ಆಕೆಯ ತಂಗಿಯಿಂದಾಗಿ ಪ್ರೀತಿ ಕಳೆದುಕೊಂಡ ನಾಗ ಚೈತನ್ಯ.. ಹೊರಬಿತ್ತು ಅಸಲಿ ಸತ್ಯ..

0 views

ನಾಗಚೈತನ್ಯ ಹಾಗೂ ಸಮಂತಾ ವಿಚಾರ ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್ ಹಾಗೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಹೆಚ್ಚು ಸದ್ದು ಮಾಡಿತ್ತು.. ಕಾರಣ ಈ ಜೋಡಿ ಕಳೆದ ಹತ್ತು ವರ್ಷಗಳಿಂದ ಪರಿಚಯವಾಗಿ ಆರು ವರ್ಷಗಳಿಂದ ಪ್ರೀತಿಸಿ ಮೂರು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಈ ಜೋಡಿಯನ್ನು ಎಲ್ಲರೂ ಮೆಚ್ಚಿಕೊಂಡು ಹಾರೈಸಿದ್ದರು.. ಇವರಿಬ್ಬರೂ ಸಹ ಅಷ್ಟೇ ಪ್ರೀತಿಯಿಂದ ಇದ್ದರು.. ನೆಚ್ಚಿನ ಜೋಡಿಯ ಅನ್ಯೂನ್ಯತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದರು.. ಆದರೆ ಇದ್ದಕಿದ್ದ ಹಾಗೆ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಮುನ್ನವೇ ಇಬ್ಬರು ದೂರಾಗಿ ಬಿಟ್ಟರು.. ಆದರೆ ಇಬ್ಬರು ದೂರಾಗಲು ಸಮಂತಾರ ಸಿನಿಮಾಗಳ ಆಯ್ಕೆಯೇ ಕಾರಣ ಹಾಗೂ ನಾಗಚೈತನ್ಯ ಸಮಂತಾರಿಗೆ ಬಹಳ ಕಟ್ಟುಪಾಡುಗಳನ್ನು ಹಾಕುತ್ತಿದ್ದರು ಇದೇ ಕಾರಣ ಎನ್ನಲಾಗಿತ್ತು.. ಆದರೀಗ ಇದೆಲ್ಲವನ್ನು ಹೊರತು ಪಡಿಸಿ ಹೊಸ ವಿಚಾರವೊಂದು ಹೊರಬಿದ್ದಿದೆ..

ಹೌದು ಸೆಲಿಬ್ರೆಟಿಗಳಿಗೆ ಅದರಲ್ಲಿಯೂ ಸಿನಿಮಾ ಮಂದಿಗಳಿಗೆ ಲವ್ ಆಗೋದು ಅದು ದೂರವಾಗೋದು ನಂತರ ಮತ್ತೊಂದು ಲವ್ ಆಗೋದು ಅದರಿಂದಲೂ ಸಹ ದೂರಾಗಿ ಮತ್ತೊಬ್ಬರನ್ನು ಮದುವೆಯಾಗೋದು ಇದೆಲ್ಲಾ ಹೊಸ ವಿಚಾರವೇನೂ ಅಲ್ಲ.. ಅದೇ ರೀತಿ ಸಮಂತಾ ನಾಗಚೈತನ್ಯರಿಂದ ದೂರವಾದಾಗ ಸಮಂತಾರ ಹಳೇ ಬಾಯ್ ಫ್ರೆಂಡ್ ಸಿದ್ದಾರ್ಥ್ ಸಂಭ್ರಮ ಪಟ್ಟು ಸಮಯ ಎಲ್ಲರಿಗೂ ಪಾಠ ಕಲಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.. ಇದನ್ನು ನೋಡಿ ಹಳೇ ಲವರ್ ಡಿವೋರ್ಸ್ ಪಡೆದದ್ದಕ್ಕೆ ಹುಡುಗನ ಸಂಭ್ರಮ ಎಂದು ಸಾಕಷ್ಟು ಟ್ರೋಲ್ ಗಳು ಹರಿದಾಡಿದ್ದವು.. ಇನ್ನು ಸಮಂತಾಗೆ ಮಾತ್ರ ಹಳೆಯ ಪ್ರೇಮ್ ಕಹಾನಿ ಇತ್ತಾ.. ಅಥವಾ ನಾಗಚೈತನ್ಯ ಅವರಿಗೆ ಇರಲಿಲ್ಲವಾ ಎನ್ನುವಾಗಲೇ ಇದೀಗ ನಾಗಚೈತನ್ಯ ಅವರ ಹಳೆಯ ಪ್ರೇಮಕತೆಯೊಂದಕ್ಕೆ ಜೀವ ಬಂದಂತೆ ಕಾಣುತ್ತಿದೆ..

ಹೌದು ನಾಗಚೈತನ್ಯ ಸಹ ಸಮಂತಾಗೂ ಮುನ್ನ ಬೇರೊಬ್ಬ ನಟಿಯನ್ನು ಪ್ರೀತಿಸಿದ್ದರು.. ಆ ನಟಿ ಮತ್ಯಾರೂ ಅಲ್ಲ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿಯರಲ್ಲಿ ಒಬ್ಬರಾದ ಶೃತಿ ಹಾಸನ್.. ಹೌದು ಕಮಲ್ ಹಾಸನ್ ಅವರ ಮಗಳಾದ ಶೃತಿ ಹಾಸನ್ ಅವರ ಜೊತೆ ನಾಗಚೈತನ್ಯ ಸಾಕಷ್ಟು ಓಡಾಡುತ್ತಿದ್ದರಂತೆ.. ಇಷ್ಟೆಲ್ಲಾ ಆತ್ಮೀಯವಾಗಿದ್ದ ಜೋಡಿ ಮದುವೆ ಏಕೆ ಆಗಲಿಲ್ಲ ಎಂಬ ಕುತೂಹಲ ಇರಬಹುದು.. ಇದಕ್ಕೆ ಕಾರಣ ತಂಗಿ.. ಹೌದು ಇದಕ್ಕೆಲ್ಲಾ ಕಾರಣ ಶೃತಿ ಹಾಸನ್ ಅವರ ತಂಗಿಯ ವಿಚಾರ.. ಶೃತಿ ಹಾಸನ್ ಅವರ ತಂಗಿ ಅಕ್ಷರ ಹಾಸನ್ ಅವರ ವಿಚಾರವಾಗಿ ನಡೆದ ಒಂದು ಘಟನೆಯಿಂದ ನಾಗ ಚೈತನ್ಯ ಹಾಗೂ ಶೃತಿ ಹಾಸನ್ ದೂರವಾದರು..

ಹೌದು ಶೃತಿ ಹಾಸನ್ ಹಾಗೂ ನಾಗಚೈತನ್ಯ ಬಹಳ ಆತ್ಮೀಯವಾಗಿದ್ದದ್ದು ಎಲ್ಲರಿಗೂ ತಿಳಿದಿತ್ತು.. ಎರಡೂ ಕುಟುಂಬಗಳಿಗೂ ಸಹ ಈ ವಿಚಾರ ತಿಳಿದಿತ್ತು ಎನ್ನಲಾಗಿದೆ.. ಹೀಗೆ ಅವರಿಬ್ಬರ ಪ್ರೇಮ್ ಕಹಾನಿ ಸಾಗುತ್ತಿರುವಾಗ ಇವರಿಬ್ಬರು ಮದುವೆಯಾಗೋದು ಖಚಿತ ಎಂದೇ ಹೇಳಲಾಗಿತ್ತು.. ಆದರೆ ಒಮ್ಮೆ ಯಾವುದೋ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ನಾಗಚೈತನ್ಯ ಹಾಗೂ ಶೃತಿ ಹಾಸನ್ ಹೋಗಿರುತ್ತಾರೆ.. ಅವರಿಬ್ಬರ ಜೊತೆ ಶೃತಿ ಹಾಸನ್ ತಂಗಿ ಅಕ್ಷರ ಹಾಸನ್ ಕೂಡ ಬಂದಿರುತ್ತಾರೆ.. ಆ ಕಾರ್ಯಕ್ರಮದಲ್ಲಿ ಶೃತಿ ಹಾಸನ್ ಡ್ಯಾನ್ಸ್ ಮಾಡಬೇಕಾಗಿರುತ್ತದೆ..

ಇತ್ತ ಶೃತಿ ತನ್ನ ಬಾಯ್ ಫ್ರೆಂಡ್ ನಾಗಚೈತನ್ಯ ರಿಗೆ ತಂಗಿ ಅಕ್ಷರ ಹಾಸನ್ ಜೊತೆ ಇರುವಂತೆ ತಿಳಿಸಿ ಡ್ಯಾನ್ಸ್ ಪರ್ಫಾರ್ಮೆನ್ಸ್ ನೀಡಲು ಹೋಗಿರುತ್ತಾರೆ.. ಆದರೆ ಅವರು ಡ್ಯಾನ್ಸ್ ಮಾಡಿ ಬರುವಷ್ಟರಲ್ಲಿ ನಾಗಚೈತನ್ಯ ಶೃತಿ ಅವರ ತಂಗಿ ಅಕ್ಷರ ಹಾಸನ್ ರನ್ನು ಬಿಟ್ಟು ಅಲ್ಲಿಂದ ಹೊರಟು ಹೋಗಿರುತ್ತಾರೆ.. ತನ್ನ ತಂಗಿಯ ಜೊತೆ ಇರುವಂತೆ ಹೇಳಿದ್ದರೂ ಕೂಡ ಬಿಟ್ಟು ಹೋದ ನಾಗಚೈತನ್ಯರ ಮೇಲೆ ಶೃತಿ ಅವರಿಗೆ ಕೋಪ ಬಂದು ಬೇಸರ ಪಟ್ಟು ಕೊಂಡಿದ್ದರು.. ಇದು ಇಬ್ಬರ ನಡುವಿನ ಮನಸ್ತಾಪಕ್ಕೆ ಮೂಲ ಕಾರಣವಾಯಿತು.. ನಂತರ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಇಬ್ಬರು ದೂರವಾಗುವಂತಾಯ್ತು.. ಟಾಲಿವುಡ್ ನಲ್ಲಿ ಇವರಿಬ್ಬರ ಲವ್ ಕಹಾನಿ ಗೊತ್ತಿರುವ ಅಭಿಮಾನಿಗಳು ಈಗಲೂ ಸಹ ಇವರಿಬ್ಬರು ಮತ್ತೆ ಒಂದಾಗಲಿ ಎಂದೇ ಬಯಸುತ್ತಿದ್ದಾರೆ..