ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಟಿ ಸ್ನೇಹ ನಿಜಕ್ಕೂ ಯಾರು ಗೊತ್ತಾ..

0 views

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಸಧ್ಯ ಕನ್ನಡ ಕಿರುತೆರೆ ಪ್ರಿಯರ ನೆಚ್ಚಿನ ಧಾರಾವಾಹಿಯಾಗಿದ್ದು ರೇಟಿಂಗ್ ನಲ್ಲಿ ನಂಬರ್ ಒನ್ ಧಾರಾವಾಹಿಯಾಗಿದೆ.. ಜೊತೆಜೊತೆಯಲಿ‌ ಧಾರಾವಾಹಿಯ ಯಶಸ್ಸಿನ ನಂತರ ನಿರ್ದೇಶಕ ಆರೂರು ಜಗದೀಶ್ ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬಂದಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಮೊದಲ ವಾರದಿಂದಲೂ ದಾಖಲೆಯ ರೇಟಿಂಗ್ ಪಡೆದು ಮೊದಲ ಸ್ಥಾನದಲ್ಲಿದೆ.. ಕತೆಯ ಜೊತೆಗೆ ಪ್ರತಿಯೊಂದು ಪಾತ್ರಧಾರಿಗಳೂ ಸಹ ಗಮನ ಸೆಳೆಯುತ್ತಿದ್ದು ಎಲ್ಲಾ ಕಲಾವಿದರುಗಳಿಗೂ ದೊಡ್ಡ ಮಟ್ಟದ ಯಶಸ್ಸು ದೊರೆತಿದೆ ಎನ್ನಬಹುದು..

ಇನ್ನು ಧಾರಾವಾಹಿಯ ಪ್ರಮುಖ ಪಾತ್ರಧಾರಿ ನಟಿ ಸ್ನೇಹ ನಿಜಕ್ಕೂ ಯಾರು ಆಕೆಯ ಬಗ್ಗೆ ತಿಳಿದರೆ ನಿಜಕ್ಕೂ ಹೆಮ್ಮೆಯಾಗುತ್ತದೆ.. ಹೌದು ಸ್ನೇಹ ಹಾಗೂ ಕಂಠಿ ಜೋಡಿ ಜನಮನ ಗೆದ್ದಿದ್ದು ಪ್ರೇಕ್ಷಕರನ್ನು ಮೋಡಿ ಮಾಡಿದೆ ಎಂದರೆ ತಪ್ಪಾಗಲರಾದು.. ಒಂದು ಕಡೆ ಕಂಠಿ ಪಾತ್ರ ಮಾಡಿರುವ ನಟ ಧನುಷ್ ಮದ್ಯಮ ವರ್ಗದ ಕುಟುಂಬದಿಂದ ಬಂದಿದ್ದು ಆಡಿಷನ್ ಮೂಲಕವೇ ಈ ಪಾತ್ರಕ್ಕೆ ಆಯ್ಕೆಯಾಗಿ ಇದೀಗ ಕಿರುತೆರೆಯ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ.. ಇನ್ನು ಇತ್ತ ನಾಯಕಿ ಪಾತ್ರಧಾರಿ ಸ್ನೇಹ ಯಾರು.. ಹೌದು ಸ್ನೇಹ ಪತರದಲ್ಲಿ ಅಭಿನಯಿಸುತ್ತಿರುವ ನಟಿ ಮತ್ಯಾರೂ ಅಲ್ಲ ಆಕೆಯ ಹೆಸರು ಸಂಜನಾ ಬುರ್ಲಿ.. ಈಕೆಯನ್ನು ಈ ಮೊದಲು ಸಹ ಟಿವಿ ಪರದೆಯ ಮೇಲೆ ಕಂಡಿದ್ದುಂಟು.. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ವರ್ಷದ ಹಿಂದೆ ಪ್ರಸಾರವಾಗುತ್ತಿದ್ದ ಲಗ್ನ ಪತ್ರಿಕೆ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದು ಇದೇ ಸಂಜನಾ ಬುರ್ಲಿ.. ಆದರೆ ರೇಟಿಂಗ್ ಇಲ್ಲದ ಕಾರಣ ಆ ಧಾರಾವಾಹಿ ಕೆಲವೇ ತಿಂಗಳುಗಳಲ್ಲಿ ಮುಕ್ತಾಯವಾಗಿಬಿಟ್ಟಿತು..

ಆನಂತರ ಇದರಿಂದ ಬೇಸರಗೊಂಡ ಸಂಜನಾ ಬುರ್ಲಿ ನಟನೆಯಿಂದ ದೂರ ಸರಿದು ತಮ್ಮ ವಿಧ್ಯಾಭ್ಯಾಸದ ಕಡೆ ಗಮನ ಕೊಟ್ಟರು.. ಮೂರು ತಿಂಗಳ ಬಳಿಕ ನಿರ್ದೇಶಕ ಆರೂರು ಜಗದೀಶ್ ಅವರ ಕಡೆಯಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಅವಕಾಶ ದೊರೆಯಿತು.. ಅದರೆ ಅದಾಗಲೇ ಲಾಕ್ ಡೌನ್ ಮುಗಿದು ಕಾಲೇಜು ಆರಂಭವಾದ ಕಾರಣ ಧಾರಾವಾಹಿ ಬೇಡ ಎಂದು ಸಂಜನಾ ತಿಳಿಸಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಅವಕಾಶವನ್ನು ತಿರಸ್ಕರಿಸಿದ್ದರು.

ಆನಂತರ ಮತ್ತೆ ಆನ್ಲೈನ್ ತರಗತಿ ಶುರುವಾಗಿ ಮತ್ತೆ ಧಾರಾವಾಹಿ ಹಾಗೂ ತರಗತಿಯನ್ನು ಬ್ಯಾಲೆನ್ಸ್ ಮಾಡಬಹುದೆಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ಒಪ್ಪಿಕೊಂಡರು.. ನಾನೇನಾದರೂ ಅವಕಾಶ ಬಿಟ್ಟಿದ್ದರೆ ಇಂತಹ ದೊಡ್ಡ ಯಶಸ್ಸನ್ನು ಕಳೆದುಕೊಳ್ಳುತ್ತಿದ್ದೆ ಎನ್ನುತ್ತಾರೆ ಸಂಜನಾ ಬುರ್ಲಿ.. ಅದರೆ ಸಂಜನಾ ಅವರಿಗೆ ಈಗಲೂ ಸಹ ಎಲ್ಲಾಕಿಂತ ಮುಖ್ಯ ಓದುವುದು.. ಹೌದು ಸಿನಿಮಾ ಅಥವಾ ಧಾರಾವಾಹಿಯಲ್ಲಿ ಅವಕಾಶ ಸಿಕ್ಕ ತಕ್ಷಣ ತಮ್ಮ ಓದನ್ನು ನಿಲ್ಲಿಸಿ ಬಣ್ಣದ ಲೋಕದ ಕಡೆ ಮುಖ ಮಾಡುವ ಅದೆಷ್ಟೋ ನಟಿಯರ ನಡುವೆ ಸಂಜನಾ ಬುರ್ಲಿ ವಿಶೇಷ ಎನ್ನಬಹುದು..

ಹೌದು ತಾವು ನಟನೆಯಲ್ಲಿ ಎಷ್ಟೇ ದೊಡ್ಡ ಯಶಸ್ಸು ಪಡೆದರೂ ಸಹ ತಮ್ಮ ವಿಧ್ಯಾಭ್ಯಾಸವನ್ನು ಮಾತ್ರ ನಿಲ್ಲಿಸುವುದಿಲ್ಲ ಎನ್ನುತ್ತಾರೆ ಸಂಜನಾ ಬುರ್ಲಿ.. ಅಷ್ಟಕ್ಕೂ ಆಕೆ ಓದುತ್ತಿರುವುದೇನು ಗೊತ್ತಾ.‌. ಸಂಜನಾ ಸಧ್ಯ ತಮ್ಮ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.. ಹೌದು ನೆಟ್ಟಗೆ ಕಾಲೇಜಿಗೆ ಹೋಗಿ ವಿಧ್ಯಾಭ್ಯಾಸ ಮಾಡಿದರೇ ಇಂಜಿನಿಯರಿಂಗ್ ಪಾಸ್ ಆಗೋದು ಕಷ್ಟ ಎನ್ನುವವರ ನಡುವೆ ನಟನೆಯನ್ನು ಸಹ ಮಾಡಿಕೊಂಡು ಅತ್ತ ಇಂಜಿನಿಯರಿಂಗ್ ಸಹ ಓದಿಕೊಂಡು ರ್ಯಾಂಕ್ ಸ್ಟುಡೆಂಟ್ ಆಗಿರೋದು ವಿಶೇಷ.. ಹೌದು ಸಂಜನಾ ಬುರ್ಲಿ ರ್ಯಾಂಕ್ ಸ್ಟುಡೆಂಟ್ ಆಗಿದ್ದು ಸಧ್ಯ ತಮ್ಮ ಎಂಟನೇ ಸೆಮೆಸ್ಟರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ..

ಹೌದು ಶಾಲಾ ಕಾಲೇಜಿನ ಸಮಯದಿಂದಲೇ ನೃತ್ಯ ನಾಟಕ ಏಕಪಾತ್ರಾಭಿನಯ ಮಾಡುತ್ತಿದ್ದ ಸಂಜನಾ ಬುರ್ಲಿ ಅನೇಕ ರಾಜ್ಯ ಹಾಗೂ ಅಂತರರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.. ಈ ರೀತಿ ನಟನೆ ಮೇಕೆ ಆಸಕ್ತಿ ಹೆಚ್ಚಾಗಿ ನಟಿಯಾಗಬೇಕು ಎಂದಕೊಂಡರು.. ಆದರೆ ಅವರ ತಂದೆ ತಾಯಿಗೆ ಮಗಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎಂದು ಕನಸು ಇದ್ದ ಕಾರಣ ತಂದೆ ತಾಯಿಯ ಕನಸನ್ನು ನನಸು ಮಾಡಲು ಇಂಜಿನಿಯರಿಂಗ್ ಸೇರಿಕೊಂಡು ರ್ಯಾಂಕ್ ಪಡೆಯುತ್ತಾ ಇದೀಗ ಕೊನೆ ಸೆಮಿಸ್ಟರ್ ನಲ್ಲಿದ್ದಾರೆ.. ಇತ್ತ ವಿಧ್ಯಾಭ್ಯಾಸದ ಜೊತೆಜೊತೆಗೇ ತಮ್ಮ ಕನಸಾದ ನಟನೆಯಲ್ಲಿಯೂ ತಮ್ಮ ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದು ಸ್ನೇಹಾ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರ ಮನ ಗೆದ್ದು ಮನೆಮಾತಾಗಿದ್ದಾರೆ ಎನ್ನಬಹುದು..

ಇನ್ನು ತಮ್ಮ ಯಶಸ್ಸಿನ ಬಗ್ಗೆ ಮಾದ್ಯಮವೊಂದರ ಜೊತೆ ಮಾತನಾಡಿರುವ ಸಂಜನಾ ಬುರ್ಲಿ ಅವರು ಇಷ್ಟು ಪ್ರೀತಿ ಕೊಟ್ಟಿರುವುದಕ್ಕೆ ನಾಡಿನ ಜನತೆಗೆ ಧನ್ಯವಾದಗಳು.. ನನ್ನ ವಿಧ್ಯಾಭ್ಯಾಸ ಹಾಗೂ ನಟನೆ ಎರಡಕ್ಕೂ ಸಹಕಾರ ನೀಡುತ್ತಿರುವ ಧಾರಾವಾಹಿ ತಂಡ.. ನನ್ನ ತಂದೆ ತಾಯಿ.. ನನ್ನ ಕಾಲೇಜಿನವರು ಎಲ್ಲರಿಗೂ ಧನ್ಯವಾದಗಳು.. ಸಾಕಷ್ಟು ಮಂದಿ ನನ್ನನ್ನು ನೋಡಿ ನಿನ್ನಂತ ಮಗಳು ಇರಬೇಕು ಎಂದು ಹೇಳಿದಾಗ ಬಹಳ ಸಂತೋಷವಾಗುತ್ತದೆ.. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ ಎಂದಿದ್ದಾರೆ..