ಹೆಚ್ಚು ಹಿಂಸೆ ಕೊಡಬೇಡಿ ಎಂದು ಕೇಳಿಕೊಂಡರು.. ಶಿವರಾಂ ಅವರ ಕೊನೆ ಕ್ಷಣದಲ್ಲಿ ಜೊತೆಯಲಿದ್ದ ವೈದ್ಯರು ಕಣ್ಣೀರಿಟ್ಟು ಹೇಳಿದ ಮಾತು ನೋಡಿ..

0 views

ಕನ್ನಡದ ಹಿರಿಯ ನಟ, ಸ್ಯಾಂಡಲ್ವುಡ್ ನ ಮೊದಲ ಪೀಳಿಗೆಯವರಾದ ಹಿರಿಯ ನಟ ಶಿವರಾಂ ಅವರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ.. ಎಂಭತ್ತ ಮೂರು ವರ್ಷ ಸಾರ್ಥಕ ಜೀವನದ ಸಂತೃಪ್ತಿ ಅವರಿಗಿರಬಹುದು.. ಆದರೆ ಶಿವರಾಂ ಅವರ ಜೊತೆ ಒಡನಾಟವಿದ್ದವರು.. ಅವರನ್ನು ಹತ್ತಿರದಿಂದ ಕಂಡವರು ಎಲ್ಲರೂ ಸಹ ಶಿವರಾಂ ಅವರು ಮತ್ತಷ್ಟು ದಿನ ನಮ್ಮೊಟ್ಟಿಗೆ ಇರಬೇಕಿತ್ತೆಂದು ಕಂಬನಿ ಮಿಡಿದಿದ್ದಾರೆ.. ಆದರೆ ಕಾಲ ಮಿಂಚಿ ಹೋಯಿತಷ್ಟೇ.. ಶಿವರಾಂ ಅವರು ಇಂದು ಕೊನೆಯುಸಿರೆಳೆದುಬಿಟ್ಟರು.. ಆದರೆ ಅವರ ಜೊತೆ ಕೊನೆ ಕ್ಷಣದ ವರೆಗೂ ಇದ್ದ ವೈದ್ಯರ ಮಾತುಗಳು ನಿಜಕ್ಕೂ‌ ಕಣ್ಣೀರು ತರಿಸುತ್ತದೆ.. ಅದರಲ್ಲೂ ಶಿವರಾಂ ಅವರ ಬಗ್ಗೆ ಮಾತನಾಡುತ್ತಾ ವೈದ್ಯರೇ ಕಣ್ಣೀರಿಟ್ಟು ದುಃಖದಿಂದ ಮಾತನಾಡಿದರು..

ಹೌದು ಎಂಭತ್ತ ಮೂರು ವರ್ಷ ವಯಸ್ಸಿನಲ್ಲಿಯೂ ಸಹ ಸದಾ ಲವಲವಿಕೆಯಿಂದಿದ್ದ ಶಿವರಾಂ ಅವರು ಈಗಲೂ ತಮ್ಮ ಎಲ್ಲಾ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು.. ಅವರ ಕಾರ್ ಸಹ ಅವರೇ ಡ್ರೈವ್ ಮಾಡುತ್ತಿದ್ದರಂತೆ.. ಆದರೆ ಕೆಲ ದಿನಗಳ ಹಿಂದೆ ಕಾರ್ ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ಸೇರಿದ್ದರು.. ಚಿಕಿತ್ಸೆ ಪಡೆದು ಮರಳಿದ್ದ ಶಿವರಾಂ ಅವರು ತಮ್ಮ ಮನೆಯ ಟೆರೆಸ್ ಮೇಲೆ ಅಯ್ಯಪ್ಪ ಸ್ವಾಮಿ ಪೂಜೆ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದರು.. ಎರಡು ದಿನದ ಹಿಂದೆ ಅಲ್ಲಿ ಪೂಜೆ ಸಲ್ಲಿಸಲು ತೆರಳಿದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.. ಒಂದೂವರೆ ಗಂಟೆಗಳ ನಂತರ ವಿಚಾರ ತಿಳಿದು ಮಗ ಹಾಗೂ ಮೊಮ್ಮಗಳು ಆಸ್ಪತ್ರೆಗೆ ಸೇರಿಸಿದ್ದರು..

ಆದರೆ ತೀವ್ರವಾಗಿ ಒಳ ಪೆಟ್ಟು ಬಿದ್ದಿದ್ದ ಕಾರಣ ಅವರು ಉಳಿಯುವುದು ಸಂಶಯವೆಂದಿದ್ದರು.. ಆದರೆ ಕೊನೆ ಕ್ಷಣದವರೆಗೂ ಏನಾದರೂ ಪವಾಡ ನಡೆಯಬಹುದೆಂದು ಕಾದರು.. ಆದರೆ ಪ್ರಯೋಜನವಾಗಲಿಲ್ಲ..‌ಆದರೆ ಶಿವರಾಂ ಅವರ ಜೊತೆ ಕೊನೆ ಕ್ಷಣದ ವರೆಗೂ ಜೊತೆಯಲಿದ್ದ ವೈದ್ಯರಾದ ಮೋಹನ್ ಅವರು ಮಾತ್ರ ವಿಚಾರ ಹೇಳುವ ಮುನ್ನವೇ ಕಣ್ಣೀರಿಟ್ಟರು.. ಹೌದು “ಇವತ್ತಿನವರೆಗೂ ಏನಾದರೂ ಮಿರಾಕಲ್ ನಡೆಯುತ್ತದೆ ಅಂತ ಆಶಾಭಾವನೆಯಲ್ಲಿ ಇದ್ದೆವು.. ಆದರೆ ಈಗ ಯಾಕೋ ಮಿರಾಕಲ್ ನಡೆಯಲ್ಲ ಅನ್ನಿಸ್ತಾ ಇದೆ.. ಯಾಕಂದ್ರೆ ಬ್ರೇನ್ ಇಂದು ಬಹಳ ಡ್ಯಾಮೇಜ್ ಆಗಿದೆ.. ತುಂಬಾ ಬಿಪಿ ಸಪೋರ್ಟ್ ನಲ್ಲಿಯೇ ಇದ್ದಾರೆ‌. ಇವತ್ತು ನಿಮ್ಮ‌ ಮುಂದೆ ಬಂದು ನಿಲ್ಲೋದೆ ನನಗೆ ಕಷ್ಟ ಆಗ್ತಿದೆ.. ಅವರು ನಮ್ಮ ಸಂಬಂಧಿಕರೂ ಕೂಡ.. ಜೊತೆಗೆ ಒಬ್ಬ ಡಾಕ್ಟರ್ ಆಗಿಯೂ ಬಹಳ ಕಷ್ಟ ಆಗ್ತಾ ಇದೆ..

ಅದಾಗಲೇ ಮಾಕ್ಸಿಮಮ್ ಸಪೋರ್ಟ್ ನಲ್ಲಿದ್ದಾರೆ ಇವಾಗ.. ಇನ್ನು ಮಿರಾಕಲ್ ಆಗತ್ತೆ ಅನ್ನೋ ಭಾವನೆಗಳು ಕಡಿಮೆ ಆಗ್ತಾ ಇದೆ‌‌.. ಯಾಕಂದ್ರೆ ಇನ್ನು ಏನೇ ಮಾಡಿದ್ರೂ ಅವರಿಗೆ ಹಿಂಸೆ ಜಾಸ್ತಿ ಆಗತ್ತೆ.. ಕಿಡ್ನಿ ಕೆಲಸ ಮಾಡ್ತಾ ಇದೆ.. ಲಿವರ್ ಚೆನ್ನಾಗಿದೆ.. ಆದರೆ ಹೃದಯ ಅವರಿಗೆ ಸ್ಪಂದಿಸ್ತಾ ಇಲ್ಲ.. ಅವರು ಇನ್ನು ತುಂಬಾ ಹೊತ್ತು ನಮ್ಮ ಜೊತೆ ಇರಲ್ಲ ಅಂತ ಹೇಳೋಕೆ ನನಗೆ ಕಷ್ಟ ಆಗ್ತಾ ಇದೆ. ಯಾಕಂದ್ರೆ ಅವರು ನಮಗೆ ಜೀವನಾಡಿ ಆಗಿದ್ರು.. ತಂದೆಯ ರೀತಿ ಇದ್ರು.. ಅವರ ಕಷ್ಟವನ್ನ ನೋಡೋದು ನನಗೆ ಬಹಳ ಕಷ್ಟ ಆಗ್ತಾ ಇದೆ.. ಇನ್ನೂ ಚಿಕಿತ್ಸೆ ಮುಂದುವರೆಸ್ತಾ ಇದೀವಿ ಆದರೆ ಅವರು ಚಿಕಿತ್ಸೆ ಸ್ಪಂದಿಸ್ತಾರೆ ಅನ್ನೋ ಹೋಪ್ಸ್ ಇಲ್ಲ.. ಸಧ್ಯದ ಪರಿಸ್ಥಿತಿಲಿ ಲೈಫ್ ಸಪೋರ್ಟ್ ನಲ್ಲೇ ಇದ್ದಾರೆ.. ಇನ್ನೆಷ್ಟು ದಿನ ಎಷ್ಟು ಗಂಟೆ ಅಂತ ಹೇಳೋಕೆ ಆಗಲ್ಲ.. ರಿಕವರಿ ಆಗೋ ಚಾನ್ಸಸ್ ತುಂಬಾ ಕಡಿಮೆ ಅನ್ನಿಸ್ತಾ ಇದೆ.. ಕುಟುಂಬದವರು ಜೊತೆಗೇ ಇದ್ದಾರೆ..

ಅವರಿಗೂ ಎಲ್ಲಾ ಗೊತ್ತು.. ಅವರು ಏನ್ ಹೇಳ್ತಾರೆ ಅಂದ್ರೆ ಅವರಿಗೆ ತುಂಬಾ ಹಿಂಸೆ ಮಾಡ್ಬೇಡಿ ಸರ್.. ನಮ್ಮ ಒಂದ್ ಇದಕ್ಕೋಸ್ಕರ ಅವರಿಗೆ ಹಿಂಸೆ ಕೊಡೋದು ಬೇಡ.. ಎಷ್ಟಾಗತ್ತೋ ಅಷ್ಟೂ ಪ್ರಯತ್ನ ಪಡಿ.. ಅದುಬಿಟ್ಟು ಅವರಿಗೆ ತುಂಬಾ ಹಿಂಸೆ ಆಗೋ ಅಂತದ್ದು ಬೇಡ.. ಕೊನೆ ಘಳಿಗೆ ವರೆಗೂ ಪ್ರಯತ್ನ ಮಾಡಿ ಅಂತ ಹೇಳ್ತಾ ಇದಾರೆ.. ಅವರಿಗೂ ಪರಿಸ್ಥಿತಿ ಅರ್ಥ ಆಗಿದೆ.. ಎಂ ಆರ್ ಐ ಮಾಡಲು ಸಹ ಸಾಧ್ಯವಿಲ್ಲ.. ಅವರನ್ನ ಹಾಸಿಗೆ ಇಂದ ಶಿಫ್ಟ್ ಮಾಡಿದ್ರೆ ಬಿಪಿ ಲೋ ಆಗತ್ತೆ ಅನ್ನೋ ಭಯ ಇದೆ.. ಏನೂ ಮಾಡೋಕೆ ಆಗ್ತಾ ಇಲ್ಲ.. ಪರಿಸ್ಥಿತಿ ತುಂಬಾ ಹದಗೆಟ್ಟಿದೆ.. ಬ್ರೇನ್ ತುಂಬಾ ಕಂಪ್ರೆಷನ್ ಆಗಿದೆ.. ಲಿವರ್ ನಲ್ಲಿ‌ ನೀರು ತುಂಬೋಕೆ ಶುರು ಆಗ್ತಾ ಇದೆ.. ಹೇಳೋಕೆ ನೋವಾಗ್ತಾ ಇದೆ.. ವೆಂಟಿಲೇಟರ್ ತೆಗೆದರೆ ಅವರಿಗೆ ಕಷ್ಟ ಆಗತ್ತೆ ಅದಕ್ಕೆ ನಾವು ಆರೀತಿ ಮಾಡೋದಿಲ್ಲ.. ಅವರಿಗೆ ಕಷ್ಟ ಆಗೋ ಅಂತದ್ದು ಏನೂ ಮಾಡಲ್ಲ..

ಪರಿಸ್ಥಿತಿ ಗಂಭೀರವಾಗಿದೆ ಇನ್ನು ಗಂಟೆಗಳಷ್ಟೇ ಅನ್ನಬಹುದೆಂದು ಕಣ್ಣೀರಿಟ್ಟರು.. ಅದಾದ ಗಂಟೆಯ ಬಳಿಕ ಶಿವರಾಂ ಅವರು ಇಹಲೋಕ ತ್ಯಜಿಸಿದ ವಿಚಾರ ತಿಳಿಸಿದರು.. ಇನ್ನು ಇತ್ತ ಸ್ಯಾಂಡಲ್ವುಡ್ ನ ಎಲ್ಲಾ ಗಣ್ಯರು ಕಲಾವಿದರು ಹಿರಿಯ ಕಲಾವಿದರುಗಳು ಪ್ರತಿಯೊಬ್ಬರೂ ಸಹ ಶಿವರಾಂ ಅವರ ಅಗಲಿಕೆಗೆ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.. ತಿಂಗಳ ಹಿಂದಷ್ಟೇ ಅಪ್ಪು ಬಗ್ಗೆ ಮಾತನಾಡಿ ಕಣ್ಣೀರಿಟ್ಟಿದ್ದ ಶಿವರಾಂ ಅವರು ಇಂದು ಅಪ್ಪುವಿನೊಟ್ಟಿಗೇ ಹೋಗಿ ಬಿಟ್ಟರು‌‌.. ಶಿವರಾಂ ಅವರಿಗೆ ಶಾಂತಿ ಸಿಗಲಿ.. ಹೋಗಿ ಬನ್ನಿ ಶಿವರಾಮಣ್ಣ..