ಎದ್ದೇಳು ಅಪ್ಪಾ ಎಂದು ಅಂಗಲಾಚುತ್ತಿರುವ ಪುಟ್ಟ ಮಕ್ಕಳು.. ರಾತ್ರೋ ರಾತ್ರಿ ನಡೆದ ಘಟನೆ ಕಂಡು ಬೆಚ್ಚಿಬಿದ್ದ ಹೆಂಡತಿ.. ಮನಕಲಕುತ್ತದೆ..

0 views

ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಒಮ್ಮೆಲೆ ಅನಿರೀಕ್ಷಿತವಾಗಿ ಬರಸಿಡಿಲು ಬಡಿಯುವಂತಹ ಘಟನೆ ನಡೆದು ದಾರಿ ತೋಚದಂತಾಗಿ ದಿಕ್ಕೆಟ್ಟು ಕೂರುವ ಆ ಪರಿಸ್ಥಿತಿ ನಿಜಕ್ಕೂ ಯಾವ ಕುಟುಂಬಕ್ಕೂ ಬಾರದಿರಲಿ.. ಇಲ್ಲೊಂದು ಅಂತಹುದೇ ಮನಕಲಕುವ ಘಟನೆ ನಡೆದಿದ್ದು ಎಂತಹ ಕಲ್ಲು ಮನಸ್ಸಿನವರೂ ಸಹ ಕಣ್ಣೀರು ಹಾಕುವಂತಾಗಿದೆ.. ಆ ಎರಡು ಪುಟ್ಟ ಕಂದಮ್ಮಗಳ ಮಾತು ಮನಕಲಕುವಂತೆ ಮಾಡಿದೆ.. ಹೌದು ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ ಒಂದೇ ದಿನ ಇಪ್ಪತ್ತ ನಾಲ್ಕು ಕೊರೊನಾ ಸೋಂಕಿತರು ಜೀವ ಕಳೆದುಕೊಂಡದ್ದು ಎಲ್ಲರಿಗೂ ತಿಳಿದೇ ಇದೆ.. ಆದರೆ ಇದೀಗ ಆ ಘಟನೆ ನಡೆದ ಕೆಲವೇ ದಿನಗಳಲ್ಲಿ ಮತ್ತೊಂದು ಮನಕಲಕುವ ಘಟನೆ ನಡೆದಿದ್ದು ಆ ಕುಟುಂಬವೀಗ ಬೀದಿಗೆ ಬಿದ್ದಿದೆ.. ಹೌದು ಈ ವ್ಯಕ್ತಿಯ ಹೆಸರು ಜಯಶಂಕರ್..

ಕೊಳ್ಳೇಗಾಲ ತಾಲೂಕಿನ ಮುಡಿಗುಂಡಂ ಗ್ರಾಮದ ನಿವಾಸಿ.. ಈತನಿಗೆ ಅಪ್ಪ ಅಮ್ಮ, ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದರು.. ಮನೆಗೆ ಈತನೇ ಆಧಾರ ಸ್ಥಂಭವಾಗಿದ್ದನು.. ವಯಸ್ಸಿನ್ನು ಕೇವಲ ಮೂವತ್ತಾರು.. ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡು ಚಾಮರಾಜನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.. ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರು.. ಆದರೆ ನಿನ್ನೆ ರಾತ್ರಿ ಇದ್ದಕ್ಕಿದ್ದ ಹಾಗೆ ಆಸ್ಪತ್ರೆಯವರು ನಿಮ್ಮ ಗಂಡನಿಗೆ ಜೀವ ಇಲ್ಲ.. ತೆಗೆದುಕೊಂಡು ಹೋಗಿ ಎಂದುಬಿಟ್ಟಿದ್ದಾರೆ.. ಇತ್ತ ಜಯಶಂಕರ್ ಪತ್ನಿ ಸಿದ್ದರಾಜಮ್ಮನಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.. ಏನು ಮಾಡಬೇಕೋ ದಿಕ್ಕು ತೋಚದಂತಾಗಿದೆ.. ಕೊನೆಗೆ ಮಧ್ಯ ರಾತ್ರಿಯಲ್ಲಿಯೇ ಎರಡೂವರೆ ಸಾವಿರ ಹಣ ಕೊಟ್ಟು ಆಂಬ್ಯುಲೆನ್ಸ್ ನಲ್ಲಿ ಗಂಡನ ಪಾರ್ಥೀವವನ್ನು ತೆಗೆದುಕೊಂಡು ಹೋಗಿದ್ದಾರೆ..

ಜೀವ ಕಳೆದುಕೊಂಡು ಮಲಗಿದ್ದ ಜಯಶಂಕರ್ ರನ್ನು ನೋಡಿ ಆ ಎರಡು ಕಂದಮ್ಮಗಳು ಕಣ್ಣೀರು ಹಾಕುತ್ತಿದ್ದ ದೃಶ್ಯ ಈ ಪುಟ್ಟ ಮಕ್ಕಳೇನು ತಪ್ಪು ಮಾಡಿದ್ದರು‌ ಎಂದೆನಿಸಿಬಿಟ್ಟಿತು.. ಮನೆಗೆ ಆತನೇ ಎಲ್ಲವೂ ಆಗಿದ್ದ.. ಆದರೀಗ ಮನೆಯ ಆಧಾರವನ್ನೇ ಕಳೆದುಕೊಂಡ ಆ ಕುಟುಂಬದ ಆಕ್ರಂದನ ನಿಜಕ್ಕೂ ಮುಗಿಲು ಮುಟ್ಟಿತ್ತು.. ಆದರೆ ಈ ನಡುವೆ ಇನ್ನೊಂದು ದೊಡ್ಡ ಯಡವಟ್ಟಾಗಿದೆ.. ಹೌದು ಆಕ್ಸಿಜನ್ ಕೊರತೆ ಇಂದಾಗಿ ನನ್ನ ಗಂಡ ಜೀವ ಕಳೆದುಕೊಂಡಿದ್ದಾರೆ.. ಈಗ ಆಕ್ಸಿಜನ್ ಕೊರತೆಯಿಂದ ಜೀವ ಕಳೆದುಕೊಂಡವರ ಪಟ್ಟಿಯಲ್ಲಿಯೂ ನನ್ನ ಗಂಡನ ಹೆಸರಿಲ್ಲ.. ಅತ್ತೆ ಮಾವ ಎರಡು ಮಕ್ಕಳನ್ನು ನಾನೇಗೆ ಸಾಕಲಿ.. ನಮ್ಮ ಜೀವನ ಬೀದಿಗೆ ಬಿದ್ದಿದೆ ಎಂದು ಸಿದ್ದರಾಜಮ್ಮ ಕಣ್ಣೀರು ಹಾಕಿದ್ದಾರೆ..

ಇತ್ತ ಜಯಶಂಕರ್ ನ ಮಕ್ಕಳು.. ಅಪ್ಪ ಇದ್ದಾಗ ನಮ್ಮನ್ನು ಚೆನ್ನಾಗಿ ನೋಡಿಕೊಳ್ತಿದ್ರು.. ನಾವು ಏನೇ ಕೇಳಿದ್ರೂ ಕೊಡಿಸ್ತಿದ್ರು.. ಈಗ ಅಮ್ಮ ಒಬ್ಬಳೆ.. ಅವಳಿಗೆ ತುಂಬಾ ಕಷ್ಟ ಆಗುತ್ತದೆ.. ಅಪ್ಪ ವಾಪಸ್ ಬಂದುಬಿಡು ಅಪ್ಪಾ ಎಂದು ಆ ಮುಗ್ಧ ಮಕ್ಕಳು ಕರೆಯುತ್ತಿದ್ದ ರೀತಿ ಯಾವ ಶತ್ರುಗಳಿಗೂ ಇಂತಹ ಪರಿಸ್ಥಿತಿ ಬಾರದಿರಲಿ ಎಂದೆನಿಸಿಬಿಟ್ಟಿತು.. ಆಕ್ಸಿಜನ್ ಕೊರತೆಯಿಂದಲೇ ಜಯಶಂಕರ್ ಜೀವ ಕಳೆದುಕೊಂಡಿದ್ದು ಎಂದು ಕುಟುಂಬದವರು ಹೇಳುತ್ತಿದ್ದು ಈಗ ಈ ಘಟನೆಗೆ ಯಾರು ಹೊಣೆ.. ಕೊನೆಯ ಪಕ್ಷ ಆಧಾರಸ್ಥಂಭವಾಗಿದ್ದ ಗಂಡನನ್ನು ಕಳೆದುಕೊಂಡು ಅನಾಥವಾಗಿರುವ ಆ ಕುಟುಂಬಕ್ಕಾದರೂ ಸರ್ಕಾರ ನೆರವಾದರೆ ಒಳ್ಳೆಯದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ..

ಕನಿಷ್ಟ ಪಕ್ಷ ಉಸಿರಾಡುವ ಆಕ್ಸಿಜನ್‌ ಅನ್ನು ಪೂರೈಸಲಾಗದೆ ಈ ರೀತಿ ಜೀವಗಳು ಹೋಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.. ಒಬ್ಬ ದಕ್ಷ ಜಿಲ್ಲಾಧಹಿಕಾರಿಗಳನ್ನು ವರ್ಗಾವಣೆ ಮಾಡುವದಿದ್ದರೆ ತುರ್ತಾಗಿ ರಾತ್ರೋ ರಾತ್ರಿ ನಿರ್ಧಾರ ತೆಗೆದುಕೊಂಡು ಆದೇಶ ಹೊರಡಿಸುವ ಸರ್ಕಾರ ಇತ್ತ ಜನರ ಜೀವಗಳ ಕಡೆಯೂ ಗಮನ ಕೊಟ್ಟು ಯಾವುದೇ ಆಸ್ಪತ್ರೆಯಾಗಲಿ ಆಕ್ಷಿಜನ್‌ ಕೊರತೆ ಆಗದಂತೆ ಕಟ್ಟುನಿಟ್ಟಿನ ತೀರಮಾ ಕೈಗೊಂಡು ಮುಂದಾದರೂ ಕುಟುಂಬಗಳು ಅನಾಥರಾಗೋದನ್ನು ತಪ್ಪಿಸಬೇಕಿದೆ.. ದಯವಿಟ್ಟು ಯಾರನ್ನೂ ನಂಬಿಕೊಳ್ಳಬೇಡಿ.. ಕೊರೊನಾ ಬಂದರೆ ಸರ್ಕಾರ ಕಾಪಾಡತ್ತೆ ಅನ್ನೋದನ್ನ ದಯವಿಟ್ಟು ಬಿಟ್ಟುಬಿಡಿ.. ನಿಮ್ಮ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.. ಮಾಸ್ಕ್‌ ಬಳಸಿ.. ಸಾಮಾಜಿಕ ಅಂತರ ಕಾಆಯ್ದುಕೊಳ್ಳಿ.. ನೀವು ಹೋದರೆ ನಿಮ್ಮ ಕುಟುಂಬದವರನ್ನು ಯಾವನೂ ಸಹ ಬಂದು ನೋಡುವುದಿಲ್ಲ.. ದಯವಿಟ್ಟು ನಿಮ್ಮ ನಿಮ್ಮ ಕುಟುಂಬದವರಿಗಾಗಿ ಬದುಕಿ..