ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ..

0 views

ಕಳೆದ ವರ್ಷದ ಸಾಲು ಸಾಲು ಕಹಿ ನೆನಪನ್ನು ಕಳೆದು ಹೊಸ ವರ್ಷ ಹೊಸತನವನ್ನು ಹೊಸ ಬೆಳಕನ್ನು ತರಲಿ ಎಂದು ಪ್ರಾರ್ಥಿಸುತ್ತಿರುವ ಸಮಯದಲ್ಲಿಯೇ ನೋವಿನ ಸುದ್ದಿಯೊಂದು ಹೊರ ಬಂದಿದೆ.. ಹೌದು ಭಾರತದ ಮಾಜಿ ಕ್ರಿಕೇಟ್ ಆಟಗಾರ ಸೌರವ್ ಗಂಗೂಲಿ ಅವರಿಗೆ ಹೃದಯಾಘಾ ತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ..

ಹೌದು ಮಾಜಿ ಕ್ರಿಕೆಟ್ ಆಟಗಾರ.. ಸದ್ಯ ಬಿಸಿಸಿಐ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಅವರಿಗೆ ಹೃದಯಾಘಾ.. ತವಾಗಿದ್ದು ತಕ್ಷಣ ಅವರನ್ನು ಕೊಲ್ಕತ್ತಾದ ವುಡ್ ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.. ಇಂದು ಬೆಳಿಗ್ಗೆ ವ್ಯಾಯಾಮ ಮಾಡುವ ಸಮಯದಲ್ಲಿ ತಲೆ‌ಸುತ್ತು ಕಾಣಿಸಿಕೊಂಡಿದ್ದು ನಂತರ ಎದೆ ನೋವು ಬಂದಿದ್ದು ಸ್ಥಳದಲ್ಲಿಯೇ ಕುಸಿ ದು ಬಿದ್ದಿದ್ದಾರೆ.. ನಂತರ ಅವರನ್ನು ಹತ್ತಿರದ ವುಡ್ ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು 5 ಜನ ನುರಿತ ವೈದ್ಯರ ತಂಡ ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿದೆ..

ಸದ್ಯ ಅದಾಗಲೇ ಇ ಇ ಜಿ ಇ. ಸಿಜಿ ಹಾಗೂ ಇನ್ನು ಮುಂತಾದ ಪರೀಕ್ಷೆಗಳನ್ನು ನಡೆಸಿದ್ದು ವರದಿ ಕೂಡ ಕೈ ಸೇರಿದ್ದು ಗಂಗೂಲಿ ಅವರಿಗೆ ಹೃದಯ ಘಾತವಾಗಿರುವುದು  ಖಚಿತವಾಗಿದೆ.. ಆದರೆ ಸದ್ಯ ಆರೋಗ್ಯ ಸದ್ಯದ ಪರಿಸ್ಥಿತಿಯಲ್ಲಿ ಸ್ಥಿರವಾಗಿದ್ದು ಸಂಜೆಯ ವೇಳೆಗೆ ವೈದ್ಯರು ಆಂಜಿ ಯೋ’ ಪ್ಲಾಸ್ಟಿ ಮಾಡಲಿದ್ದು ಗಂಗೂಲಿ ಅವರನ್ನು ಗುಣಮುಖರನ್ನಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ..

ವಿಚಾರ ತಿಳಿದು ಆಂತಕಕ್ಕೊಳಗಾಗಿರುವ ಕ್ರೀಡಾಭಿಮಾನಿಗಳು ಸೇರಿದಂತೆ ಎಲ್ಲಾ ಗಣ್ಯರು ಗಂಗೂಲಿ ಅವರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.. ವಿರಾಟ್ ಕೋಹ್ಲಿ..‌ ಅನಿಲ್ ಕುಂಬ್ಕೆ ಸೇರಿದಂತೆ ಬಹುತೇಕ‌ ಎಲ್ಲಾ ಆಟಗಾರರು ಗಂಗೂಲಿ ಅವರ ಚೇತರಿಕೆಗಾಗಿ ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.. ಇನ್ನು ಕೊಲ್ಕತಾದಲ್ಲಿ ಗಂಗೂಲಿ ಅವರು ಗುಣಮುಖರಾಗಲೆಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದು ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡಿದ್ದಾರೆ..

ಇಂದು ಎಂದಿನಂತೆ ಬೆಳಿಗ್ಗೆ ಎದ್ದು ವ್ಯಾಯಾಮ ಮಾಡುತ್ತಿದ್ದ ಸಮಯದಲ್ಲಿ ಗಂಗೂಲಿ ಅವರಿಗೆ ಈ ರೀತಿಯಾಗಿದ್ದು ಅಭಿಮಾನಿಗಳಲ್ಲಿ ಆತಂಕವನ್ನುಂಟು‌ ಮಾಡಿದೆ.. ಬಿಸಿಸಿಐ ಅಧ್ಯರಾದ ನಂತರ ಬಹಳಷ್ಟು ಸುಧಾರಣೆಗಳನ್ನು ತಂದಿದ್ದ ಸೌರವ್ ಗಂಗೂಲಿ ಅವರು ಭಾರತದ ಬಲಿಷ್ಠ ಕ್ರಿಕೆಟ್ ತಂಡ ಕಟ್ಟುವಲ್ಲಿ ಮುಖ್ಯ ಕಾರಣರೂ ಆಗಿದ್ದಾರೆ. ಮೂರು ದಿನಗಳ ಹಿಂದಷ್ಟೇ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನಕ್ಕೆ ಭೇಟಿ ನೀಡಿ ಅಲ್ಲಿನ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರೊಡನೆ ಚರ್ಚಿಸಿ ಸಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿ ಆಯೋಜನೆ ಬಗ್ಗೆ ಚರ್ಚೆ ಮಾಡಿ ಸಿದ್ದತೆ ನಡೆಸಿದ್ದರು.. ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಬ್ಯುಸಿ ಆಗಿರುತ್ತಿದ್ದ ಗಂಗೂಲಿ ಅವರಿಗೆ ಈ ರೀತಿ ಆಗಿರುವುದು ನಿಜಕ್ಕೂ ನೋವನ್ನುಂಟು ಮಾಡುವ ವಿಚಾರವಾಗಿದ್ದು ಕ್ರಿಕೆಟ್ ಲೋಕದ ದಾದಾ ಆದಷ್ಟು ಬೇಗ ಗುಣಮುಖರಾಗಿ ಮರಳುವಂತಾಗಲಿ‌.