ಶುಭಾ ಪೂಂಜಾ ಅವರ ಮದುವೆ ಕ್ಯಾನ್ಸಲ್.. ಕಾರಣವೇನು ಗೊತ್ತಾ?

0 views

ಸ್ಯಾಂಡಲ್ವುಡ್ ನಟಿ ಶುಭ ಪೂಂಜಾ ಅವರು ಕೆಲ ತಿಂಗಳ ಹಿಂದಷ್ಟೇ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದರು.. ತಾವು ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಇದೇ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಹಸೆಮಣೆ ಏರಲಿದ್ದರು..‌ ಆದರೆ ಇದೀಗ ಮದುವೆ ಕ್ಯಾನ್ಸಲ್ ಆಗಿದೆ.. ಹೌದು ಈ ವರ್ಷ ಕೊರೊನಾ ಇದ್ದರೂ ಸಹ ಸಾಲು ಸಾಲು ಕಲಾವಿದರ ಮದುವೆ ನೆರವೇರಿತ್ತು.. ಅದೇ ರೀತಿ ಈ ವರ್ಷದ ಸೆಲಿಬ್ರೆಟಿಗಳ ಮದುವೆಯ ಸಾಲಿಗೆ ಶುಭ ಪೂಂಜಾ ಅವರ ಮದುವೆಯೂ ಸೇರಬೇಕಿತ್ತು.. ಆದರೆ ಇದೀಗ ಮದುವೆ ಕ್ಯಾನ್ಸಲ್ ಆಗಿದೆ..

ಹೌದು ಕಳೆದ ಜೂನ ತಿಂಗಳಿನಲ್ಲಿ ಸುಮಂತ್ ಬಿಲ್ಲವ ಎಂಬ ಮಂಗಳೂರು ಮೂಲದ ಉದ್ಯಮಿಯನ್ನು ಪ್ರೀತಿಸುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದರು.. ಸುಮಂತ್ ಜೊತೆ ಶುಭ ಪೂಂಜಾ ಫೋಟೋ ಚಿತ್ರೀಕರಣ ಮಾಡಿಸಿಕೊಂಡಿದ್ದರು.. ಸಾಮಾಜಿಕ ಜಾಲತಾಣದಲ್ಲಿ ಆ ಜೋಡಿಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.. ಅಷ್ಟೇ ಅಲ್ಲದೇ ಇದೇ ಡಿಸೆಂಬರ್ ನಲ್ಲಿ ಮದುವೆಯಾಗುವುದಾಗಿ ಶುಭಾ ಪೂಂಜಾ ತಿಳಿಸಿದ್ದರು.. ಅಭಿಮಾನಿಗಳು ಸ್ನೇಹಿತರು ಎಲ್ಲರೂ ಶುಭಾ ಪೂಂಜಾ ಅವರಿಗೆ ಶುಭಾಶಯ ತಿಳಿಸಿದ್ದರು..

ಇನ್ನೇನು ಎಲ್ಲಾ ಮದುವೆ ತಯಾರಿ ಶುರು ಆಗಿರಬಹುದು ಎಂದು ಸ್ನೇಹಿತರು ಅಂದುಕೊಂಡಿದ್ದರು.. ಕೊರೊನಾ ಕಾರಣದಿಂದಾಗಿ ಈ ವರ್ಷ ನಡೆದ ಬಹಳಷ್ಟು ಕಲಾವಿದರ ಸರಳ ಮದುವೆಯಂತೆ ಶುಭ ಪೂಂಜಾ ಅವರ ಮದುವೆಯೂ ಸಹ ಸರಳವಾಗಿ ನಡೆಯಬಹುದು ಎಂದುಕೊಳ್ಳಲಾಗಿತ್ತು.. ಆದರೆ ಇದೀಗ ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಮದುವೆಯನ್ನು ಖುದ್ದು ಶುಭಾ ಪೂಂಜಾ ಅವರೇ ಕ್ಯಾನ್ಸಲ್ ಮಾಡಿದ್ದಾರೆ..

ಹೌದು ಅದಕ್ಕೆ ಕಾರಣವೂ ಇದೆ.. ಶುಭ ಪೂಂಜಾ ಅವರಿಗೆ ಎಲ್ಲಾ ಸ್ನೇಹಿತರು ಆಪ್ತರು ಕಲಾವಿದರು ಸಂಬಂಧಿಕರು ಎಲ್ಲರನ್ನೂ ಕರೆದು ಅದ್ಧೂರಿಯಾಗಿ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುವ ಆಸೆಯಿದೆ.. ಆದರೆ ಸದ್ಯ ಕೊರೊನಾ ಕಾರಣದಿಂದಾಗಿ ಆ ರೀತಿಯ ಅದ್ಧೂರಿ‌ ಮದುವೆಗಳಿಗೆ ಕಡಿವಾಣ ಬಿದ್ದಿದೆ.. ಜನರೂ ಸಹ ಸಮಾರಂಭಗಳಿಗೆ ತೆರಳಲು ಹಿಂದೂ ಮುಂದೂ ನೋಡುತ್ತಾರೆ.. ಅದೇ ಕಾರಣಕ್ಕೆ ಈ ವರ್ಷ ನಡೆಯಬೇಕಿದ್ದ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ..

ಬದಲಿಗೆ ಕೊರೊನಾ ಎಲ್ಲಾ ಕಡಿಮೆಯಾದ ಬಳಿಕ ಮುಂದಿನ ವರ್ಷ ಮದುವೆ ದಿನಾಂಕ ನಿಗದಿ ಮಾಡಿ ತಿಳಿಸಲಿದ್ದಾರಂತೆ.. ಸದ್ಯ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿರುವ ನಟಿ ಶುಭಾ ಪೂಂಜಾ ಅವರು ಮುಂದಿನ ವರ್ಷ ಕೊರೊನಾ ಕಡಿಮೆಯಾದ ಬಳಿಕ ತಮ್ಮ ಆಸೆಯಂತೆ ಅದ್ಧೂರಿಯಾಗಿ ಎಲ್ಲರ ಸಮ್ಮುಖದಲ್ಲಿ ಪ್ರೀತಿಸಿದ ಹುಡುಗ ಸುಮಂತ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.. ಸದ್ಯ ಈ ವರ್ಷ ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಆಗಿದೆ ಎಂದು ತಿಳಿಸಿದ್ದಾರೆ..