ಮದುವೆ ಮನೆಯಿಂದ ವರ ನಾಪತ್ತೆ.. ಅದೇ ಮಂಟಪದಲ್ಲಿ ಮತ್ತೊಬ್ಬ ತಾಳಿ ಕಟ್ಟಿದ.. ಆದರೆ‌ ಅಸಲಿ ಕತೆ ಏನು ಗೊತ್ತಾ?

0 views

ನಿನ್ನೆ ಸಿನಿಮಾ ಶೈಲಿಯಲ್ಲಿ ಘಟನೆಯೊಂದು ನಡೆದಿದ್ದು ಮದುವೆ ಮನೆಯಲ್ಲಿ ರಾತ್ರಿ ಇದ್ದ ವರ ಬೆಳಿಗ್ಗೆ ನಾಪತ್ತೆಯಾಗಿದ್ದು ಅದೇ ಮಂಟಪದಲ್ಲಿ ಅಲ್ಲಿಯೇ ಇದ್ದ ಮತ್ತೊಬ್ಬರು ಆ ಹುಡುಗಿಗೆ ತಾಳಿ ಕಟ್ಟಿ ಬಾಳು ನೀಡಿದ ಘಟನೆ ನಡೆದಿದೆ.. ಅಷ್ಟಕ್ಕೂ ಅಲ್ಲಿ ನಡೆದದ್ದಾದರು ಏನು.. ಅಸಲಿ‌ ಕತೆ ಇಲ್ಲಿದೆ ನೋಡಿ.. ಹೌದು ಈ ಘಟನೆ ನಡೆದಿರೋದು ಬೇರೆಲ್ಲೋ ದೂರದ ಊರಲಲ್ಲ.. ಬದಲಿಗೆ ನಮ್ಮದೇ ರಾಜ್ಯದ ಚಿಕ್ಕಮಗಳೂರಿನಲ್ಲಿ.. ಚಿಕ್ಕಮಗಳೂರಿನ ತರೀಕೆರೆ ತಾಲ್ಲೂಕಿನ ದೋರನಾಳು ಗ್ರಾಮದ ಅಣ್ಣ ತಮ್ಮಂದಿರಾದ ಅಶೋಕ್ ಮತ್ತು ನವೀನ್ ಇಬ್ಬರಿಗೂ ಸಹ ಮದುವೆ ನಿಶ್ಚಯವಾಗಿದ್ದು ದಾವಣಗೆರೆ ಹಾಗೂ ಚಿತ್ರದುರ್ಗದ ಹೆಣ್ಣು ಮಕ್ಕಳನ್ನು ನಿಶ್ಚಯ ಮಾಡಲಾಗಿತ್ತು.. ಮದುವೆ ತಯಾರಿ ಎಲ್ಲವೂ ನಡೆದು ಮದುವೆ ಮಂಟಪಕ್ಕೂ ಬಂದಾಯ್ತು..

ಎಲ್ಲಾ ಅಂದುಕೊಂಡಂತೆ ಚೆನ್ನಾಗಿಯೇ ನಡೆದಿತ್ತು.. ರಾತ್ರಿ ಶಾಸ್ತ್ರಗಳು ಸಹ ನೆರವೇರಿದವು.. ರಾತ್ರಿ ಅರತಕ್ಷತೆ ಕಾರ್ಯಕ್ರಮ ಕೂಡ ನೆರವೇರಿದ್ದು ಆ ಸಮಯದಲ್ಲಿಯೂ ನವೀನ್ ಇದ್ದನು.. ಆದರೆ ಬೆಳಿಗ್ಗೆ ಮುಹೂರ್ತದ ಸಮಯಕ್ಕೆ ಮಾತ್ರ ನಾಪತ್ತೆಯಾಗಿ ಹೋಗಿದ್ದನು.. ಇನ್ನೇನು ಕೆಲ ಹೊತ್ತಿನಲ್ಲಿ ತಾಳಿ ಕಟ್ಟಬೇಕು..‌ಆದರೆ ವರನೇ ಇಲ್ಲ.. ಇತ್ತ ವಧು ಸಿಂಧು ಎಂಬ ಯುವತಿ ಹಾಗೂ ಕುಟುಂಬದವರು ಸಹ ಗಾಭರಿಗೊಂಡರು.. ನವೀನ್ ನನ್ನು ಇಡೀ ಮದುವೆ ಮನೆ ಹುಡುಕಿದರೂ ಸಿಗಲಿಲ್ಲ.. ಫೋನ್ ಕೂಡ ಸ್ವಿಚ್ ಆಫ್ ಆಯಿತು..‌ ಕೊನೆಗೆ ದಿಕ್ಕು ತೋಚದಂತಾಯ್ತು.. ಆ ಸಮಯದಲ್ಲಿ ಮದುವೆಗೆಂದು ಬಂದಿದ್ದ ಬೆಂಗಳೂರಿನ ಬಿಎಂಟಿಸಿ ಕಂಡಕ್ಟರ್ ಚಂದ್ರು ಎಂಬುವವರು ತಾನು ಮದುವೆಯಾಗುವುದಾಗಿ ತಿಳಿಸಿದ್ದಾರೆ.. ಅಲ್ಲಿದ್ದವರೆಲ್ಲಾ ಮದುವೆಗೆ ಒಪ್ಪಿಗೆ ಸೂಚಿಸಿ ಮದುವೆ ನೆರವೇರಿಸಿದ್ದಾರೆ.. ಆದರೆ ಮದುವೆ ಆಗಬೇಕಿದ್ದ ನವೀನ್ ಎಲ್ಲಿ ಹೋಗಿದ್ದ ಗೊತ್ತಾ? ಹೌದು

ಹೌದು ನವೀನ್ ಅದಾಗಲೇ ಬೇರೊಂದು ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ.. ಆದರೆ ಆಕೆಯನ್ನು ಬಿಟ್ಟು ಮನೆಯವರು ನೋಡಿದ ಸಿಂಧು ಎಂಬ ಯುವತಿಯನ್ನು ಮದುವೆಯಾಗಲು ಒಪ್ಪಿದ್ದ.. ಮದುವೆ ಮನೆಗೂ ಬಂದು ಶಾಸ್ತ್ರಗಳಿಗೂ ಹಾಜರಾದ.. ಆದರೆ ಕೊನೆ ಕ್ಷಣದಲ್ಲಿ ನನ್ನನ್ನು ಬಿಟ್ಟು ಬೇರೆಯವರನ್ನು ಮದುವೆ ಆದರೆ ಅದೇ ಮಂಟಪಕ್ಕೆ ಬಂದು ನಾನು ಜೀವ ಕಳೆದುಕೊಳ್ಳುತ್ತೇನೆ ಎಂದು ನವೀನ್ ನನ್ನು ಪ್ರೀತಿಸುತ್ತಿದ್ದ ಹುಡುಗಿ ಹೇಳಿದ್ದಳು‌..

ಈ ರೀತಿಯಾದರೆ ಮರ್ಯಾದೆ ಹೋಗುತ್ತದೆ ಎಂದು ಹೆದರಿ.. ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ತುಮಕೂರಿಗೆ ಬರಲು ಹೇಳಿ ಈತನು ಸಹ ಮದುವೆ ಮಂಟಪದಿಂದ ನಾಪತ್ತೆಯಾಗಿದ್ದಾನೆ.. ಇನ್ನು ಮದುವೆಮನೆಯಲ್ಲಿ ಈ ರೀತಿಯ ಘಟನೆ ನಡೆದದ್ದಕ್ಕೆ ಕಣ್ಣೀರು ಇಡುತ್ತಿದ್ದ ಮದುಮಗಳು ಸಿಂಧೂ ರನ್ನು ನೋಡಿ ಅಲ್ಲಿಯೇ ಮೆಚ್ಚಿಕೊಂಡು ನಾನು ಮದುವೆಯಾಗುವೆನೆಂದು ಬಿಎಂಟಿಸಿ ಕಂಡಕ್ಟರ್ ಚಂದ್ರು ಮುಂದೆ ಬಂದಿದ್ದು ಹುಡುಗಿ ಕೂಡ ಒಪ್ಪಿಗೆ ಸೂಚಿಸಿ ತಾಳಿ ಕಟ್ಟಿಸಿಕೊಂಡಿದ್ದಾಳೆ.. ಆದರೆ ಅತ್ತ ನವೀನ್ ಎಲ್ಲಿ ಹೋದ ಎಂದು ಪತ್ತೆ ಮಾಡಲು ಹೊರಟಾಗ ಅದಾಗಲೇ ನವೀನ್ ಬೆಂಗಳೂರು ಸೇರಿದ್ದಾನೆ ಎಂದು ತಿಳಿದುಬಂದಿದೆ..

ಒಟ್ಟಿನಲ್ಲಿ ದಶಕದ ಹಿಂದೆ ಸಿನಿಮಾಗಳಲ್ಲಿ ಇಂತಹುದೇ ಘಟನೆಗಳನ್ನು ನೋಡುತ್ತಿದ್ದೆವು.. ಆದರೆ ಇದೀಗ ನಿಜವಾಗಿಯೂ ನಡೆಯಿತು..‌ ಮದುವೆ ಇಷ್ಟವಿಲ್ಲಾ ಎಂದರೆ ಅಥವಾ ಮತ್ಯಾರನ್ನೋ ಪ್ರೀತಿಸಿದ್ದರೆ ಸುಮ್ಮನೆ ಮತ್ತೊಂದು ಹೆಣ್ಣಿನ ಜೀವನ ಹಾಳು ಮಾಡಬಾರದು.. ಅಥವಾ ಮದುವೆಯೇ ಬೇಡವೆಂದು ಸುಮ್ಮನಿರಬೇಕು.. ಅದನ್ನು ಬಿಟ್ಟು ಮದುವೆ ಮಂಟಪದಿಂದ ನಾಪತ್ತೆಯಾಗಿ ಎರಡೂ ಕುಟುಂಬಗಳಿಗೆ ನೋವು ನೀಡುವ ಕೆಲಸ ಮಾಡಬಾರದು.. ನಿನ್ನೆ ಚಂದ್ರು ಮುಂದೆ ಬಂದು ಮದುವೆಯಾದರು ಸರಿ.. ಅಥವಾ ಆ ರೀತಿ ನಡೆಯದೇ ಆ ಹೆಣ್ಣಿನ ಅಪ್ಪ ಅಮ್ಮನಿಗೆ ಏನಾದರೂ ಆಗಿದ್ದರೆ ಯಾರು ಹೊಣೆಯಾಗುತ್ತಿದ್ದರು? ಇನ್ನಾದರೂ ಯಾರನ್ನೋ ಪ್ರೀತಿಸಿ ಅವರನ್ನು ಬಿಟ್ಟು ಮತ್ತೊಬ್ಬರನ್ನು ಮದುವೆಯಾಗಲು ಬಂದು ಈ ರೀತಿ ನಡೆಯುವ ಘಟನೆಗಳು ನಿಲ್ಲಲಿ.. ಸದ್ಯ ಸಿಂಧು ಹಾಗೂ ಚಂದ್ರು ದಂಪತಿ ಸುಖವಾಗಿ ಬಾಳುವಂತಾಗಲಿ..