ಶೃಂಗೇರಿ ಶ್ರೀಗಳು‌ ಮೈಸೂರು ಅರಮನೆಗೆ ಬಂದ ಕೂಡಲೇ ಯುವರಾಜರು ಮಾಡಿರುವ ಕೆಲಸ ನೋಡಿ..

0 views

ನಾವೆಷ್ಟೇ ಆಧುನಿಕ ಯುಗಕ್ಕೆ ಕಾಲಿಟ್ಟಿರಬಹುದು.. ಆದರೆ ನಮ್ಮ ರಾಜ್ಯದ ರಾಜ‌ಮನೆತನಗಳೆಂದರೆ ಈಗಲೂ ಸಹ ಮನಸ್ಸಿನಲ್ಲಿ ಭಕ್ತಿ ಮೂಡುತ್ತದೆ.. ಗೌರವ ಭಾವ ಮೂಡುತ್ತದೆ.. ಹೇಳಲಾಗದ ಒಂದು ರೀತಿ ಪ್ರೀತಿ ನಮ್ಮ ರಾಜಮನೆತನಗಳ ಹೆಸರ ಕೇಳಿದೊಡನೆ ಮೂಡುತ್ತದೆ.. ಅಂತಹ ಹೆಮ್ಮೆಯ ಸಂಸ್ಥಾನಗಳಲ್ಲಿ‌ ಒಂದು ನಮ್ಮ ಮೈಸೂರು ರಾಜ ಮನೆತನ.. ನಾಡಿಗಾಗಿ ಕೊಟ್ಟಿರುವ ಕೊಡುಗೆ ಲೆಕ್ಕವಿಲ್ಲ.. ನಾಡಿನ ಜನರ ಏಳಿಗೆಗಾಗಿ ಮೈಸೂರು ರಾಜ ಮನೆತನದ ತ್ಯಾಗಗಳು ನಿಜಕ್ಕೂ ಅಪಾರ.. ಇನ್ನು ಹಳೆಯ ಮೈಸೂರು ಭಾಗದಲ್ಲಿ ಈಗಲೂ ಸಹ ದಸರಾ ಸಮಯದಲ್ಲೆ ರಾಜ ಮನೆತನದ ರಾಜಮಾತೆಯಾಗಿರಬಹುದು ಅಥವಾ ಮಹಾರಾಜರಾಗಿರಬಹುದು ಅವರ ಕಾರ್ ಗಳು ತೆರಳಿದರೂ ಸಹ ಆ ನೆಲವನ್ನು ಮುಟ್ಟಿ ಹಳ್ಳಿಯ ಜನರು ನಮಸ್ಕಾರ ಮಾಡಿಕೊಳ್ಳೋದುಂಟು.. ಅಷ್ಟು ಗೌರವ ಪ್ರೀತಿ ಈಗಲೂ ಸಹ ನಮ್ಮ ಮೈಸೂರು ರಾಜ ಮನೆತನ ಉಳಿಸುಕೊಂಡು ಹೋಗುತ್ತಿದೆ..

ಇನ್ನು ಸಧ್ಯ ಈಗಿನ ಮಹಾರಾಜರಾದ ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಗೆ ಮಾತ್ರ ಸೀಮಿತವಾಗದೇ ಸಾಮಾನ್ಯ ಜನರ ಜೊತೆಯೂ ಬೆರೆತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಭಿಯಾನಗಳಲ್ಲಿ ಹಾಗೂ ಇನ್ನಿತರ ಕಡೆ ಬೆರೆತು ಹಿರಿಯರ ಮಾರ್ಗದರ್ಶನದಲ್ಲಿ‌ ನಡೆಯುತ್ತುರುವುದು ಹೆಮ್ಮೆಯ ವಿಚಾರ.. ಇನ್ನು ಸಧ್ಯ ಅರಮನೆಗೆ ಕಳೆದ ಐದು ವರ್ಷದ ಹಿಂದೆ ಪುಟ್ಟ ರಾಜ ಕುಮಾರನ ಆಗಮನವಾಗಿದ್ದು ಯುವರಾಜರಿಗೆ ಆಧ್ಯವೀರ್ ನರಸಿಂಹರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿತ್ತು. ಇನ್ನು ದಸರಾ ಸಮಯದಲ್ಲಿ ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ‌ ರಾಜಮನೆತನದ ಜೊತೆ ಕಾಣಿಸಿಕೊಳ್ಳುವ ಯುವರಾಜರು ಸಧ್ಯ ಅರಮನೆಗೆ ಶೃಂಗೇರಿ ಮಠದ ಶ್ರೀಗಳು ಆಗಮಿಸಿದ ವೇಳೆ ನಡೆದುಕೊಂಡ ರೀತಿ ನಿಜಕ್ಕೂ ಹೆಮ್ಮೆ ಎನಿಸುತ್ತದೆ..

ಹೌದು ನಮ್ಮ ರಾಜಮನೆತನಗಳ ಸಂಸ್ಕಾರವೇ ಅಂತಹುದು.. ರಾಜಮನೆತನವಾದರೂ ಹಿರಿಯರ ಜೊತೆಯಾಗಿರಬಹುದು ಮಠಗಳಲ್ಲಾಗಿರಬಹುದು ಅಥವಾ ದೇವಸ್ಥಾನಗಳಲ್ಲಾಗಿರಬಹುದು ಎಲ್ಲಾ ಕಡೆಯೂ ಅತ್ಯಂತ ವಿನಯ ಹಾಗೂ ಗೌರವಯುತವಾಗಿ ನಡೆದುಕೊಳ್ಳುವ ರೀತಿ ನಿಜಕ್ಕೂ ರಾಜ ವಂಶಸ್ಥರ ಬಗ್ಗೆ ಗೌರವ ಇಮ್ಮಡಿಯಾಗಿಸುತ್ತದೆ.. ಕೆಲ ದಿನಗಳ ಹಿಂದಷ್ಟೇ ಕಾರ್ಯಕ್ರಮವೊಂದರಲ್ಲಿ ಮಹಾರಾಜರು ಶ್ರೀಗಳ ಮುಂದೆ ಕೂರದೇ ನೆಲದ ಮೇಲೆ ಕೂತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.. ಮಹಾರಾಜರ ನಡೆಯ ಬಗ್ಗೆ ಜನರು ಬಹಳ ಮೆಚ್ಚುಗೆ ವ್ಯಕ್ತ ಪಡಿಸಿದ್ದರು..

ಹೌದು ಅದೇ ರೀತಿ ಇದೀಗ ಮೈಸೂರು ಅರಮನೆಗೆ ಶೃಂಗೇರಿ ಶ್ರೀಗಳು ಆಗಮಿಸಿದ್ದು ಆ ಸಮಯದಲ್ಲಿಯೂ ಪುಟ್ಟ ವಯಸ್ಸಿಗೆ ಯುವರಾಜರು ನಡೆದುಕೊಂಡ ರೀತಿ ಮೈಜುಮ್ಮೆನ್ನಿಸುತ್ತದೆ.. ಹೌದು ಮೊನ್ನೆ ಶೃಂಗೇರಿ ಮಠದ ಶ್ರೀಗಳು ಮೈಸೂರು ಅರಮನೆಗೆ ಆಗಮಿಸಿ ವಿಜಯ ಮಾಡಿಸಿದ್ದಾರೆ.. ಈ ಸಮಯದಲ್ಲಿ ಸಮಸ್ತ ರಾಜ ಮನೆತನದ ರಾಜಮಾತೆ ಮಹಾರಾಜರು ಮಹಾರಾಣಿ ತ್ರಿಷಿಕಾ ಕುಮಾರಿ ಅವರು ಎಲ್ಲರೂ ಸಹ ರಾಜಲಾಂಛನ ಪರಿವಾರದ ಸಮೇತರಾಗಿ ಅರಮನೆಗೆ ಬರಮಾಡಿಕೊಂಡು ಅವರ ಪಾದಪೂಜೆ ನೆರವೇರಿಸಿ ಅವರಿಗೆ ದೀರ್ಘದಂಡ ನಮಸ್ಕಾರ ಮಾಡಿ ಗೌರವ ಸಲ್ಲಿಸಿದ್ದಾರೆ..

ಇದೇ ಸಮಯದಲ್ಲಿ ಇನ್ನೂ ನಾಲ್ಕು ವರ್ಷದ ಪುಟ್ಟ ರಾಜಕುಮಾರರು ಸಹ ಮಹಾರಾಜರಂತೆ ಅಷ್ಟೇ ವಿನಯದಿಂದ ಶ್ರೀಗಳಿಗೆ ದೀರ್ಘದಂಡ ನಮಸ್ಕಾರ ಮಾಡಿ ತಂದೆಯಂತೆಯೇ ಶ್ರೀಗಳನ್ನು ಗೌರವಯುತವಾಗಿ ಬರಮಾಡಿಕೊಂಡದ್ದು ನಿಜಕ್ಕೂ ನೋಡಲೆರೆಡು ಕಣ್ಣು ಸಾಲದೆನ್ನುವಂತಿತ್ತು.. ಶ್ರೀಗಳು ಸಹ ಪುಟ್ಟ ರಾಜಕುಮಾರರು ನೀಡಿದ ಗೌರವ ನೋಡಿ ಸಂತೋಷಗೊಂಡು ಆಶೀರ್ವದಿಸಿದರು.. ನಮ್ಮ ಸಂಸ್ಕೃತಿ ನಮ್ಮ ರಾಜಮನೆತನಗಳ ಸಂಸ್ಕಾರಕ್ಕೆ ಸಾಟಿ ಇನ್ನೇನು ಎನ್ನುವಂತಿತ್ತು ಆ ದೃಶ್ಯ..

ಇನ್ನು ಸಧ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡಿರುವ ಮಹಾರಾಜ ಶ್ರೀ ಯಧುವೀರ್ ಅವರು “ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿದಾನಂಗಳವರು ಮೈಸೂರು ಅರಮನೆಗೆ ವಿಜಯಮಾಡಿಸಿದ ಶುಭಸಂದರ್ಭದಲ್ಲಿ ಶ್ರೀಮನ್ ಮಹಾಸ್ವಾಮಿಗಳವರನ್ನು ಸಮಸ್ತ ರಾಜಲಾಂಛನ ಪರಿವಾರ ಸಮೇತರಾಗಿ ಅರಮನೆಗೆ ಬರಮಾಡಿಕೊಂಡು ಶ್ರೀಮನ್ ಮಹಾಸ್ವಾಮಿಗಳವರ ಪಾದುಕಾಪೂಜೆಯನ್ನು ನಮ್ಮ ತಾಯಿಯವರಾದ ಮಹಾಸನ್ನಿಧಾನ ಸವಾರಿಯವರು ಶ್ರೀಮತಿ ಡಾ. ಪ್ರಮೋದಾ ದೇವಿ ಒಡೆಯರವರ ಆಧ್ವರ್ಯದಲ್ಲಿ ಸನ್ನಿಧಾನ ಸವಾರಿಯವರು ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರ್ ಹಾಗು ಯುವರಾಜ ಚಿರಂಜೀವಿ ಶ್ರೀ ಆಧ್ಯವೀರ್ ನರಸಿಂಹರಾಜ ಒಡೆಯರವರ ಸಹಿತ ನೆರವೇರಿಸಲಾಯಿತು. ನಾಡಿನ ಸಮಸ್ತ ಜನತೆಗೂ ಸನ್ಮಂಗಳವಾಗಲೆಂದು ಶ್ರೀಮನ್ ಮಹಾಸ್ವಾಮಿಗಳವರಲ್ಲಿ ಪ್ರಾರ್ಥಿಸಲಾಯಿತು.” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..