ಇಂತ ಫೋಟೋ ವೀಡಿಯೋಗಳಿಂದ ಒಂದು ತಿಂಗಳಿಗೆ ಸೋನು ಗೌಡ ಸಂಪಾದನೆ ಎಷ್ಟು ಲಕ್ಷ ಗೊತ್ತಾ?

0 views

ಸೋನು ಗೌಡ.. ಒಳ್ಳೆಯ ರೀತಿಯಲ್ಲಿ ಅಲ್ಲದಿದ್ದರೂ ಮತ್ತೊಂದು ರೀತಿಯಲ್ಲಿ ಸಾಮಾಜಿಕ ಜಾಲತಾಣದ ಸೆನ್ಸೇಷನ್‌ ಏಂದರೂ ತಪ್ಪಾಗಲಾರದು.. ಆಗಾಗ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುವ ಸೋನು ಗೌಡ ಇದೆಲ್ಲದರಿಂದ ಒಂದು ತಿಂಗಳಿಗೆ ಎಷ್ಟು ಲಕ್ಷ ಸಂಪಾದನೆ ಮಾಡಬಹುದು ಎನ್ನುವ ಸಣ್ಣ ಕುತೂಹಲ ಕೆಲವರಿಗೆ ಇದ್ದೇ ಇರುತ್ತದೆ.. ಹೌದು ಸೋನು ಗೌಡಳ ಸಂಪಾದನೆ ಅಂದರೆ ತಿಂಗಳ ಸಂಪಾದನೆ ಸಾವಿರದಲ್ಲಲ್ಲ.. ಲಕ್ಷಗಳಲ್ಲಿಯೇ ಇದೆ.. ಹಾಗಿದ್ದರೆ ಸೋನು ಗೌಡಗೆ ಇನ್ಸ್ಟಾಗ್ರಾಂ, ಫೇಸ್‌ ಬುಕ್‌, ಯೂಟ್ಯೂಬ್‌ ನಿಂದ ಬರುವ ಆದಾಯವೆಷ್ಟು ಎಲ್ಲಾ ಮಾಹಿತಿ ಇಲ್ಲಿದೆ..  ಸೋನು ಗೌಡ ಶುರುವಿನಲ್ಲಿ ಅದರೆ ಒಂದಷ್ಟು ವರ್ಷಗಳ ಹಿಂದೆ ಸಾಮಾನ್ಯವಾಗಿ ಎಲ್ಲರಂತೆ ರೀಲ್ಸ್‌ ಮಾಡಿಕೊಂಡಿದ್ದ ಹುಡುಗಿ.. ಬರುಬರುತ್ತಾ ಕೊಂಚ ಅತಿರೇಕಕ್ಕೆ ಆಕೆಯ ರೀಲ್ಸ್‌ ಗಳು ಬಂದದ್ದೂ ಉಂಟು.. ಇನ್ನು ಈಕೆಯ ಆ ಅತಿರೇಕದ ರೀಲ್ಸ್‌ ನೋಡಿದ ಒಂದಷ್ಟು ಜನ ಟ್ರೋಲರ್ಸ್‌ ಗಳು ಈಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಿದ್ದುಂಟು.. ಟ್ರೋಲ್‌ ಮಾಡಿದರೆ ಬಹುಷಃ ಈಕೆ ಆ ರೀತಿಯ ವೀಡಿಯೋ ಗಳನ್ನು ಕಡಿಮೆ ಮಾಡಬಹುದು ಎನ್ನುವ ಅಂದಾಜಿತ್ತೇನೋ.. ಆದರೆ ಅಸಲಿಗೆ ನಡೆದಿದ್ದೇ ಬೇರೆ.. ಸಾಮಾನ್ಯವಾಗಿ ಟ್ರೋಲ್‌ ಗಳನ್ನು ಜನರು ಎರಡು ರೀತಿಯಾಗಿ ತೆಗೆದುಕೊಳ್ಳುತ್ತಾರೆ.. ಟ್ರೋಲ್‌ ಆಗುತ್ತಿದ್ದಂತೆ ಅದೆಲ್ಲದರಿಂದ ದೂರಾಗಿ ಸುಮ್ಮನಾಗೋರು ಉಂಟು.. ಇನ್ನೂ ಕೆಲವರು ಹೇಗಾದರೂ ಸರಿ ಫೇಮಸ್‌ ಆದರೆ ಸಾಕು ಅನ್ನೋರು.. ಸೋನು ಗೌಡ ಕೂಡ ಹೇಗೋ ಒಟ್ಟಿನಲ್ಲಿ ಫೇಮಸ್‌ ಆಗುತ್ತಿರುವೆನೆಂದು ಮತ್ತಷ್ಟು ವೀಡಿಯೋ ಮಾಡಲು ಶುರು ಮಾಡಿದಳು.. ಇದು ಒಂದಷ್ಟು ಜನರ ಸಂಪರ್ಕವನ್ನು ಹೆಚ್ಚು ಮಾಡಿತು.. ಕೊನೆಗೆ ತನ್ನ ಗೆಳೆಯನ ಜೊತೆ ಇದ್ದ ಬೇರೆ ರೀತಿಯಾದ ವೀಡಿಯೋ ಒಂದು ಇದೇ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿ ಸಿಕ್ಕಾಪಟ್ಟೆ ವೈರಲ್‌ ಕೂಡ ಆಯಿತು.. ಅಲ್ಲಿಂದ ಶುರುವಾಯಿತು ಸೋನು ಗೌಡಳ ಮತ್ತೊಂದು ರೀತಿಯ ಟೀಕೆಗಳು.. ಆ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸೋನು ಗೌಡಗೆ ಬೈಯದವರೇ ಇಲ್ಲ..

ಈ ರೀತಿ ಬಟ್ಟೆ ಇಲ್ಲದೇ ಮಾಡುವ ವೀಡಿಯೋಗಳು ಸಾಮಾಜಿಕ ಜಾಲತಾಣ ಬಳಸೋ ಚಿಕ್ಕ ಮಕ್ಕಳ ಮೇಲೆ ಎಂತಹ ಪರಿಣಾಮ ಬೀರಬಹುದು.. ಈಕೆಯನ್ನು ನೋಡಿ ಮತ್ತಷ್ಟು ಹೆಣ್ಣು ಮಕ್ಕಳು ಫೇಮಸ್‌ ಆಗಲು ಇದೇ ರೀತಿ ಮಾಡಬಹುದು.. ಹೀಗೆಲ್ಲಾ ನಾನಾ ರೀತಿಯ ಕಮೆಂಟ್‌ ಗಳು ಬಂದದ್ದು ಉಂಟು.. ಇನ್ನು ಈ ಕಾಂಟ್ರೋವರ್ಸಿ ಸೋನು ಗೌಡಳನ್ನು ಬಿಗ್‌ ಬಾಸ್‌ ಮನೆಗೆ ಹೋಗುವ ಅವಕಾಶವನ್ನು ಸಹ ತಂದುಕೊಟ್ಟಿತು.. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಕಾಂಟ್ರೋವರ್ಸಿಯಲ್ಲಿರಯುವವರನ್ನು ಬಿಗ್‌ ಬಾಸ್‌ ಮನೆಗೆ ಕರೆದುಕೊಂಡು ಬರೋದು ಹೊಸ ವಿಚಾರವೇನೂ ಅಲ್ಲ.. ಅದೇ ರೀತಿ ಸೋನು ಗೌಡ ಸಹ ಬಿಗ್‌ ಬಾಸ್‌ ಮನೆಗೆ ಅವಕಾಶ ಪಡೆದಳು.. ಆದರೆ ಸೋನು ಗೌಡ ಬಿಗ್‌ ಬಾಸ್‌ ಮನೆಗೆ ಬಂದದ್ದಕ್ಕೆ ವಾಹಿನಿಯನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದೂ ಉಂಟು.. ಇನ್ನು ಬಿಗ್‌ ಬಾಸ್‌ ಮನೆಯಲ್ಲಿ ಸಾಕಷ್ಟು ದಿನಗಳು ಇದ್ದ ಸೋನು ಗೌಡ ತಾನು ಮಾಡಿದ ತಪ್ಪಿನ ಬಗ್ಗೆ ಹಾಗೂ ತನ್ನ ಗೆಳೆಯ ಆ ವೀಡಿಯೋವನ್ನು ಶೇರ್‌ ಮಾಡಿದ್ದರ ಬಗ್ಗೆ ಆದ ನೋವನ್ನು ಸಹ ಹಂಚಿಕೊಂಡಿದ್ದಳು.. ಇನ್ನು ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ನಂತರ ಹೊಸ ಜೀವನ ಆರಂಭಿಸುವೆ ಎಂದಿದ್ದ ಸೋನು ಗೌಡ ಒಂದಷ್ಟು ದಿನಗಳ ನಂತರ ಮತ್ತದೇ ತುಂಡುಡುಗೆಯ ಫೋಟೋಗಳನ್ನು ಹಂಚಿಕೊಂಡು ಯಥಾಪ್ರಕಾರ ಮತ್ತಷ್ಟು ಟ್ರೋಲ್‌ ಆದಳು..

ಇನ್ನು ಕೆಲ ದಿನಗಳ ಹಿಂದೆ ತನ್ನನ್ನು ಟ್ರೋಲ್‌ ಮಾಡುತ್ತಿರುವುದರಿಂದ ತನ್ನ ತಾಯಿಗೆ ನೋವಾಗುತ್ತಿದೆ.. ದಯವಿಟ್ಟು ನನ್ನ ತಪ್ಪನ್ನು ಕ್ಷಮಿಸಿ.. ಹೊಸ ಜೀವನ ಆರಂಭಿಸಲು ಅವಕಾಶ ಮಾಡಿಕೊಡಿ ಎಂದು ಕಣ್ಣೀರಿಟ್ಟು ಕೈ ಮುಗಿದು ಕೇಳಿಕೊಂಡಿದ್ದಳು.. ಇದನ್ನು ನೋಡಿದ ಸಾಕಷ್ಟು ಜನರು ಮರುಗಿದ್ದೂ ಹೌಡು.. ಇನ್ನಾದರೂ ಆಕೆ ಬದಲಾಗಿ ಬಾಳಲಿ ಬಿಡಿ.. ಯಾರೂ ಸಹ ಆಕೆಯನ್ನು ಇನ್ನು ಟ್ರೋಲ್‌ ಮಾಡಬೇಡಿ ಎಂದೂ ಸಹ ಕಮೆಂಟ್‌ ಮಾಡಿದ್ದೂ ಉಂಟು.. ಇನ್ನು ಈ ಘಟನೆಯಾದ ಕೆಲವೇ ದಿನಗಳಲ್ಲಿ ಮಾಲ್ಡೀವ್ಸ್‌ ನಲ್ಲಿ ಕಾಣಿಸಿಕೊಂಡ ಸೋನು ಗೌಡ ಮತ್ತಷ್ಟು ಅತಿರೇಕವಾಗಿ ಒಳ ಉಡುಪಿನಲ್ಲಿ ಹಸಿಹಸಿ ವೀಡಿಯೋಗಳನ್ನು, ಫೋಟೋಗಳನ್ನು ಹಂಚಿಕೊಂಡಿದ್ದು ನಾಯಿಯ ಬಾಲ ಯಾವತ್ತಿದ್ದರೂ ಡೊಂಕೆ ಎಂದು ಹೇಳುವಷ್ಟರ ಮಟ್ಟಕ್ಕೆ ಪೋಸ್ಟ್‌ ಮಾಡಿದ್ದಳು.. ಮತ್ತದೇ ಮುಗಿಯದ ಕತೆ ಎನ್ನು ವಂತೆ ಮಿಲಿಯನ್‌ ಗಟ್ಟಲೇ ವೀವ್ಸ್‌ ಕಂಡಿದ್ದ ಸೋನು ಗೌಡಳ ಒಳ ಉಡುಪಿನ ವೀಡಿಯೋವನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದರು.. ಈ ಬಾರಿ ಟ್ರೋಲ ಗಳು ವಿಪರೀತವೂ ಆಗಿತ್ತು.. ಆದರೆ ಇಷ್ಟೆಲ್ಲಾ ಬೈದರೆ ಯಾರಾದರೂ ಸರಿ ಬದಲಾಗೇ ಆಗುತ್ತಾರೆ.. ಆದರೆ ಸೋನು ಗೌಡ ಮಾತ್ರ ಯಾಕೆ ಬದಲಾಗುತ್ತಿಲ್ಲ ಎಂದು ಒಂದಷ್ಟು ಜನರು ಕೇಳಿದ್ದೂ ಉಂಟು.. ಮತ್ತೊಂದಷ್ಟು ಜನರಿಗೆ ಇದೆಲ್ಲಾ ಹಣಕ್ಕಾಗಿ ಎಂದೂ ಸಹ ಅರ್ಥವಾಗಿತ್ತು.. ಹಾಗಿದ್ದರೆ ಸೋನು ಗೌಡಗೆ ನಿಜಕ್ಕೂ ಇದೆಲ್ಲದರಿಂದ ಸಿಗುವ ಹಣವಾದರೂ ಎಷ್ಟು..

ಸೋನು ಗೌಡಗೆ ಈ ರೀತಿಯ ಪೋಟೋಗಳಿಂದಾಗಲೀ ಅಥವಾ ವೀಡಿಯೋಗಳಿಂದಾಗಲಿ ಯಾವುದೇ ಹಣ ಬರುವುದಿಲ್ಲ.. ಆದರೆ ಇದರಿಂದ ಬೇರೆ ರೀತಿಯ ಆದಾಯದ ಮೂಲಗಲೇ ಸೃಷ್ಟಿಯಾಗುತ್ತದೆ.. ಹೌದು ಮೊದಲಿಗೆ ಎಲ್ಲರಿಗೂ ತಿಳಿದಿರುವಂತೆ ಯೂಟ್ಯೂಬ್‌ ನಲ್ಲಿ ಸೋನು ಗೌಡ ಹಾಕುವ ಪ್ರತಿಯೊಂದು ವೀಡಿಯೋಗು ಸಹ ಹಣ ಬಂದೇ ಬರುತ್ತದೆ.. ಒಂದು ಲಕ್ಷ ವೀಕ್ಷಣೆ ಪಡೆದರೆ ಮೂರರಿಂದ ಐದು ಸಾವಿರ ರೂಪಾಯಿಗಳ ವರೆಗೂ ಹಣ ಸಿಗುತ್ತದೆ.. ಇನ್ನು ಫೇಸ್‌ ಬುಕ್ಕಿನಲ್ಲೂ ಸಹ ವೀಡಿಯೋ ಹಾಕಿದರೆ ಇಒಂದಷ್ಟು ಹಣ ಸಿಗುತ್ತದೆ.. ಆದರೆ ಇನ್ಸ್ಟಾಗ್ರಾಂ ನಲ್ಲಿ ಈ ರೀತಿಯಾದ ವೀಡಿಯೋಗಳಿಗೆ ಆದಾಯವೇನೂ ಬರುವುದಿಲ್ಲ.. ಆದರೆ ಈ ರೀತಿಯಾದ ವೀಡಿಯೋ ಮಾಡಿದಾಗ ಆ ವೀಡಿಯೋಗಳು ವೈರಲ್‌ ಆಘುತ್ತವೆ.. ಹಾಗೆಯೇ ಸಾಮಾನ್ಯವಾಗಿ ಇವರ ಫಾಲೋವರ್ಸ್‌ ಗಳು ಸಹ ಹೆಚ್ಚಾಗುತ್ತಾರೆ.. ಅಂತಹ ಸಮಯದಲ್ಲಿ ಇಂತವರ ಬಳಿ ಪ್ರಮೋಷನ್‌ ಮಾಡಿಸಲಾಗುತ್ತದೆ.. ಮೇಕಪ್‌ ಐಟಂ ಗಳಿಂದ ಹಿಡಿದು ತಲೆಗೆ ಹಾಕುವ ಎಣ್ಣೆ ಬಟ್ಟೆಗಳು ಒಳ ಉಡುಪುಗಳು. ಹೀಗೆ ಸಾಕಷ್ಟು ರೀತಿಯ ಪ್ರಾಡಕ್ಟ್‌ ಪ್ರಮೋಷನ್‌ ಗಳು ಇಂತವರಿಗೆ ಸಿಗುತ್ತದೆ.. ಇದರಿಂದ ಅಂದರೆ ಈ ರೀತಿ ಒಂದು ಪ್ರಮೋಷನ್‌ ಮಾಡಲು ಮೂವತ್ತರಿಂದ ಐವತ್ತು ಸಾವಿರ ರೂಪಾಯಿಯ ವರೆಗೂ ಹಣ ಪಡೆಯುತ್ತಾರೆ.. ಈ ರೀತಿಯ ಪ್ರಮೋಷನ್‌ ಗಳೇ ಇತ್ತೀಚೆಗೆ ಹೆಚ್ಚಾಗಿ ಮಾಡುವುದರಿಂದ ತಿಂಗಳಿಗೆ ಒಂದಷ್ಟು ಲಕ್ಷ ಇದರಿಂದಲೇ ಬರುತ್ತದೆ.. ಜೊತೆಗೆ ಯೂಟ್ಯೂಬ್‌ ನಿಂದಲೂ ಆದಾಯವಿರುವುದರಿಂದ ಒಂದು ತಿಂಗಳಿಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಸಂಪಾದನೆಯನ್ನು ಸೋನು ಗೌಡ ಮಾಡುತ್ತಿದ್ದು ಈ ಹಿಂದೆ ಬಿಗ್‌ ಬಾಸ್‌ ಸಮಯದಲ್ಲೇ ನಾನು ತಿಂಗಳಿಗೆ ಮೂರು ಲಕ್ಷ ಸಂಪಾದನೆ ಮಾಡುತ್ತೇನೆ ಎಂದು ಆಕೆಯೇ ಬಹಿರಂಗವಾಗಿ ಹೇಳಿಕೊಂಡಿದ್ದೂ ಉಂಟು.. ಒಟ್ಟಿನಲ್ಲಿ ಹಣಕ್ಕಾಗಿ ಏನೇನೆಲ್ಲಾ ಮಾಡುವರೋ ಇಂತಹ ದಾರಿಗಳನ್ನು ನೋಡಿದಾಗ ಮತ್ತಷ್ಟು ಹೆಣ್ಣು ಮಕ್ಕಳು ಇದೇ ರೀತಿ ಫೇಮಸ್‌ ಆಗಿ ಹಣ ಗಳಿಸಬಹುದೆಂದು ಸೋನು ಗೌಡ ರೀತಿಯ ಮಾರ್ಗವನ್ನೇ ಹಿಡಿಯುತ್ತಿರುವುದು ಇನ್ಸ್ಟಾಗ್ರಾಂ ನಲ್ಲಿ ನೋಡುತ್ತಿರೋದು ವಿಪರ್ಯಾಸವೇ ಸರಿ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.