ನಟಿ ಶ್ವೇತಾ ಹಾಗೂ ಅವರ ಗಂಡ ಆರ್‌ ಜೆ ಪ್ರದೀಪ್ ಇಬ್ಬರಿಗೂ ಕೊರೊನಾ‌ ಪಾಸಿಟಿವ್.. ಗಂಡನ ಆರೋಗ್ಯ ಗಂಭೀರವಾಗುತ್ತಿದ್ದಂತೆ ಶ್ವೇತಾ ತೆಗೆದುಕೊಂಡ ನಿರ್ಧಾರ ನೋಡಿ..

0 views

ಕೊರೊನಾ ಎರಡನೇ ಅಲೆಗೆ ದಿನದಿಂದ ದಿನಕ್ಕೆ ಸಾಲು ಸಾಲಾಗಿ ಕಲಾವಿದರೂ ಸಹ ತುತ್ತಾಗುತ್ತಿದ್ದು ಕೆಲವರು ಆಸ್ಪತ್ರೆ ಸೇರಿ ಗುಣಮುಖರಾದರೆ ಮತ್ತೆ ಕೆಲವರು ಮನೆಯಲ್ಲಿಯೇ ಇದ್ದು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.. ಇನ್ನು ಕೆಲ ದಿನಗಳ ಹಿಂದಷ್ಟೇ ಕಿರುತೆರೆಯ ಸಾಕಷ್ಟು ಕಲಾವಿದರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು ನಟಿ ಶ್ವೇತಾ ಚಂಗಪ್ಪ.. ನಟಿ ಶಾಲಿನಿ.. ನಟಿ ಸಂಜನಾ.. ಮಜಾ ಟಾಕೀಸಿನ ರೆಮೋ.. ಹೀಗೆ ಸಾಲು ಸಾಲು ಕಲಾವಿದರು ಸದ್ಯ ಚೇತರಿಸಿಕೊಂಡು ಕೊರೊನಾದಿಂದ ತಮಗಾದ ಅನುಭವವನ್ನು ಹಂಚಿಕೊಂಡು ಸ್ನೇಹಿತರು ಮುಂಜಾಗ್ರತೆ ವಹಿಸುವಂತೆ ಮನವಿ ಮಾಡಿದ್ದರು..

ಇನ್ನು ರಾಧಾ ರಮಣ ಧಾರಾವಾಹಿಯ ನಟಿ ರಾಧಾ ಮಿಸ್ ಎಂದೇ ಖ್ಯಾತರಾಗಿದ್ದ ನಟಿ ಶ್ವೇತಾ ಪ್ರಸಾದ್ ಹಾಗೂ ಅವರ ಪತಿ ಆರ್ ಜೆ ಪ್ರದೀಪ್ ಅವರಿಗೂ ಸಹ ಕೊರೊನಾ ಪಾಸಿಟಿವ್ ಆಗಿದ್ದು ಈ ಬಗ್ಗೆ ಶ್ವೇತಾ ಮಾತನಾಡಿದ್ದಾರೆ.. ಅದರಲ್ಲಿಯೂ ತನ್ನ ಗಂಡ ಪ್ರದೀಪ್ ಅವರ ಆರೋಗ್ಯ ಸ್ಥಿತಿ ಗಂಭೀರವಾದಾಗ ಏನು ಮಾಡಿದರೆಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.. ಹೌದು ಶ್ವೇತಾ ಹಾಗೂ ಆರ್ ಜೆ ಪ್ರದೀಪ್ ಇಬ್ಬರಿಗೂ ಕೊರೊನಾ ಪಾಸಿಟಿವ್ ಆಗಿತ್ತು.. ಆದರೆ ರ್ಯಾಪಿಡ್ ಟೆಸ್ಟ್ ನಲ್ಲಿ ಪ್ರದೀಪ್ ಅವರಿಗೆ ನಗಟಿವ್ ಬಂದು ಸಿಟಿ ಸ್ಕ್ಯಾನ್ ನಲ್ಲಿ ಪಾಸಿಟಿವ್ ಬಂದಿದೆ ತಕ್ಷಣ ಎಚ್ಚೆತ್ತುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.. ಹೌದು ಮೊದಮೊದಲು ಪ್ರದೀಪ್ ಅವರಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದು ಸಾಮಾನ್ಯ ಜ್ವರವೆಂದು ಮನೆಯಲ್ಲಿಯೇ ಔಷಧಿ ಪಡೆದಿದ್ದಾರೆ.. ನಂತರ ಮೂರು ದಿನದ ಬಳಿಕ ನಟಿ ಶ್ವೇತಾ ಅವರಿಗೂ ಸಹ ಸೋಂಕು ತಗುಲಿದ್ದು ಅವರಿಗೂ ಜ್ವರ ಬಂದಿದೆ.. ಇಬ್ಬರೂ ಮನೆಯಲ್ಲಿಯೇ ಇದ್ದು ಔಷಧಿ ಪಡೆದಿದ್ದಾರೆ.. ಆದರೆ ಪ್ರದೀಪ್ ಅವರ ಹುಟ್ಟುಹಬ್ಬದ ದಿನವೇ ಅವರಿಗೆ ವಿಪರೀತ ಉಸಿರಾಟದ ತೊಂದರೆ ಹಾಗೂ ಸುಸ್ತು ಕಾಣಿಸಿಕೊಂಡು ಆರೋಗ್ಯದ ಸ್ಥಿತಿ ಗಂಭೀರವಾಗಿದೆ..

ತಕ್ಷಣ ಎಚ್ಚೆತ್ತ ಶ್ವೇತಾ ಅವರು ಪ್ರದೀಪ್ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ.. ಆದರೆ ರಿಪೋರ್ಟ್ ನೆಗಟಿವ್ ಬಂದಿದೆ.. ಆದರೆ ಪ್ರದೀಪ್ ಆರೋಗ್ಯದಲ್ಲಿ ಮಾತ್ರ ಸುಧಾರಣೆಯಾಗಲಿಲ್ಲ.. ನಂತರ ಮತ್ತೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಇರುವುದು ತಿಳಿದಿದೆ.. ಶ್ವೇತಾ ಅವರಿಗೂ ಪಾಸಿಟಿವ್ ಆಗಿರುವುದು ತಿಳಿದಿದೆ.. ಇಬ್ಬರ ಸ್ಥಿತಿ ಗಂಭೀರವಾದರೂ ಸಹ ಶ್ವೇತಾ ಅವರು ತಮ್ಮ ಪೋಷಕರಿಗೆ ವಿಚಾರ ತಿಳಿಸದಿರಲು ನಿರ್ಧಾರ ಮಾಡಿದ್ದಾರೆ.. ಹಿರಿಯ ಜೀವಗಳು ಗಾಭರಿ ಆಗ್ತಾರೆ ಅಂತ ಸ್ನೇಹಿತರ ಸಹಾಯ ಪಡೆದು ಇಬ್ಬರೂ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ..

ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿ ಮನೆಯಲ್ಲಿಯೇ ಇಬ್ಬರೂ ಕ್ವಾರಂಟೈನ್ ಆಗಿದ್ದಾರೆ.. ಈ ವಿಚಾರವನ್ನೆಲ್ಲಾ ಹಂಚಿಕೊಂಡಿರುವ ಶ್ವೇತಾ ಪ್ರಸಾದ್ ಅವರು ಇಬ್ಬರೂ ಸದ್ಯ ಆರೋಗ್ಯವಾಗಿದ್ದೇವೆ.. ಮೂರು ನಾಲ್ಕು ಕೆಜಿ ತೂಕ ಕಳೆದುಕೊಂಡಿದ್ದೇವೆ.. ಹಣ್ಣು ತರಕಾರಿ ಸೊಪ್ಪು ಎಲ್ಲಾ ಹೆಚ್ಚಾಗಿ ಸೇವಿಸುತ್ತಿದ್ದೇವೆ.. ಇದೀಗ ನಾವಿಬ್ಬರೇ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಎಲ್ಲಾ ಕೆಲಸ ಮಾಡಿಕೊಂಡು ಒಬ್ಬರನ್ನೊಬ್ಬರು ಕಾಳಜಿ ಮಾಡುತ್ತಿದ್ದೇವೆ.. ಶುಚಿಯಾದ ರುಚಿಯಾದ ಊಟವೇ ನಿಜವಾಗಿ ನಮಗೆ ಔಷಧ.. ತಂಗಳು ಹಾಗೂ ಎಣ್ಣೆ ಪದಾರ್ಥಗಳನ್ನು ಹೆಚ್ಚು ತಿನ್ನದೇ ಪೌಷ್ಟಿಕ ಆಹಾರವನ್ನು ಸೇವನೆ ಮಾಡುತ್ತಿದ್ದೇವೆ ಎಂದಿದ್ದಾರೆ..

ಅಷ್ಟೇ ಅಲ್ಲದೇ ಮನೆಯಲ್ಲಿ ಹಿರಿಯರನ್ನು ಕಾಳಜಿಯಿಂದ ನೋಡಿಕೊಳ್ಳಿ.. ಅವರೇ ನಮಗೆ ಬಲ.. ಯಾರ ಮೇಲೆ ಕೋಪವಿದ್ದರೂ ಸಹ ಅದೆಲ್ಲವನ್ನು ಪಕ್ಕಕ್ಕಿಟ್ಟು ಮನೆಮಂದಿಗೆಲ್ಲಾ ವ್ಯಾಕ್ಸಿನ್ ಹಾಕಿಸಿ.. ನಾವು ನಮ್ಮಿಬ್ಬರ ಪರಿಸ್ಥಿತಿ ಗಂಭೀರವಾಗಿದ್ದರೂ ಸಹ ಮನೆಯಲ್ಲಿ ಗಾಬರಿ ಮಾಡಿಕೊಳ್ತಾರೆ ಅಂತ ವಿಚಾರ ತಿಳಿಸಿರಲಿಲ್ಲ.. ಸಂಪೂರ್ಣವಾಗಿ ಗುಣಮುಖರಾದ ನಂತರವೇ ವಿಚಾರ ಹೇಳಿದ್ವಿ.. ಯಾರನ್ನು ದೂರದೇ ನಿಮ್ಮ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.. ಎಚ್ಚರಿಕೆ ಇಂದಿರಿ.. ಯಾವುದೇ ಸಂದರ್ಭವಾದರೂ ಧೈರ್ಯವಾಗಿ ನಿಭಾಯಿಸಿ.. ನಮ್ಮೊಳಗಿನ ಆತ್ಮ ಸ್ಥೈರ್ಯ ಇಂತಹ ಸಮಯದಲ್ಲಿ ಬಹಳ ಕೆಲಸ ಮಾಡುತ್ತದೆ.. ತಪ್ಪದೇ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದಿದ್ದಾರೆ..