ಯುವರಾಜ ಆಧ್ಯವೀರರ ಹುಟ್ಟುಹಬ್ಬವನ್ನು ಶ್ರೀ ಯಧುವೀರ್ ಅವರು ಆಚರಿಸಿದ ರೀತಿ‌ ನೋಡಿ..

0 views

ನಮ್ಮ ನಾಡಿನ ರಾಜಮನೆತನಗಳೆಂದರೆ ಈಗಲೂ ಕನ್ನಡಿಗರಿಗೆ ಏನೋ ಒಂದು ರೀತಿ ರೋಮಾಂಚನ.. ಮನಸಲ್ಲಿ ನಮಗೆ ತಿಳಿಯದೆಯೇ ಅವರ ಬಗ್ಗೆ ಗೌರವ ಮೂಡುತ್ತದೆ.. ಇನ್ನು ನಮ್ಮ ನಾಡಿಗೆ ಮೈಸೂರು ರಾಜಮನೆತನದ ಕೊಡುಗೆ ಹೇಳಲು ಅಸಾಧ್ಯ.. ಅಷ್ಟರ ಮಟ್ಟಿಗೆ ಜನರಿಗಾಗಿ ಜನರ ಏಳಿಗೆಗಾಗಿ ಕೊಡುಗೆಗಳನ್ನು ನೀಡಿದ್ದಾರೆ.. ಜನರ ಒಳಿತಿಗಾಗಿ ಸ್ವಂತದ ಆಭರಣಗಳನ್ನೇ ತೆಗೆದು ಕೊಟ್ಟ ಮಹಾನ್ ತಾಯಿಯರನ್ನು ಕಂಡ ಮನೆತನವದು..  ಈಗಲೂ ಮೈಸೂರು ರಾಜ ವಂಶಸ್ಥರು ಜನರ ಏಳಿಗೆಗಾಗಿ ತಮ್ಮದೇ ರೀತಿಯಲ್ಲಿ ಶ್ರಮಿಸುತ್ತಿರುವುದು ನಿಜಕ್ಕೂ ಹೆಮ್ಮೆ ಪಡುವ ವಿಚಾರ..

ನಾಡಿನ ಜನರಿಗೆ ಅದರಲ್ಲೂ ಮೈಸೂರಿಗರಿಗೆ ರಾಜ ವಂಶಸ್ಥರೆಂದರೆ ಪೂಜ್ಯನೀಯ ಭಾವ.. ರಸ್ತೆಯಲ್ಲಿ ಮಹಾರಾಜರ ಅಥವಾ ರಾಜಮಾತೆ ಪ್ರಮೋದ ದೇವಿ ಅವರ ವಾಹನ ಬರುವುದು ತಿಳಿದರೂ ಸಹ ಹಿರಿಯರು ಕಿರಿಯರೆನ್ನದೆ ಎದ್ದು ನಿಂತು ಗೌರವ ನೀಡುವುದೂ ಉಂಟು.. ಈಗಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಮೈಸೂರು ದಸರಾವನ್ನು ಸಂಪ್ರದಾಯ ಬದ್ಧವಾಗಿ ಅರಮನೆಯಲ್ಲಿ ರಾಜ ಮನೆತನ ನಡೆಸಿಕೊಂಡು ಬರುತ್ತಿದ್ದು ನಮ್ಮ ಮಣ್ಣಿನ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ನೀಡುತ್ತಾ ಬರುತ್ತಿದ್ದಾರೆ.. ಇನ್ನು ಇಂದು ಮೈಸೂರಿನ ಅರಮನೆಯಲ್ಲಿ ಸಂಭ್ರಮದ ದಿನ..

ಹೌದು ಇಂದು ಪುಟ್ಟ ರಾಜ ಕುಮಾರರದ ಯುವರಾಜ ಶ್ರೀ ಆಧ್ಯವೀರ್ ಅವರ ಹುಟ್ಟುಹಬ್ಬ.. ಮಹಾರಾಣಿ ಶ್ರೀಮತಿ ತ್ರಿಶಿಕಾ ದೇವಿ ಅವರು ಹಾಗೂ ಮಹಾರಾಜ ಶ್ರೀ ಯಧುವೀರ್ ಅವರ ಸುಪುತ್ರ ಮೈಸೂರಿನ ಯುವರಾಜ ಆಧ್ಯವೀರ್ ಅವರ ಮೂರನೇ ವರ್ಷದ ಜನ್ಮ ದಿನವನ್ನು ಮೈಸೂರಿನ ಅರಮನೆಯಲ್ಲಿ ಆಚರಿಸಿದ್ದಾರೆ..

ಹೌದು ಇಂದು ಕುಟುಂಬಸ್ಥರ ಸಮ್ಮುಖದಲ್ಲಿ ಆಧ್ಯವೀರ್ ಅವರ ಮೂರನೇ ವರ್ಷದ ಹುಟ್ಟುಹಬ್ಬ ಆಚರಣೆಯಾಗಿದೆ.. ಹುಟ್ಟುಹಬ್ಬ ಎಂದೊಡನೆ ಎಲ್ಲರ ಕಲ್ಪನೆಯೇ ಬೇರೆ ರೀತಿ ಇದೆ.. ಆದರೆ ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸಿಕೊಂಡು ಮುಂದಿನ ಪೀಳಿಗೆಗಳು ಸಹ ಪಾಲಿಸುವಂತೆ ಮಾಡುತ್ತಿರುವ ಮೈಸೂರಿನ ರಾಜಮನೆತನದಲ್ಲಿ ಯುವರಾಜರ ಹುಟ್ಟುಹಬ್ಬ ಶಾಸ್ತ್ರ ಸಂಪ್ರದಾಯದಂತೆ ನೆರವೇರಿದೆ.. ಹೌದು ಪೂಜೆ ಹಾಗೂ ಹೋಮ ವನ್ನು ಯುವರಾಜರ ಕೈಯಿಂದ ನೆರವೇರಿಸುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.. ಅಷ್ಟೇ ಅಲ್ಲದೇ..

ಈ ಬಗ್ಗೆ ಯುವರಾಜರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಮಹಾರಾಜ ಶ್ರೀ ಯಧುವೀರ್ ಅವರು ಸಾಮಾಜಿಕ ಜಾಲತಾಣದಲ್ಲಿ ಯುವರಾಜರ ಫೋಟೋ ಹಂಚಿಕೊಂಡು ಜೊತೆಗೆ “ಮೈಸೂರು ಅರಮನೆಯಲ್ಲಿ ಇಂದು ಯುವರಾಜ ಚಿರಂಜೀವಿ ಶ್ರೀ ಆಧ್ಯವೀರ ನರಸಿಂಹರಾಜ ಒಡೆಯರವರ ಮೂರನೇ ಜನ್ಮದಿನ ಮಹೋತ್ಸವವನ್ನು ಆಚರಿಸಲಾಯಿತು. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ. ಚಿರಮಭಿವರ್ಧತಾಂ ಯದುಕುಲ ಸಂತಾನ ಶ್ರೀಃ..” ಎಂದು ಶುಭ ಹಾರೈಸಿದ್ದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರೊಟ್ಟಿಗೆ ಸಂತೋಷ ಹಂಚಿಕೊಂಡಿದ್ದಾರೆ..