ಚಿಕ್ಕ ವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡು.. ಓದಿ ಲಾಯರ್ ಆಗಿ ಮದುವೆಯೂ ಆದಳು.. ಆದರೆ ನಿನ್ನೆ ಈಕೆಯ ಜೀವನದಲ್ಲಿ ಏನಾಗಿ ಹೋಯ್ತು ನೋಡಿ.. ಮನಕಲಕುತ್ತದೆ..

0 views

ಜೀವನ ಯಾವಾಗ ಯಾವ ರೀತಿ ತಿರುವು ನೀಡುವುದೋ ಹೇಳಲಾಗದು.. ಎಲ್ಲಾ ಇದ್ದವರ ಬಾಳಲ್ಲಿ ನೆಮ್ಮದಿ ಇರೋದಿಲ್ಲ.. ಏನೂ ಇಲ್ಲದವರ ಬಾಳಲ್ಲಿ ಏನಾದರು ಪಡೆಯಬೇಕೆಂಬ ಹಟ ಛಲ.. ಆ ಹಟ ಛಲದಿಂದಲೇ ಜೀವನದಲ್ಲಿ ಸಧಿಸಿ ಒಂದು ಹಂತಕ್ಕೆ ಬಂದು ನಿಂತು ನೆಮ್ಮದಿಯಾಗಿ ಜೀವನ ಸಾಗಿಸೋಣ ಎನ್ನುವ ಸಮಯದಲ್ಲಿ ಊಹಿಸಲಾಗದ ಘಟನೆಗಳು ನಡೆದು ಹೋಗುತ್ತದೆ.. ಅದೇ ರೀತಿ ಈ ಹೆಣ್ಣು ಮಗಳ ಜೀವನ ಕತೆ ಕೇಳಿದರೆ ನಿಜಕ್ಕೂ ಸಂಕಟವಾಗುತ್ತದೆ.. ಹೌದು ಈಕೆ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಳು.. ಓದಿ ಲಾಯರ್ ಕೂಡ ಆದಳು.. ಐದು ವರ್ಷದ ಹಿಂದೆ ಪ್ರೀತಿಸಿ ಮದುವೆಯೂ ಆದಳು.. ಆದರೆ ನಿನ್ನೆ ಆಕೆಯ ಜೀವನವೇ ಮುಕ್ತಾಯವಾಗಿ ಹೋಯ್ತು.. ಕಾರಣ ಕೇಳಿದರೆ ನಿಜಕ್ಕೂ ಮನಕಲಕುತ್ತದೆ..

ಹೌದು ಈ ಹೆಣ್ಣು ಮಗಳ ಹೆಸರು ಶಿವಾನಿ.. ವಯಸ್ಸು ಕೇವಲ ಇಪ್ಪತ್ತ ಮೂರಷ್ಟೇ.. ಶಿವಾನಿ ಈ ಹೆಣ್ಣು ಮಗಳು ಚಿಕ್ಕವಳಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡಳು.. ಶಿವಾನಿಯ ತಾಯಿಯ ಹೆಸರು ಹೇಮಾ.. ತಂದೆಯನ್ನು ಕಳೆದುಕೊಂಡ ನಂತರ ಸೋದರ ಮಾವನ ಆಶ್ರಯದಲ್ಲಿಯೇ ಶಿವಾನಿ ಬೆಳೆದಳು.. ಸೋದರ ಮಾವನ ಸಹಾಯದಿಂದಲೇ ಚೆನ್ನಾಗಿ ಓದಿ ಲಾಯರ್ ಆದಳು.. ಇನ್ನು ಇತ್ತ ಶಿವಾನಿ ಲಾಯರ್ ಆದ ಬಳಿಕ ಆಕೆಯ ಓದಿಗೆ ಹತ್ತು ಲಕ್ಷ ಖರ್ಚಾಗಿದೆ ಅದನ್ನು ನೀಡುವಂತೆ ಸೋದರ ಮಾವ ಬೇಡಿಕೆ ಇಟ್ಟಿದ್ದ.. ಆ ಹಣವನ್ನು‌ ಮರಳಿ ನೀಡಲು ಒಪ್ಪಿದ ಶಿವಾನಿ ಪ್ರತಿ ತಿಂಗಳು ಇಂತಿಷ್ಟು ಹಣ ಅಂತ ಸೋದರ ಮಾವನಿಗೆ ನೀಡುತ್ತಿದ್ದಳು.. ಇದರ ಜೊತೆಗೆ ಕಳೆದ ಐದು ವರ್ಷದ ಹಿಂದೆ ಶಿವಾನಿ ಅರ್ಜುನ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು..

ಇವರ ದಾಂಪತ್ಯದ ಪ್ರೀತಿಯ ಸಂಕೇತವಾಗಿ ಗಂಡು ಮಗುವೂ ಸಹ ಆಯಿತು.. ಮಗುವಿಗೀಗ ಎರಡು ವರ್ಷ.. ಸುಂದರ ಸಂಸಾರ.. ನೆಮ್ಮದಿಯಾಗಿ ಜೀವನ ಮಾಡಬಹಿದಾಗಿತ್ತು.. ಆದರೆ ಏನೂ ಇಲ್ಲದೇ ಎಲ್ಲವನ್ನು ಪಡೆದು ಸಂತೋಷವಾಗಿ ಬಾಳಬೇಕಾದ ಸಮಯದಲ್ಲಿ ಬದುಕೇ ಮುಕ್ತಾಯವಾಗುತ್ತದೆ ಎಂದು ಬಹುಶಃ ಶಿವಾನಿ ಕನಸಿನಲ್ಲಿಯೂ ಊಹಿಸಿರಲಿಲ್ಲ.. ಹೌದು ಶಿವಾನಿ ತನ್ನ ಸೋದರ ಮಾವನಿಗೆ ಪ್ರತಿ ತಿಂಗಳು ಹಣ ಕೊಡುತ್ತಿರುವ ಬಗ್ಗೆ ಅರ್ಜುನ್ ತಕರಾರು ಮಾಡಿದ್ದನು.. ಇದೇ ವಿಚಾರವಾಗಿ ಆಗಾಗ ಮನಸ್ತಾಪ ಮೂಡುತಿತ್ತು.. ಇದೇ ವಿಚಾರವಾಗಿ ಮೊನ್ನೆ ಶನಿವಾರ ರಾತ್ರಿ ಶಿವಾನಿ ಹಾಗೂ ಅರ್ಜುನ್ ನಡುವೆ ಜಗಳವಾಗಿದೆ.. ಇದರಿಂದ ಮನನೊಂದ ಶಿವಾನಿ ದುಡುಕಿನ ನಿರ್ಧಾರ ಮಾಡಿಬಿಟ್ಟಳು..

ಹೌದು ಎರಡು ವರ್ಷದ ಆ ಪುಟ್ಟ ಮಗುವಿನ ಬಗ್ಗೆ ಆಲೋಚಿಸದೇ ಮನನೊಂದಿದ್ದ ಶಿವಾನಿ‌ ನಿನ್ನೆ ಬೆಳಿಗ್ಗೆ ಮಹಡಿಯಿಂದ ಜಿಗಿದು ಜೀವ ಕಳೆದುಕೊಂಡಿದ್ದಾಳೆ.. ಹೌದು ಶಿವಾನಿ ನಿನ್ನೆ ದುಡುಕಿನ ನಿರ್ಧಾರ ಮಾಡಿ ಕೊನೆಯುಸಿರೆಳೆದಿದ್ದು ಆ ಪುಟ್ಟ ಮಗುವೀಗ ತಾಯಿ ಇಲ್ಲದ ತಬ್ಬಲಿಯಾಗಿದೆ.. ಈ ಘಟನೆ ತೆಲಂಗಾಣದ ಹೈದರಾಬಾದ್ ನಲ್ಲಿ‌ ನಡೆದಿದ್ದು ಅತ್ತ ಅರ್ಜುನ್ ತಾನೇ ಸ್ವತಃ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.. ಇತ್ತ ಶಿವಾನಿ ಅವರ ತಾಯಿ ಹೇಮಾ ತನ್ನ ಮಗಳ ಈ ಸ್ಥಿತಿಗೆ ಅರ್ಜುನ್ ನೇ ಕಾರಣ.. ಅವಳನ್ನು ಓದಿಸಿದ್ದಕ್ಕೆ ಅವಳ ಮಾವನಿಗೆ ಪ್ರತಿ ತಿಂಗಳು ಹಣ ಕೊಡುತ್ತಿದ್ದಳು.. ಅದಕ್ಕೆ ಪದೇ ಪದೇ ತಕರಾರು ತೆಗೆದು ಜಗಳ ಮಾಡುತ್ತಿದ್ದ.. ಮೊನ್ನೆಯೂ ಜಗಳವಾಗಿ‌ ಮಗಳು ಈ ರೀತಿ ಮಾಡಿಕೊಂಡಿದ್ದಾಳೆ ಎಂದಿದ್ದಾರೆ..

ಗಂಡ ಹೆಂಡತಿ ನಡುವೆ ಮನಸ್ತಾಪ ಬರುವುದು ಸಹಜ.. ಅದು ಸಣ್ಣದಾಗಿದ್ದರೆ ಸರಿ ಮಾಡಿಕೊಳ್ಳಬೇಕು.. ದೊಡ್ಡದಾಗಿದ್ದರೆ ದೂರವಾಗಿ ಸ್ವಾವಲಂಭಿಯಾಗಿ ಜೀವನ ಸಾಗಿಸಬೇಕು.. ಆದರೆ ಅದನ್ನೆಲ್ಲಾ ಬಿಟ್ಟು ಈ ರೀತಿ ಯಾರೂ ಸಹ ದುಡುಕಿನ ನಿರ್ಧಾರ ಮಾಡಬಾರದು.. ಆ ಮಗು ಏನು ತಪ್ಪು ಮಾಡಿತ್ತು.. ಶಿವಾನಿ ತಂದೆ ಇಲ್ಲದೇ ಬೆಳೆದ ನೋವನ್ನು ಅನುಭಬಿಸಿದ್ದ್ ಹುಡುಗಿ.. ಆದರೆ ತನ್ನ ಮಗುವಿಗೂ ಅದೇ ಶಿಕ್ಷೆ ನೀಡಿಬಿಟ್ಟಳು.. ಅತ್ತ ತಾಯಿಯೂ ಇಲ್ಲ.. ತಂದೆ ಪೊಲೀಸರ ಪಾಲು.. ಆ ಮಗುವಿನ ಸ್ಥಿತಿ ನೆನೆದರೆ ನಿಜಕ್ಕೂ ಮನಕಲಕುತ್ತದೆ.. ಆ ತಾಯಿಯನ್ನೇ ನಂಬಿ ಭೂಮಿಗೆ ಬಂದಿದ್ದ ಆ ಪುಟ್ಟ ಕಂದನೀಗ ತಾಯಿ ಇಲ್ಲದೇ ಅವರಿವರ ಆಶ್ರಯದಲ್ಲಿ ಬೆಳೆಯಬೇಕಾದ ಪರಿಸ್ಥಿತಿ..

ದಯವಿಟ್ಟು ಯಾರೂ ಸಹ ಇಂತಹ ಕೆಲಸ ಮಾಡಬೇಡಿ.. ಆಕೆ ಬಹಳ ನೊಂದಿದ್ದಳು ನಿಜ.. ಆದರೆ ಮಗುವಿಗಿಂತ ದೊಡ್ಡದು ಯಾವುದೂ ಇಲ್ಲವೆಂದುಕೊಳ್ಳಬೇಕಿತ್ತು.. ತನ್ನನ್ನೇ ನಂಬಿರುವ ಮಗುವಿಗಾಗಿ ಗಟ್ಟಿಯಾಗಿ ಬದುಕಬೇಕಿತ್ತು.. ಜೀವನದಲ್ಲಿ ಜವಾಬ್ದಾರಿಗಳಿಗಿಂತ ದೊಡ್ಡದು ಯಾವುದೂ ಇಲ್ಲ ಎಂಬುದನ್ನು ಅರಿತಾಗಲೇ ನಾವುಗಳು ಜೀವನದ ನಿಜವಾದ ಅರ್ಥವನ್ನು ಕಂಡುಕೊಳ್ಳಲು ಸಾಧ್ಯ.. ಆ ಕಂದನಿಗೆ ಭಗವಂತ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಿ ಅಷ್ಟೇ..