ನಿಜಕ್ಕೂ ಶ್ವೇತಾ ಚಂಗಪ್ಪ ಅವರ ಸ್ಥಿತಿ ಯಾರಿಗೂ ಬಾರದಿರಲಿ.. ಕಣ್ಣೀರಿಟ್ಟು ಅಂಗಲಾಚಿದ ನಟಿ..

0 views

ನಿಜಕ್ಕೂ ಈ ಕೊರೊನಾ ಎರಡನೇ ಅಲೆ ಜನರನ್ನು ನಲುಗಿಸುತ್ತಿದೆ.. ಸಾಮನಯ ಜನರು ಬೀದಿ ಬೀದಿಗಳಲ್ಲಿ ನಿಂತು ಬೆಡ್ ಗಾಗಿ ಔಷಧಿಗಾಗಿ‌.. ಅಂತ್ಯ ಸಂಸ್ಕಾರ ಮಾಡುವುದಕ್ಕಾಗಿ.. ಆಕ್ಸಿಜನ್ ಗಾಗಿ ಪರದಾಡುತ್ತಲೇ ಇದ್ದಾರೆ.. ಅತ್ತ ಕಲಾವಿದರುಗಳು ಸಾಲು ಸಾಲಾಗಿ ಕೊರೊನಾಗೆ ತುತ್ತಾಗುತ್ತಿದ್ದು ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ.. ಇನ್ನು ಕಿರುತೆರೆ ನಟಿ ಶ್ವೇತಾ ಚಂಗಪ್ಪ ಅವರ ಪರಿಸ್ಥಿತಿ ನಿಜಕ್ಕೂ ಯಾರಿಗೂ ಬಾರದಿರಲಿ ಎನ್ನುವಂತಿದೆ.. ಹೌದು ಕಳೆದ ಕೆಲ ದಿನಗಳ ಹಿಂದೆ ನಟಿ ಶ್ವೇತಾ ಚಂಗಪ್ಪ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂಬ ಸುದ್ದಿ ಕೇಳಿಬಂದಿತ್ತು ನಿಜ.. ಆದರೆ ಆನಂತರ ಶ್ವೇತಾ ಅನುಭವಿಸಿದ ನೋವುಗಳು ಒಂದೆರೆಡಲ್ಲಾ.. ಹೌದು.. ಶ್ವೇತಾ ಚಂಗಪ್ಪ ಅವರ ಪರಿಸ್ಥಿತಿ ಎಂತಹ ಶತ್ರುವಿಗೂ ಬೇಡ ಎನ್ನುವಂತಿತ್ತು.. ಶ್ವೇತಾ ಚಂಗಪ್ಪ ಅವರ ಮನೆಯಲ್ಲಿ ಶ್ವೇತಾ ಅವರಿಗೆ ಶ್ವೇತಾ ಚಂಗಪ್ಪ ಅವರ ತಾಯಿಗೆ ಇಬ್ಬರಿಗೂ ಸಹ ಕೊರೊನಾ ಪಾಸಿಟಿವ್ ಆಗಿ ಸಂಪೂರ್ಣ ಕುಟುಂಬವೇ ನಲುಗಿ ಹೋಯಿತು..

ಹೌದು ನಾವು ನೀವು ಮಾತ್ರವಲ್ಲ ಪ್ರತಿಯೊಬ್ಬರೂ ಸಹ ತಾಯಿಯ ಮೇಲೆ ಎಷ್ಟು ಅವಲಂಬಿತರಾಗಿರುತ್ತೇವೆ ಎಂದರೆ ತಾಯಿಗೆ ಕೊಂಚ ಆರೋಗ್ಯ ಕೆಟ್ಟರೂ ನಮ್ಮಗಳ ಕೈಕಾಲು ಆಡುವುದಿಲ್ಲ ಎನ್ನುವಂತಾಗಿ ಹೋಗುತ್ತದೆ.. ಇಲ್ಲಿ ಶ್ವೇತಾ ಅವರಿಗೆ ಕೊರೊನಾ ಸೋಂಕು.. ಅಮ್ಮನಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿತ್ತಲ್ಲದೇ ಪುಟ್ಟ ಕಂದ ಜಿಯಾನ್ ಗೂ ಸಹ ವಿಪರೀತ ಜ್ವರ ಕಾಣಿಸಿಕೊಂಡಿತ್ತು.. ಮಗುವನ್ನು ನೋಡಿಕೊಳ್ಳುವವರು ಯಾರಿಲ್ಲ.. ಅಮ್ಮ ಬೇಕು ಎಂದ ಅತ್ತರೆ ಸಮಾಧಾನ ಮಾಡುವುದು ಬಹಳ ಕಷ್ಟವಾಯಿತು.. ಮಗುವನ್ನು ಮುಟ್ಟುವ ಹಾಗಿರಲಿಲ್ಲ.. ನಿಜಕ್ಕೂ ಇದೊಂದು ರೀತಿ ನರಕಯಾತನೇ ಸರಿ.. ಇಪ್ಪತ್ತೊಂದು ದಿನಗಳ ಕಾಲ ತಾವು ಅನುಭವಿಸಿದ ಕಷ್ಟದ ಬಗ್ಗೆ ಇದೀಗ ಶ್ವೇತಾ ಚಂಗಪ್ಪ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.. ಹೌದು “ನನಗೆ ಮೊದ ಮೊದಲು ಜ್ವರ ಕಾಣಿಸಿಕೊಂಡಿತು.. ಹಿಂದೆಯೇ ನೆಗಡಿ ಗಂಟಲು ನೋವು ಕಾಣಿಸಿಕೊಂಡಿತ್ತು.. ಮನೆಯಲ್ಲಿ ಪುಟ್ಟ ಮಗು ಬೇರೆ ಇತ್ತು..

ಅದೇ ಕಾರಣಕ್ಕೆ ನಾನು ಪ್ರತ್ಯೇಕ ರೂಮ್ ನಲ್ಲಿ ಇರಲು ಆರಂಭಿಸಿದೆ.. ಬಿಟ್ಟು ಬಿಟ್ಟು ಜ್ವರ ಬರುತ್ತಿದ್ದ ಕಾರಣ ನಾನು ಕೊರೊನಾ ಪರೀಕ್ಷೆ ಮಾಡಿಸಿಕೊಂಡೆ.. ಆನಂತರ ಕೊರೊನಾ ಪಾಸಿಟಿವ್ ಬಂತು.. ಅದೊಂದು ಹೇಳಲಾಗದ ನೋವಾಗಿತ್ತು.. ಮಗು ಅಮ್ಮನ ಬಳಿ ಮಲಗಿಕೊಂಡಿದ್ದ.. ನಂತರ ಅಮ್ಮ ಹಾಗೂ ನನ್ನ ಪತಿ ಕೂಡ ಪರೀಕ್ಷೆಗೆ ಒಳಗಾದರು.. ಆಗ ಅಮ್ಮನಿಗೆ ಪಾಸಿಟಿವ್ ಬಂತು.. ನನಗೆ ತೀರಾ ಆತಂಕವಾಯಿತು.. ಮಗು ಅಮ್ಮನ ಬಳಿಯೇ ಮಲಗಿದ್ದ.. ನಂತರ ಮಗನಿಗೂ ಜ್ವರ ಕಾಣಿಸಿಕೊಂಡಿತು.. ಇದು ನಮ್ಮೆಲ್ಲರನ್ನು ತೀರಾ ಕುಗ್ಗುವಂತೆ ಮಾಡಿಬಿಟ್ಟಿತು.. ವೈದ್ಯರ ಸಲಹೆ ಪಡೆದು ಮಗನಿಗೆ ಔಷಧಿ ನೀಡುತ್ತಿದ್ದೆವು.. ಮಗನಿಗೆ ಜ್ವರ ಬಂದ ನಂತರ ನನ್ನ ಕೈಕಾಲು ನಡುಗಲು ಶುರುವಾಯಿತು.. ನನ್ನ ಪತಿ ಹಾಗೂ ಮಗುವನ್ನು ಸಂಬಂಧಿಕರ ಮನೆಗೆ ಕಳುಹಿಸುವ ಯೋಚನೆ ಮಾಡಿದ್ವಿ.. ಆದರೆ ವೈದ್ಯರು ಬೇಡವೆಂದರು.. ವೈದ್ಯರು ಹೇಳಿದಂತೆ ಪದೇ ಪದೇ ಸ್ಯಾನಿಟೈಸ್ ಮಾಡಿಕೊಳ್ಳುತ್ತಿದ್ದೆವು.. ಮಾಸ್ಕ್ ಧರಿಸಿ ಕೊಂಡು ಮಗುವನ್ನೂ ಸಹ ಎತ್ತಿಕೊಳ್ಳುತ್ತಿದ್ದೆವು..

ಪಾಸಿಟಿವ್ ಬಂದಿದ್ದರೂ ಸಹ ಬೇರೆ ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ಸ್ಯಾನಿಟೈಸ್ ಮಾಡಿಕೊಂಡು ನಾವೇ ಅಡುಗೆ ಮಾಡುತ್ತಿದ್ದೆವು.. ಮಾಸ್ಕ್ ಹಾಕಿಕೊಂಡು ಮಗನಿಗೆ ಊಟವನ್ನು ಸಹ ಮಾಡಿಸುತ್ತಿದ್ದೆ.. ರಾತ್ರಿ ಸಮಯದಲ್ಲಿ ಅಪ್ಪನ ಜೊತೆ ನಿದ್ರೆ ಮಾಡುತ್ತಿದ್ದ.. ದೇವರ ದಯೆ ನಾಲ್ಕೈದು ದಿನದಲ್ಲಿ ಮಗನಿಗೆ ಜ್ವರ ಕಡಿಮೆಯಾಯಿತು.. ಇಪ್ಪತ್ತೊಂದು ದಿನದಲ್ಲಿ ಮೊದಲ ಹತ್ತು ದಿನಗಳ ಕಾಲ ನಾವು ಕಣ್ಣೀರು ಹಾಕದ ದಿನವೇ ಇಲ್ಲ.. ತುಂಬಾ ಸಹಾಯಕರಾಗಿದ್ವಿ.. ಆದರೆ ದೇವರ ದಯೆ ಮಗ ಹುಷಾರಾದ.. ಸ್ವಲ್ಪ ದಿನಗಳು ಹೊಟೆಲ್ ನಿಂದಲೂ ಊಟ ತರಿಸುತ್ತಿದ್ದೆವೆ.. ಆದರೆ ಹಿಡಿಸುತ್ತಿರಲಿಲ್ಲ.. ರುಚಿಯೂ ವಾಸನೆಯೂ ತಿಳಿಯುತ್ತಲೇ ಇರಲಿಲ್ಲ.. ಗಂಟಲಿಗೆ ಇಡ್ಲಿ ಇಳಿಯುತ್ತಲೇ ಇರಲಿಲ್ಲ.. ನನಗೆ ಉಸಿರಾಟದ ಸಮಸ್ಯೆಯೂ ಆಯಿತು..

ಅಮ್ಮನಿಗೆ ಲಸಿಕೆ ಕೂಡ ಹಾಕಿಸಿದ್ವಿ.. ಅವರಂತೂ ನನಗೆ ಬಹಳ ಸುಸ್ತು.. ಆಗೋದೇ ಇಲ್ಲ ಎನ್ನುತ್ತಿದ್ದರು.. ಅವರು ಎದ್ದೇಳಲು ಸಹ ಆಗುತ್ತಿರಲಿಲ್ಲ.. ಅಮ್ಮನನ್ನು ಈ ರೀತಿ ಕಂಡಿದ್ದು ಇದೇ ಮೊದಲು ನಾನು.. ಇನ್ನು ನನಗೂ ಸಹ ವಿಪರೀತ ಸುಸ್ತು ಶುರುವಾಯಿತು ಟೀ ಮಾಡೋಕೆ ಅಡುಗೆ ಮಾಡೋಕೂ ಸಹ ಆಗದ ಪರಿಸ್ಥಿತಿ ಇತ್ತು.. ಬಹಳ ಕಷ್ಟವಾದರೂ ದಿನಕ್ಕೆ ಮೂರ್ನಾಲ್ಕು ಬಾರಿ ಮನೆಯನ್ನು ಸ್ಯಾನಿಟೈಸ್ ಮಾಡುತ್ತಿದ್ದೆವು.. ಮಗುವಿಗೆ ಅಡುಗೆ ಮಾಡಲು ಹಿಂಸೆಯಾಗಿತ್ತು.. ಮೂರ್ನಾಲ್ಕು ಬಾರಿ ಪಾತ್ರೆ ತೊಳೆಯಬೇಕಿತ್ತು.. ಜೀವನದಲ್ಲಿ ಇಂತಹ ದಿನಗಳನ್ನು ನಾನು ಎಂದಿಗೂ ಕಂಡಿರಲಿಲ್ಲ.. ನಾವು ಬಹಳ ಎಚ್ಚರಿಕೆ ಇಂದ ಇದ್ದರೂ ಸಹ ಕೊರೊನಾ ಸೋಂಕು ತಗುಲಿತ್ತು.. ಇದೀಗ ಇಪ್ಪತ್ತೊಂದು ದಿನಗಳ ಕಾಲ ಅದರೊಟ್ಟಿಗೆ ಹೋರಾಟ ಮಾಡಿ ಚೇತರಿಸಿಕೊಂಡಿದ್ದೇವೆ.. ದಯವಿಟ್ಟು ಕೈ ಮುಗಿದು ಕೇಳಿಕೊಳ್ತೇನೆ ಎಚ್ಚರವಾಗಿರಿ.. ಮಾಸ್ಕ್ ಹಾಕಿಕೊಳ್ಳಿ.. ಕೊರೊನಾ ಇಲ್ಲ ಅಂತ ದಯವಿಟ್ಟು ಉಡಾಫೆ ಮಾಡಬೇಡಿ.. ಅದೊಂದು ಯಾತನೆ.. ಜೀವ ಮುಖ್ಯಾನಾ ಜೀವನ ಮುಖ್ಯಾನಾ ಅಂತಾರೆ.. ಜೀವ ಇದ್ದರೆ ಅಲ್ವಾ ಜೀವನ.. ದಯವಿಟ್ಟು ಮಾಸ್ಕ್ ಹಾಕಿಕೊಳ್ಳೊ.. ಇಲ್ಲವಾದರೆ ಉಸಿರೇ ನಿಂತು ಹೋಗುತ್ತದೆ.. ದಯವಿಟ್ಟು ಎಚರವಾಗಿರಿ ಎಂದು ಕೈ ಮುಗಿದು ಬೇಡಿಕೊಳ್ಳುವ ರೀತಿಯಲ್ಲಿಯೇ ಮನವಿ ಮಾಡಿದ್ದಾರೆ..