ತುಂಬಿದ ವೇದಿಕೆಯಲ್ಲಿ‌ ಶಂಕರ್ ನಾಗ್ ಅವರ ಬಗ್ಗೆ ಶಿವಣ್ಣ ಆಡಿರೋ ಮಾತು ನೋಡಿ..

0 views

ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಎಂಭತ್ತರ ದಶಕವನ್ನು‌ ಸುವರ್ಣ ಯುಗ ಎನ್ನಬೇಕು.. ಡಾ ರಾಜ್ ಕುಮಾರ್.. ಡಾ. ವಿಷ್ಣುವರ್ಧನ್.. ಶಂಕರ್ ನಾಗ್.. ಅಂಬರೀಶ್ ಅಷ್ಟೇ ಅಲ್ಲ ಇನ್ನೂ ಅನೇಕ ದಿಗ್ಗಜರನ್ನು ತೆರೆ ಮೇಲೆ ಕಂಡ ಯುಗವದು.. ಒಂದು ಕಡೆ ಅಣ್ಣಾವ್ರು ವಿಷ್ಣುವರ್ಧನ್ ಅವರು ಅಂಬರೀಶ್ ಅವರು ನಟನೆಯ ಕಡೆ ಗಮನ ಕೊಟ್ಟರೆ ಶಂಕರ್ ನಾಗ್ ಅವರು ಮಾತ್ರ ನಟನೆಗಿಂತ ಹೆಚ್ಚಾಗಿ ಚಿತ್ರರಂಗದ ಬಗ್ಗೆ ಬೇರೆಯದ್ದೇ ಆಲೋಚನೆಯಲ್ಲಿದ್ದರು.. ಆಗಿನ ಕಾಲಕ್ಕೆ ಅವರ ಬುದ್ಧಿವಂತಿಕೆ ನೋಡಿ ಬೆರಗಾದ ಮಂದಿ ಲೆಕ್ಕವಿಲ್ಲ.. ಆದರೆ ಬಹುಶಃ ವಿಧಿಗೂ ಅಷ್ಟು ಬುದ್ಧಿವಂತನನ್ನು ಪ್ರತಿಭಾವಂತನನ್ನು ಹೆಚ್ಚು ದಿನ ಭೂಮಿಯ ಮೇಲೆ ಉಳಿಸಲು ಇಷ್ಟವಿರಲಿಲ್ಲವೇನೋ.. ಈಗ ಹೇಗೆ ಅಪ್ಪು ನಮ್ಮೆಲ್ಲರಿಂದ ದೂರಾದರೋ.. ಅದೇ ರೀತಿ ಆಗಿನ ಸಮಯದಲ್ಲಿ ಶಂಕರ್ ನಾಗ್ ಅವರು ಅತ್ಯಂತ ಚಿಕ್ಕ ವಯಸ್ಸಿಗೆ ದೊಡ್ಡ ಹೆಸರು‌ ಮಾಡಿ ಕೊನೆಗೆ ಅಕಾಲಿಕವಾಗಿ ಅಗಲಿ ಹೊರಟು ಹೋದರು..

ಇನ್ನು ಶಂಕರ್ ನಾಗ್ ಅವರನ್ನು ಹತ್ತಿರದಿಂದ ಕಂಡ ಸಾಕಷ್ಟು ಕಲಾವಿದರುಗಳು ಸಿನಿಮಾ ಮಂದಿ ಈಗಲೂ ಸಹ ಅವರ ಬಗ್ಗೆ ಮಾತನಾಡುವಾಗ ಮೈ ರೋಮಾಂಚನವಾಗುತ್ತದೆ.. ಈ ಹಿಂದೆ ರಾಜ್ ಕುಮಾರ್ ಅವರು ವಿಷ್ಣುವರ್ಧನ್ ಅವರು ಅಂಬರೀಶ್ ಅವರನ್ನೂ ಸೇರಿದಂತೆ ಸಾಕಷ್ಟು ದಿಗ್ಗಜರು ಶಂಕ್ರಣ್ಣನ ಬಗ್ಗೆ ಮಾತನಾಡಿದ್ದುಂಟು.. ಅವರ ಜೊತೆಗಿನ ಅನುಭವಗಳನ್ನು ಹಂಚಿಕೊಂಡು ಆತ ಇನ್ನೂ ಇರಬೇಕಿತ್ತು.. ಇದ್ದಿದ್ದರೆ ನಮ್ಮ ಚಿತ್ರರಂಗ ಇನ್ನೂ ಎತ್ತರಕ್ಕೆ ಬೆಳೆಯುತಿತ್ತು ಎಂದಿದ್ದರು.. ಇನ್ನು ಇದೀಗ ಇದೇ ಶಂಕ್ರಣ್ಣನ‌ ಬಗ್ಗೆ ಇದೀಗ ಶಿವಣ್ಣ ಡಿಕೆಡಿ ವೇದಿಕೆಯಲ್ಲಿ‌‌ ಮಾತನಾಡಿದ್ದಾರೆ..

ಹೌದು ಶಿವಣ್ಣ ಸಧ್ಯ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಒಂದು ರೀತಿ‌ ಕಳೆ ಬಂದಿದೆ ಎನ್ನಬಹುದು.. ತಮ್ಮ ನೋವ ಮರೆಯಲು ಸಾಕಷ್ಟು ಕೆಲಸಗಳಲ್ಲಿ ತೊಡಗಿರುವ ಶಿವಣ್ಣ ಈ ಡಿಕೆಡಿ ಶೋಗೆ ಜಡ್ಜ್ ಆಗಿ ಬಂದರು.. ಸ್ಪರ್ಧಿಗಳ ಡ್ಯಾನ್ಸ್ ಮೂಲಕ ತಮ್ಮ ನೋವ ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಸ್ಟೇಜ್ ಗೆ ಒಂದು ರೀತಿ ಎನರ್ಜಿ ತಂದಿದ್ದಾರೆಂದರೆ ತಪ್ಪಾಗಲಾರದು.. ಅದರಲ್ಲೂ ಸ್ಪರ್ಧಿಗಳನ್ನು ಅವರು ಪ್ರೋತ್ಸಾಹಿಸುವ ರೀತಿ.. ಬೆಂಬಲ ನೀಡಿ ಮಾತನಾಡುವ ಶೈಲಿ ನಿಜಕ್ಕೂ ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಳ್ಳುವ ಅವರ ಗುಣ ಎಲ್ಲರಿಗೂ ಇಷ್ಟವಾಗುತ್ತದೆ..

ಇನ್ನು ಈ ವಾರ ವೇದಿಕೆ ಮೇಲೆ ನಮ್ಮ ಕನ್ನಡ ಇಂಡಸ್ಟ್ರಿಯ ಲೆಜೆಂಡ್ ಶಂಕ್ರಣ್ಣನ ಆಗಮನವಾಗಿತ್ತು.. ಹೌದು ಮಕ್ಕಳಿಬ್ಬರು ಶಂಕರ್ ನಾಗ್ ಅವರನ್ನು ಅವರ ಡ್ಯಾನ್ಸ್ ಮೂಲಕ ವೇದಿಕೆಗೆ ಕರೆತಂದರು.. ಜೊತೆಯಲಿ ಜೊತೆ ಜೊತೆಯಲಿ ಹಾಡಿಗೆ ಹೆಜ್ಜೆ ಹಾಕಿದ ಮಕ್ಕಳು ಶಂಕ್ರಣ್ಣನನ್ನು ನೆನಪಿಸಿದರು.. ಇನ್ನು ವೇದಿಕೆಯಲ್ಲಿ ಶಿವಣ್ಣ ಶಂಕ್ರಣ್ಣನ ಜೊತೆಗಿನ ಒಡನಾಟದ ಬಗ್ಗೆ ಹಂಚಿಕೊಂಡಿದ್ದು ವಿಶೇಷವಾಗಿತ್ತು.. ಹೌದು ಶಂಕ್ರಣ್ಣ ತಾನೇನು ಎಂಬುದನ್ನು ಇದ್ದ ಕೆಲವೇ ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ತೋರಿದ್ದರು.. ಅಂತಹ ಅದ್ಭುತ ಸಿನಿಮಾಗಳಲ್ಲಿ‌ ಒಂದು ಒಂದು ಮುತ್ತಿನ ಕತೆ.. ಅಣ್ಣಾವ್ರು ಅಭಿನಯಿಸಿದ್ದ ಆ ಸಿನಿಮಾ‌ ಅವರ ಹೋ ಬ್ಯಾನರ್ ಅಂದರೆ ಪಾರ್ವತಮ್ಮ ರಾಜ್ ಕುಮಾರ್ ಅವರೇ ನಿರ್ಮಾಪಕಿಯಾಗಿದ್ದರು..

ಆ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ‌ ಅಪ್ಪು ಶಿವಣ್ಣ ರಾಘಣ್ಣ ಎಲ್ಲರೂ ಸಹ ಶಂಕರ್ ನಾಗ್ ಅವರ ಜೊತೆ ಸಮಯ ಕಳೆಯುವ ಅವಕಾಶ ದೊರೆತಿತ್ತು.. ಅದೇ ರೀತಿ ಶಂಕರ್ ನಾಗ್ ಅವರ ಜೊತೆಗೆ ಶಿವಣ್ಣ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ.. “ನಾನು ಶಂಕ್ರಣ್ಣನನ್ನು ಮೊದಲು ನೋಡಿದ್ದು ಒಂದು ಮುತ್ತಿನ ಕತೆ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ.. ಆಗ ಕಾರವಾರದಲ್ಲಿ ಚಿತ್ರೀಕರಣ ನಡೀತಾ ಇತ್ತು.. ನಾನು ಸಹ ಅಲ್ಲಿಗೆ ಹೋಗಿದ್ದೆ.. ಅವರ ಜೊತೆ ಇಪ್ಪತ್ತು ದಿನಗಳು‌ ಒಟ್ಟಿಗೆ ಕಳೆದೆ.. ನನ್ನ ನೀವೆಲ್ಲರೂ ಎನರ್ಜಿ ಎನರ್ಜಿ ಅಂತೀರಾ.. ನೀವೆಲ್ಲಾ ಅವರನ್ನ ನೋಡ್ಬೇಕಿತ್ತು.. ನನ್ನದೇನು ಎನರ್ಜಿ.. ನನಗಿಂತ ಮೂರರಷ್ಟು ಎನರ್ಜಿ ಅವರಲ್ಲಿತ್ತು.. ಅವರಂತ ವ್ಯಕ್ತಿಯನ್ನು ನಾನು ಜೀವನದಲ್ಲಿ ಯಾರನ್ನೂ ನೋಡಿಲ್ಲ.. ಅಷ್ಟು ಎನರ್ಜಿ.. ಅಷ್ಟು ಬುದ್ಧಿವಂತಿಕೆ..

ದಿನದ ಇಪ್ಪತ್ತ ನಾಲ್ಕು ಗಂಟೆ ಕೆಲಸ ಮಾಡಿ ಅಂದ್ರೂ ಸಹ ಮಾಡ್ತಾ ಇದ್ರು.. ಯಾವಾಗ್ಲೂ ಆಕ್ಟೀವ್ ಆಗಿರ್ತಿದ್ರು.. ಆ ಇಪ್ಪತ್ತು ದಿನವನ್ನ ನಾನು ನನ್ನ ಜೀವಮಾನದಲ್ಲಿ ಮರೆಯೋದಿಲ್ಲ.. ಅದು ನನ್ನ ಜೀವನದ ಬಹಳ ಅಮೂಲ್ಯವಾದ ದಿನಗಳು.. ಬಹಳಷ್ಟು ಕಲಿತಿದ್ದೀನಿ.. ಆಗ ನಾನಿನ್ನು ಆಕ್ಟರ್ ಆಗಿರಲಿಲ್ಲ.. ಫಿಲಂ ಇನ್ಸ್ಟಿಟ್ಯೂಟ್ ನಲ್ಲಿದ್ದೆ.. ಆ ಸಮಯದಲ್ಲಿ ಕಾರವಾರದಲ್ಲಿ ಚಿತ್ರೀಕರಣ‌ ನಡೀತಾ ಇತ್ತು.. ಆಗ ಅಲ್ಲಿಗೆ ಹೋಗಿ ಇಪ್ಪತ್ತು ದಿನ ಅವರ ಜೊತೆ ಕಳೆಯೋ ಅವಕಾಶ ದೊರೆಯಿತು.. ಅದು ನನ್ನ್ ಪುಣ್ಯ ಅಂದ್ರೂ ತಪ್ಪಾಗಲ್ಲ ಎಂದು ಒಂದಿಷ್ಟೂ ಅಹಂಕಾರವಿಲ್ಲದೇ ಶಂಕ್ರಣ್ಣನ ಬಗ್ಗೆ ಮನಬಿಚ್ಚಿ ಮಾತನಾಡಿದರು.. ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಕಂಡ ಅದ್ಭುತ ತಂತ್ರಜ್ಞ ಎಂದೂ ಮರೆಯಲಾಗದ ಶಂಕ್ರಣ್ಣನಿಗೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು..