ಕೊರೊನಾ ಕಷ್ಟವನ್ನು ಎದುರಿಸಿ ಬಂದ ಶ್ವೇತಾ ಚಂಗಪ್ಪ ಗಂಡನ ಬಗ್ಗೆ ಹೇಳಿರುವ ಮಾತು ನೋಡಿ..

0 views

ಕೊರೊನಾದ ಎರಡನೆ ಅಲೆ ಜನರನ್ನು ನಲುಗಿಸುತ್ತಿದೆ ಎಂಬುದು ಅಕ್ಷರಶಃ ಸತ್ಯದ ಮಾತು.. ಈ ಮಾತು ಸಾಮಾನ್ಯ ಜನರಿಗೆ ಮಾತ್ರವಲ್ಲ ಸೆಲಿಬ್ರೆಟಿಗಳಿಗೂ ಅನ್ವಯಿಸುತ್ತಿದೆ.. ಅದೆಷ್ಟೋ ಕಲಾವಿದರು ನಿರ್ಮಾಪಕ ನಿರ್ದೇಶಕರುಗಳು ಕೊರೊನಾದಿಂದಾಗಿ ಜೀವವನ್ನೇ ಕಳೆದುಕೊಂಡ ಉದಾಹರಣೆಗಳಿವೆ.. ಮತ್ತಷ್ಟು ಮಂದಿ ಚೇತರಿಸಿಕೊಂಡು ಸಾಕಪ್ಪ ಈ ಕೊರೊನಾ ಸಹವಾಸ.. ದಯವಿಟ್ಟು ನೀವೆಲ್ಲರೂ ಎಚ್ಚರವಾಗಿರಿ ಎಂದು ಉಳಿದವರಿಗೆ ತಮ್ಮ ನೋವಿನಿಂದ ಪಾಠ ಹೇಳುತ್ತಿದ್ದಾರೆ.. ಇನ್ನು ಜನ ಸಾಮಾನ್ಯರ ಪಾಡಂತೂ ಹೇಳತೀರದಾಗಿದೆ.. ಬೆಡ್ ನಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ಬಯಲಿಗೆಳೆದಿದ್ದರೂ ಸಹ ಬೆಡ್ ಸಿಗದೇ ಇನ್ನೂ ಸಹ ಜನರು ಒದ್ದಾಡುತ್ತಿದ್ದಾರೆ..

ಅತ್ತ ಪ್ರತಿದಿನ ನೂರರ ಲೆಕ್ಕದಲ್ಲಿ ಜನರ ಜೀವಗಳು ಹಾರಿ ಹೋಗುತ್ತಲೇ ಇವೆ.. ಕುಟುಂಬದ ನೋವು ಮುಗಿಲು ಮುಟ್ಟತ್ತಲೇ ಇದೆ.. ಕೊರೊನಾ ಬಂದಿರುವ ಕುಟುಂಬದ ಸದಸ್ಯರನ್ನು ಉಳಿಸಿಕೊಳ್ಳಲು ಮನೆಯವರು ಪರದಾಡುತ್ತಿರುವ ರೀತಿ ನಿಜಕ್ಕೂ ಮನಕಲಕುವಂತಿದೆ.. ಯಾರಿಗೂ ಅಂತಹ ಪರಿಸ್ಥಿತಿ ಬಾರದಿರಲಿ ಎನಿಸುತ್ತದೆ.. ಇನ್ನು ಇಂತಹ ನೋವನ್ನು ಅನುಭವಿಸಿ ಇದೀಗ ಚೇತರಿಸಿಕೊಂಡವರು ಶ್ವೇತಾ ಚಂಗಪ್ಪ.. ಇಂತಹ ಸಮಯದಲ್ಲಿ ಗಂಡನ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.. ಹೌದು ಶ್ವೇತಾ ಚಂಗಪ್ಪ ಅವರಿಗೆ ಕಳೆದ ತಿಂಗಳಷ್ಟೇ ಕೊರೊನಾ ಸೋಂಕು ಕಾಣಿಸಿಕೊಂಡು ಬಹಳಷ್ಟು ನೋವು ಅನುಭವಿಸಿದ್ದರು.. ತಮಗಷ್ಟೇ ಅಲ್ಲದೇ ತಮ್ಮ ತಾಯಿಗೂ ಕೂಡ ಪಾಸಿಟಿವ್ ಆಗಿತ್ತು.. ಅತ್ತ ಪುಟ್ಟ ಮಗುವಿಗೂ ವಿಪರೀತ ಜ್ವರ ಬಂದು.. ನನ್ನ ಕೈ ಕಾಲು ನಡುಗಲು ಆರಂಭವಾಯಿತು.. ಹನ್ನೊಂದು ದಿನ ನಾವು ಕಣ್ಣೀರಿಡದ ದಿನವೇ ಇಲ್ಲ ಎಂದು ನೋವು ಹಂಚಿಕೊಂಡಿದ್ದರು..

ಮನೆಯಲ್ಲಿ ನನಗೂ ಅಮ್ಮನಿಗೂ ಇಬ್ಬರಿಗೂ ಸಹ ಕೊರೊನಾ ಪಾಸಿಟಿವ್ ಆಯ್ತು.. ಮಗುವನ್ನು ಮತ್ತು ನನ್ನ ಗಂಡನನ್ನು ಬೇರೆಡೆಗೆ ಕಳುಹಿಸಲು ಪ್ಲಾನ್ ಮಾಡಿದ್ವಿ.. ಮಗುವಿಗೂ ಜ್ವರ ಇತ್ತು.. ಆದರೆ ಡಾಕ್ಟರ್ ಬೇಡ ಎಂದರು.. ನಮ್ಮ ಅಮ್ಮನನ್ನು ಇಷ್ಟು ವರ್ಷದಲ್ಲಿ ಎಂದೂ ಸಹ ಆ ರೀತಿ ನೋಡಿರಲಿಲ್ಲ.. ನನ್ನ ಕೈಲಿ ಆಗೋದೆ ಇಲ್ಲ ಎಂದು ಐದು ದಿನ ಮಲಗಿ ಬಿಟ್ಟರು.. ಇನ್ನು ನಾನು ಮಾಸ್ಕ್ ಹಾಕಿಕೊಂಡೆ ಮಗುವನ್ನು ಎತ್ತಿಕೊಳ್ಳುತ್ತಿದ್ದೆ.. ಪದೇ ಪದೇ ಸ್ಯಾನಿಟೈಸ್ ಮಾಡಿಕೊಳ್ಳುತ್ತಿದ್ವಿ.. ಪಾಸಿಟಿವ್ ಇದ್ದರೂ ಸಹ ನಾವೇ ಅಡುಗೆ ಮಾಡಿ ಮಗುವಿಗೆ ಊಟ ಮಾಡಿಸುತ್ತಿದೆ.. ದೇವರ ದಯೆ ನಾಲ್ಕು ದಿನದಲ್ಲಿ ಮಗಿವಿಗೆ ಜ್ವರ ಹೋಯಿತು.. ನಾವು 21 ದಿನಗಳ ಕಾಲ ಮನೆಯಲ್ಲಿ ಇದ್ದರೂ ಸಹ ಮಾಸ್ಕ್ ಇಲ್ಲದೇ ಇರುತ್ತಿರಲಿಲ್ಲ.. ಮೊದಲ ಹತ್ತು ದಿನ ಕಣ್ಣೀರಿಡದ ದಿನವಿಲ್ಲ.. ದಯವಿಟ್ಟು ನೀವೆಲ್ಲಾ ಅಂದುಕೊಂಡಷ್ಟು ಸುಲಭವಲ್ಲ..

ಎಲ್ಲರೂ ಹುಷಾರಾಗಿರಿ.. ನಾವು ಬಹಳ ಎಚ್ಚರಿಕೆ ವಹಿಸಿದ್ದರೂ ಸಹ ನಮಗೆ ಪಾಸಿಟಿವ್ ಆಗಿತ್ತು.. ಎಷ್ಟು ಎಚ್ಚರವಾಗಿದ್ದರೂ ಸಾಲದು.. ದಯವಿಟ್ಟು ಹುಷಾರಾಗಿರಿ ಎಂದು ಕೈಮುಗಿದು ಎಲ್ಲರಲ್ಲಿಯೂ ಮನವಿ ಮಾಡಿದ್ದರು.. ನೋವು ಅನುಭವಿಸಿದವನಿಗೆ ಮಾತ್ರವೇ ಆ ನೋವಿನ ನಿಜವಾದ ಅರ್ಥ ತಿಳಿವುದು ಎನ್ನುವುದಕ್ಕೆ ಶ್ವೇತಾ ಚಂಗಪ್ಪ ಅವರೇ ಉದಾಹರಣೆ.. ಇನ್ನು ಇದೀಗ ಇದೀಗ ಇಂದು ಶ್ವೇತಾ ಚಂಗಪ್ಪ ಅವರ ಮದುವೆ ವಾರ್ಷಿಕೋತ್ಸವದ ದಿನವಾಗಿದ್ದು ಕಷ್ಟದ ದಿನಗಳನ್ನು ದಾಟಿ ಬಂದ ಶ್ವೇತಾ ಅವರು ತಮ್ಮ ಪತಿಯ ಬಗ್ಗೆ ಮಾತನಾಡಿದ್ದಾರೆ.. ಹೌದು “ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರೀತಿಯ ಪತಿ ಕಿರಣ್ ಅವರಿಗೆ.. ಮದುವೆ ವಾರ್ಷಿಕೋತ್ಸವ ಎಂದರೆ ಕೇವಲ ಪಾರ್ಟಿ.. ಸಂಗೀತ.. ಉಡುಗೊರೆ ಹಾಗೂ ಮಜ ಮಾಡೋದು ಮಾತ್ರವಲ್ಲ.. ಆದರೆ ನಿಜವಾಗಿ ಒಬ್ಬರೊಗೊಬ್ಬರು ಸಮಯ ನೀಡುವುದು..

ಕಷ್ಟದಲ್ಲಿ ಜೊತೆಯಾಗಿ ಇರುವುದು.. ಪ್ರೀತಿ ನೀಡೋದು ಹಾಗೂ ಒಟ್ಟಿಗೆ ಕಷ್ಟವನ್ನು ಎದುರಿ‌ಸಿ ಮುನ್ನಡೆಯೋದು.. ನನಗೆ ಗೊತ್ತಿಲ್ಲ ನಮ್ಮ ಜೀವನದಲ್ಲಿ ಇನ್ನು ಏನೇನು ಕಷ್ಟಗಳನ್ನು ಎದುರಿಸಬೇಕೋ..ಸವಾಲುಗಳನ್ನು ಮಣಿಸೊ ಮುನ್ನಡೆಯಬೇಕೋ.. ಆದರೆ ನೀವು ಜೊತೆಯಲ್ಲಿದ್ದರೆ ಸಾಕು ಅದನ್ನೆಲ್ಲಾ ಸೋಲಿಸಿ ಮುಂದೆ ಸಾಗಬಹುದು.. ನಿಮ್ಮ‌ ಇರುವಿಕೆಯ ಮುಂದೆ ಬೇರೆ ಯಾವುದೂಸಹ ದೊಡ್ಡದಲ್ಲ..‌ ನಿಮ್ಮನ್ನು ಹಾಗೂ ಮಗ ಜಿಯಾನ್ ನನ್ನು ಬಹಳ ಪ್ರೀತಿಸುತ್ತೇನೆ..‌ ಎಂದು ಬರೆದು ಪೋಸ್ಟ್ ಮಾಡಿದ್ದು ಗಂಡನಿಗೆ ವಿಶೇಷವಾಗಿ ಮದುವೆ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ..