ತೊಟ್ಟಿಲಲ್ಲಿ ಮಲಗಿ ಮಗುವಂತಾದ ಶಿವಣ್ಣ.. ಶಿವಣ್ಣ ಎತ್ತಿಕೊಂಡಿರುವ ಈ ಮಕ್ಕಳು ನಿಜಕ್ಕೂ ಯಾರು ಗೊತ್ತಾ..

0 views

ಮನುಷ್ಯ ವಯಸ್ಸಾಗುತ್ತಿದ್ದಂತೆ ಮಗುವಿನಂತೆ ಆಗಿಬಿಡುತ್ತಾನೆ ಎಂಬ‌ ಮಾತು ನಿಜಕ್ಕೂ ಸತ್ಯ.. ವಯಸ್ಸಿನಲ್ಲಿ ನಾವುಗಳು ಕೋಪ ಹಟ ಛಲ ಎಂದು ಬದುಕುತ್ತೇವೆ.. ಆದರೆ ನಲವತ್ತು ಐವತ್ತು ದಾಟುತ್ತಿದ್ದಂತೆ ಮನಸ್ಸು ಮಗುವಿನಂತಾಗಿ ಬಿಡುತ್ತದೆ.. ಸಂತೋಷ ನೆಮ್ಮದಿ ಮಾತ್ರ ಸಾಕೆನಿಸುತ್ತದೆ.. ಅದೇ ರೀತಿ ಶಿವಣ್ಣ ಮಕ್ಕಳ ಜೊತೆ ಮಗುವಿನಂತಾಗಿರೋದನ್ನು ಕಂಡರೆ ಶಿವಣ್ಣ ತನ್ನ ನೋವು ಮರೆಯಲು ಎಷ್ಟೆಲ್ಲಾ ಪ್ರಯತ್ನ ಪಡುತ್ತಿದ್ದಾರೆನಿಸುತ್ತದೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೊಂದು ವೈರಲ್ ಆಗಿದ್ದು ಶಿವಣ್ಣ ಇಬ್ಬರು ಕಂದಮ್ಮಗಳ ಜೊತೆ ತೊಟ್ಟಿಲಲ್ಲಿ ಮಲಗಿ ಆಡುತ್ತಿರುವ ವೀಡಿಯೋ ಇದೀಗ ಮನಮುಟ್ಟುವಂತಿದೆ..

ಹೌದು ಶಿವಣ್ಣನ ಮುಗ್ಧತೆ ಕಂಡು ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.. ಅಷ್ಟಕ್ಕೂ ಈ ಮಕ್ಕಳು ಯಾರು ಶಿವಣ್ಣನ ಈಗಿನ ವೀಡಿಯೋನಾ ಇದು ಎನ್ನುವ ಕುತೂಹಲ ಇದೆ.. ಹೌದು ಇದು ಮೊನ್ನೆ ಮೊನ್ನೆಯಷ್ಟೇ ನಡೆದ ನಾಮಕರಣ ಸಮಾರಂಭದ ವೀಡಿಯೋ ಇದಾಗಿದ್ದು ಶಿವಣ್ಣ ಮಕ್ಕಳ ಜೊತೆ ಮಗುವಾಗಿದ್ದು ಇಬ್ಬರೂ ಮಕ್ಕಳನ್ನು ಅಪ್ಪಿಕೊಂಡು ತೊಟ್ಟಿಲಲ್ಲಿ ಮಲಗಿದ್ದಾರೆ.. ಹೌದು ಎಲ್ಲರಿಗೂ ತಿಳಿದಿರುವಂತೆ ಅಪ್ಪು ಅಗಲಿದ ಬಳಿಕ ಆ ಕುಟುಂಬ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು ಆ ನೋವನಂತೂ ಮರೆಯಲು ಸಾಧ್ಯವಿಲ್ಲ..

ಆದರೆ ಆ ನೋವಿನ ಜೊತೆಯೇ ಗಟ್ಟಿಯಾಗಿ ಬದುಕುವ ಗಟ್ಟಿತನವನ್ನಾದರೂ ಆ ಭಗವಂತ ಅವರಿಗೆ ನೀಡಲಿ ಎನ್ನುವ ಪ್ರಾರ್ಥನೆ ಎಲ್ಲರದ್ದೂ ಆಗಿದೆ.. ಅತ್ತ ಶಿವಣ್ಣ ಕೂಡ ಆ ನೋವುಗಳನ್ನು ಮರೆಯಲು ಸಾಕಷ್ಟು ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.. ಅತ್ತ ಸಿನಿಮಾ ಕೆಲಸಗಳಲ್ಲಿಯೂ ಶಿವಣ್ಣ ಭಾಗಿಯಾದರೆ.. ಇಇತ್ತ ತಿಂಗಳಿಗೆ ನಾಲ್ಕು ಬಾರಿ ಮೈಸೂರಿನ ಶಕ್ತಿದಾಮಕ್ಕೆ ಆಗಮಿಸಿ ಮಕ್ಕಳ ಜೊತೆ ಸಮಯ ಕಳೆದು ಹೋಗುತ್ತಿದ್ದಾರೆ.. ಅಷ್ಟೇ ಅಲ್ಲದೇ ಶಕ್ತಿದಾಮ ಆಶ್ರಮದಲ್ಲಿನ ಹೆಣ್ಣು ಮಕ್ಕಳಿಗೆ ಗೀತಕ್ಕ ಅಡುಗೆ ಕ್ಲಾಸ್ ಗಳನ್ನೂ ಸಹ ತೆಗೆದುಕೊಳ್ಳುತ್ತಿದ್ದು ಮಡದಿಗೆ ಶಿವಣ್ಣ ಸಾಥ್ ನೀಡುತ್ತಿದ್ದಾರೆ..

ಇನ್ನು ಅದೆಲ್ಲದರ ಜೊತೆಗೆ ಶಿವಣ್ಣ ಸಿನಿಮಾ ಸಂಬಂಧಪಟ್ಟ ಸಾಕಷ್ಟು ಕಾರ್ಯಕ್ರಮದಲ್ಲಿಯೂ ಭಾಗಿಯಾಗುತ್ತಿದ್ದು ಮೊನ್ನೆಯಷ್ಟೇ ಕೆಜಿಎಫ್ ಸಿನಿಮಾದ ಟ್ರೈಲರ್ ಬಿಡುಗಡೆಯನ್ನೂ ಸಹ ಶಿವಣ್ಣನೇ ಮಾಡಿದ್ದು ಸಿನಿಮಾ ಮಂದಿ ಶಿವಣ್ಣನ ಜೊತೆ ನಾವಿದ್ದೇವೆ ಅಂತ ನಿಂತಿರೋದು ನಿಜಕ್ಕೂ ಮೆಚ್ಚುವ ವಿಚಾರ.. ಇನ್ನು ಇದೀಗ ನಾಮಕರಣದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿರುವ ಶಿವಣ್ಣನ ಫೋಟೋ ವೀಡಿಯೋಗಳು ವೈರಲ್ ಆಗಿವೆ..

ಹೌದು ಮಗು ಮನಸ್ಸಿನ ಶಿವಣ್ಣ ಮಕ್ಕಳ ಜೊತೆ ತಾವೂ ಸಹ ಮಗುವಾಗಿ ಬಿಡುತ್ತಾರೆ ಎಂಬುದಕ್ಕೆ ಉದಾಹರಣೆ ಎಂಬಂತೆ ಈ ವೀಡಿಯೋ ಕಾಣುತ್ತಿದೆ.. ಹೌದು ಈ ಮಕ್ಕಳು ಮತ್ಯಾರೂ ಅಲ್ಲ.. ಶಿವಣ್ಣ ಅವರ ಆಪ್ತ ಸಂಬಂಧಿಕರ ಮಕ್ಕಳು.. ಹೌದು ಸಂಬಂಧಿಕರ ಮನೆಯ ಪುಟ್ಟ ಮಕ್ಕಳ ತೊಟ್ಟಿಲ ಶಾಸ್ತ್ರ ಹಾಗೂ ನಾಮಕರಣದಲ್ಲಿ ಪಾಲ್ಗೊಂಡಿದ್ದ ಶಿವಣ್ಣ ನಂತರ ಕಾರ್ಯಕ್ರಮ ಮುಗಿದ ಬಳಿಕ ಸಂಬಂಧಿಕರೆಲ್ಲಾ ಕೂತು ಸನಯ ಕಳೆಯುತ್ತಿರುವಾಗ ಆ ಅವಳಿ ಜವಳಿ ಮಕ್ಕಳನ್ನು ಶಿವಣ್ಣ ಆಡಿಸುತ್ತಿದ್ದರು‌. ನಂತರ ತೊಟ್ಟಿಲಿನಲ್ಲಿ ತಾವೇ ಮಗುವಂತೆ ಮಲಗಿ ಮಕ್ಕಳಿಬ್ಬರನ್ನು ತಮ್ಮ ಮೇಲೆ ಮಲಗಿಸಿಕೊಂಡು ಲಾಲಿ ಹಾಡುತ್ತಿದ್ದದ್ದು ಅಲ್ಲಿದ್ದವರಿಗೆ ಶಿವಣ್ಣನ ಮನಸ್ಸು ಎಷ್ಟು ಮಗುವಿನಂತೆ ಎನಿಸಿತ್ತು.‌.

ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೀಡಿಯೋಗಳು ವೈರಲ್ ಆಗಿದ್ದು ಶಿವಣ್ಣನನ್ನು ನೋಡಿದ ಜನ ಶಿವಣ್ಣ ನೋವನ್ನು ಮರೆತು ಸದಾ ಹೀಗೆ ನಗುನಗುತ್ತಾ ಇದ್ದುಬಿಡಲಿ‌ ಎಂದು ಹಾರೈಸಿದ್ದಾರೆ.. ಅಷ್ಟೇ ಅಲ್ಲದೇ ಆ ಮಕ್ಕಳನ್ನು ನೀಡಿದ ಜನ ಆದಷ್ಟು ಬೇಗ ಅಪ್ಪು ಅದೇ ಕುಟುಂಬದಲ್ಲಿ ಹುಟ್ಟಿ ಬರಲಿ ಎಂದಿದ್ದಾರೆ.. ನೋವು ಶಾಶ್ವತ ನಿಜ.. ಆದರೆ ಅದೆಲ್ಲವನ್ನು ಮೀರಿ ಭಗವಂತ ಆ ಕುಟುಂಬಕ್ಕೆ ಆ ನೋವನ್ನೆಲ್ಲಾ ಮರೆಯುವ ಶಕ್ತಿ ನೀಡಿಬಿಡಲಿ.. ಅಶ್ವಿನಿ ಅವರು ಹಾಗೂ ಕುಟುಂಬದ ಎಲ್ಲರೂ ಸಹ ಸದಾ ಸಂತೋಷವಾಗಿರುವಂತಾಗಲಿ..