ನೋವಿನ ವಿಚಾರ ಹಂಚಿಕೊಂಡ ಶ್ವೇತಾ ಚಂಗಪ್ಪ..

0 views

ಕನ್ನಡ ಕಿರುತೆರೆಯ ಖ್ಯಾತ ನಟಿ ಶ್ವೇತಾ ಚಂಗಪ್ಪ ಸದ್ಯ ಮಜಾ ಟಾಕೀಸ್‌ ಮೂಲಕ ರಾಣಿ ಎಂದೇ ಖ್ಯಾತಿ ಪಡೆದಿದ್ದರು. ಆದರೆ ಕಳೆದ ವರ್ಷ ತಾಯಿಯಾದ ಕಾರಣದಿಂದ ಕೊರೊನಾ ಲಾಕ್‌ ಡೌನ್‌ ನಂತರ ಶುರುವಾದ ಮಜಾ ಟಾಕೀಸ್‌ ಹೊಸ ಸೇಸನ್‌ ನಿಂದ ಶ್ವೇತಾ ಚಂಗಪ್ಪ ಹೊರ ಉಳಿದಿದ್ದರು.. ನಂತರದಲ್ಲಿ ಕೆಲವೊಂದು ಸಂಚಿಕೆಗಳಲ್ಲಿ ಕಾಣಿಸಿಕೊಂಡರು ಸಹ ಮನೆಯಲ್ಲಿ ಸಣ್ಣ ಮಗು ಇದ್ದ ಕಾರಣ ಕೊರೊನಾ ಮುನ್ನೆಚ್ಚರಿಕಾ ಕ್ರಮತೆಗೆದುಕೊಳ್ಳುವ ಸಲುವಾಗಿ ಪೂರ್ಣ ಪ್ರಮಾಣದಲ್ಲಿ ಎಲ್ಲಾ ಸಂಚಿಕೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ..

ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಇರುವ ಶ್ವೇತಾ ಚಂಗಪ್ಪ ಮಗನ ಫೋಟೋಗಳು ವೀಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದರು. ಇನ್ನು ಮನೆಯಲ್ಲಿಯೇ ಇದ್ದುಕೊಂಡು ಹೊಸ ಉದ್ಯಮ ವನ್ನು ಆರಂಭ ಮಾಡಿದ್ದ ಶ್ವೇತಾ ಚಂಗಪ್ಪ ತಾರಾ ಡಿಸೈನರ್ಸ್‌ ಮೂಲಕ ಸೆಲಿಬ್ರೆಟಿಗಳು ಹಾಗೂ ಸಮಾರಂಭಗಳಿಗೆ ಬಟ್ಟೆಗಳನ್ನು ಡಿಸೈನ್‌ ಮಾಡಿಕೊಡುವ ಉದ್ಯಮ ಶುರು ಮಾಡಿ ಕೊಎಒನಾ ಸಂಕಷ್ಟದ ಸಮಯದಲ್ಲಿ ಕೆಲವರಿಗೆ ಉದ್ಯೋಗವನ್ನು ಸಹ ನೀಡಿದ್ದರು.. ಇನ್ನು ಸದ್ಯ ಕಿರುತರೆಯಿಂದ ಸಂಪೂರ್ಣವಾಗಿ ಬ್ರೇಕ್‌ ಪಡೆದಿರುವ ಶ್ವೇತಾ ಚಂಗಪ್ಪ ಮಗ ಜಿಯಾನ್‌ ಅಯ್ಯಪ್ಪನ ಜೊತೆ ಸಮಯ ಕಳೆಯುತ್ತಿದ್ದರು.. ಮನೆಯಲ್ಲಿ ಅಡುಗೆ ಮಾಡುವ ಹಾಗೂ ಮಗನೊಟ್ಟಿಗಿನ ವೀಡಿಯೋಗಳನ್ನು ಹಂಚಿಕೊಳ್ಳುತಿದ್ದ ಶ್ವೇತಾ ಚಂಗಪ್ಪ ಇದೀಗ ನೋವಿನ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ..

ಹೌದು ಶ್ವೇತಾ ಚಂಗಪ್ಪ ಮಜಾ ಟಾಕೀಸ್‌ ಬಿಟ್ಟಿದ್ದಕ್ಕೆ ಮುಖ್ಯ ಕಾರಣವೇ ಮಗ ಜಿಯಾನ್‌ ಅಯ್ಯಪ್ಪ.. ಹೊರಗೆ ಕೊರೊನಾ ಇದ್ದ ಕಾರಣ ತಾವು ಚಿತ್ರೀಕರಣದಲ್ಲಿ ಭಾಗವಹಿಸಿದರೆ ಬಹಳ ಜನರ ಜೊತೆ ಇರಬೇಕಿದ್ದ ಕಾರಣ ಮನೆಗೆ ಮರಳಿದರೆ ಮನೆಯಲ್ಲಿ ಮಗುವಿನ ಜೊತೆಯೂ ಇರಬೇಕಿದ್ದ ಕಾರಣದಿಂದಾಗಿ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರು.. ಆದರೆ ಇದೀಗ ಬಹಳಷ್ಟು ಮುನ್ನೆಚ್ಚರಿಕೆ ಪಡೆದಿದ್ದರು ಸಹ ಶೌಏತಾ ಚಂಗಪ್ಪ ಅವರಿಗೆ ಕೊರೊನಾ ಸೋಂಕು ಕಾಈಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿದ್ದಾರೆ.. ಹೌದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಶ್ವೇತಾ ಚಂಗಪ್ಪ ಅವರು “ಬಹಳಷ್ಟು ಕಾಳಜಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸಹ ನನಗೆ ಕೊರೊನಾ ಪಾಸಿಟಿವ್‌ ಆಗಿದೆ..

ಸದ್ಯ ನಾನು ಹೋಂ ಕ್ವಾರಂಟೈನ್‌ ನಲ್ಲಿದ್ದು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದೇನೆ.. ದಯವಿಟ್ಟು ನನ್ನ ಸಂಪರ್ಕಕ್ಕೆ ಬಂದಿದ್ದವರು ಈ ಕೂಡಲೇ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ.. ಆರೋಗ್ಯದಿಂದಿರಿ.. ಸುರಕ್ಷಿತವಾಗಿರಿ..” ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ..