ಬಿಗ್ ಶಾಕಿಂಗ್.. ಯುವತಿ ಪ್ರಕರಣ.. ನಿನ್ನೆಯಷ್ಟೇ ಪೊಲೀಸರು ಹಿಡಿದಿದ್ದ ಆರೋಪಿ ಪೊಲೀಸ್ ಠಾಣೆಯ ಶೌಚಾಲಯದಲ್ಲಿಯೇ ಜೀವ ಕಳೆದುಕೊಂಡ..

0 views

ಒಂದು ಕಡೆ ಕೊರೊನಾ ದಿಂದಾಗಿ ಜನ ಜೀವನ ತತ್ತರವಾಗಿದ್ದು ಮತ್ತೆ ಬದುಕು ಕಟ್ಟಿಕೊಳ್ಳುವುದು ಹೇಗೆ ಅನ್ನೋ ಯೋಚನೆಯಲ್ಲಿ ಜನ ಸಾಮಾನ್ಯರು ಬಡವರು ಮಧ್ಯಮವರ್ಗದವರು ಇದ್ದರೆ ಇತ್ತ ರಾಜ್ಯದಲ್ಲಿ ನಡೆಯುತ್ತಿರುವ ಘಟನೆ ಗಳು ನಿಜಕ್ಕೂ ಜನರನ್ನು ಆತಂಕಕ್ಕೆ ಒಳಪಡುವಂತೆ ಮಾಡಿದೆ.. ಹೌದು ಅದರಲ್ಲೂ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ನಡೆದ ಮೂರ್ನಾಲ್ಕು ಪ್ರಕರಣದಿಂದಾಗು ಜನರು ಬೆಚ್ಚಿಬೀಳುವಂತಾಗಿತ್ತು.. ಆದರೆ ಇದೀಗ ಯುವತಿಯ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಿನ್ನೆ ಪೊಲೀಸರು ಹಿಡಿದಿದ್ದ ಯುವಕ ಇದೀಗ ಪೊಲೀಸ್ ಠಾಣೆಯ ಶೌಚಾಲಯದಲ್ಲಿಯೇ ಜೀವ ಕಳೆದುಕೊಂಡಿದ್ದು ಪೊಲೀಸರು ಶಾಕ್ ಆಗಿದ್ದಾರೆ.. ಹೌದು ರಾಜ್ಯದಲ್ಲಿ‌ ಕಳೆದ ಆರು ದಿನಗಳ ಹಿಂದೆ ಮೈಸೂರಿನಲ್ಲಿ ಆಭರಣದ ಅಂಗಡಿ ಘಟನೆ ನಡೆದು ಮೂರು ದಿನಗಳ ಬಳಿಕ ಆ ಪ್ರಕರಣಕ್ಕೆ ಸಂಬಂಧ ಪಟ್ಟ ಎಲ್ಲರನ್ನೂ ಹುಡುಕಿಕೊಂಡು ಹೋಗಿ ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಮುಂಬೈ, ಪಶ್ಚಿಮ ಬಂಗಾಳ ಹಾಗೂ ಬೆಂಗಳೂರಿನಲ್ಲಿ ಎದೆಮುರಿಕಟ್ಟಿ ಮೈಸೂರಿಗೆ ಕರೆತಂದಿದ್ದರು.

ಇನ್ನು ಇತ್ತ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಯುವತಿ ಪ್ರಕರಣವನ್ನೂ ಸಹ ಯಶಸ್ವಿಯಾಗಿ ಮುಗಿಸಿದ್ದ ಪೊಲೀಸರು ಘಟನೆಗೆ ಕಾರಣರಾಗಿದ್ದ ಐದೂ ಜನರನ್ನು ನಿನ್ನೆ ತಮಿಳು ನಾಡಿನ ತಿರುಪುರ್ ನಲ್ಲಿ ವಶಕ್ಕೆ ಪಡೆದು ಮೈಸೂರಿಗೆ ಕರೆತಂದಿದ್ದರು.. ಇನ್ನು ಈ ಎರಡೂ ಪ್ರಕರಣಗಳನ್ನು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಕ್ಕೆ ರಾಜ್ಯದ ಜನತೆ ಪೊಲೀಸರಿಗೆ ಅಭಿನಂದನೆಯನ್ನೂ ಸಹ ಸಲ್ಲಿಸಿದ್ದರು.. ಆದರೆ ಎಲ್ಲವೂ ಸುಖಾಂತ್ಯ ಆಯಿತು ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಘಟನೆ ನಡೆದು ಹೋಗಿದೆ.. ಹೌದು ಈ ಎರಡು ಪ್ರಕರಣ ಮುಗಿಯುತ್ತಿದ್ದಂತೆ ನಿನ್ನೆ ರಾತ್ರಿ ಮತ್ತೊಂದು ಘಟನೆ ನಡೆದಿದೆ.. ಹೌದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಿನ್ನೆ ದೇವಿಂದ ಸಂಗೋಗಿ ಎಂಬ ಯುವಕ ಇನ್ನು ಹದಿನೆಂಟು ತುಂಬದ ಹೆಣ್ಣು ಮಗಖ ಜೊತೆ ಮಾಡಬಾರದ ಕೆಲಸ ಮಾಡಿದ್ದ..

ಈ ಬಗ್ಗೆ ಆ ಹೆಣ್ಣು ಮಗಳ ತಂದೆ ಸಿಂದಗಿ ಪೊಲೀಸ್ ಠಾಣೆಗೆ ಆಗಮಿಸಿ ನನ್ನ ಮಗಳಿಗೆ ಈ ರೀತಿಯಾಗಿದೆ ಎಂದು ದೂರು ನೀಡಿದ್ದರು.. ಆದರೆ ವಿಚಾರ ತಿಳಿಯುತ್ತಿದ್ದಂದೆ ದೇವಿಂದ ಸಂಗೋಗಿ ಊರು ಬಿಟ್ಟು ನಾಪತ್ತೆಯಾಗಿದ್ದ.. ಆದರೆ ಆತನ ಬೆನ್ನಟ್ಟಿದ ಪೊಲೀಸರು ನಿನ್ನೆ ತಡರಾತ್ರಿಯಲ್ಲಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.. ಆದರೆ ಮುಂದೆ ನಡೆದದ್ದೇ ಬೇರೆ.. ಹೌದು ಇಂದು ಬೆಳಗಿನ ಜಾವ ಶೌಚಾಲಯಕ್ಕೆ ಹೋಗಿ ಬರ್ತೀನಿ ಎಂದು ಹೋದ ಯುವಕ ಅಲ್ಲಿಯೇ ಜೀವ ಕಳೆದುಕೊಂಡಿದ್ದಾನೆ.. ಹೌದು ತಕ್ಷಣ ಆತನನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಆತನನ್ನು ದಾಖಲು ಮಾಡುದ್ದರು‌. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲಾ ಆಸ್ಪತ್ರೆಗೂ ದಾಖಲು ಮಾಡಿದ್ದರು.. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ..

ಇತ್ತ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಆ ಯುವಕನ ಪೋಷಕರು ಹಾಗೂ ಸಂಬಂಧಿಕರು ಪೊಲೀಸ್ ಠಾಣೆಯ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಮಗ ಈ ರೀತಿ ಮಾಡಿಕೊಳ್ಳಲು ಪೊಲೀಸರ ಬೇಜವಾಬ್ದಾರಿತನವೇ ಕಾರಣ ಎಂದಿದ್ದಾರೆ. ಇನ್ನು ಈ ಬಗ್ಗೆ ಎಸ್ ಪಿ ಆನಂದ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿ ನಡೆದ ವಿಚಾರವನ್ನು ತಿಳಿಸಿ ಆ ಯುವಕ ಶೌಚಾಲಯಲ್ಲೆ ತೆರಳಿದಾ ಸಮಯದಲ್ಲಿ ಈ ರೀತಿ ಮಾಡಿಕೊಂಡಿದ್ದು ಆತನನ್ನು ತಕ್ಷಣ ನಮ್ಮ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ. ಪೊಲೀಸ್ ಠಾಣೆಯಲ್ಲಿ‌ ಇಂತಹ ಘಟನೆಗಳು ನಡೆದಾಗ ಅದನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತದೆ.

ಅದೇ ರೀತಿ ಈಗಲು ಇದನ್ನು ವಿಚಾರಣೆ ನಡೆಸುವಂತೆ ಸಿಐಡಿಗೆ ವಹಿಸುವಂತೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.. ಇನ್ನು ಹೆತ್ತವರಿಗೆ ಮಕ್ಕಳು ಎಂದೂ ಮುತ್ತುಗಳೇ ನಿಜ. ಆತನಿಗೆ ಕಾನೂನಿನ ಮೂಲಕ ಬುದ್ಧಿ ಕಲಿಸಬೇಕಿತ್ತು ನಿಜ. ಆದರೆ ಮಗ ಆ ಹೆಣ್ಣು ಮಗಳಿಗೆ ಮಾಡಿದ ಕೆಲಸದ ಬಗ್ಗೆ ಏನೂ ಮಾತನಾಡದೆ, ತಾನಾಗಿಯೇ ಶೌಚಾಲಯದಲ್ಲಿ ಈ ರೀತಿ ಮಾಡಿಕೊಂಡಿರುವುದು ತಿಳಿದಿದ್ದರೂ ಸಹ ಪೊಲೀಸ್ ಠಾಣೆಯ ಮುಂದೆ ನಿಂತು ಅವರು ಹಾಗೂ ಸಂಬಂಧಿಕರೆಲ್ಲಾ ಪ್ರತಿಭಟನೆ ನಡೆಸಿದ್ದು ದುರ್ದೈವವೇ ಸರಿ. ಒಟ್ಟಿನಲ್ಲಿ ಆತ ಮಾಡಿದ ತಪ್ಪಿಗೆ ಸರಿಯಾದ ರೀತಿಯಲ್ಲಿಯೇ ಆಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮಂದಿ ಹೇಳಿದರೆ ಅತ್ತ ಸಂಬಂಧಿಕರು ಮಾತ್ರ ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಸುತ್ತಿದ್ದಾರೆ..