ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಈ ನಟಿ ನಿಜಕ್ಕೂ ಯಾರು ಗೊತ್ತಾ.. ಎಲ್ಲರಿಗೂ ಗೊತ್ತಿರುವ ಹುಡುಗಿಯೇ..

0 views

ಕನ್ನಡ ಕಿರುತೆರೆಯಲ್ಲಿ ಸಧ್ಯ ಹೊಸ ಧಾರಾವಾಹಿಗಳ ಪರ್ವ ಆರಂಭಗೊಂಡಿದೆ.. ಹೌದು ಉದಯ ಟಿವಿ ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಕಳೆದ ಒಂದೆರೆಡು ವಾರದಿಂದ ಸಾಕಷ್ಟು ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಿದ್ದು ಧಾರಾವಾಹಿ ಪ್ರಿಯರಿಗೆ ಒಂದಿಷ್ಟು ಹೆಚ್ಚು ಮನರಂಜನೆ ಸಿಗುವಂತೆ ಕಾಣುತ್ತಿದೆ.. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಚಕೋರಿ ಹಾಗೂ ದೊರೆಸಾನಿ ಧಾರಾವಾಹಿ ಶುರುವಾದರೆ ಇತ್ತ ಜೀ ಕನ್ನಡದಲ್ಲಿ ನಿನ್ನೆಯಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶುರು ವಾಗಿದೆ.. ಹೌದು ಸಧ್ಯ ಕನ್ನಡ ಕಿರುತೆರೆಯ ನಂಬರ್ ಒನ್ ಮನರಂಜನಾ ವಾಹಿನಿಯಾಗಿರುವ ಜೀ ಕನ್ನಡ ವಾಹಿನಿಯಲ್ಲಿ ನಿನ್ನೆಯಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ರಾತ್ರಿ ಏಳು ಮೂವತ್ತಕ್ಕೆ ಪ್ರಸಾರವಾಗುತ್ತಿದ್ದು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಹೌದು ಮತ್ತೊಂದು ಕಡೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದೇ ಸಮಯಕ್ಕೆ ಕನ್ನಡತಿ ಧಾರಾವಾಹಿ ಪ್ರಸಾರವಾಗುತ್ತಿದ್ದು ಇತ್ತ ಪುಟ್ಟಕ್ಕನ ಮಕ್ಕಳು ಕನ್ನಡತಿಗೆ ಪೈಪೋಟಿ ನೀಡುವಂತೆ ಕಾಣುತ್ತಿದೆ..

ಹೌದು ಉಮಾಶ್ರೀ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ತಾರಾ ಬಳಗವೇ ಧಾರಾವಾಹಿಯಲ್ಲಿದೆ.. ಅದರಲ್ಲೂ ಹಳ್ಳಿ ವಾತಾವರಣದಲ್ಲಿ ಧಾರಾವಾಹಿಯ ಚಿತ್ರೀಕರಣ ಮಾಡಲಾಗುತ್ತಿದ್ದು ಜೋಡಿ ಹಕ್ಕಿ ಧಾರಾವಾಹಿ ನಂತರ ನಿರ್ದೇಶಕ ಆರೂತು ಜಗದೀಶ್ ಅವರು ಮತ್ತೊಂದು ಹಳ್ಳಿ ಸೊಗಡಿನ ಧಾರಾವಾಹಿಯನ್ನು ನೀಡುತ್ತಿದ್ದಾರೆ.. ಇತ್ತ ಗಂಡ ದೂರವಾದ ಬಳಿಕ ನೊಂದ ಹೆಂಡತಿ ತನ್ನ ಮೂವರು ಮಕ್ಕಳ ಜೊತೆ ಮೆಸ್ ನಡೆಸುತ್ತಾ ಸ್ವಾಭಿಮಾನದಿಂದ ತನ್ನ ಬದುಕನ್ನು ಕಟ್ಟಿಕೊಂಡು ಮೂವರು ಹೆಣ್ಣು ಮಕ್ಕಳನ್ನು ದಡ ಸೇರಿಸುವ ಧಾರಾವಾಹಿಯೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ.. ಇನ್ನು ಧಾರಾವಾಹಿಯಲ್ಲಿ ಯುವ ನಟ ನಟಿಯರ ಪಾತ್ರಗಳಲ್ಲಿ ಬಹುತೇಕ ಎಲ್ಲಾ ಹೊಸ ಕಲಾವಿದರೇ ಅಭಿನಯಿಸುತ್ತಿದ್ದು ಮೊದಲ ದಿನ ಎಲ್ಲರೂ ಸಹ ತಮ್ಮ ತಮ್ಮ ಪಾತ್ರಗಳ ಮೂಲಕ ಇಷ್ಟವಾಗಿದ್ದಾರೆ..

ಇನ್ನು ಇತ್ತ ಪುಟ್ಟಕ್ಕನ ಎರಡನೇ ಮಗಳು ಸಧ್ಯ ಮೊದಲ ಸಂಚಿಕೆಯಲ್ಲಿಯೇ ಸಿಕ್ಕಾಪಟ್ಟೆ ಮಿಂಚಿದ್ದು ಜನರು ಆ ಪಾತ್ರವನ್ನು ಬಹಳ ಇಷ್ಟ ಪಟ್ಟರೆನ್ನಬಹುದು..ಇನ್ನು ಪುಟ್ಟಕ್ಕನ ಎರಡನೇ ಮಗಳು ಸ್ನೇಹ ಪಾತ್ರದಲ್ಲಿ ಅದರಲ್ಲೂ ಪುಟ್ಟಕ್ಕನಿಗೆ ಗಂಡು ಮಗನಂತೆ ಇದ್ದು ಮನೆಯವರಿಗೆ ಏನೇ ತೊಂದರೆ ಬಂದರೂ ಎದುರಿಸುತ್ತಿರುವ ಪಾತ್ರ ಮಾಡುತ್ತಿರುವ ಈ ನಟಿ ಯಾರು ಎಂಬ ಸಣ್ಣ ಕುತೂಹಲ ಇದ್ದೇ ಇರುತ್ತದೆ.. ಹೌದು ಈ ನಟಿ ಮತ್ಯಾರೂ ಅಲ್ಲ ಈಕೆಯ ಹೆಸರು ಸಂಜನಾ ಬುರ್ಲಿ.. ಸಂಜನಾ ಬುರ್ಲಿ ಅವರಿಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಧಾರಾವಾಹಿಯೇನೂ ಅಲ್ಲ.. ಈ ಹಿಂದೆಯೇ ಲಗ್ನ ಪತ್ರಿಕೆ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..

ಸಾಕಷ್ಟು ಪ್ರಚಾರ ಕೊಟ್ಟು ಶುರುವಾಗಿದ್ದ ಧಾರಾವಾಹಿ ಅದ್ಯಾಕೋ ಕೆಲವೇ ತಿಂಗಳಲ್ಲಿ ಟಿ ಆರ್ ಪಿ ಇಲ್ಲದೇ ತನ್ನ ಪ್ರಸಾರವನ್ನು ನಿಲ್ಲಿಸಿತು.. ಇನ್ನು ಇದೀಗ ಸಾಕಷ್ಟು ಸಮಯದ ಬ್ರೇಕ್ ಪಡೆದು ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಮರಳಿದ್ದಾರೆ.. ಆದರೆ ಸಂಜನಾ ಬುರ್ಲಿ ನಟಿ ಮಾತ್ರವಲ್ಲ.. ಅದರ ಜೊತೆಜೊತೆಗೆ ಉನ್ನತ ವ್ಯಾಸಂಗವನ್ನೂ ಸಹ ಮಾಡುತ್ತಿದ್ದಾರೆ.. ಹೌದು ಈ ಬಗ್ಗೆ ಮಾದ್ಯಮದ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿರುವ ಮಾತುಗಳು.. “ಲಗ್ನ ಪತ್ರಿಕೆ ಧಾರಾವಾಹಿ ಆದ ನಂತರ ನಾನೇ ಗ್ಯಾಪ್ ತೆಗೆದುಕೊಂಡೆ.. ಆ ಗ್ಯಾಪ್ ನನಗೆ ಬೇಕಿತ್ತು.. ಸ್ವಲ್ಪ ನನ್ನ ಸ್ಟಡೀಸ್ ಮೇಲೆ ಗಮನ ಕೊಡಬೇಕಿತ್ತು.. ಅದಾದ ಮೇಲೆ ಎರಡನೇ ಲಾಕ್ ಡೌನ್ ಸಮಯದಲ್ಲಿ ನನಗೆ ಮತ್ತೆ ನಟಿಸಬೇಕು ಅಂತ ಬಹಳ ಅನ್ನಿಸ್ತಾ ಇತ್ತು.. ಆ ಸಮಯದಲ್ಲಿಯೇ ಪುಟ್ಟಕ್ಕನ ಮಕ್ಕಳು ಅವಕಾಶ ಬಂತು..

ನಿರ್ಧಾರ ಮಾಡಿ ಒಪ್ಪಿಕೊಂಡೆ.. ನಾನು ಸಧ್ಯ ನಟನೆಯ ಜೊತೆಗೆ ಇಂಜಿನಿಯರಿಂಗ್ ಓದ್ತಾ ಇದ್ದೀನಿ.. ಈಗ ಅಂತಿಮ ವರ್ಷದಲ್ಲಿ ಓದ್ತಿದ್ದೀನಿ.. ಎಜುಕೇಶನ್ ಮತ್ತೆ ನಟನೆ ಎರಡೂ ಕಡೆ ನನಗೆ ಆಸಕ್ತಿ ಇದೆ.. ಇಂಜಿನಿಯರ್ ಆಗಬೇಕು ಅನ್ನೋದು ನನ್ನ ಕನಸು.. ಹಾಗೆಯೇ ಚಿಕ್ಕ ವಯಸ್ಸಿಂದಲೂ ನನಗೆ ನಟಿಯಾಗಬೇಕು ಅನ್ನೋ ಆಸೆ ಇತ್ತು.. ಅದಕ್ಕೆ ಜೊತೆಜೊತೆಯಾಗಿಯೇ ಮಾಡುತ್ತಿದ್ದೀನಿ.. ಇದೆಲ್ಲಾ ಕಷ್ಟ ಇಲ್ಲ ಅಂತ ನಾನು ಹೇಳೊಲ್ಲ.. ನಿಜಕ್ಕೂ ತುಂಬಾನೇ ಕಷ್ಟ ಆಗ್ತಾ ಇದೆ.. ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಆಗ್ತಾ ಇಲ್ಲ.. ಸಮಯ ಸಿಗಲ್ಲ.. ಆದರೆ ಇದನ್ನ ನಾನೇ ತೆಗೆದುಕೊಂಡಿರೋದ್ರಿಂದ ನಾನು ನಿಭಾಯಿಸಿಕೊಂಡು ಹೋಗ್ತೀನಿ.. ಆಸಕ್ತಿ ಇದ್ದರೆ ಯಾವುದೂ ಕಷ್ಟ ಇಲ್ಲ..

ಇದರ ಜೊತೆಗೆ ನಾನು ಅದಾಗಲೇ ಸಿನಿಮಾಗಳಲ್ಲೂ ಅಭಿನಯಿಸಿದ್ದೀನಿ.. ಎರಡು ಮೂರು ಸಿನಿಮಾ ಬಿಡುಗಡೆಗೂ ರೆಡಿ ಆಗಿದೆ.. ಒಂದು ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್.. ಅದು ಆಡಿಯೋ ಲಾಂಚ್ ಆಗಿದೆ.. ಇನ್ನೊಂದು ತಮಿಳು ಸಿನಿಮಾ ಬಿಡುಗಡೆ ಆಗಿದೆ.. ಮತ್ತೊಂದು ಕನ್ನಡ ಸಿನಿಮಾ ತುಳು ನಿರ್ದೇಶಕರ ಮೊದಲ ಸಿ‌ನಿಮಾ ಅದರಲ್ಲೂ ಅಭಿನಯಿಸಿದ್ದೀನಿ.. ಎಲ್ಲವೂ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ..ಲಾಕ್ ಡೌನ್ ಅದು ಇದು ಅಂತ ಸಿನಿಮಾಗಳು ಬಿಡುಗಡೆ ಆಗೋದು ತಡ ಆಯ್ತು.. ಆದರೆ ಕಲಾವಿದೆಯಾಗಿ ಮುಂದುವರೆಯಲೇ ಬೇಕು.. ಅದಕ್ಕೆ ಕಿರುತೆರೆ ಗೆ ಬಂದೆ.. ನನ್ನನ್ನು ನಾನು ಪ್ರೂವ್ ಮಾಡಬೇಕಿತ್ತು.. ಅದೇ ಕಾರಣಕ್ಕೆ ಪುಟ್ಟಕ್ಕನ ಮಕ್ಕಳು ಒಪ್ಪಿಕೊಂಡೆ.. ಹೌದು ನಾನು ಸಿನಿಮಾದಿಂದ ಧಾರಾವಾಹಿಗೆ ಬಂದಿದ್ದೀನಿ.. ಈಗಿನ ದಿನಗಳಲ್ಲಿ ಏನೂ ಹೇಳೋಕೆ ಆಗಲ್ಲ.. ಆದರೆ ಒಳ್ಳೆಯ‌ ಪ್ರತಿಭೆ ಇದ್ದರೆ ಎಲ್ಲಿ ಬೇಕಾದರೂ ಖಂಡಿತ ಅವಕಾಶ ಸಿಗುತ್ತದೆ.. ಆ ನಂಬಿಕೆಯಲ್ಲಿಯೇ ನಾನಿದ್ದೇನೆ ಎಂದು ತಮ್ಮ ಬಗ್ಗೆ ತಮ್ಮ ನಟನಾ ಜರ್ನಿಯ ಜೊತೆಗೆ ತಮ್ಮ ವಿಧ್ಯಾಭ್ಯಾಸದ ಬಗ್ಗೆಯೂ ಹಂಚಿಕೊಂಡರು..