ತಿಂಗಳ ಹಿಂದಷ್ಟೇ ಮದುವೆ ಮಾಡಿದ್ದ ಮಗಳನ್ನು ಕರೆತಂದು ಸ್ವಂತ ತಂದೆಯೇ ತುಮಕೂರಿನಲ್ಲಿ ಎಂತಹ ಕೆಲಸ ಮಾಡಿಬಿಟ್ಟರು ನೋಡಿ..

0 views

ಮದುವೆ ಅನ್ನೋದು ನಿನಕ್ಕೂ ಬಹಳಷ್ಟು ಜನರ ಜೀವನಕ್ಕೆ ಬೆಳಕಾದರೆ.. ಕೆಲವೊಬ್ಬರ ಜೀವನದಲ್ಲಿ ಇದ್ದ ಬೆಳಕನ್ನೂ ಸಹ ಮದುವೆ ಅನ್ನೋದು ಕತ್ತಲನ್ನಾಗಿಸಿ ಬಿಡುತ್ತದೆ.. ಹೌದು ಅದೇ ರೀತಿ ತಿಂಗಳ ಹಿಂದಷ್ಟೇ ಮಗಳ ಮದುವೆ ಮಾಡಿದ್ದ ತಂದೆ ಇದೀಗ ಮಗಳನ್ನು ಕರೆತಂದು ಮಾಡಿರುವ ಕೆಲಸ ನೋಡಿದರೆ ನಿಜಕ್ಕೂ ಮನಕಲಕುವಂತಿದೆ.. ಅದ್ಯಾವ ಖುಷಿಗೆ ಮದುವೆ ಮಾಡಿದರೋ ಭಗವಂತನೇ ಬಲ್ಲ.. ಆದರೆ ಒಂದೇ ತಿಂಗಳಲ್ಲಿ ಮದುವೆಯ ಸಂಭ್ರಮದಲ್ಲಿ ತುಂಬಿ ತುಳುಕುತ್ತಿದ್ದ ಮನೆಯೀಗ ಆಗಿರುವ ಸ್ಥಿತಿ ನೋಡಿದರೆ ಸಂಕಟ ತರುತ್ತಿದೆ.. ಹೌದು ಇವರ ಹೆಸರು ರಮೇಶ್.. ಐವತ್ತೈದು ವರ್ಷ ವಯಸ್ಸು.. ಒಳ್ಳೆಯ ಸರ್ಕಾರಿ ಹುದ್ದೆಯಲ್ಲಿಯೇ ಇದ್ದವರು.. ಹೌದು ಹೇಮಾವತಿ ನಾಲಾ ವಲಯ ಕಚೇರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ರಮೇಶ್.. ಇತ್ತ ಇವರ ಪತ್ನಿ ನಲವತ್ತೈದು ವರ್ಷದ ಮಮತಾ ಅವರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು..

ಇಬ್ಬರಿಗೂ ಸರ್ಕಾರಿ ಕೆಲಸ ಕೈ ತುಂಬಾ ಸಂಬಳ.. ಈ ದಂಪತಿಗೆ ಇದ್ದದ್ದು ಒಬ್ಬಳೇ ಮಗಳು.. ಮಗಳ ಹೆಸರು ಶುಭಾ.. ವಯಸ್ಸು ಇಪ್ಪತ್ತೈದು.. ಈ ಕುಟುಂಬ ಕೆ ಆರ್ ನಗರ ಮೂಲದವರಾಗಿದ್ದು ತುಮಕೂರು ನಗರದ ಮರಳೂರಿನಲ್ಲಿ ವಾಸವಾಗಿದ್ದರು.. ಇನ್ನು ಮಗಳಿಗೆ ಇಪ್ಪತ್ತೈದು ವರ್ಷ ವಯಸ್ಸಾಯ್ತು ಅವಳಿಗೆ ಮದುವೆ ಮಾಡಬೇಕು ಎಂದು ತೀರ್ಮಾನಿಸಿ ಹುಡುಗನನ್ನು ಹುಡುಕಿ ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ಮದುವೆ ಮಾಡಿದ್ದರು ಎಂದು ತಿಳಿದು ಬಂದಿದೆ.. ಆದರೆ ಒಂದೇ ತಿಂಗಳಿಗೆ ಮಗಳನ್ನು ಕರೆತಂದಿರುವ ತಂದೆ ರಮೇಶ್ ಬೇರೆಯದ್ದೇ ನಿರ್ಧಾರ ಮಾಡಿ ಬಿಟ್ಟಿದ್ದರು.. ಹೌದು ಮಗಳು ಶುಭಾ ಹಾಗೂ ಪತ್ನಿ ಹೇಮಾವತಿ ಅವರ ಜೊತೆ ರಮೇಶ್ ಅವರು ನಾಲೆಗೆ ಹಾರಿ ಜೀವ ಕಳೆದುಕೊಂಡು ಬಿಟ್ಟಿದ್ದಾರೆ.. ಹೌದು ಇಂತಹದೊಂದು ಮನಕಲಕುವ ಘಟನೆ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಮೂಲಕ ಹಾದುಹೋಗುವ ಹೇಮಾವತಿ ನದಿಯ ನಾಲೆಯ ಬಳಿ ನಡೆದು ಹೋಗಿದೆ..

ಹೌದು ಗುರುವಾರ ರಾತ್ರಿ ಒಂದು ಓಮಿನಿ ಕಾರಿನಲ್ಲಿ ರಮೇಶ್ ಹೇಮಾವತಿ ಹಾಗೂ ಶುಭಾ ಮೂವರೂ ಸಹ ಅದಾಗಲೇ ನಿರ್ಧಾರ ಮಾಡಿಕೊಂಡೇ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿಯ ಹೇಮಾವತಿ ನಾಲೆಯ ಬಳಿ ಬಂದಿದ್ದಾರೆ.. ಕಾರ್ ಅನ್ನು ಹೈವೇ ರಸ್ತೆಯಲ್ಲಿಯೇ ನಿಲ್ಲಿಸಿದ್ದರು.. ನಿಲ್ಲಿಸಿ ನಾಲೆಯ ಬಳಿ ಬಂದು ಮೂವರೂ ಸಹ ಒಮ್ಮೆಲೆ ನಾಲೆಗೆ ಹಾರಿ ಜೀವ ಕಳೆದುಕೊಂಡಿದ್ದಾರೆ.. ಹೌದು ಹಣವಿಲ್ಲದೇ ಆರ್ಥಿಕ ತೊಂದರೆಯಿಂದ ಕುಟುಂಬಗಳು ಜೀವ ಕಳೆದುಕೊಂಡ ಸಾಕಷ್ಟು ಘಟನೆಗಳು ಸುದ್ದಿಗಳನ್ನು ನೋಡಿದ್ದೇವೆ ಕೇಳಿದ್ದೇವೆ.. ಆದರೆ ಎಲ್ಲವೂ ಇದ್ದು ನೆಮ್ಮದಿ ಇಲ್ಲದಾಗಿ ಮರ್ಯಾದೆಗೆ ಅಂಜಿ ಈ ರೀತಿ ಸಂಪೂರ್ಣ ಕುಟುಂಬವೇ ಇಲ್ಲವಾಗಿರುವ ಘಟನೆ ಇದೀಗ ಕುಟುಂಬದವರನ್ನು ಹಾಗೂ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ..

ಹೌದು ಇತ್ತ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಧಿಕಾರಿಗಳು ಮೂವರನ್ನು ನಾಲೆಯಿಂದ ಹೊರ ತೆಗೆದಿದ್ದಾರೆ.. ಆದರೆ ಇವರುಗಳ ಇಂತಹ ನಿರ್ಧಾರಕ್ಕೆ ಕಾರಣ ಸ್ಪಷ್ಟವಾಗಿಲ್ಲ.. ಆದರೆ ಪ್ರಾಥಮಿಕ ಹಂತದ ತನಿಖೆಯಲ್ಲಿ ಕೆಲ ವಿಚಾರ ತಿಳಿದಿದೆ.. ಹೌದು ಮಗಳಿಗೆ ಕಳೆದ ತಿಂಗಳಷ್ಟೇ ಮದುವೆ ಮಾಡಿದ್ದರು.. ಆದರೆ ಒಂದೇ ತಿಂಗಳಿಗೆ ಅಳಿಯ ಮಗಳನ್ನು ಬಿಟ್ಟುಬಿಟ್ಟಿದ್ದ ಎಂದು ತಿಳಿದುಬಂದಿದ್ದು.. ಇದರಿಂದ ಗೌರವ ಹಾಳಾಯಿತು ಎಂದು ಮನನೊಂದಿದ್ದ ರಮೇಶ್ ಅವರು ಆತುರ ಪಟ್ಟು ಇಂತಹ ನಿರ್ಧಾರ ಮಾಡಿದ್ದು ಸಂಪೂರ್ಣ ಕುಟುಂಬವೇ ಇಲ್ಲವಾಗಿ ಹೋಗಿದೆ.. ಹೌದು ಮಗಳಿಗೆ ಬೆಂಬಲವಾಗಿ ನಿಂತು ಆಲೆ ಹೊಸ ಜೀವನ ಕಟ್ಟಿಕೊಳ್ಳಲು ನೆರವಾಗಬೇಕಿದ್ದ ತಂದೆಯೇ ದುಡುಕಿಬಿಟ್ಟರು ಎನಿಸುತ್ತಿದೆ..

ಹೌದು ಮದುವೆ ಮಾಡಿದರು ಅದು ಸರಿ ಬರಲಿಲ್ಲವಾದರೆ ಅದಕ್ಕಿಂತ ಮಿಗಿಲಾಗಿ ಮಗಳು ಮುಖ್ಯವೆಂದು ಭಾವಿಸಬೇಕಿತ್ತು.. ಆದರೆ ಆ ತಂದೆ ಸಂಬಂಧಿಕರ ಮುಂದೆ ಮರ್ಯಾದೆ ಹೋಯಿತೆಂದು ದುಡುಕಿ ನಿರ್ಧಾರ ಮಾಡಿಬಿಟ್ಟರು.. ಯಾರೇ ಆಗಲಿ ಸಂಸಾರ ನಡೆಸಲು ಮನಸ್ಸಿದ್ದರೆ ಮಾತ್ರ ಮದುವೆಯಾಗಿ.. ಒಂದು ಮದುವೆ ಅನ್ನೋದು ಕೇವಲ‌ ಇಬ್ಬರ ನಡುವೆ ನಡೆಯೋದಲ್ಲ.. ಎರಡು ಕುಟುಂಬಗಳ ನಡುವೆ ನಡೆಯುವಂತದ್ದು.. ಆ ಮದುವೆಯಿಂದ ಏನಾದರೂ ಆದರೆ ಎರಡೂ ಕುಟುಂಬಗಳು ಸಹ ನೋವು ಪಡುವಂತಾಗಿ ಹೋಗುತ್ತದೆ.. ಅದನ್ನೂ ಮೀರಿ ಈ ರೀತಿ ಕುಟುಂಬವೇ ಇಲ್ಲವಾಗಿ ಹೋಗುತ್ತದೆ.. ದಯವಿಟ್ಟು ಯಾರೂ ಈ ರೀತಿ‌‌ ಮಾಡಬೇಡಿ.. ಅಕಸ್ಮಾತ್ ಹೊಂದಾಣಿಕೆ ಇಲ್ಲವಾಯಿತಾ.. ಜೊತೆಯಲ್ಲಿ ಇರಲು ಸಾಧ್ಯವೇ ಇಲ್ಲವಾ ಬಿಟ್ಟು ಸ್ವಾವಲಂಭಿಯಾಗಿ ಬದುಕಿ..

ಇರುವುದೊಂದು ಜೀವನ ಅದನ್ನು ನಿಮ್ಮನ್ನು ಪಡೆಯುವ ಯೋಗ್ಯತೆ ಇಲ್ಲದವರಿಗಾಗಿ ಆ ಜೀವನವನ್ನು ಅಂತ್ಯ ಮಾಡಿಕೊಳ್ಳಬೇಡಿ ಅಷ್ಟೇ.. ಕಳೆದ ತಿಂಗಳಷ್ಟೇ ಮದುವೆ ಸಂಭ್ರಮದಲ್ಲಿದ್ದ ಮನೆ ಇಂದು ಸೂತಕದ ಮನೆಯಾಯಿತು.. ಮಗಳ ಮದುವೆ ಮಾಡಿ ನೆಮ್ಮದಿಯಾಗಿ ಇರಬೇಕಾದ ತಂದೆ ತಾಯಿ ಇಲ್ಲವಾದರು.. ಮನೆಯಲ್ಲಿ ಮಗಳನ್ನು ಅಳಿಯನನ್ನು ಕರೆಸಿ ಸಂಭ್ರಮದ ದಿನಗಳನ್ನು ಕಳೆಯಬೇಕಿದ್ದ ಆ ಹಿರಿ ಜೀವಗಳು ಇಂತಹ ನಿರ್ಧಾರ ಮಾಡಿದ್ದಾರೆಂದರೆ ಅವರಿಗೆ ಅದೆಷ್ಟೋ ನೋವಾಯಿತೋ.. ಇತ್ತ ಗಂಡನ ಜೊತೆ ಹೊಸ ಜೀವನ ಶುರು ಮಾಡಿ ಬದುಕಿ ಬಾಳಬೇಕಿದ್ದ ಹೆಣ್ಣು ಮಗಳು ಚಿಕ್ಕ ವಯಸ್ಸಿಗೆ ಜೀವನ ಮುಗಿಸುವಂತಾಯಿತು.. ಎಲ್ಲಕ್ಕೂ ಮಿಗಿಲಾಗಿ ಆ ಮನೆಯೇ ಇಲ್ಲವಾಯಿತೆಂದರೆ ಅದಕ್ಕಿಂತ ನೋವಿನ ವಿಚಾರ ಮತ್ತೇನಿದೆ.. ದಯವಿಟ್ಟು ಯಾರೂ ಸಹ ದುಡುಕಬೇಡಿ.. ಜೀವನ ಮುಖ್ಯ.. ಮಗಳಿಗೆ ಹೊಸ ಬದುಕು ಕಟ್ಟಿಕೊಡಬಹುದಾಗಿತ್ತು.. ಕಷ್ಟದ ದಿನಗಳನ್ನು ದಾಟಿದ್ದರೆ ಈ ಕುಟುಂಬಕ್ಕೂ ನೆಮ್ಮದಿಯ ಜೀವನ ಇತ್ತೋ ಏನೋ ಆದರೆ ಕಾಲ ಮಿಂಚಿ ಹೋಯಿತು ಅಷ್ಟೇ…