹೊಂದಿರುತ್ತಾರೆ. ಅದರಲ್ಲಿಯೂ ಸೆಲಿಬ್ರೆಟಿ ಜೋಡಿಗಳ ಮದುವೆ ಎಂದರೆ ಕೇಳಲೇಬೇಕಿಲ್ಲ, ಅದ್ಧೂರಿತನ ಆಡಂಬರ ಸಡಗರ ಸಂಭ್ರಮ ಸಾಕಷ್ಟು ಇರುತ್ತದೆ. ಆದರೆ ಇಲ್ಲೊಂದು ಸೆಲಿಬ್ರೆಟಿ ಜೋಡಿ ಮದುವೆಯಾದ ರೀತಿ ನೋಡಿದರೆ ನಿಜಕ್ಕೂ ಹ್ಯಾಟ್ಸ್ ಆಫ್ ಎನ್ನಲೇಬೇಕು. ಹೌದು ಜಡ್ಜ್ ಮುಂದೆಯೇ ಸೆಲಿಬ್ರೆಟಿ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಜೋಡಿಯ ಮದುವೆಗೆ ಇಬ್ಬರ ತಂದೆ ತಾಯಿಗಳು ಆಪ್ತರು ಸಾಕ್ಷಿಯಾಗಿದ್ದಾರೆ.

ಅದರಲ್ಲಿಯೂ ಈ ಸೆಲಿಬ್ರೆಟಿಗಳ ಜೋಡಿಯ ಮದುವೆಗೆ ಖರ್ಚು ಮಾಡಿದ್ದು ಕೇವಲ ಐನೂರು ರೂಪಾಯಿಗಳು. ಹೌದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆಯಾಗವು ಸೆಲಿಬ್ರೆಟಿಗಳ ನಡುವೆ ಈ ಇಬ್ಬರು ನಿಜಕ್ಕೂ ಮಾದರಿ ಎನ್ನಲೇ ಬೇಕು. ಅಷ್ಟಕ್ಕೂ ಈ ಸೆಲಿಬ್ರೆಟಿಗಳು, ಸ್ಟಾರ್ ಗಳು ನಿಜಕ್ಕೂ ಯಾರು ಇಲ್ಲಿದೆ ನೋಡಿ. ಹೌದು ಈ ಇಬ್ಬರು ಯಾರೋ ಸಿನಿಮಾದ ಸ್ಟಾರ್ ಗಳಲ್ಲ ಅಥವಾ ತೆರೆ ಮೇಲೆ ಕಾಣಿಸಿಕೊಂಡು ಸೆಲಿಬ್ರೆಟಿಗಳಾದವರಲ್ಲಾ. ಬದಲಿಗೆ ಇವರು ನಿಜ ಜೀವನದ ಸ್ಟಾರ್ ಗಳು. ನಿಜ ಜೀವನದಲ್ಲಿ ಸೆಲಿಬ್ರೆಟಿಗಳು. ಹೌದು ಇವರ ಹೆಸರು ಶಿವಾಂಗಿ ಜೋಷಿ ಹಾಗೂ ಅನಿಕೇತ್ ಚತುರ್ವೇದಿ. ಒಬ್ಬರಿಗಿಂತ ಒಬ್ಬರು ಜೀವನದಲ್ಲಿ ಸಾಧನೆ ಮಾಡಿರುವವರು. ಹೌದು ಶಿವಾಂಗಿ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶೆಯಾಗಿದ್ದಾರೆ. ಇತ್ತ ಅನಿಕೇತ್ ಚತುರ್ವೇದಿ ಅವರು ಆರ್ಮಿಯಲ್ಲಿ ಮೇಜರ್ ಆಗಿದ್ದಾರೆ..

ಈ ನಿಜ ಜೀವನದ ಸ್ಟಾರ್ ಜೋಡಿ ಭೋಪಾಲ್ ನ ನಿವಾಸಿಗಳಾಗಿದ್ದು ಯಾವುದೇ ಆಡಂಬರವಿಲ್ಲದೇ ಅಪ್ಪ ಅಮ್ಮನ ಅನುಮತಿ ಪಡೆದು ನ್ಯಾಯಾಧೀಶರ ಮುಂದೆ ಹಾರ ಬದಲಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ರೀತಿ ಈ ಇಬ್ಬರು‌ ಮಾಡಲು ಕಾರಣವೂ ಇದೆ. ಹೌದು ಶಿವಾಂಗಿ ಹಾಗೂ ಅನಿಕೇತ್ ಅವರ ನಿಶ್ಚಿತಾರ್ಥ ಕಳೆದ ಎರಡು ವರ್ಷಗಳ ಹಿಂದೆಯೇ ನೆರವೇರಿದ್ದು ಕೊರೊನಾ ಕಾರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಮೊದಲು ಸಹ ಸರಳ ವಿವಾಹದ ನಿರ್ಧಾರದಲ್ಲಿಯೇ ಇದ್ದ ಈ ಜೋಡಿ ಇದೀಗ ತಮ್ಮ ಕನಸಿನಂತೆಯೇ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೋರ್ಟ್ ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಮದುವೆಯಾಗುವ ನಿರ್ಧಾರ ಮಾಡಿದ್ದು ಇದಕ್ಕೆ ಕುಟುಂಬಸ್ಥರು ಸಹಿ ಮಾಡಿದ್ದಾರೆ.

ಇನ್ನು ಇವರ ಮದುವೆಗೆ ಖರ್ಚಾಗಿದ್ದು ಕೇವಲ ಐನೂರು ರೂಪಾಯಿಯಷ್ಟೇ ಅನ್ನೋದು ನಿಜಕ್ಕೂ ಸಂತೋಷ ಪಡುವ ವಿಚಾರವಾಗಿದ್ದು ಯಾವುದೇ ಅನಾವಶ್ಯಕ ಖರ್ಚುಗಳಿಲ್ಲದೇ ಇತರರಿಗೆ ಮಾದರಿಯಾಗಿದ್ದಾರೆನ್ನಬಹುದು. ಇಬ್ಬರೂ ಸಹ ಉನ್ನತ ಹುದ್ದೆಯಲ್ಲಿದ್ದರೂ ಸಹ ಇವರ ಸರಳ ಮದುವೆಯ ನಿರ್ಧಾರ ಮನೆಯವರಿಗೂ ಸಂತೋಷ ತಂದಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಅನಿಕೇತ್ ಸಮಾಜಕ್ಕೆ ಸಂದೇಶ ನೀಡುವ ಸಲುವಾಗಿಯೇ ನಾವು ಈ ರೀತಿ‌ ಮದುವೆಯಾದೆವು. ಇದಕ್ಕೆ ನಮ್ಮ ಕುಟುಂಬದ ಅನುಮತಿ ಸಹ ಇದೆ. ಮದುವೆ ಸಮಾರಂಭದಲ್ಲಿ ಮಾಡುವ ಅತಿಯಾದ ಖರ್ಚು ಹೆಣ್ಣಿನ ಕುಟುಂಬಕ್ಕೆ ಹೊರೆಯಾಗುವುದಷ್ಟೇ ಅಲ್ಲದೇ ಹಣದ ವ್ಯರ್ಥವಾಗುತ್ತದೆ.

ಸರಳವಾಗಿ ಮದುವೆಯಾದರೆ ಯಾರಿಗೂ ಯಾವುದೇ ರೀತಿಯಲ್ಲಿಯೂ ತೊಂದರೆಯಾಗುವುದಿಲ್ಲ. ಸಮಾಜಕ್ಕೂ ಒಂದೊಳ್ಳೆ ಸಂದೇಶ ರವಾನೆಯಾಗುತ್ತದೆ ಎಂದಿದ್ದಾರೆ.. ಇನ್ನು ಅನಿಕೇತ್ ಅವರು ಭಾರತೀಯ ಸೇನೆಯಲ್ಲಿ ಲಡಾಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತ ಶಿವಾಂಗಿ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ ನ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಿಜ ಜೀವನದ ಸ್ಟಾರ್ ಜೋಡಿಯ ಮದುವೆಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಮಾಜಕ್ಕೆ ಮಾದರಿಯಾದ ಶಿವಾಂಗಿ ಹಾಗೂ ಅನಿಕೇತ್ ಜೋಡಿಗೆ ಅವರ ಮುಂದಿನ ಜೀವನಕ್ಕೆ ಶುಭವಾಗಲಿ ಎಂದು ಹಾರೈಸೋಣ..