ದಯವಿಟ್ಟು ಯಾರೂ ಇಂತಹ ಕೆಲಸ ಮಾತ್ರ ಮಾಡ್ಬೇಡ್ರಯ್ಯಾ..

0 views

ನಟ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ಹೇಳಿಕೊಳ್ಳಲಾಗದಷ್ಟು ನೋವನ್ನುಂಟು ಮಾಡಿದೆ.. ಸಂಬಂಧವಿಲ್ಲದ ಸ್ನೇಹಿತನಲ್ಲದ ಪರಿಚಯವೇ ಇಲ್ಲದ ನಮ್ಮಗಳಿಗೆ ಇಷ್ಟು ಸಂಕಟ ಆಗುತ್ತಿದೆ ಎಂದರೆ ಅಪ್ಪುವಿನ ಕುಟುಂಬ ಶಿವಣ್ಣ ರಾಘಣ್ಣ ಅಶ್ವಿನಿ ಅವರು ಮಕ್ಕಳು ಹೀಗೆ ಅವರುಗಳಿಗೆ ಎಷ್ಟು ನೋವಿದೆ ಎಂದು ಹೇಳಲು ಅಸಾಧ್ಯ.. ತಿಂಗಳು ಕಳೆದರೂ ಬತ್ತದೂ ಅವರ ಕಣ್ಣೀರು.. ಆದರೆ ದಯವಿಟ್ಟು ಯಾರೂ ಸಹ ಇನ್ನುಮುಂದೆ ಇಂತಹ ಕೆಲಸ ಮಾಡೋದು ಬೇಡ ಅನ್ನೋದು ನಮ್ಮಗಳ ಮನವಿ..

ಹೌದು ಅಪ್ಪು ಅಗಲಿಕೆಯ ಶೋಕ ನಿರಂತರ.. ಬಹುಶಃ ನಾವುಗಳು ಮರೆಯಾಗುವವರೆಗೂ ಆ ನೋವು ಮರೆಯಾಗದು.. ಅದಾಗಲೇ ತಿಂಗಳು ಕಳೆಯಿತು ಆದರೂ ಅ ಸತ್ಯವನ್ನು ಒಪ್ಪಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ.. ಅಪ್ಪು ಅವರ ಹೆಸರಿನಲ್ಲಿ ಸಾಕಷ್ಟು ಶ್ರದ್ಧಾಂಜಲಿ ಕಾರ್ಯಕ್ರಮಗಳು ನಾಡಿನಾದ್ಯಂತ ನೆರವೇರುತ್ತಿದೆ.. ಈಗಲೂ ಸಹ ಸಭೆ ಸಮಾರಂಭಗಳಲ್ಲಿ‌ ಮೊದಲು ಪುನೀತ್ ಅವರನ್ನು ನೆನೆದು ನಂತರ ಕಾರ್ಯಕ್ರಮಗಳನ್ನು ಶುರು ಮಾಡಲಾಗುತ್ತಿದೆ.. ಅದೇ ರೀತಿ‌ ಇಂದು ಆರ್ಯ ಈಡಿಗ ಸಂಘದವರು ಪುನೀತ್ ಅವರ ಶ್ರದ್ಧಾಂಜಲಿ‌ ಕಾರ್ಯಕ್ರಮವನ್ನು ಆಯೋಜಿಸಿದ್ದರು..

ಕಾರ್ಯಕ್ರಮಕ್ಕೆ ಶಿವಣ್ಣ ಪೂರ್ಣಿಮಾ ಅವರು ಹಾಗೂ ನಟಿ ಜಯಮಾಲ ಅವರು ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿದ್ದರು.. ಕಾರ್ಯಕ್ರಮ ಶುರುವಾಗುತ್ತಲೇ ದುಃಖ ತಡೆಯಲಾಗದೇ ಶಿವಣ್ಣ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ನಿಜಕ್ಕೂ‌ ಮನಕಲಕುವಂತಿತ್ತು.. ನಿಜಕ್ಕೂ ಯಾರೇ ಆಗಲಿ ಶಿವಣ್ಣ ಅಳುವುದನ್ನು ನೋಡುವಾಗ ದುಃಖ ಉಮ್ಮಳಿಸಿ ಬರುವಂತಾಗುತಿತ್ತು.. ಯಾರಿಗೂ ಇಂತಹ ನೋವು ಇಂತಹ ಸಂಕಟ ಇಂತಹ ದುಃಖ ಇಂತಹ ಪರಿಸ್ಥಿತಿ ಬಾರದಿರಲಿ ಎನಿಸುತಿತ್ತು.. ದುಃಖವನ್ನೆಲ್ಲಾ ಕಣ್ಣೀರ ಮೂಲಕ ಹೊರ ಹಾಕಿ ಸಾಕಷ್ಟು ಸಮಯ ಅಳುತ್ತಲೇ ಇದ್ದರು‌..

ನಂತರ ವೇದಿಕೆ ಮೇಲೆ ಅಪ್ಪು ಬಗ್ಗೆ ಮಾತನಾಡುವಾಗಲೂ ಗದ್ಗದಿತರಾದರು.. ನಾನು ಯಾವಾಗಲು ಹೇಳುವಂತೆ ನನ್ನ ತಮ್ಮ ರಾಯಲ್ ಆಗಿಯೇ ಹುಟ್ಟಿದ ರಾಯಲ್ ಆಗಿಯೇ ಬೆಳೆದ ರಾಯಲ್ ಆಗಿಯೇ ಇದ್ದ.. ಆದರೆ ಆ ದೇವರು ಇಷ್ಟು ಬೇಗ ಆ ರಾಯಲ್ಟಿಯನ್ನು ಕಿತ್ತುಕೊಂಡುಬಿಟ್ಟ ಎಂದು ಮತ್ತೆ ಕಣ್ಣೀರಿಟ್ಟರು.. ಅಪ್ಪು ಎಲ್ಲೋ ಹೋಗಿದ್ದಾನೆ ಮತ್ತೆ ಬರ್ತಾನೆ ಅಂತಲೇ ಬದುಕಬೇಕಷ್ಟೇ.. ಅವನಿಲ್ಲ ಅಂತ ಅಂದುಕೊಳ್ಳೋದು ಸಾಧ್ಯವಿಲ್ಲ ಎಂದರು.. ಪುನೀತ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ನಾವುಗಳು ಶ್ರದ್ಧಾಂಜಲಿ‌ ಕಾರ್ಯಕ್ರಮಗಳನ್ನು ಮಾಡುತ್ತೇವೆ.. ಇದು ಅಪ್ಪು ಅವರ ಮೇಲೆ ನಾವು ಇಟ್ಟಿರುವ ಗೌರವ ಪ್ರೀತಿ ನಿಜ.. ಆದರೆ

ಇಂತಹ ಕಾರ್ಯಕ್ರಮಗಳಿಗೆ ಇನ್ನು ಮುಂದೆ ಕುಟುಂಬದವರನ್ನು ಕರೆಸುವುದು ಬೇಡವೆಂಬುದು ನಮ್ಮ ವಿನಮ್ರ ಮನವಿ.. ಅವರುಗಳ ದುಃಖ ನಿಜಕ್ಕೂ ನೋಡಲಾಗದು.. ಇಂತಹ ಕಾರ್ಯಕ್ರಮಗಳಿಗೆ ಬಂದರೆ ಅವರುಗಳಿಗೆ ನೋವು ಮತ್ತೆ ಮತ್ತೆ ಕಾಡುತ್ತದೆ.. ನೋವಿನ ನಡುವೆಯೇ ಸಹಜ ಜೀವನ ಸಹಜ ದಿನಚರಿಯಲ್ಲಿ ತೊಡಗಿಕೊಂಡಿರುವ ಕುಟುಂಬದವರು ಇಂತಹ ಕಾರ್ಯಕ್ರಮಗಳಿಗೆ ಬಂದರೆ ನಿಜಕ್ಕೂ ಅವರುಗಳ ನೋವು ಮತ್ತಷ್ಟು ಹೆಚ್ಚಾಗುತ್ತದೆ.. ಕಾರಣ ಅಪ್ಪುವಿನ ಜೊತೆಯೇ ಹುಟ್ಟಿ ಬೆಳೆದವರು ಅವರು.. ಅವರಿಗೆ ಅಪ್ಪು ಜೊತೆ ಇದ್ದ ಪ್ರತಿಯೋಂದು ಕ್ಷಣವೂ ಕೂಡ ಇಂತಹ ಸಮಯದಲ್ಲಿ ಕಾಡುತ್ತದೆ.. ಎಲ್ಲವೂ ನೆನಪಿಗೆ ಬಂದಾಗ ದುಃಖ ಹೆಚ್ಚಾಗುತ್ತದೆ.. ಮತ್ತೆ ಅವರು ಈ ನೋವಿನಿಂದ ಹೊರ ಬರಲು ದಿನಗಳು ಬೇಕಾಗಬಹುದು..

ಅವರು ಈ ರೀತಿ ಕಣ್ಣೀರಾಕುವುದು ಯಾರಿಗೆ ತಾನೆ ಇಷ್ಟ ಹೇಳಿ.. ಇಂತಹ ಕಾರ್ಯಕ್ರಮಗಳಿಗೆ ಕರೆದಾಗ ಶಿವಣ್ಣ ಆಗಲಿ ಅಥವಾ ಬೇರೆ ಕುಟುಂಬದವರಾಗಲಿ ಗೌರವ ಕೊಟ್ಟು ಬರುತ್ತಾರೆ ನಿಜ.. ಆದರೆ ನಾವುಗಳು ಪುನೀತ್ ಅವರ ಮೇಲಿಟ್ಟಿರುವ ಪ್ರೀತಿ ಶಿವಣ್ಣನಿಗಾಗಲಿ ಅಥವಾ ಕುಟುಂಬದವರಿಗಾಗಲಿ ಅಪ್ಪುವಿನ ನೆನಪು ಮರುಕಳಿಸಿ ಈ ರೀತಿ ಕಣ್ಣೀರು ಹಾಕಿಸುವುದು ಬೇಡ‌.. ಅವರಿಗೆ ನೋವು ನೀಡುವುದು ಬೇಡ‌.. ಆದ್ದರಿಂದ ದಯವಿಟ್ಟು ಇನ್ನು ಮುಂದೆ ಅಪ್ಪುವಿನ ನೆನಪುನ ಕಾರ್ಯಕ್ರಮಗಳಿಗೆ ಕುಟುಂಬದವರನ್ನು ಆಹ್ವಾನಿಸದೇ ಮಾಡೋಣ.. ಇದು ವಿನಮ್ರ ಮನವಿಯಷ್ಟೇ.. ಯಾರೂ ಸಹ ಅನ್ಯತಾ ಭಾವಿಸಬೇಡಿ.. ಶಿವಣ್ಣ ಬಿಕ್ಕಿ ಬಿಕ್ಕಿ ಅಳುವ ಆ ದೃಶ್ಯ ನೋಡಿದಾಗ ಪ್ರತಿಯೊಬ್ಬರಿಗೂ ಸಹ ಹೀಗೆ ಅನ್ನಿಸುವುದು ಸಹಜ.. ಇದೊಂದು ಮನವಿ ಸ್ವೀಕರಿಸಿ..