ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನ ಜಡ್ಜ್ ಆಗಲು ಶಿವಣ್ಣ ನಿಗೆ ಕೊಡುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ..

0 views

ಕನ್ನಡ ಕಿರುತೆರೆ ನಿಜಕ್ಕೂ ಇತ್ತೀಚಿನ ದಿನಗಳಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಬೆಳೆಯುತ್ತಿದೆ.. ಅದರಲ್ಲೂ ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಒಂದಕ್ಕಿಂತ ಒಂದು ಎನ್ನುವಂತೆ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು ಪ್ರೆಕ್ಷಕರಿಗೆ ಬರಪೂರ ಮನರಂಜನೆಯಾದರೆ ಅತ್ತ ವಾಹಿನಿಯವರಿಗೆ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಆದಾಯವನ್ನೂ ಸಹ ಹೆಚ್ಚು ಮಾಡಿಕೊಳ್ಳುತ್ತಿದೆ.. ಇನ್ನು ಕಿರುತೆರೆ ಹಾಗೂ ಸಿನಿಮಾರಂಗವನ್ನು ಹತ್ತಿರದಿಂದ ಕಂಡವರಿಗೆ ಚೆನ್ನಾಗಿ ಗೊತ್ತಿರುವ ವಿಚರಾ ಎಂದರೆ ಅದು ಸಂಭಾವನೆಯ ವಿಚಾರ..

ಹೌದು ಸಿನಿಮಾ‌ ಎಂದರೆ ಕಿರುತೆರೆಗಿಂತ ದೊಡ್ಡದು.. ದೊಡ್ಡ ಯಶಸ್ಸು ಅನ್ನುವ ಮಾತಿತ್ತು.. ಈಗಲೂ ಇದೆ.. ನಿಜ, ಸಿನಿಮಾದಲ್ಲಿ ಹೀರೋ ಎನಿಸಿಕೊಳ್ಳುವುದು ಧಾರಾವಾಹಿಯ ಹೀರೋ ಎನಿಸಿಕೊಳ್ಳುವುದಕ್ಕಿಂತ ದೊಡ್ಡದು.. ಅದರೆ ಸಿನಿಮಾ ಅಂತ ಬಂದಾಗ ವರ್ಷಕ್ಕೆ ಒಂದು ದುಡ್ದಾದರೆ ಕಿರುತೆರೆಯಲ್ಲಿ ಪ್ರತಿದಿನವೂ ದುಡ್ಡು ಎನ್ನುವ ಮಾತಿದೆ.. ಹೌದು ವರ್ಷಕ್ಕೋ ಎರಡು ವರ್ಷಕ್ಕೋ ಒಂದು ಸಿನಿಮಾ ಮಾಡಿ ಗಳಿಸುವ ಹಣವನ್ನು ಧಾರಾವಾಹಿಯಲ್ಲಿ ಒಂದೇ ತಿಂಗಳಿಗೆ ಗಳಿಸಬಹುದು ಎಂಬುದು ಕಿರುತೆರೆ ಮಂದಿಗೆ ಚೆನ್ನಾಗಿ ಗೊತ್ತಿರುವ ವಿಚಾರ.. ಇನ್ನು ಕಳೆದ ಎರಡು ಮೂರು ವರ್ಷಗಳಿಂದ ನಮ್ಮ ಕನ್ನಡ ಕಿರುತೆರೆ ಇಂಡಸ್ಟ್ರಿ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು ಧಾರಾವಾಹಿಯ ಕಲವಿದರುಗಳಿಗೆ ಹಾಗೂ ಶೋಗಳ ಜಡ್ಜ್ ಗಳಿಗೂ ಸಹ ಒಂದೊಳ್ಳೆ ಸಂಭಾವನೆಯನ್ನು ನೀಡಲಾಗುತ್ತಿದೆ..

ಇನ್ನು ಅದಾಗಲೇ ಕನ್ನಡ ಸಿನಿಮಾ ಇಂಡಸ್ಟ್ರಿಯ ಸಾಕಷ್ಟು ಹಿರಿಯ ಕಲಾವಿದರು ಜೀವನ ನಿರ್ವಹಣೆಗಾಗಿ ಕಿರುತೆರೆಯಲ್ಲಿ ತೊಡಗಿ ಕೊಂಡು ವರ್ಷಗಳೇ ಕಳೆದವು.. ಇತ್ತ ಅನಿರುದ್ಧ್ ಅಭಿಜಿತ್ ಸೇರಿದಂತೆ ಸಾಕಷ್ಟು ಹೀರೋಗಳು ಸಹ ಕಿರುತೆರೆಯಲ್ಲಿ ಮಿಂಚುತ್ತಾ ಕೈತುಂಬಾ ಸಂಭಾವನೆಯನ್ನೂ ಸಹ ಪಡೆದುಕೊಳ್ಳುತ್ತಿದ್ದಾರೆ.. ಇನ್ನು ಇತ್ತ ರಿಯಾಲಿಟಿ ಶೋಗಳ ವಿಚಾರಕ್ಕೆ ಬಂದರೆ ಸ್ಟಾರ್ ಜಡ್ಜ್ ಗಳನ್ನು ಕರೆಸುತ್ತಾ ತಮ್ಮ ಶೋ ಯಶಸ್ಸು ಪಡೆದುಕೊಳ್ಳುತ್ತಿದೆ..

ಇನ್ನು ಮೊನ್ನೆ ಮೊನ್ನೆಯಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಶುರುವಾದ ಡ್ರಾಮಾ ಜೂನಿಯರ್ಸ್ ಶೋಗೆ ರವಿಚಂದ್ರನ್ ಹಾಗೂ ರಚಿತಾ ರಾಮ್ ಅವರು ಜಡ್ಜ್ ಗಳಾಗಿ ಎಂಟ್ರಿ ಕೊಟ್ಟಿದ್ದರು..‌ಇದೀಗ ಅದೇ ಸಾಲಿಗೆ ಮತ್ತೊಬ್ಬ ಸ್ಟಾರ್ ನಟನ ಸೇರ್ಪಡೆಯಾಗಿದ್ದು ಶಿವಣ್ಣ ಶೋವೊಂದರ ಜಡ್ಜ್ ಆಗುತ್ತಿದ್ದಾರೆ.. ಹೌದು ಶಿವಣ್ಣ ಸಧ್ಯ ಅಪ್ಪು ಅಗಲಿಕೆಯ ನೋವಿನ ಜೊತೆಗೇ ನಮ್ಮ ಮುಂದಿನ ಜೀವನ ಸಾಗಬೇಕು ಎಂದಿದ್ದು.. ಆ ನೋವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.. ಶಕ್ತಿಧಾಮದ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದು ಇದೀಗ ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಜಡ್ಜ್ ಆಗಿ ಬರುತ್ತಿದ್ದು ಕಿರುತೆರೆಗೆ ಕಾಲಿಡುತ್ತಿದ್ದಾರೆ..

ಹೌದು ಅತ್ತ ಜೀ ಕನ್ನಡ ಬಿಟ್ಟು ಹೋದ ವಿಜಯ್ ರಾಘವೇಂದ್ರ ಅವರು ರಾಜೇಶ್ ಕೃಷ್ಣನ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಜಡ್ಜ್ ಗಳಾದರೆ ಇತ್ತ ಜೀ ಕನ್ನಡ ವಾಹಿನಿ ನಾವೇನು‌ ಕಡಿಮೆ ಎಂಬಂತೆ ರವಿಚಂದ್ರನ್ ರಚಿತಾ ರಾಮ್ ರನ್ನು ಕರೆತಂದು ಡ್ರಾಮಾ ಜೂನಿಯರ್ ಶೋನ ತೀರ್ಪುಗಾರರನ್ನಾಗಿ ಮಾಡಿತ್ತು.. ಇದೀಗ ಶಿವಣ್ಣ ನನ್ನು ಕಿರುತೆರೆಗೆ ಕರೆತಂದು ಡ್ಯಾನ್ಸ್ ಶೋ ನ ಜಡ್ಜ್ ಆಗಿ ಮಾಡಿದ್ದಾರೆ.. ಇನ್ನು ಸ್ಯಾಂಡಲ್ವುಡ್ ನ ಸ್ಟಾರ್ ಕಲಾವಿದರುಗಳು ಈ ರೀತಿ ಕಿರುತೆರೆಗೆ ಬಂದಾಗ ಗೌರವ ಪೂರ್ವಕವಾಗಿ ಅವರಿಗೆ ದುಬಾರಿ ಸಂಭಾವನೆ ನೀಡೋದು ಉಂಟು.. ಅದೇ ರೀತಿ ರವಿಚಂದ್ರನ್ ಹಾಗೂ ರಚಿತಾ ರಾಮ್ ಅವರಿಗೂ ನೀಡಲಾಗಿತ್ತು.. ಇದೀಗ ಶಿವಣ್ಣ ಅವರಿಗೂ ಸಹ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ದುಬಾರಿ ಸಂಭಾವನೆಯನ್ನೇ ನೀಡಲಗುತ್ತಿದೆ..

ಹೌದು ಸಾಕಷ್ಟು ಜಡ್ಜ್ ಗಳಿಗೆ ವಾರದ ಸಂಭಾವನೆ ಮಾತನಾಡೋದು ಉಂಟು.. ಆದರೆ ಶಿವಣ್ಣ ಅವರಿಗೆ ಸಂಪೂರ್ಣ ಶೋಗೆ ಸಂಭಾವನೆ ನೀಡಲಾಗುತ್ತಿದ್ದು ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ.. ಹೌದು ಮೂರರಿಂದ ನಾಲ್ಕು ತಿಂಗಳುಗಳ ಕಾಲ ಶೋ ನಡೆಯಲಿದ್ದು ಸಂಪೂರ್ಣ ಶೋನಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.. ಅದಾಗಲೇ ಶಿವಣ್ಣನ ಪ್ರೋಮೋಗಳು ಬಿಡುಗಡೆಯಾಗಿದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.. ಮುಂದಿನ ವಾರದಿಂದ ಶೋ ಶುರುವಾಗಲಿದ್ದು ಮತ್ತೊಂದು ದಾಖಲೆಯ ಟಿ ಆರ್ ಪಿ ಗಾಗಿ ಜೀ ವಾಹಿನಿ ಸಕಲ ಸಿದ್ಧತೆ ಮಾಡಿಕೊಂಡಿದೆ ಎನ್ನಬಹುದು..