ಹೆಣ್ಣು‌ ಮಗುವಿಗೆ ತಂದೆಯಾದ ಕನ್ನಡ ಕಿರುತೆರೆಯ ಖ್ಯಾತ ನಟ..

0 views

ಕನ್ನಡ ಕಿರುತೆರೆಯ ಸಾಲು ಸಾಲು ಕಲಾವಿದರು ಈ ವರ್ಷ ಸಿಹಿ ಸುದ್ದಿ ನೀಡುತ್ತಿದ್ದು.. ಬಹಳಷ್ಟು ಕಲಾವಿದರು ದಾಂಪತ್ಯ ಜೀವನಕ್ಕೆ‌ ಕಾಲಿಟ್ಟರು.. ಮತ್ತಷ್ಟು ಕಲಾವಿದರು ಮಕ್ಕಳ ಸಿಹಿಸುದ್ದಿ ಹಂಚಿಕೊಂಡರು.. ಇದೀಗ ಕನ್ನಡ ಕಿರುತೆರೆಯ ಖ್ಯಾತ ನಟ ಹೆಣ್ಣು ಮಗುವಿಗೆ ತಂದೆಯಾಗಿದ್ದು.. ದೀಪಾವಳಿ ಹಬ್ಬದ ದಿನ ಸಾಮಾಜಿಕ ಜಾಲತಾಣದಲ್ಲಿ ಮಗಳ ಫೋಟೋ ಜೊತೆಗೆ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರಾವಾಹಿ ರಾಧಾ ರಮಣ ಖ್ಯಾತಿಯ ರಮಣ್ ಪಾತ್ರಧಾರಿ‌ ನಟ ಸ್ಕಂದ ಅಶೋಕ್ ಹೆಣ್ಣು ಮಗುವಿಗೆ ತಂದೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಕಳೆದ 2018 ರ ಮೇ 31 ರಂದು ಸ್ಕಂದ ಅಶೋಕ್ ಹಾಗೂ ಶಿಖಾ ಪ್ರಸಾದ್ ಅವರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತ್ತು.. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ತಮ್ಮ ಗೆಳತಿ ಶಿಖಾ ಪ್ರಸಾದ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಮದುವೆ ಸಮಾರಂಭದಲ್ಲಿ ಹರಿಶಿಣ ಶಾಸ್ತ್ರ.. ಮೆಹಂದಿ ಶಸ್ತ್ರ..‌ ಈ ರೀತಿ ವಿವಿಧ ಶಾಸ್ತ್ರಗಳನ್ನು ಬೆಂಗಳೂರಿನ ವಿವಿಧ 8 ಪ್ರತಿಷ್ಠಿತ ಹೊಟೆಲ್ ಗಳಲ್ಲಿ ನೆರವೇರಿಸಲಾಗಿತ್ತು..

ರಾಧಾ ರಮಣ ಧಾರಾವಾಹಿ ಮೂಲಕ ರಮಣ್ ಎಂದೇ ಖ್ಯಾತರಾಗಿದ್ದ ಸ್ಕಂದ ಯೂ ಟರ್ನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು.. ಮಳಯಾಳಂ ಸಿನಿಮಾಗಳಲ್ಲಿಯೂ ಅಭಿನಯಿಸಿರುವ ಸ್ಕಂದ ಅಲ್ಲಿ ಬಹಳ ಖ್ಯಾತಿಯನ್ನೂ ಪಡೆದಿದ್ದಾರೆ.. ಇನ್ನಿ ಸದ್ಯ ರಾಧಾ ರಮಣ ಧಾರಾವಾಹಿ ನಂತರ ಬಹಳ ಗ್ಯಾಪ್ ಪಡೆದು ಇದೀಗ ಸರಸು ಧಾರಾವಾಹಿ‌ವ್ಮೂಲಕ ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ.. ಮೂಲತಃ ಚಿಕ್ಕಮಗಳೂರಿನವರಾದ ಸ್ಕಂದ ಅಶೋಕ್ ಕಾಫಿ ಕಿಂಗ್ ಸಿದ್ದಾರ್ಥ್ ಅವರ ಅಣ್ಣನ ಮಗನೂ ಹೌದು.. ಉದ್ಯಮಿಯಾಗಿರುವ  ಸ್ಕಂದ ಅಶೋಕ್ ಅವರಿಗೆ ನಟನೆ ಎಂದರೆ ಫ್ಯಾಶನ್.. ಕಲಾವಿದನಾಗುವ ಸಲುವಾಗಿಯೇ ಬಹಳಷ್ಟು ತಯಾರಿ ನಡೆಸಿ ಚಿತ್ರರಂಗಕ್ಕೆ ಕಾಲಿಟ್ಟು ಸಕ್ಸಸ್ ಕಂಡಿದ್ದು ಸದ್ಯ ಸರಸು ಧಾರಾವಾಹಿಯಲ್ಲಿ ಬ್ಯುಸಿ ಆಗಿದ್ದಾರೆ..

ಇನ್ನು ಈ ನಡುವೆ ದೀಪಾವಳಿ ಹಬ್ಬದ ದಿನ ತಮ್ಮ ಮುದ್ದು ಮಗಳ ಫೋಟೋ ಹಂಚಿಕೊಂಡಿದ್ದು ದೀಪಾವಳಿ ಹಬ್ಬದ ದಿನ ನಮ್ಮ ಪುಟ್ಟ ರಾಜಕುಮಾರಿಯನ್ನು ಪರಿಚಯಿಸುತ್ತಿದ್ದೇವೆ.. ಬೇಬಿ ಸ್ಕಶಿಕಾ.. ಎಲ್ಲರೂ ಹಾರೈಸಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಕಲೇದ ಜೂನ್ ನಲ್ಲಿ ಸ್ಕಂದ ಅಶೋಕ್ ಅವರು ತಮ್ಮ ಮಡದಿ ಶಿಖಾ ಅವರಿಗೆ ಸರಳವಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದರು.. ಇದೀಗ ಮಗುವಾದ ಬಳಿಕ ಪುಟ್ಟ ಕಂದನ ಜೊತೆ ಫೋಟೋ ಚಿತ್ರೀಕರಣ ಮಾಡಿಸಿ ಸಂತೋಷ ಹಂಚಿಕೊಂಡಿದ್ದಾರೆ..

ಸದ್ಯ ಸ್ಕಂದ ಅಶೋಕ್ ಅವರ ಮುದ್ದು ಕಂದನ ಫೋಟೋ ನೋಡಿದ ಕಲಾವಿದರು.. ಸ್ನೇಹಿತರು ಹಾಗೂ ಅಭಿಮಾನಿಗಳು ಫೋಟೋಗೆ ಮೆಚ್ಚುಗೆ ಸೂಚಿಸಿ ಕಮೆಂಟ್ ಮೂಲಕ ಪುಟ್ಟ ಕಂದನಿಗೆ ಶುಭ ಹಾರೈಸಿದ್ದಾರೆ.‌.