ಸಿಹಿ ಸುದ್ದಿ ಹಂಚಿಕೊಂಡ ಮೇಘನಾ ಹಾಗೂ ದೃವ ಸರ್ಜಾ..

0 views

ಸರ್ಜಾ ಕುಟುಂಬದಲ್ಲಿ ಸದ್ಯ ಮೊನ್ನೆ ಮೊನ್ನೆಯಷ್ಟೇ ಮೇಘನಾ ರಾಜ್ ಅವರ ಸೀಮಂತ ಕಾರ್ಯಕ್ರಮ ನೆರವೇರಿದ್ದು ಇದೀಗ ಧೃವ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರೂ ಸಹ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.. ಹೌದು ನಾಲ್ಕು ದಿನದ ಹಿಂದಷ್ಟೇ ಚಿರಂಜೀವಿ ಸರ್ಜಾ ಈ ಮೊದಲೇ ಆಸೆ ಪಟ್ಟಂತೆ ಮೇಘನಾ ಅವರ ಸೀಮಂತ ಕಾರ್ಯಕ್ರಮವನ್ನು ಸುಂದರ್ ರಾಜ್ ಅವರ ಮನೆಯಲ್ಲಿ ಆಯೋಜಿಸಲಾಗಿತ್ತು.. ಸರಳವಾಗಿ ಶಾಸ್ತ್ರ ಬದ್ಧವಾಗಿ ತುಂಬುಗರ್ಭಿಣಿಗೆ ಮಡಿಲು ತುಂಬಿ ಸೀಮಂತ ಶಾಸ್ತ್ರ ನೆರವೇರಿಸಿದರು..

ಇನ್ನು ಆ ಕಾರ್ಯಕ್ರಮದ ಬಳಿಕ ಒಂದು ದಿನದ ನಂತರ ಧೃವ ಸರ್ಜಾ ಅವರು ಅತ್ತಿಗೆಗಾಗಿ ಮತ್ತೊಂದು ಸಂತೋಷ ಕೂಟವನ್ನು ಆಯೋಜಿಸಿದ್ದರು.. ಕಾರ್ಯಕ್ರಮದಲ್ಲಿ ಗರ್ಭಿಣಿ ಮೇಘನಾ ರಾಜ್ ಅವರು ಕೇಕ್ ಕಟ್ ಮಾಡುವ ಮೂಲಕ ಪುಟ್ಟ ಕಂದನ ಆಗಮನದ ಸಂತೋಷವನ್ನು ಹಂಚಿಕೊಂಡರು.. ಇದೆಲ್ಲವೂ ಚಿರು ಸರ್ಜಾ ಅವರ ಕನಸಾಗಿತ್ತು.. ಅದೆಲ್ಲವನ್ನು ಅತ್ತಿಗೆಗೆ ಮೈದುನನಾಗಿ ಮಾತ್ರವಲ್ಲ ಬದಲಿಗೆ ಮಗನಾಗಿ ಧೃವ ಸರ್ಜಾ ನಿಂತು ಅಣ್ಣನ ಆಸೆಯಂತೆ ಅತ್ತಿಗೆಯ ಸೀಮಂತ ಕಾರ್ಯಕ್ರಮವನ್ನು ಆಚರಿಸಿದ್ದರು..

ಇನ್ನು ಚಿರು ಹಾಗೂ ಮೇಘನಾ ಅವರ ಸ್ನೇಹಿತರಾದ ಪ್ರಜ್ವಲ್ ದೇವರಾಜ್ ದಂಪತಿ.. ಪನ್ನಘ ಭರಣ ದಂಪತಿ ಹಾಗೂ ಅವರ ಮತ್ತಷ್ಟು ಸ್ನೇಹಿತರೆಲ್ಲಾ ಸೇರಿ ಮೇಘನಾ ರಾಜ್ ಅವರಿಗೆ ವಿಶೇಷವಾಗಿ ಬೇಬಿ ಶೋವರ್ ಕಾರ್ಯಕ್ರಮವನ್ನು ಆಯೋಜಿಸಿ ಮೇಘನಾ ಅವರಿಗೆ ಸಂತೋಷ ನೀಡಿದ್ದಾರೆ.. ಚಿರು ಇಲ್ಲದಾಗ ಆ ಕುಟುಂಬದ ಹಾಗೂ ಮೇಘನಾರಾಜ್ ಅವರಿಗಾಗಿ ಸದಾ ಜೊತೆಯಾಗಿರುವ ಸ್ನೇಹಿತರಿಗೆ ಮೇಘನಾ ಅವರು ಬೇಬಿ ಶೋವರ್ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡು ಧನ್ಯವಾದಗಳನ್ನು ತಿಳಿಸಿದ್ದಾರೆ..

ಇನ್ನು‌ ಇದೀಗ ಮೇಘನಾ ಹಾಗೂ ಧೃವ ಸರ್ಜಾ ಇಬ್ಬರೂ ಸಹ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಕಳೆದ ಮಾರ್ಚ್ ತಿಂಗಳಿನಲ್ಲಿ ಚಿರು ಸರ್ಜಾ ಅವರ ಶಿವಾರ್ಜುನ ಸಿನಿಮಾ ಬಿಡುಗಡೆಯಾಗಿತ್ತು.. ಆದರೆ ಸಿನಿಮಾ ಬಿಡುಗಡೆಯಾದ ಒಂದೇ ದಿನಕ್ಕೆ ಕೊರೊನಾ ಕಾರಣದಿಂದಾಗಿ ಲಾಕ್ ಡೌನ್ ಆಗಿ ಹೋಯಿತು.. ಚಿತ್ರಮಂದಿರಗಳು ಬಂದ್ ಆದವು.. ಶಿವಾರ್ಜುನ ಸಿನಿಮಾ ಚಿರು ಸರ್ಜಾ ಅವರ ಕೊನೆಯ ಸಿನಿಮಾವಾಗಿತ್ತು..

ಇದೇ ಕಾರಣಕ್ಕೆ ಇದೀಗ ಅಕ್ಟೋಬರ್ 15 ರಿಂದ ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು.. ಇದೀಗ ಚಿರು ಸರ್ಜಾ ಅವರ ಕೊನೆಯ ಸಿನಿಮಾವಾದ ಶಿವಾರ್ಜುನ ಸಿನಿಮಾವನ್ನು‌ ಮತ್ತೊಮ್ಮೆ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ‌‌.‌

ಹೌದು ಶಿವಾರ್ಜುನ ಸಿನಿಮಾ ಇದೇ ಅಕ್ಟೋಬರ್ 16 ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.‌ ಈ ವಿಚಾರವನ್ನು ಖುದ್ದು ಧೃವ ಸರ್ಜಾ ಹಾಗೂ ಮೇಘನಾ ರಾಜ್ ಅವರು ತಿಳಿಸಿದ್ದು ಹತ್ತಿರದ ಚಿತ್ರಮಂದಿರಗಳಲ್ಲಿ ತೆರಳಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.. ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಲಾಕ್ ಡೌನ್ ಆದ ಕಾರಣ ನಿರ್ಮಾಪಕರಿಗೆ ತೊಂದರೆ ಆಯಿತೆಂದು ಚಿರು ಸರ್ಜಾ ಬಹಖ ನೊಂದುಕೊಂಡಿದ್ದರಂತೆ.. ಆದರೆ ಇದೀಗ ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗುತ್ತಿದ್ದು ಕೊರೊನಾ ನಡುವೆಯೂ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಥಿಯೇಟರ್ ಸಿಬ್ಬಂದಿ ತೆಗೆದುಕೊಂಡಿದ್ದು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆ ಇದೆ..