ಕುಟುಂಬದವರನ್ನು ಕಳೆದುಕೊಂಡ ಸಿದ್ದರಾಮಯ್ಯ ನವರು.. ನಿಜಕ್ಕೂ ಏನಾಗಿತ್ತು.. ಇವರು ಯಾರು ಗೊತ್ತಾ?

0 views

ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು ಅದಾಗಲೇ ಸರ್ಕಾರ ಹದಿನಾಲ್ಕು ದಿನಗಳ ಲಾಕ್ ಡೌನ್ ಅನ್ನು ಘೋಷಣೆ ಮಾಡಿದೆ.. ಸೋಮವಾರದಿಂದ ಲಾಕ್ ಡೌನ್ ಜಾರಿಯಾಗಲಿದ್ದು ಈಗ ಇದ್ದ ಕೆಲ ಸಡಿಲಿಕೆಗಳು ಸಹ ಖಡಿತಗೊಳ್ಳಲಿದೆ.. ಇನ್ನೂ ಆಸ್ಪತ್ರೆಗಳ ಮುಂದೆ ಕೊರೊನಾ ಸೋಂಕಿತರ ಕುಟುಂಬದವರ ನೋವು ನಿಜಕ್ಕೂ ಹೇಳ ತೀರದಾಗಿದೆ..

ಅತ್ತ ಅದೆಷ್ಟೋ ಮಂದಿ ಕೊರೊನಾ ಗೆ ಜೀವ ಕಳೆದುಕೊಳ್ಳುತ್ತಿದ್ದರೆ ಇತ್ತ ಬಹಳಷ್ಟು ಜನರು ಕೊರೊನಾ ಸೋಂಕು ಬಂದ ಶುರುವಿನಲ್ಲೇ ಹೋಮ್ ಐಸೋಲೇಟ್ ಆಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವುದು ಕೊಂಚ ಭರವಸೆ ತರುವಂತಿದೆ.. ಆದರೂ ಸಹ ದಿನ ಬೆಳಗೆದ್ದರೆ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಸಂತಾಪ ಸೂಚಿಸುವ ಪೋಸ್ಟ್ ಗಳನ್ನು ನೋಡಿದರೆ ನಿಜಕ್ಕೂ ಮನಕಲಕುತ್ತದೆ.. ಎರಡೇ ವರ್ಷದ ಹಿಂದೆ ಹೇಗೇಗೆಲ್ಲಾ ಇದ್ದ ಜೀವನ ಕೇವಲ ಒಂದು ವರ್ಷದಲ್ಲಿ ಹೇಗೆಲ್ಲಾ ಆಗಿ ಹೋಯ್ತು.. ಸುತ್ತಮುತ್ತಲೇ ಇದ್ದ ಜನ ಇಲ್ಲವಾದರು.. ಕುಟುಂಬಸ್ಥರು ದೂರವಾದರು.. ಸ್ನೇಹಿತರು ಅಸುನೀಗಿದರು.. ನಿಜಕ್ಕೂ ಇಷ್ಟೇ ಜೀವನ ಎನಿಸಿಬಿಟ್ಟಿದೆ..

ಇನ್ನೂ ಕೊರೊನಾದಿಂದ ಜೀವ ಕಳೆದುಕೊಂಡವರ ಪಟ್ಟಿಯಲ್ಲಿ ಜನ ಸಾಮಾನ್ಯರು ಮಾತ್ರವಲ್ಲ.. ಕಲಾವಿದರು.. ರಾಜಕಾರಣಿಗಳು.. ಸ್ಟಾರ್ ಗಳು.. ಅವರುಗಳ ಕುಟುಂಬದವರು ಹೊರತಾಗಿಲ್ಲ.. ಇನ್ನು ಇದೆಲ್ಲದರ ಜೊತೆಗೆ ವಯೋ ಸಹಜ ಬೇರೆ ಬೇರೆ ಕಾಯಿಲೆಗಳಿಂದಲೂ ಸಹ ಜನರು ಜೀವ ಕಳೆದುಕೊಳ್ಳುತ್ತಿದ್ದು ಈ ಕೊರೊನಾದ ಭಯದಿಂದಾಗಿ ಆಪ್ತರ ಅಂತಿಮ ದರ್ಶನವನ್ನೂ ಸಹ ಹೆಚ್ಚು ಜನರು ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ.. ಹೌದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದವರು ಹೃದಯಾ ಘಾತದಿಂದ ಜೀವ ಕಳೆದುಕೊಂಡಿದ್ದಾರೆ..

ಹೌದು ಸಿದ್ದರಾಮಯ್ಯನವರ ಸ್ವಂತ ಅತ್ತಿಗೆ ಮಹದೇವಮ್ಮನವರು ಇಂದು ಹೃದಯಾಘಾತದಿಂದ ಜೀವ ಕಳೆದುಕೊಂಡಿದ್ದು ಸಿದ್ದರಾಮಯ್ಯ ನವರ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಮಹದೇವಮ್ಮನವರ ಅಂತಿಮ ಕಾರ್ಯ ನೆರವೇರಿದೆ.. ಮಹದೇವಮ್ಮನವರಿಗೆ 74 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.. ಅತ್ತಿಗೆಯ ಅಂತಿಮ ಕಾರ್ಯದಲ್ಲಿ ಭಾಗಿಯಾಗಲು ಸಿದ್ದರಾಮಯ್ಯನವರು ಮೈಸೂರಿಗೆ ಆಗಮಿಸಿದ್ದು ರಾಜಕೀಯದ ಆಪ್ತರು ಹಾಗೂ ಗ್ರಾಮಸ್ಥರು ಮಹದೇವಮ್ಮನವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ..