ಈತನ ತಾಯಿ ಐದು ವರ್ಷ ಶಬರಿಯಂತೆ ಅಲೆದು ಮಗನನ್ನು ಇಲ್ಲವಾಗಿಸಿದ ಸೊಸೆಗೆ ಎಂತಹ ಗತಿ ತಂದರು ಗೊತ್ತಾ.. ಮೈ ಜುಮ್ಮೆನ್ನುತ್ತದೆ..

0 views

ತಾಯಿ ಪ್ರೀತಿ ಅನ್ನೋದನ್ನು ನಿಜಕ್ಕೂ ಯಾರಿಂದಲೂ ವರ್ಣಿಸೋದಕ್ಕೆ ಸಾಧ್ಯವಿಲ್ಲ.. ಆಕೆಗೆ ಮಕ್ಕಳಿಗಾಗಿ ಮಮಕಾರ ತೋರುವುದೂ ಗೊತ್ತು.. ಮಕ್ಕಳಿಗೆ ಯಾರಿಂದಾದರೂ ತೊಂದರೆಯಾದರೆ ಕಾಳಿಮಾತೆಯಂತೆ ನಿಲ್ಲೋದು ಗೊತ್ತು.. ಹೌದು ಈ ಮಹಾತಾಯಿ ತನ್ನ ಮಗ ಪ್ರೀತಿಸಿ ಮದುವೆಯಾದವಳೇ ಆತನನ್ನು ಇಲ್ಲವಾಗಿಸಿದ ಸೊಸೆಗೆ ನ್ಯಾಯಾಲಯದ ಮೂಲಕವೇ ತಕ್ಕ ಶಾಸ್ತಿಯಾಗಬೇಕೆಂದು ಸತತ ಐದು ವರ್ಷ ಶಬರಿಯಂತೆ ಅಲೆದ ತಾಯಿ ಆಕೆಗೆ ತಂದ ಗತಿ ನೋಡಿದರೆ ಕೆಲವರಿಗೆ ಆಶ್ಚರ್ಯ ಆಗೋದು ಹಾಗೂ ಮತ್ತೆ ಕೆಲವರಿಗೆ ತಾಯಿಯ ಪ್ರೀತಿಯ ಬಗ್ಗೆ ಹೆಮ್ಮೆಯೂ ಆಗುತ್ತದೆ.. ಹೌದು ಈ ಘಟನೆ ನಡೆದಿರೋದು ಬೇರೆ ಯಾವುದೋ ರಾಜ್ಯದಲಲ್ಲ ನಮ್ಮದೇ ರಾಜ್ಯದ ಕೋಲಾರದಲ್ಲಿ.. ಹೌದು ಈತನ ಹೆಸರು ಸೋಮನಾಥ್ ಇವನು ಅಶ್ವಿನಿ ಎಂಬಾಕೆಯನ್ನು ಪ್ರೀತಿಸಿ ಕೆಲ ವರ್ಷಗಳ ಹಿಂದೆ ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆಯೂ ಸಹ ಆಗಿರುತ್ತಾನೆ.. ಇವರಿಗೆ ಒಂದು ಹೆಣ್ಣು ಮಗುವೂ ಸಹ ಆಗುತ್ತದೆ..

ಸೋಮನಾಥ್ ಗೆ ಒಬ್ಬ ಅಣ್ಣ ಹಾಗೂ ಒಬ್ಬ ತಮ್ಮ ಮತ್ತು ತಾಯಿ ವಾಸಗಿ ಇರುತ್ತಾರೆ.. ಮದುವೆ ಕೆಲ ದಿನಗಳ ಬಳಿಕ ಸೋಮನಾಥ್ ಹಾಗೂ ಅಶ್ವಿನಿ ಬೇರೆ ಮನೆಯಲ್ಲಿದ್ದು ಇತ್ತ ತಾಯಿ ವಾಸಗಿ ಹಾಗೂ ಇನ್ನಿಬ್ಬರು ಮಕ್ಕಳು ಇನ್ನೊಂದು ಮನೆಯಲ್ಲಿ ಇರುತ್ತಾರೆ.. ಜೀವನ ನೆಮ್ಮದಿಯಿಂದ ಸಾಗುತ್ತಿದೆ.. ಎಲ್ಲವೂ ಚೆನ್ನಾಗಿದೆ.. ಒಳ್ಳೆಯ ಸಂಸಾರ ಒಳ್ಳೆಯ ಹೆಂಡತಿ ಒಂದು ಮುದ್ದಾದ ಮಗು ಹೀಗೆ ಜೀವನ ಸಾಗುತಿತ್ತು.. ಆದರೆ ಅಷ್ಟರಲ್ಲಿ 2015 ರಲ್ಲಿ ಸೆಪ್ಟೆಂಬರ್ ಹತ್ತರಂದು ಸೋಮನಾಥನ ಅಣ್ಣ ಸೆಂದಿಲ್ ಕುಮಾರ್ ಅಕಾಲಿಕವಾಗಿ ಅನಾರೋಗ್ಯದ ಕಾರಣ ಇಲ್ಲವಾಗುತ್ತಾರೆ.. ಇದರಿಂದ ಸಂಪೂರ್ಣ ಮನೆಯ ಸಂತೋಷವೂ ಇಲ್ಲವಾಗಿ ಹೋಯ್ತು.. ಹೀಗೆ ಆರು ತಿಂಗಳು ಕಳೆಯಿತು.. ಅಣ್ಣನ ಆ ಘಟನೆಯ ದುಃಖದಿಂದ ಸೋಮನಾಥ್ ಹೊರ ಬರಲು ಆಗುತ್ತಿರಲಿಲ್ಲ.. ಆದರೂ ಸಹ ಬದುಕಿನ ಬಂಡಿ ನಡೆಯಬೇಕಿತ್ತು.. ಮನೆಯ ಜವಾಬ್ದಾರಿ ಆತನ ಮೇಲಿತ್ತು.. ಹಗಲಿನಲ್ಲಿ ಫೈನಾನ್ಸ್ ಕಂಪನಿಯಲ್ಲಿ ರಾತ್ರಿಯಲ್ಲಿ ಆಟೋ ಓಡಿಸಿಕೊಂಡಿದ್ದ..

ಹೀಗೆ ಜೀವನ ಸಾಗುತ್ತಿದ್ದಾಗ.. 2016 ರ ಮಾರ್ಚ್ ಆರರಂದು ಶಿವರಾತ್ರಿ ಹಬ್ಬದಂದು ಅಮ್ಮನನ್ನು ನೋಡಲು ವಾಸಗಿ ಅವರ ಮನೆಗೆ ಬರುತ್ತಾನೆ. ಅಮ್ಮನ ಜೊತೆ ಸಾಕಷ್ಟು ಮಾತನಾಡಿಕೊಂಡು ನಂತರ ಗಣೇಶಪುರಂ ನಲ್ಲಿರುವ ತನ್ನ ಮನೆಗೆ ಹೋಗಲು ಮುಂದಾದ.. ಇಂದು ಶಿವರಾತ್ರಿ ಹಬ್ಬ ಇವತ್ತು ಆಟೋ ಓಡಿಸಲು ಹೋಗಬೇಡ ಎಂದು ತಾಯಿ ವಾಸಗಿ ಹೇಳಿದ್ದಳು.. ಸರಿ ಆಯಿತೆಂದು ತನ್ನ ಮನೆಗೆ ಹೋಗಿ ಮಲಗಿದ.. ಆದರೆ ಅಂದು ಊರಿಗೆಲ್ಲಾ ಸಂಭ್ರಮದ ಹಬ್ಬದ ದಿನವಾಗಿತ್ತು.. ಆದರೆ ಸೋಮನಾಥ್ ಗೆ ಮಾತ್ರ ತನ್ನ ಜೀವನದ ಮುಕ್ತಯಾದ ದಿನವಾಗಿತ್ತು.. ಹೌದು ಅದೇ ದಿನ ರಾತ್ರಿ ಹನ್ನೆರೆಡು ಗಂಟೆ ಸಮಯದಲ್ಲಿ ಸೋಮನಾಥನ ಪತ್ನಿ ಅಶ್ವಿನಿ ಸೋಮನಾಥನ ತಾಯಿ ವಾಸಗಿಗೆ ಫೋನ್ ಮಾಡಿ ನಿಮ್ಮ ಮಗ ಜೀವ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದಾನೆ ಎಂದಿದ್ದಾಳೆ.. ತಕ್ಷಣ ಬೆಚ್ಚಿಬಿದ್ದ ವಾಸಗಿ ಮಗನನ್ನು ನೋಡಲು ಆತನ ಮನೆಗೆ ಓಡಿದಳು.. ಅಷ್ಟರಲ್ಲಿ ಮತ್ತೊಮ್ಮೆ ಸೊಸೆ ಅಶ್ವಿನಿ‌ ಫೋನ್ ಮಾಡಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದೇನೆ ಎಲ್ಲಿಗೆ ಬನ್ನಿ ಎಂದಿದ್ದಾಳೆ..

ಮತ್ತೆ ಆ ತಾಯಿ ಆ ತಡ ರಾತ್ರಿಯಲ್ಲಿ ಸರ್ಕಾರಿ ಆಸ್ಪತ್ರೆಯ ಮುಂದೆ ಮಗನಿಗಾಗಿ ಕಾದು ನಿಂತಿದ್ದಳು.. ಆದರೆ ಅದಾಗಲೇ ಕಾಲ ಮಿಂಚಿ ಹೋಗಿತ್ತು ಸೋಮನಾಥ್ ಅದಾಗಲೇ ಇಲ್ಲವಾಗಿ ಹೋಗಿದ್ದ.. ವೈದ್ಯರು ಸಹ ಅದನ್ನೇ ತಿಳಿಸಿ ಆತ ಜೀವ ಕಳೆದುಕೊಂಡಿರುವುದರ ಬಗ್ಗೆ ತಿಳಿಸಿದರು.. ಆದರೆ ಸಂಜೆವರೆಗೂ ನನ್ನ ಜೊತೆ ಮಾತನಾಡಿದ ಮಗ ಈಗ ರಾತ್ರಿ ಇಲ್ಲವಾದ ಎಂದರೆ ತಾಯಿಗೆ ನಂಬಲಾಗಲಿಲ್ಲ.. ಆರು ತಿಂಗಳ ಹಿಂದಷ್ಟೇ ಮೊದಲ ಮಗ.. ಈಗ ಇವನು ಹೋದದ್ದು ನೋಡಿ ಆ ತಾಯಿ ವಾಸಗಿ ಕುಗ್ಗಿ ಹೋದಳು.. ಸರಿಯಾಗಿ ಐದು ವರ್ಷದ ಹಿಂದೆ ಕೆಜಿಎಫ್ ನ ರಾಬರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸೋಮನಾಥ್ ತಾನೇ ಜೀವ ಕಳೆದುಕೊಂಡಿದ್ದಾನೆ ಎಂದು ಪ್ರಕರಣ ದಾಖಲಾಗಿ ಎಲ್ಲರೂ ಸುಮ್ಮನಾದರು.. ಇನ್ನು ವಿಚಾರ ಸಂಬಂಧಿಕರಿಗೆ ತಿಳಿದು ಮಾರನೇ ದಿನ ಎಲ್ಲರೂ ಸೇರಿ ಅಂತ್ಯ ಸಂಸ್ಕಾರವನ್ನೂ ಸಹ ಮಾಡಿದರು.. ಮೂರನೇ ದಿನದ ಕಾರ್ಯಕ್ಕೆ ವಾಸಗಿ ಸೊಸೆ ಇದ್ದ ಮನೆಗೆ ತೆರಳಿದಳು.. ಆಗ ಮಗ ಜೀವ ಕಳೆದುಕೊಂಡ ರೂಮ್ ಗೆ ಹೋಗಲು ಸೊಸೆ ಅವಕಾಶ ಕೊಡಲಿಲ್ಲ.. ಹಾಸಿಗೆಯನ್ನು ಯಾರಿಗೋ ಕೊಟ್ಟು ಕಳುಹಿಸಿದಳು.. ಆದರೆ ಫ್ಯಾನ್ ಇದ್ದ ರೀತಿಯಲ್ಲಿಯೇ ಇತ್ತು.. ಇದರಿಂದ ಅನುಮಾನಗೊಂಡ ತಾಯಿ ತಾನು ಅಸಹಾಯಕಳಾಗಿ ಏನೂ ಮಾಡಲಾಗದೇ ಸುಮ್ಮನಾದಳು.. ನಂತರ ತನ್ನ ಮನೆಗೆ ಬಂದಳು..

ಆದರೆ ಮನಸ್ಸಿನಲ್ಲಿ ಏನೋ ಕಳವಳ.. ಮಗನಿಗೆ ಅನ್ಯಾಯ ವಾಗಿದೆ ಎಂದು ತಾಯಿಯ ಆ ಮನಸ್ಸಿಗೆ ಅನಿಸುತ್ತಲೇ ಇತ್ತು.. ನಾಲ್ಕು ತಿಂಗಳ ಬಳಿಕ ಸೊಸೆ ಮತ್ತೊಬ್ಬನ ಕೈ ಕೈ ಹಿಡಿದುಕೊಂಡು ಓಡಾಡುತ್ತಿರುವ ವಿಚಾರವನ್ನು ಯಾರೋ ವಾಸಗಿಗೆ ತಿಳಿಸಿದ್ದರು.. ಇದರಿಂದ ನೊಂದ ವಾಸಗಿ ಅದೇನು ಎಂದು ತಿಳಿಯಲು ಮೊಮ್ಮಗಳು ಶಾಲೆಯಿಂದ ಬರುವುದನ್ನು ಶಾಲೆಯ ಬಳಿ ನಿಂತು ಕಾಯುತ್ತಿದ್ದಳು.. ಆಗ ನಡೆದ ದೃಶ್ಯ ನೋಡಿ ವಾಸಗಿ ಶಾಕ್ ಆದಳು.. ಹೌದು ಮಗ ಸೋಮನಾಥನ ಸ್ನೇಹಿತ ಸಂತೋಷ್ ಎಂಬಾತನ ಜೊತೆ ಸೊಸೆ ಅಶ್ವಿನಿ ಕೈ ಹಿಡಿದು ಬರುತ್ತಿದ್ದಳು.. ಆದರೆ ಆಗಲೂ ಸಹ ಅಸಾಹಯಕಳಾಗಿ ಬೇಸರದಿಂದ ಮನೆಕಡೆಗೆ ಬಂದಳು ಆ ತಾಯಿ ವಾಸಗಿ..

ಆದರೆ ಯಾರೋ ಒಬ್ಬರು ಅಶ್ವಿನಿ ಹಾಗೂ ಸಂತೋಷ್ ತೆಗೆಸಿಕೊಂಡಿರುವ ಸೆಲ್ಫಿ ಫೋಟೋವನ್ನು ವಾಸಗಿಗೆ ತೋರಿಸಿದ್ದಾರೆ.. ಆ ಸಮಯದಲ್ಲಿ ತನ್ನ ಮಗ ಇಲ್ಲವಾಗಿದ್ದರ ಬಗ್ಗೆ ಅನುಮಾನಗೊಂಡ ಆ ತಾಯಿ ಅಷ್ಟು ವಯಸ್ಸಿನಲ್ಲಿಯೂ ದಿಟ್ಟತನ ತೋರಿ ಎಲ್ಲಾ ಸಾಕ್ಷಿಗಳನ್ನು ಕಲೆ ಹಾಕಿಕೊಂಡು ಕೆಜಿಎಫ್ ನ ಎಸ್ ಪಿ ಕಚೇರಿಗೆ ಬಂದು ದೂರು ನೀಡಿಯೇ ಬಿಟ್ಟಳು.. ನಡೆದ ಎಲ್ಲಾ ಕತೆಯನ್ನು ವಿವರಿಸಿದಳು.. ಆಗ ರಾಬರ್ಸನ್ ಪೇಟೆ ಪೊಲೀಸರು ದೂರು ದಾಖಲಿಸಿಕೊಂಡರು..

ಆ ಬಳಿಕ ಅಶ್ವಿನಿ ಹಾಗೂ ಸಂತೋಷ್ ನನ್ನು ಸರಿಯಾಗಿ ಪೊಲೀಸರು ವಿಚಾರಣೆ ಮಾಡಿದಾಗ ಸತ್ಯ ಬಯಲಾಗಿದೆ.. ಹೌದು ಅಂದು ವ್ಯವಸ್ಥಿತವಾಗಿ ಸೋಮನಾಥನನ್ನಿ ಇವರಿಬ್ಬರು ಸೇರಿಕೊಂಡೇ ಇಲ್ಲವಾಗಿಸಿದ್ದರು.. ನಂತರ ಪ್ರಕರಣ ಕೋರ್ಟ್ ಮೆಟ್ಟಿಲೇರಿತು.. ಸತತ ಐದು ವರ್ಷಗಳ ಕಾಲ ಈ ಕೇಸ್ ನಡೆಯಿತು.. ಐದೂ ವರ್ಷಗಳ ಕಾಲ ವಾಸಗಿ ಕೋರ್ಟ್ ಗೆ ಅಲೆದಳು.. ಕೈಯಲ್ಲಿ ಸಾಕ್ಷಿಗಳನ್ನು ಹಿಡಿದುಕೊಂಡು ಒಂದು ದಿನವೂ ನ್ಯಾಯಲಯಕ್ಕೆ ಗೈರಾಗದೇ ಸಾಕ್ಷಿಗಳನ್ನು ಸಾಭೀತು ಪಡಿಸಿ ಯಶಸ್ವಿಯಾದಳು ಆ ಮಹಾತಾಯಿ.. ಕೊನೆಗೆ ಆ ಮಹಾತಾಯಿಯ ಪರಿಶ್ರಮ ತ್ಯಾಗ, ಮಗನ ಮೇಲಿದ್ದ ಪ್ರೀತಿಯ ಫಲವಾಗಿ ಇದೀಗ ಅಶ್ವಿನಿ ಹಾಗೂ ಸಂತೋಷ್ ಇಬ್ಬರಿಗೂ ಸಹ ಕೋಲಾರದ ಎರಡನೇ ಹೆಚ್ಚುವರಿ ನ್ಯಾಯಾಲಯ ಜೀವಾವಧಿಯನ್ನು ನೀಡಿದೆ.. ಹೌದು ಒಬ್ಬ ತಾಯಿ ಮನಸ್ಸು ಮಾಡಿದರೆ ತನ್ನ ಮಕ್ಕಳಿಗೆ ಅನ್ಯಾಯ ಮಾಡಿದವರನ್ನು ಎಂದೂ ಸಹ ಬಿಡುವುದಿಲ್ಲ ಅನ್ನೋದಕ್ಕೆ ಈ ಘಟನೆಯೇ ನೈಜ್ಯ ಉದಾಹರಣೆ.. ಸುಂದರವಾದ ಸಂಸಾರವಿದ್ದರೂ ಗಂಡನ ಸ್ನೇಹಿತನ ಸ್ನೇಹ ಬಯಸಿದವಳಿಗೆ ಸಧ್ಯ ಸರಿಯಾದ ಗತಿ ತಂದ ಆ ತಾಯಿಗೆ ಹ್ಯಾಟ್ಸ್ ಆಫ್..