ನಟ ಸಿದ್ದಾರ್ಥ್ ಶುಕ್ಲ ಇಲ್ಲವಾದ ನಾಲ್ಕೇ ದಿನದಲ್ಲಿ ಸಿದ್ದಾರ್ಥ್ ರನ್ನು ಮದುವೆಯಾಗಬೇಕಿದ್ದ ಶೆಹನಾಜ್ ಏನಾಗಿ ಹೋದರು ನೋಡಿ..

0 views

ಅದ್ಯಾಕೋ ಕಳೆದೆರೆಡು ವರ್ಷಗಳಿಂದ ಚಿತ್ರರಂಗದ ಹಾಗೂ ಕಿರುತೆರೆಯ ಕಲಾವಿದರು ಇನ್ನಿಲ್ಲವಾದ ಸುದ್ದಿಗಳನ್ನೇ ಕೇಳಿ ಕೇಳಿ ಒಂದು ರೀತಿ ಮನಸ್ಸು ಕಲ್ಲಾಗಿ ಹೋದಂತೆ ಭಾಸವಾಗುತ್ತದೆ.. ಹೌದು ಅದರಲ್ಲೂ ಕಳೆದ ಒಂದೂವತೆ ವರ್ಷದಿಂದ ಕೊರೊನಾ ಬಂದ ನಂತರ ಅದೆಷ್ಟೋ ಕಲಾವಿದರು ಜೀವ ಕಳೆದುಕೊಂಡರು.. ಕೆಲವರು ಕೊರೊನಾದಿಂದ ಇಲ್ಲವಾದರೆ ಇನ್ನೂ ಕೆಲವರು ಕೊರೊನಾದಿಂದ ಆದಂತಹ ಆರ್ಥಿಕ ಸಂಕಷ್ಟದಿಂದ ತಾವಾಗಿಯೇ ಜೀವ ಕಳೆದುಕೊಂಡದ್ದು ನಿಜಕ್ಕೂ ಮನಕಲಕುವಂತಿತ್ತು.. ಇದರ ಮಡುವೆ ಮತ್ತಷ್ಟು ಮಂದಿ ಇನ್ನಿತರ ಕಾಯಿಲೆಗಳಿಂದ ಕೊನೆಯುಸಿರೆಳೆದರು.. ಬಾಲಿವುಡ್ ಸ್ಯಾಂಡಲ್ವು ಟಾಲಿವುಡ್ ಕಾಲಿವುಡ್ ಹೀಗೆ ಎಲ್ಲಾ ರಾಜ್ಯದಲ್ಲಿಯೂ ಕಲಾವಿದರು ಸಾಲು ಸಾಲಾಗಿ ಇಲ್ಲವಾಗಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾದಂತಾಯಿತು..

ಅದೇ ರೀತಿ ಇದೀಗ ಮೊನ್ನೆ ಮೊನ್ನೆಯಷ್ಟೇ ಹಿಂದಿ ಕಿರುತೆರೆಯ ಖ್ಯಾತ ಕಲಾವಿದ ಬಿಗ್ ಬಾಸ್ ಸೀಸನ್ ಹದಿಮೂರರ ವಿನ್ನರ್ ಸಿದ್ದಾರ್ಥ್ ಶುಕ್ಲಾ ಜೀವ ಕಳೆದುಕೊಂಡರು.. ಕೇವಲ ನಲವತ್ತು ವರ್ಷ ವಯಸ್ಸಿಗೆ ಸಿದ್ದಾರ್ಥ್ ಶುಕ್ಲ ಇಲ್ಲವಾಗಿದ್ದ ಕಂಡು ಚಿತ್ರರಂಗ ಮರುಗಿತ್ತು.. ಅದರಲ್ಲೂ ಇದ್ದಕಿದ್ದ ಹಾಗೆ ಸಿದ್ದಾರ್ಥ್ ಶುಕ್ಲಾ ಇಲ್ಲವಾಗಿದ್ದು ಅನೇಕ ಅನುಮಾನಗಳು ಮೂಡಿದ್ದವು.. ಈ ಬಗ್ಗೆ ಮುಂಬೈ ನ ಆಸ್ಪತ್ರೆ ತಿಳಿಸಿರುವಂತೆ ಬುಧವಾರ ರಾತ್ರಿ ಸಿದ್ದಾರ್ಥ್ ಶುಕ್ಲ ಔಷಧಿ ತೆಗೆದುಕೊಂಡು ಮಲಗಿದ್ದಾರೆ.. ಆದರೆ ಗುರುವಾರ ಬೆಳಿಗ್ಗೆ ಇಲ್ಲವಾಗಿದ್ದರು.. ಸಧ್ಯ ಈ ಬಗ್ಗೆ ಸಾಕಷ್ಟು ಪ್ರಶ್ನೆಗಳು ಮೂಡಿದ್ದು ಸಿದ್ದಾರ್ಥ್ ಶುಕ್ಲಾ ಅವರ ಪರೀಕ್ಷಾ ವರಧಿಗಾಗಿ ಕಾಯುತ್ತಿದ್ದಾರೆ.. ಇನ್ನು ಇತ್ತ ಸಿದ್ದಾರ್ಥ್ ಶುಕ್ಲಾ ಹಾಗೂ ಶೆಹನಾಜ್ ಗಿಲ್ ಅವರ ಸ್ನೇಹದ ಬಗ್ಗೆ ಎಲ್ಲರಿಗೂ ತಿಳಿದೇ ಇತ್ತು.. ಬೊಗ್ ಬಾಸ್ ಸೀಸನ್ ಹದಿಮೂರರಲ್ಲಿ ಸಿದ್ದಾರ್ಥ್ ಹಾಗೂ ಶೆಹನಾಜ್ ಇಬ್ಬರೂ ಸಹ ಒಟ್ಟಾಗಿ ಸ್ಪರ್ಧಿಸಿದ್ದರು..

ಬಿಗ್ ಬಾಸ್ ನಲ್ಲಿ ಸಾಕಷ್ಟು ಸಮಯ ಒಟ್ಟಿಗೆ ಕಳೆದಿದ್ದ ಸಿದ್ದಾರ್ಥ್ ಹಾಗೂ ಶೆಹನಾಜ್ ಅವರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು.. ನಂತರ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕವೂ ಇಬ್ಬರ ಸ್ನೇಹ ಮುಂದುವರೆದಿತ್ತು.. ಹಲವಾರು ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.. ಆಲ್ಬಂ ಹಾಡಿನಲ್ಲಿಯೂ ಒಟ್ಟಾಗಿ ಅಭಿನಯಿಸಿದ್ದರು.. ಇದಕ್ಕೂ ಮೀರಿ ಇಬ್ಬರ ನಡುವೆ ಪ್ರೀತಿ ಮೂಡಿದ್ದು ಇಬ್ಬರೂ ಸಹ ಇದೇ ವರ್ಷದ ಕೊನೆಯಲ್ಲಿ ಮದುವೆಯಾಗುವ ನಿರ್ಧಾರ ಸಹ ಮಾಡಿದ್ದರು ಎಂದು ತಿಳಿದುಬಂದಿದೆ.. ಹೌದು ಶೆಹನಾಜ್ ಹಾಗೂ ಸಿದ್ದಾರ್ಥ್ ಶುಕ್ಲಾ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು ಮದುವೆಯ ನಿರ್ಧಾರವನ್ನೂ ಸಹ ಮಾಡಿದ್ದರು.. ಆದರೆ ಇದೀಗ ಇದ್ದಕಿದ್ದ ಹಾಗೆ ಈ ರೀತಿ ಸಿದ್ದಾರ್ಥ ಶುಕ್ಲಾ ಇಲ್ಲವಾಗಿದ್ದರಿಂದ ಶೆಹನಾಜ್ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾರೆ ಎಂದು ತಿಳಿದುಬಂದಿದೆ..

ಹೌದು ಸಿದ್ದಾರ್ಥ್ ಶುಕ್ಲಾ ಅವರ ಅಂತ್ಯ ಸಂಸ್ಕಾರದ ಸಮಯದಲ್ಲಿಯೂ ಆತನ ಕಾಲಿನ ಬಳಿಯೇ ಕೂತು ನೋವು ಅನಿಭವಿಸುತ್ತಿದ್ದ ಶೆಹನಾಜ್ ಇದೀಗ ಅಂತ್ಯ ಸಂಸ್ಕಾರ ಮುಗಿಯುತ್ತುದ್ದಂತೆ ಯಾರಿಗೂ ಕಾಣಿಸಿಕೊಳ್ಳದೇ ಒಬ್ಬಂಟಿಯಾಗಿ ಮುಂಬೈನಲ್ಲಿ ಉಳಿದಿದ್ದಿದ್ದಾರೆ ಎನ್ನಲಾಗಿದೆ.. ಅಷ್ಟೇ ಅಲ್ಲದೇ ನೋವಿನಲ್ಲಿರುವ ಶೆಹನಾಜ್ ತಮ್ಮ ಮೊಬೈಲ್ ಅನ್ನು ಸಹ ಸ್ವಿಚ್ ಆಫ್ ಮಾಡಿಕೊಂಡುಬಿಟ್ಟಿದ್ದಾರೆ.. ಹೌದು ಯಾರೇ ಎಷ್ಟೇ ಸಾಂತ್ವಾನ ಹೇಳಿದರು ಸಮಾಧಾನಗೊಳ್ಳದ ಶೆಹನಾಜ್ ಒಬ್ಬಂಟಿಯಾಗಿ ಇರುವ ನಿರ್ಧಾರ ಮಾಡಿದ್ದಾರೆ.. ಇತ್ತ ಮಗಳ ಬಗ್ಗೆ ಚಿಂತಿತರಾಗಿರುವ ಶೆಹನಾಜ್ ತಂದೆ ಮಗಳ ಜೊತೆ ಇರುವ ಸಲುವಾಗಿ ಆಕೆಗೆ ಧೈರ್ಯ ಹೇಳುವ ಸಲುವಾಗು ತಮ್ಮ ಮಗನನ್ನು ಮುಂಬೈಗೆ ಕಳುಹಿಸಿದ್ದು ಮಗಳ ಜೊತೆ ಇರಲಿದ್ದಾರೆ.. ಇನ್ನು ಕೆಲವೇ ದಿನಗಳಲ್ಲಿ ಶೆಹನಾಜ್ ಅವರ ಸಂಪೂರ್ಣ ಕುಟುಂಬ ಮುಂಬೈಗೆ ತೆರಳಿ ಆಕೆಯ ಜೊತೆ ಇರಲಿದ್ದಾರೆ ಎಂದು ತಿಳಿದುಬಂದಿದೆ.. ಈ ಜೀವನವೇ ಇಷ್ಟು ಇದ್ದಾಗ ಪ್ರೀತಿ ವಿಶ್ವಾಸ ಸ್ನೇಹ ಎಲ್ಲವನ್ನೂ ಸಹ ಕೊಟ್ಟು ಬದುಕುತ್ತೇವೆ..

ಆದರೆ ಹೋಗುವಾಗ ನಾವೇ ಅತಿಯಾದ ಪ್ರೀತಿಸಿದ ಜೀವಗಳಿಗೆ ನೋವ ಕೊಟ್ಟು ಹೊರಟು ಬಿಡುತ್ತೇವೆ.. ಇನ್ನು ಕೆಲವೇ ತಿಂಗಳಲ್ಲಿ ಹೊಸ ಬದುಕ ಶುರು ಮಾಡಬೇಕು ಎಂದುಕೊಂಡಿದ್ದ ಜೋಡಿ.. ಇದೀಗ ಸಿದ್ದಾರ್ಥ್ ಶುಕ್ಲಾ ಇಲ್ಲವಾಗಿ ಶೆಹನಾಜ್ ನೋವು ಅನುಭವಿಸುವಂತಾಯಿತು.. ಶೆಹನಾಜ್ ಹಾಗೂ ಸಿದ್ದಾರ್ಥ್ ಶುಕ್ಲಾ ಅವರ ಕುಟುಂಬಕ್ಕೆ ನೋವ ತಡೆಯುವ ಶಕ್ತಿ ನೀಡಲಿ ಆ ಭಗವಂತ.. ಹಾಗೆಯೇ ಸಿದ್ದಾರ್ಥ್ ಶುಕ್ಲಾ ಅವರು ಇಲ್ಲವಾಗಲು ನಿಜವಾದ ಕಾರಣ ಏನೆಂದು ಆದಷ್ಟು ಬೇಗ ಸತ್ಯ ತಿಳಿಯುವಂತಾಗಲಿ..